twitter
    For Quick Alerts
    ALLOW NOTIFICATIONS  
    For Daily Alerts

    ಡಾ.ರಾಜ್ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ

    |

    ಪದ್ಮಭೂಷಣ ಡಾ. ರಾಜಕುಮಾರ್ ಅವರ ಜೀವನಾಧಾರಿತ " ಡಾ.ರಾಜಕುಮಾರ್ ದಿ ಪರ್ಸನ್ ಬಿಹೈಂಡ್ ದಿ ಪರ್ಸನಾಲಿಟಿ" ಕೃತಿ ಲಂಡನ್ನಿನ ಬ್ರಿಟಿಷ್ ಗ್ರಂಥಾಲಯಕ್ಕೆ ಸೇರ್ಪಡೆಯಾಗಿದೆ.

    "ಡಾ.ರಾಜಕುಮಾರ್ ವ್ಯಕ್ತಿತ್ವದ ಹಿಂದಿನ ವ್ಯಕ್ತಿ" ಎನ್ನುವ ಹೆಸರಿನಲ್ಲಿ ಕೃತಿ ಕನ್ನಡದಲ್ಲೂ ಬಿಡುಗಡೆಯಾಗಿತ್ತು. ಪತ್ರಕರ್ತ ಆರ್ ಮಂಜುನಾಥ್ ಮತ್ತು ಅವರ ಪತ್ನಿ ಡಾ. ಸೌಮ್ಯಾ ಮಂಜುನಾಥ್ ಈ ಕೃತಿಯನ್ನು ಗ್ರಂಥಾಲಯದ ಮುಖ್ಯಸ್ಥೆ ಡಾ. ಕ್ಯಾಥರೀನ್ ಈಗಲ್ ಟನ್ ಅವರಿಗೆ ಹಸ್ತಾಂತರಿಸಿದ್ದಾರೆ.

    Dr. Rajkumar book in British Library

    ಈ ಪುಸ್ತಕದ ಲೇಖಕರು ಪುನೀತ್ ರಾಜಕುಮಾರ್ ಮತ್ತು ಲೇಖಕ ಪ್ರಕೃತಿ ಬನವಾಸಿ. ಲಂಡನ್ನಿನ ನೆಹರೂ ಕೇಂದ್ರದಲ್ಲಿ ಡಾ. ಸೌಮ್ಯಾ ವಸ್ತು ಪ್ರದರ್ಶನವನ್ನು ಆಯೋಜಿಸಿದ್ದರು.

    ಈ ವಸ್ತು ಪ್ರದರ್ಶನದಲ್ಲಿ ಎಲ್ಲೆಲ್ಲೂ ಅಣ್ಣಾವ್ರ ಭಾವಚಿತ್ರಗಳು ರಾರಾಜಿಸುತ್ತಿದ್ದವು. ಕಳೆದ ವರ್ಷ ರಾಜ್ ಹುಟ್ಟು ಹಬ್ಬದ ಸಮಯದಲ್ಲಿ ಈ ಪುಸ್ತಕವನ್ನು ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದರು.

    ಈ ಪುಸ್ತಕದಲ್ಲಿ ರಾಜ್ ಅವರ ಅಪರೂಪದ ಸುಮಾರು 1750ಕ್ಕೂ ಹೆಚ್ಚು ಭಾವಚಿತ್ರಗಳಿವೆ. ಪುಸ್ತಕ ಮಾರಾಟದಿಂದ ಬಂದ ರು.35 ಲಕ್ಷಗಳನ್ನು ಶಿಥಿಲಾವಸ್ಥೆಯಲ್ಲಿರುವ ಕನ್ನಡ ಶಾಲೆಗಳ ಅಭಿವೃದ್ದಿಗೆ ನೀಡಲಾಗುವುದು ಎಂದು ಪುನೀತ್ ರಾಜಕುಮಾರ್ ಹೇಳಿದ್ದರು.

    English summary
    Book on Kannada film icon Dr. Rajkumar "Dr. Rajkumar the person behind the personality" in British Library.
    Monday, September 16, 2013, 9:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X