»   » ಮತ್ತೆ ಬಂದ್ರು ರಮ್ಯಾ ನಿಟ್ಟುಸಿರು ಬಿಟ್ಟ 'ದಿಲ್ KA ರಾಜಾ'

ಮತ್ತೆ ಬಂದ್ರು ರಮ್ಯಾ ನಿಟ್ಟುಸಿರು ಬಿಟ್ಟ 'ದಿಲ್ KA ರಾಜಾ'

Posted by:
Subscribe to Filmibeat Kannada

ಸ್ಯಾಂಡಲ್ ವುಡ್ ನ ಲಕ್ಕಿ ಸ್ಟಾರ್ ರಮ್ಯಾ ಮತ್ತು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮಿಂಚಿರುವ 'ದಿಲ್ KA ರಾಜ' ಸಿನಿಮಾದ ಚಿತ್ರತಂಡ ಸದ್ಯಕ್ಕೆ ನಿಟ್ಟುಸಿರು ಬಿಡುವಂತಾಗಿದೆ.

2012ರಲ್ಲಿ ಶುರುವಾದ 'ದಿಲ್ KA ರಾಜ' ಸಿನಿಮಾ ಲಕ್ಕಿ ಸ್ಟಾರ್ ರಮ್ಯಾ ಅವರ ಡೇಟ್ಸ್ ಪ್ರಾಬ್ಲಂನಿಂದಾಗಿ ಚಿತ್ರದ ಪರಿಸ್ಥಿತಿಯಂತೂ ತುಂಬಾ ಶೋಚನೀಯವಾಗಿತ್ತು. ಇನ್ನು 'ದಿಲ್ KA ರಾಜ' ಸಿನಿಮಾದ ಕೊನೆಯ ಮಾತಿನ ಭಾಗ ಮತ್ತು ಮೂರು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇತ್ತು.[ರಮ್ಯಾ ಮೇಡಂ ಮತ್ತೆ ತೆರೆಮೇಲೆ ಮಿಂಚಿಂಗು..!]

ಆದರೆ ಎಂಟು ದಿನಗಳ ಶೂಟಿಂಗ್ ಗೆ ಯಾಕೋ ಕಾಲ ಕೂಡಿ ಬಂದಿರಲಿಲ್ಲ. ಈ ಮೊದಲು ನಟಿ ರಮ್ಯಾ ಅವರು ಒಂದೆರಡು ಬಾರಿ ಶೂಟಿಂಗ್ ಗೆ ಡೇಟ್ಸ್ ಕೊಟ್ಟಿದ್ದರು. ಆದರೆ ಪ್ರಜ್ವಲ್ ಅವರು ಈ ಸಿನಿಮಾಗೆ ತಮ್ಮ ಹೇರ್ ಸ್ಟೈಲ್ ಬದಲಾವಣೆ ಮಾಡಿಕೊಳ್ಳಬೇಕಿತ್ತು. ಆ ಸಂದರ್ಭದಲ್ಲಿ ಅವರ ಮದುವೆ ಇದ್ದಿದ್ರಿಂದ ಶೂಟಿಂಗ್ ಮುಂದಕ್ಕೆ ಹಾಕಲಾಗಿತ್ತು.

ಅಂದಹಾಗೆ ಇದೀಗ ನಟ ಪ್ರಜ್ವಲ್ ಅವರು ಮದುವೆ, ಹನಿಮೂನ್ ಅಂತ ಎಲ್ಲವನ್ನು ಮುಗಿಸಿ ಇನ್ನೊಂದು ತಿಂಗಳೊಳಗಾಗಿ ಫ್ರೀ ಆಗ್ತಾರೆ. ನಟಿ ರಮ್ಯಾ ಅವರು ಕೂಡ ಒಂದು ತಿಂಗಳಿಗೆ ಮುಂಚೆಯೇ ಡೇಟ್ಸ್ ಅಂತಿಮಗೊಳಿಸುವುದಾಗಿ ಹೇಳಿದ್ದಾರೆ. ಆದ್ದರಿಂದ ಸದ್ಯಕ್ಕೆ ಚಿತ್ರತಂಡ ಧೀರ್ಘ ನಿಟ್ಟುಸಿರು ಬಿಡುವಂತಾಗಿದೆ.['ದಿಲ್ ಕಾ ರಾಜಾ'ನಿಗೆ ಮರುಜನ್ಮ ಕೊಡ್ತಾರಾ ರಮ್ಯಾ?]

ಇದೀಗ ಇಬ್ಬರು ಡೇಟ್ಸ್ ಕೊಟ್ಟಿರುವುದರಿಂದ ಆದಷ್ಟು ಬೇಗ ಚಿತ್ರೀಕರಣ ಮುಗಿಸಿ ಕೈ ತೊಳೆದುಕೊಳ್ಳುವ ಆತುರದಲ್ಲಿದ್ದಾರೆ ನಿರ್ದೇಶಕ ಸೋಮನಾಥ್ ಪಿ ಪಾಟೀಲ್.

ಎಸ್.ಎಸ್.ವಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ 'ದಿಲ್ KA ರಾಜ' ಚಿತ್ರಕ್ಕೆ 'ಬಾಹುಬಲಿ' ಖ್ಯಾತಿಯ ಛಾಯಾಗ್ರಾಹಕ ಕೆ.ಕೆ.ಸೆಂಧಿಲ್ ಕ್ಯಾಮಾರ ಕೈ ಚಳಕ ತೋರಿದ್ದಾರೆ.

'ಆರ್ಯನ್' ಚಿತ್ರದ ನಂತರ ಲಾಂಗ್ ಗ್ಯಾಪ್ ತೆಗೆದುಕೊಂಡು ಮತ್ತೆ ತೆರೆ ಮೇಲೆ ಮಿಂಚುತ್ತಿರುವ ನಟಿ ರಮ್ಯಾ ಅವರನ್ನು ನೋಡಲು ಅಭಿಮಾನಿಗಳಂತೂ ಕಾತರದಿಂದ ಕಾದಿದ್ದಾರೆ.

English summary
Kannada Actress Ramya give call sheet, Kannada Actor Prajwal Devaraj starrer Kannada Movie 'Dil KA Raja' Shooting restart soon. The movie is directed by Somnath Patil.
Please Wait while comments are loading...

Kannada Photos

Go to : More Photos