twitter
    For Quick Alerts
    ALLOW NOTIFICATIONS  
    For Daily Alerts

    ಆಪ್ತಮಿತ್ರ ಅನಿಲ್ ಗೆ ನಟ ದುನಿಯಾ ವಿಜಯ್ ಭಾವಪೂರ್ಣ ವಿದಾಯ

    By Bharathkumar
    |

    'ಮಾಸ್ತಿ ಗುಡಿ' ಚಿತ್ರದ ಕ್ಲೈಮ್ಯಾಕ್ಸ್ ದುರಂತದಲ್ಲಿ ಸಾವಿಗೀಡಾದ ಖಳ ನಟ ಅನಿಲ್ ಅವರ ಅಂತ್ಯ ಸಂಸ್ಕಾರ ಇಂದು ಸಂಜೆ 6.30ರ ಸುಮಾರಿಗೆ ಬೆಂಗಳೂರಿನ ಬನಶಂಕರಿ ರುದ್ರಭೂಮಿಯಲ್ಲಿ ನೆರವೇರಿತು.

    ರಾಮನಗರ ಜಿಲ್ಲಾ ಕಾರಾಗೃಹದಲ್ಲಿದ್ದ 'ಮಾಸ್ತಿ ಗುಡಿ' ನಿರ್ಮಾಪಕ ಸುಂದರ್.ಪಿ.ಗೌಡ ಆಗಮಿಸಿದ ಬಳಿಕ ಅನಿಲ್ ರವರ ಅಂತ್ಯಕ್ರಿಯೆ ನಡೆಯಿತು.

    ಎಲ್ಲರಿಗೂ ಗೊತ್ತಿರುವ ಹಾಗೆ, ದುನಿಯಾ ವಿಜಯ್, ಅನಿಲ್, ಸುಂದರ್.ಪಿ.ಗೌಡ ಆಪ್ತಮಿತ್ರರು. ಅನಿಲ್ ರವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವಂತೆ ಬಂಧನದಲ್ಲಿರುವ ಸುಂದರ್.ಪಿ.ಗೌಡ ರಾಮನಗರ ಜಿಲ್ಲಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ದುರ್ಘಟನೆಯಿಂದ ಜೈಲುಪಾಲಾಗಿರುವ ಸುಂದರ್.ಪಿ.ಗೌಡ ಬರುವವರೆಗೂ ಅನಿಲ್ ಅಂತ್ಯಕ್ರಿಯೆ ನಡೆಯಲ್ಲ ಅಂತ ಮಾಧ್ಯಮಗಳಿಗೆ ದುನಿಯಾ ವಿಜಯ್ ಹೇಳಿಕೆ ಕೂಡ ನೀಡಿದ್ದರು.['ಮಾಸ್ತಿ ಗುಡಿ' ತನಿಖೆ: ದುನಿಯಾ ವಿಜಯ್ ವಿರುದ್ಧ ಸ್ಫೋಟಕ ಮಾಹಿತಿ ಬಯಲು.!]

    ಕಡೆಗೆ, ನ್ಯಾಯಾಲಯದ ಅನುಮತಿ ಪಡೆದು ಸುಂದರ್.ಪಿ.ಗೌಡ ಆಗಮಿಸಿದ ಬಳಿಕ ಅನಿಲ್ ರವರ ಅಂತಿಮ ಸಂಸ್ಕಾರದ ವಿಧಿ ವಿಧಾನ ಪ್ರಾರಂಭಗೊಂಡಿತು. ಮುಂದೆ ಓದಿ....

    ಅಂತಿಮ ದರ್ಶನ ಪಡೆದ ಕನ್ನಡ ಸಿನಿ ತಾರೆಯರು

    ಅಂತಿಮ ದರ್ಶನ ಪಡೆದ ಕನ್ನಡ ಸಿನಿ ತಾರೆಯರು

    ಅನಿಲ್ ಪಾರ್ಥೀವ ಶರೀರವನ್ನ ಕದಿರೇನಹಳ್ಳಿಯ ಅವರ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಪುನೀತ್ ರಾಜ್ ಕುಮಾರ್, ರವಿಶಂಕರ್, ಗಣೇಶ್, ನೆನಪಿರಲಿ ಪ್ರೇಮ್, ಬುಲೆಟ್ ಪ್ರಕಾಶ್, ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ, ನಟ ಧನಂಜಯ್, ಅರುಣ್ ಸಾಗರ್ ಸೇರಿದಂತೆ ಹಲವರು ಆಗಮಿಸಿ, ಅಂತಿಮ ನಮನ ಸಲ್ಲಿಸಿದರು.[ಮಣ್ಣಲ್ಲಿ ಮಣ್ಣಾದ 'ಮಾಸ್ತಿ ಗುಡಿ' ನಟ ರಾಘವ ಉದಯ್]

    ಭಾವುಕರಾಗಿದ್ದ ನಟ ದುನಿಯಾ ವಿಜಯ್

    ಭಾವುಕರಾಗಿದ್ದ ನಟ ದುನಿಯಾ ವಿಜಯ್

    ಅನಿಲ್ ನಿವಾಸಕ್ಕೆ ಆಗಮಿಸಿದ ನಟ ದುನಿಯಾ ವಿಜಯ್ ಭಾವುಕರಾಗಿದ್ದರು. ಅಗಲಿದ ಆಪ್ತಮಿತ್ರನನ್ನು ನೆನೆದು ಕಣ್ಣೀರಿಟ್ಟರು.[ದುನಿಯಾ ವಿಜಯ್, ನಾಗಶೇಖರ್, ರವಿವರ್ಮಗೆ ತಾತ್ಕಾಲಿಕ ನಿಷೇಧ]

    ಸುಂದರ್ ಪಿ ಗೌಡ್ರು ಬರಬೇಕು!

    ಸುಂದರ್ ಪಿ ಗೌಡ್ರು ಬರಬೇಕು!

    ಇದೇ ವೇಳೆ, ಅನಿಲ್ ಅಂತ್ಯ ಸಂಸ್ಕಾರದಲ್ಲಿ 'ಮಾಸ್ತಿಗುಡಿ' ಚಿತ್ರದ ನಿರ್ಮಾಪಕರ ಸುಂದರ್ ಪಿ ಗೌಡ್ರು ಅಂತ ದುನಿಯಾ ವಿಜಯ್ ಬಯಸಿದರು. ''ಸುಂದರ್ ಬರುವವರೆಗೂ ಅನಿಲ್ ಅಂತ್ಯ ಸಂಸ್ಕಾರ ನಡೆಯಲ್ಲ. ಮಾಧ್ಯಮದ ಮೂಲಕ ನಾನು ಕೇಳಿಕೊಳ್ಳುವುದು ಇಷ್ಟೇ. ಸುಂದರ್ ಪಿ ಗೌಡ್ರು ರಾಮನಗರ ಜೈಲಿನಲ್ಲಿದ್ದಾರೆ. ಅನಿಲ್ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಲು ಅವರಿಗೆ ಲೀಗಲ್ ಆಗಿ ಅನುಮತಿ ಕೂಡ ಸಿಕ್ಕಿದೆ. ದಯವಿಟ್ಟು ಜೈಲು ಅಧಿಕಾರಿಗಳು ಪ್ರಕ್ರಿಯೆಗಳನ್ನ ಆದಷ್ಟೂ ಬೇಗ ಮಾಡಿಸಿಕೊಟ್ಟು, ಸುಂದರ್ ಅವರನ್ನ ಕಳುಹಿಸಿಕೊಡಿ ಅಂತ ಕೇಳಿಕೊಳ್ಳುತ್ತಿದ್ದೇನೆ'' - ದುನಿಯಾ ವಿಜಯ್[ಎ-1 ಆರೋಪಿ 'ಮಾಸ್ತಿ ಗುಡಿ' ನಿರ್ಮಾಪಕ ಸುಂದರ್ ಗೌಡ ಅರೆಸ್ಟ್.!]

    ನಾವೆಲ್ಲ ಒಟ್ಟಿಗೆ ಇದ್ದವರು

    ನಾವೆಲ್ಲ ಒಟ್ಟಿಗೆ ಇದ್ದವರು

    ''ಈ ಜನರನ್ನ ನೋಡ್ತಿದ್ರೆ ತುಂಬ ನೋವಾಗ್ತಿದೆ ನನಗೆ. ನಾನು, ಅನಿಲ್, ಉದಯ್, ಸುಂದರ್ ಎಲ್ಲರೂ ಒಟ್ಟಿಗೆ ಇದ್ದವರು. ಅನಿಲ್ ಇಲ್ಲ ಅಂದ್ರೆ, ಈವತ್ತು ನಾವು ಏನೂ ಇಲ್ಲ'' ಅಂತ ನಟ ದುನಿಯಾ ವಿಜಯ್ ಮಾಧ್ಯಮಗಳ ಮುಂದೆ ಹೇಳಿದರು.

    ಕಡೆಗೂ ಆಗಮಿಸಿದ ಸುಂದರ್.!

    ಕಡೆಗೂ ಆಗಮಿಸಿದ ಸುಂದರ್.!

    ನ್ಯಾಯಾಲಯದ ಅನುಮತಿ ಪಡೆದು ನಿರ್ಮಾಪಕ ಸುಂದರ್, ಅನಿಲ್ ನಿವಾಸಕ್ಕೆ ಆಗಮಿಸಿ, ಅನಿಲ್ ರವರ ಅಂತಿಮ ದರ್ಶನ ಪಡೆದರು.

    ನೂರಾರು ಅಭಿಮಾನಿಗಳು ಭಾಗಿ

    ನೂರಾರು ಅಭಿಮಾನಿಗಳು ಭಾಗಿ

    ಅನಿಲ್ ರವರ ಪಾರ್ಥೀವ ಶರೀರ ಮೆರವಣಿಗೆ ಮೂಲಕ ಕದಿರೇನಹಳ್ಳಿ ನಿವಾಸದಿಂದ ಬನಶಂಕರಿ ರುದ್ರಭೂಮಿ ತಲುಪಿತು. ನೂರಾರು ಅಭಿಮಾನಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡರು.[ನಿನ್ನೆ ಉದಯ್ ಶವ, ಇಂದು ಅನಿಲ್ ಶವ ಪತ್ತೆ]

    ಮೊದಲು ಉದಯ್ ಸಮಾಧಿಗೆ ನಮನ

    ಮೊದಲು ಉದಯ್ ಸಮಾಧಿಗೆ ನಮನ

    ಮೊದಲು ಉದಯ್ ರವರ ಸಮಾಧಿಗೆ ನಮನ ಸಲ್ಲಿಸಿ ನಂತರ ಅನಿಲ್ ಅಂತ್ಯ ಸಂಸ್ಕಾರದಲ್ಲಿ ನಟ ದುನಿಯಾ ವಿಜಯ್ ಪಾಲ್ಗೊಂಡರು.['ಮಸಣ' ಗುಡಿ ಕಥೆ: ಒಬ್ಬರ ಕಣ್ಣಿಗೆ ಬೆಣ್ಣೆ, ಇನ್ನೊಬ್ಬರ ಕಣ್ಣಿಗೆ ಸುಣ್ಣ ಯಾಕೆ?]

    ಮಣ್ಣಲ್ಲಿ ಮಣ್ಣಾದ ಅನಿಲ್

    ಮಣ್ಣಲ್ಲಿ ಮಣ್ಣಾದ ಅನಿಲ್

    ಹಿಂದು ಸಂಪ್ರದಾಯದಂತೆ ಅನಿಲ್ ರವರ ಅಂತ್ಯ ಕ್ರಿಯೆ ನಡೆಯಿತು. ಅನಿಲ್ ಹಿರಿಯ ಸಹೋದರ ಹರೀಶ್ ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಿದರು. ತಂದೆ ವೇಣುಗೋಪಾಲ್ ರವರ ಸಮಾಧಿ ಪಕ್ಕದಲ್ಲೇ ಅನಿಲ್ ಅಂತ್ಯಕ್ರಿಯೆ ನಡೆಯಿತು.[ಪ್ರೀತಿಯ ತಂದೆ ಪಕ್ಕದಲ್ಲೇ ಖಳನಟ ಅನಿಲ್ ಅಂತ್ಯಕ್ರಿಯೆ]

    English summary
    The last rites of Kannada Actor Anil carried according to Hindu Tradition at Banashankari Crematorium, Bengaluru Today (Nov 10th). Anil had drowned during a 'Maasti Gudi' film climax shoot at TG Halli reservoir
    Thursday, November 10, 2016, 19:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X