»   » ನಿಕೋಟಿನ್ ಸೇವಿಸುವ ಮೊದಲು ಯೂ ಟರ್ನ್ ಹೊಡೆದ ಪವನ್

ನಿಕೋಟಿನ್ ಸೇವಿಸುವ ಮೊದಲು ಯೂ ಟರ್ನ್ ಹೊಡೆದ ಪವನ್

Posted by:
Subscribe to Filmibeat Kannada

ಕನ್ನಡ ಪ್ರೇಕ್ಷಕರಿಗೆ 'ಲೂಸಿಯಾ' ಟ್ಯಾಬ್ಲೆಟ್ ನುಂಗಿಸಿ ಕನಸು ಕಳೆದು ನಿದ್ದೆ ಹತ್ತುವ ವೇಳೆಗೆ ಕನ್ನಡ ಚಿತ್ರರಂಗಕ್ಕೆ ಹೊಸ ಭರವಸೆ ಹುಟ್ಟಿಸಿದ ನಿರ್ದೇಶಕ ಪವನ್ ಕುಮಾರ್ ಅವರು ತಮ್ಮ ಹೊಸ ಚಿತ್ರದ ಬಗ್ಗೆ ಘೋಷಿಸಿಕೊಂಡಿದ್ದಾರೆ.

ಲೂಸಿಯಾ' ಚಿತ್ರದ ನಂತರ ಪವನ್ ಕುಮಾರ್ 'C10H14N2' ಅಥವಾ ನಿಕೋಟಿನ್ ಚಿತ್ರವನ್ನು ಕೈಗೆತ್ತಿಕೊಂಡಿದ್ದರು. ಅದರೆ, ಈಗ ನಿಕೋಟಿನ್ ಚಿತ್ರಕ್ಕೆ ಬೇಕಾದ ಬಜೆಟ್ ಹೊಂದಿಸಲು ಸಾಧ್ಯವಾಗದ ಕಾರಣ, ಆ ಗ್ಯಾಪ್ ನಲ್ಲಿ ಮತ್ತೊಂದು ಚಿತ್ರವನ್ನು ತ್ವರಿತವಾಗಿ ಪೂರೈಸಿದ್ದಾರಂತೆ. ಈ ಬಗ್ಗೆ ಮಾಧ್ಯಮದವರು ಕೇಳಬಹುದಾದ ಹತ್ತು ಪ್ರಶ್ನೆಗಳನ್ನು ತಾವೇ ಕೇಳಿಕೊಂಡು ಫೇಸ್ ಬುಕ್ ನಲ್ಲಿ ಉತ್ತರಿಸಿದ್ದಾರೆ. ['ಲೂಸಿಯಾ' ಚಿತ್ರ ವಿಮರ್ಶೆ]

'ನಿಕೋಟಿನ್'ನ ಮಾಲಿಕ್ಯುಲರ್ ಫಾರ್ಮುಲಾ ಹೊಂದಿರುವ ಚಿತ್ರ ಕೂಡಾ ಆಡಿಯನ್ಸ್ ಫಿಲಂಸ್ ಅಂಡ್ ಹೋಮ್ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿದೆ. ಆ ಚಿತ್ರದ ಪಾತ್ರವರ್ಗ, ತಾಂತ್ರಿಕ ಬಳಗದ ವಿವರಗಳು ತಿಳಿದು ಬಂದಿಲ್ಲ. [ನಿಕೋಟಿನ್ ನಿಂದ ನಿದ್ದೆಗೆಟ್ಟ ಪವನ್]

ನಿರ್ದೇಶನ, ಕಥೆ, ಚಿತ್ರಕಥೆ ಪವನ್ ಕುಮಾರ್ ಅವರದ್ದು. ಹೊಸ ಚಿತ್ರಕ್ಕೆ 'ಯೂ ಟರ್ನ್ ಎಂದು ಹೆಸರಿಡಲಾಗಿದ್ದು, ಹೊಸ ನಾಯಕಿ ಜೊತೆಗೆ ಲೂಸಿಯಾ ಪ್ರಾಜೆಕ್ಟ್ ನ ಪಾತ್ರವರ್ಗ ಇರಲಿದೆಯಂತೆ.

ಬಜೆಟ್ ಪ್ರಾಬ್ಲಂ C10 H14 N2 ಮುಂದಕ್ಕೆ

ಬಜೆಟ್ ಪ್ರಾಬ್ಲಂ C10 H14 N2 ಮುಂದಕ್ಕೆ

ಚಿತ್ರದ ಗುಣಮಟ್ಟದ ದೃಷ್ಟಿಯಿಂದ ಸರಿಯಾದ ಹೂಡಿಕೆ ಸಿಗುವ ತನಕ C10 H14 N2 ಚಿತ್ರೀಕರಣ ಮುಂದೂಡಲು ನಿರ್ಧರಿಸಲಾಗಿದೆ. ಮೂರು ದಿನಗಳಲ್ಲಿ 'ಯೂ ಟರ್ನ್' ಚಿತ್ರದ ಕಥೆ ಸ್ಕ್ರಿಪ್ಟ್ ಸಿದ್ಧಪಡಿಸಿದೆ ಇದೊಂದು ಮಿಸ್ಟರಿ ಥ್ರಿಲ್ಲರ್ ಚಿತ್ರ. ಈ ಚಿತ್ರಕ್ಕೆ ಬೇಕಾದ ಬಜೆಟ್ ಹೊಂದಿಕೆಯಾಗಿದ್ದರಿಂದ ಶೂಟಿಂಗ್ ಮಾಡಿ ಮುಗಿಸಲಾಗಿದೆ. ನಿಕೋಟನ್ ಸ್ಕ್ರಿಪ್ಟ್ ವರ್ಕ್ ತಿದ್ದುಪಡಿ ಮುಂದುವರೆದಿದೆ,.

ಹೊಸ ನಾಯಕಿ ಶ್ರದ್ಧಾ ಶ್ರೀನಾಥ್

ಹೊಸ ನಾಯಕಿ ಶ್ರದ್ಧಾ ಶ್ರೀನಾಥ್

ನಾಯಕಿ ಪ್ರಧಾನವಾದ ಈ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ಎಂಬ ಹೊಸಮುಖವನ್ನು ಪರಿಚಯಿಸಲಾಗುತ್ತಿದೆ. ರಂಗಿತರಂಗ ಖ್ಯಾತಿಯ ರಾಧಿಕಾ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಬ್ಬರಿಗೂ ರಂಗಭೂಮಿ ಹಿನ್ನೆಲೆ ಇರುವುದು ಕೆಲಸಕ್ಕೆ ಬಂದಿದೆ. ಉಳಿದಂತೆ ದಿಲೀಪ್ ರಾಜ್ ರೋಜರ್ ನಾರಾಯಣ್, ಪ್ರಾಜೆಕ್ಟ್ ಲೂಸಿಯಾ ಪಾತ್ರವರ್ಗ ನಟಿಸಿದೆ.

ಫಸ್ಟ್ ಕಟ್, ಡಬ್ಬಿಂಹ್ ಹಂತದಲ್ಲಿದೆ ಯೂಟರ್ನ್

ಫಸ್ಟ್ ಕಟ್, ಡಬ್ಬಿಂಹ್ ಹಂತದಲ್ಲಿದೆ ಯೂಟರ್ನ್

ಮೂರು ದಿನದಲ್ಲಿ ಬರೆದ ಸ್ಕ್ರಿಪ್ಟ್ ಮೂರು ತಿಂಗಳ ಶೂಟಿಂಗ್ ನಲ್ಲಿ ಮುಕ್ತಾಯಗೊಂಡಿದ್ದು, ಫಸ್ಟ್ ಕಟ್ ಸಿದ್ದವಿದೆ. ಡಬ್ಬಿಂಗ್ ಮಾಡಬೇಕಿದೆ. ಇನ್ನೇನು ಚಿತ್ರದ ಟೀಸರ್, ಟ್ರೇಲರ್ ಬಿಡುಗಡೆ ಮಾಡುತ್ತೇವೆ. ಕೆಲ ಹೂಡಿಕೆದಾರರನ್ನು ಕಟ್ಟಿಕೊಂಡು ಕಳೆದ ವರ್ಷ ನಿರ್ಮಿಸಿದ ಆಡಿಯನ್ಸ್ ಫಿಲಂಸ್ ಅಂಡ್ ಹೋಮ್ ಟಾಕೀಸ್ ಲಾಂಛನದಲ್ಲಿ ಯೂಟರ್ನ್ ಮೂಡಿಬರುತ್ತಿದೆ.

ಈ ಚಿತ್ರದಲ್ಲಿ ಹಾಡುಗಳಿಲ್ಲ

ಈ ಚಿತ್ರದಲ್ಲಿ ಹಾಡುಗಳಿಲ್ಲ

ಈ ಚಿತ್ರದಲ್ಲಿ ಹಾಡುಗಳಿಲ್ಲ, ಕಥೆ ಹಾಡನ್ನು ಬೇಡಲಿಲ್ಲ. ಮೊದಲಿಗೆ ನಾಯಕ ಪ್ರಧಾನ ಚಿತ್ರ ಮಾಡಲು ಇಚ್ಛಿಸಿದ್ದೆ,. ಅದರೆ, ಕಥೆ ವಿಸ್ತರಣೆ ಯಾಗುತ್ತಿದ್ದಂತೆ ಮಹಿಳಾ ಪ್ರಧಾನ ಪಾತ್ರ ಮುಂದುವರೆಸಬೇಕಾಯಿತು. ಮುಂದಿನ ವರ್ಷ ಇನ್ನಷ್ಟು ಪ್ರೇಕ್ಷಕರಿಂದ ಬಂಡವಾಳ ಹೂಡಿಕೆ ಮಾಡಿದ ಚಿತ್ರಗಳು ಬರಲಿವೆ. ಲೂಸಿಯಾ ಚಿತ್ರ ಗೆಲ್ಲಲು ಪೂರ್ಣಚಂದ್ರ ತೇಜಸ್ವಿ ಅವರ ಹಾಡು, ಸಂಗೀತ, ಸಾಹಿತ್ಯ ಕೂಡಾ ಕಾರಣವಾಗಿತ್ತು. ನವೀನ್ ಸಜ್ಜು ರಂಥ ಪ್ರತಿಭೆ ಪರಿಚಯವಾಗಿತ್ತು.

English summary
I had to pospone C10 H14 N2 - The Film due to budget constraints. But, had enough budgets to produce this one.so started making new film 'U Turn'. Shraddha Srinath will be seen in the lead role, Radhika of Rangitaranaga plays a very important role in the film.so does Dilip Raj and Roger Narayan wrote Director Pawan Kumar on his FB wall.
Please Wait while comments are loading...

Kannada Photos

Go to : More Photos