»   » ರಜನಿ 'ಲಿಂಗಾ' : ಬಾಕ್ಸಾಫೀಸ್ ದಾಖಲೆಗಳ ಧೂಳಿಪಟ

ರಜನಿ 'ಲಿಂಗಾ' : ಬಾಕ್ಸಾಫೀಸ್ ದಾಖಲೆಗಳ ಧೂಳಿಪಟ

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಸೂಪರ್ ಸ್ಟಾರ್ ರಜನಿ ಕಾಂತ್ ಚಿತ್ರ ಎಂದಮೇಲೆ ನಿರೀಕ್ಷೆಯಂತೆ ಬಾಕ್ಸಾಫೀಸ್ ನಲ್ಲಿ ದಾಖಲೆಗಳ ಸುರಿಮಳೆಯಾಗುತ್ತದೆ. ಇದಕ್ಕೆ ಲಿಂಗಾ ಕೂಡಾ ಹೊರತಾಗಿಲ್ಲ. ಈ ವರ್ಷದ ಬಹುನಿರೀಕ್ಷಿತ ಚಿತ್ರ ಎಂಬ ಹಣೆಪಟ್ಟಿ ಹೊತ್ತು ಬಂದ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಲಿಂಗಾ ಚಿತ್ರ ವಿಮರ್ಶಕರನ್ನು ಹೊರತು ಪಡಿಸಿ ಎಲ್ಲರನ್ನು ತೃಪ್ತಿಪಡಿಸಿದೆ.

ನಿರ್ಮಾಪಕ, ವಿತರಕರು ಹಣ ಎಣಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. ಬಿಡುಗಡೆಗೆ ಮುನ್ನವೇ 350 ಕೋಟಿ ರು ಬಾಚಿತ್ತು ಎಂಬ ಸುದ್ದಿಯೊಂದಿಗೆ ಈಗ ತಮಿಳು ಚಿತ್ರರಂಗದಲ್ಲೇ ಅತಿ ವೇಗವಾಗಿ 100 ಕೋಟಿ ರು ಬಾಚಿದ ಮೊದಲ ಚಿತ್ರ ಎನಿಸಿಕೊಂಡಿದೆ.

Lingaa Fastest Tamil Movie To Reach 100 Crores!

ಬಿಡುಗಡೆಯಾದ ಮೊದಲ ವೀಕೇಂಡ್ ನಲ್ಲೇ ಅಂದಾಜು 102 ಕೋಟಿ ರು ಬಾಚಿರುವ ಕೆಎಸ್ ರವಿಕುಮಾರ್ ಅವರ ನಿರ್ದೇಶನದ ಚಿತ್ರ ಗಳಿಕೆಯಲ್ಲಿ ಮುನ್ನುಗ್ಗುತ್ತಲೇ ಇದೆ. ಮೊದಲ ದಿನವೇ 32 ಕೋಟಿ ರು ಗಳಿಸಿದ್ದು ಕೂಡಾ ಕಾಲಿವುಡ್ ನಲ್ಲಿ ಹೊಸ ದಾಖಲೆಯಾಗಿದೆ. ['ಲಿಂಗಾ' ವಿಮರ್ಶೆ: ತೆರೆಯ ಮೇಲೆ ರಜನಿ ರಿಂಗರಿಂಗಾ]

ಶುಕ್ರವಾರ(ಡಿ.12) ರಂದು ತಮಿಳುನಾಡೊಂದರಲ್ಲೇ 13 ಕೋಟಿ ರು ಗಳಿಸಿದ ಲಿಂಗಾ, ದಕ್ಷಿಣ ಭಾರತದಲ್ಲಿ 22.6 ಕೋಟಿ ರು ಬಾಚಿದೆ. ಅದರೆ, ಉತ್ತರ ಭಾರತದಲ್ಲಿ 50 ಲಕ್ಷ ರು ಮಾತ್ರ ಸದ್ಯದ ಗಳಿಕೆ ಪಡೆದುಕೊಂಡಿದೆ. ಯುಎಸ್ ನಲ್ಲಿ 2.5 ಕೋಟಿ ರು ಜೇಬಿಗೆ ತುಂಬಿಸಿಕೊಂಡಿತ್ತು. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಎರಡನೇ ದಿನ 29 ಕೋಟಿ ರು ಗಳಿಸಿದ ಲಿಂಗಾ ಒಟ್ಟಾರೆ 64.1 ಕೋಟಿ ರು ಪಡೆಡುಕೊಂಡಿತ್ತು. ಭಾನುವಾರ 36 ಕೋಟಿ ರು ಗಳಿಸುವ ಮೂಲಕ ಜಾಗತಿಕ ಗಳಿಕೆ ಲೆಕ್ಕಾ ಹಾಕಿದಂತೆ 102 ಕೋಟಿ ರು ಗಳಿಸಿ ಮುನ್ನುಗ್ಗುತ್ತಿದೆ. ಮಾರುಕಟ್ಟೆ ತಜ್ಞರ ಪ್ರಕಾರ ತ್ವರಿತವಾಗಿ 200 ಕೋಟಿ ರು ಕ್ಲಬ್ ಸೇರುವ ಎಲ್ಲಾ ಲಕ್ಷಣಗಳಿವೆ.

English summary
As expected, Rajinikanth starrer Lingaa received overwhelming response from fans all over the world when it scorched its way into record number of theatres for any regional language movie.
Please Wait while comments are loading...

Kannada Photos

Go to : More Photos