»   » ಸ್ಟೈಲಿಂಗ್ ಸ್ಟಾರ್ ಶಿವಣ್ಣನ, ಭರ್ಜರಿ 'ಶಿವಲಿಂಗ' ಟ್ರೈಲರ್ ಲೀಕ್..!

ಸ್ಟೈಲಿಂಗ್ ಸ್ಟಾರ್ ಶಿವಣ್ಣನ, ಭರ್ಜರಿ 'ಶಿವಲಿಂಗ' ಟ್ರೈಲರ್ ಲೀಕ್..!

Posted by:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ಕಿಲ್ಲಿಂಗ್ ವೀರಪ್ಪನ್' ಚಿತ್ರದಂತೆ, ಗಾಂಧಿನಗರದಲ್ಲಿ ಬಹಳ ನಿರೀಕ್ಷೆ ಹುಟ್ಟಿಸಿದ ಮತ್ತೊಂದು ಚಿತ್ರ 'ಶಿವಲಿಂಗ'. ಇದೀಗ ಸಸ್ಪೆನ್ಸ್-ಆಕ್ಷನ್-ಥ್ರಿಲ್ಲರ್ 'ಶಿವಲಿಂಗ' ಚಿತ್ರದ ಟ್ರೈಲರ್ ನ ವಿಡಿಯೋ ಫೂಟೇಜ್ ಲೀಕ್ ಆಗಿದೆ.

ಅಂದಹಾಗೆ ಈ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ನವೆಂಬರ್ 27 ರಂದು ನಡೆಯಲಿದ್ದು, ಚಿತ್ರದ ಟ್ರೈಲರ್ ಅನ್ನು ಕೂಡ ಆಫಿಶೀಯಲ್ ಆಗಿ ಅಂದೇ ಬಿಡುಗಡೆ ಮಾಡುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿತ್ತು.

ಆದರೆ ಇದಕ್ಕೂ ಮುನ್ನ ಸುಮಾರು 2 ನಿಮಿಷ 20 ಸೆಕೆಂಡ್ ಸಾಗುವ 'ಶಿವಲಿಂಗ' ಟ್ರೈಲರ್ ಈಗಾಗಲೇ ಲೀಕ್ ಆಗಿ, ಸಾಮಾಜಿಕ ಜಾಲಾತಾಣಗಳಲ್ಲಿ ಹಾಗು ಯೂಟ್ಯೂಬ್ ನಲ್ಲಿ ಹರಿದಾಡುತ್ತಿದೆ.[ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ, ಅಗ್ನಿಪರೀಕ್ಷೆ!]

ನಿರ್ದೇಶಕ ಪಿ.ವಾಸು ಆಕ್ಷನ್-ಕಟ್ ಹೇಳಿರುವ 'ಶಿವಲಿಂಗ' ಚಿತ್ರದಲ್ಲಿ ಶಿವಣ್ಣ ಜೇಮ್ಸ್ ಬಾಂಡ್ ಲುಕ್ ನಲ್ಲಿ ಸಖತ್ ಆಗಿ ಮಿಂಚಿದ್ದು, ನಟಿ ವೇದಿಕಾ ಅವರು ತುಂಬಾ ಗ್ಯಾಪ್ ನಂತರ ಸ್ಯಾಂಡಲ್ ವುಡ್ ಗೆ ಮತ್ತೆ ಹಿಂತಿರುಗಿ, 'ಶಿವಲಿಂಗ' ಚಿತ್ರದಲ್ಲಿ ಎನರ್ಜಿಟಿಕ್ ನಟ ಶಿವರಾಜ್ ಕುಮಾರ್ ಅವರ ಜೊತೆ ಡ್ಯುಯೆಟ್ ಹಾಡಿದ್ದಾರೆ.

ಇನ್ನು ಬಲ್ಲ ಮಾಹಿತಿಗಳ ಪ್ರಕಾರ ಶಿವಣ್ಣ ಅವರ 'ಶಿವಲಿಂಗ' ಚಿತ್ರ ಡಿಸೆಂಬರ್ ತಿಂಗಳಿನಲ್ಲಿ ಭರ್ಜರಿಯಾಗಿ ತೆರೆ ಮೇಲೆ ಅಪ್ಪಳಿಸಲಿದೆ.

'ಶಿವಲಿಂಗ' ಚಿತ್ರದ ಹೆಚ್ಚಿನ ಭಾಗ ವಿದೇಶಗಳಲ್ಲಿ ಚಿತ್ರೀಕರಣಗೊಂಡಿದ್ದು, ಚಿತ್ರದ ಹಾಡುಗಳು ಸಖತ್ತಾಗಿರಬಹುದು ಅನ್ನೋದು ಲೀಕ್ ಆಗಿರುವ ಟ್ರೈಲರ್ ನೋಡುತ್ತಿದ್ದಂತೆ ತಿಳಿಯುತ್ತದೆ.

ಜೊತೆಗೆ ಇದು ಹಿಂದು-ಮುಸ್ಲಿಂ ಜನತೆಯ ಕಥೆಯಾಧರಿತ ಸಿನಿಮಾ ಎಂದು ವಿಡಿಯೋ ನೋಡಿದ ಮೊದಲ ನೋಟಕ್ಕೆ ತಿಳಿಯುತ್ತದೆ. ಒಟ್ನಲ್ಲಿ ಈ ಲೀಕ್ ಆಗಿರೋ ಟ್ರೈಲರ್ ನಲ್ಲಿ ಶಿವಣ್ಣ ಅಂತೂ ಸೈಲಿಷ್ ಆಗಿ 25 ರ ಯುವಕರನ್ನು ನಾಚಿಸುವಂತೆ ಮಿಂಚಿದ್ದು, ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

ಇನ್ನುಳಿದಂತೆ ಈ ಚಿತ್ರದಲ್ಲಿ ಕಾಮಿಡಿ ನಟ ಸಾಧುಕೋಕಿಲ, ಊರ್ವಶಿ ಮುಂತಾದವರು ಮಿಂಚಿದ್ದಾರೆ.

ಸುರೇಶ್ ಆರ್ಟ್ಸ್ ಅರ್ಪಿಸುವ, ಡಾ.ಶಿವಣ್ಣ ಹಾಗೂ ನಟಿ ವೇದಿಕಾ ಅವರು ಕಾಣಿಸಿಕೊಂಡಿರುವ 'ಶಿವಲಿಂಗ' ಚಿತ್ರದ ಕಲರ್ ಫುಲ್ ಟ್ರೈಲರ್ ನ ಒಂದು ಸಣ್ಣ ಝಲಕ್ ಇಲ್ಲಿದೆ ನೋಡಿ..

English summary
Watch Shivaraj Kumar's 'Shivalinga' Movie Trailer Footage Leaked, starring Vedika, Urvashi and others. Directed by P. Vasu. Music composed by V. Harikrishna.
Please Wait while comments are loading...

Kannada Photos

Go to : More Photos