»   » ಅರೆಸ್ಟ್ ಆದ್ರಾ ನಟ ದುನಿಯಾ ವಿಜಯ್.? ನಿನ್ನೆ ನಡೆದ ಸತ್ಯ ಸಂಗತಿ ಇದು.!

ಅರೆಸ್ಟ್ ಆದ್ರಾ ನಟ ದುನಿಯಾ ವಿಜಯ್.? ನಿನ್ನೆ ನಡೆದ ಸತ್ಯ ಸಂಗತಿ ಇದು.!

Posted by:
Subscribe to Filmibeat Kannada

''ನಟ ದುನಿಯಾ ವಿಜಯ್ ಅರೆಸ್ಟ್ ಆಗಿದ್ದಾರೆ'' ಎಂಬ ಬ್ರೇಕಿಂಗ್ ನ್ಯೂಸ್ ನಿನ್ನೆ ಸಂಜೆ ಇದ್ದಕ್ಕಿದ್ದಂತೆ ಕೆಲವು ಕನ್ನಡ ಸುದ್ದಿ ವಾಹಿನಿಗಳಲ್ಲಿ ಪ್ರಸಾರ ಆಯ್ತು.

'ಮಾಸ್ತಿ ಗುಡಿ' ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಹೆಲಿಕಾಫ್ಟರ್ ನಿಂದ ನಟ ಅನಿಲ್ ಮತ್ತು ಉದಯ್ ರವರನ್ನು ನೀರಿಗೆ ತಳ್ಳುವ ದೃಶ್ಯದಲ್ಲಿ ನಟ ದುನಿಯಾ ವಿಜಯ್ ಕೂಡ ಪಾಲ್ಗೊಂಡಿದ್ದರಿಂದ, ಅವರ ಮೇಲೂ ಎಫ್.ಐ.ಆರ್ ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗಿತ್ತು. ''ಅದು ನಿಜವಾಗಿ ನಟ ದುನಿಯಾ ವಿಜಯ್ ರವರನ್ನ ರಾಮನಗರ ಪೊಲೀಸರು ಅರೆಸ್ಟ್ ಮಾಡಿಬಿಟ್ಟರಾ.?'' ಎಂಬ ಅನುಮಾನ ಅನೇಕರನ್ನ ಕಾಡಿತ್ತು. ಅದಕ್ಕೆ ಕಾರಣ, ಅನಿಲ್ ಅಂತ್ಯಕ್ರಿಯೆ ಬಳಿಕ ನಡೆದ ಒಂದು ಘಟನೆ.!


ಅನಿಲ್ ಅಂತ್ಯಕ್ರಿಯೆ ಬಳಿಕ ನಡೆದದ್ದು ಏನು.?

ಅನಿಲ್ ಅಂತ್ಯಕ್ರಿಯೆ ಬಳಿಕ ನಡೆದದ್ದು ಏನು.?

ಆಪ್ತಮಿತ್ರ ಅನಿಲ್ ರವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ನಂತರ ನಟ ದುನಿಯಾ ವಿಜಯ್ ಸೀದಾ ಪೊಲೀಸ್ ವ್ಯಾನ್ ಹತ್ತಿದರು. ಇದನ್ನ ಕಣ್ಣಾರೆ ಕಂಡ ಹಲವರು, ''ದುನಿಯಾ ವಿಜಯ್ ಅರೆಸ್ಟ್ ಆಗಿದ್ದಾರೆ'' ಎಂಬ ಸುದ್ದಿ ಹಬ್ಬಿಸಿದರು. ['ಮಾಸ್ತಿ ಗುಡಿ' ತನಿಖೆ: ದುನಿಯಾ ವಿಜಯ್ ವಿರುದ್ಧ ಸ್ಫೋಟಕ ಮಾಹಿತಿ ಬಯಲು.!]


ಸತ್ಯ ಏನು.?

ಸತ್ಯ ಏನು.?

'ದುನಿಯಾ ವಿಜಯ್ ಅರೆಸ್ಟ್ ಆಗಿಲ್ಲ' ಎಂಬುದಷ್ಟೇ ಸದ್ಯದ ವಾಸ್ತವ. ದುನಿಯಾ ವಿಜಯ್ ವಿರುದ್ಧ ಎಫ್.ಐ.ಆರ್ ಕೂಡ ಇನ್ನೂ ದಾಖಲಾಗಿಲ್ಲ. ['ಮಾಸ್ತಿ ಗುಡಿ' ದುರಂತ ಸಂಭವಿಸಲು ಪ್ರಮುಖ ಕಾರಣ ಇದೇ.!]


ಮತ್ತೆ ಪೊಲೀಸ್ ವ್ಯಾನ್ ಏರಿದ್ದು ಯಾಕೆ.?

ಮತ್ತೆ ಪೊಲೀಸ್ ವ್ಯಾನ್ ಏರಿದ್ದು ಯಾಕೆ.?

ಖಳನಟ ಅನಿಲ್ ಅವರ ಅಂತ್ಯಕ್ರಿಯೆಯಲ್ಲಿ ನೂರಾರು ಜನ ಪಾಲ್ಗೊಂಡಿದ್ದರು. ಅಂತ್ಯಕ್ರಿಯೆ ಬಳಿಕ ನಟ ದುನಿಯಾ ವಿಜಯ್ ಮನೆಗೆ ತೆರಳುವಾಗ, ಅವರ ಮೇಲೆ ಹಲ್ಲೆ ಆಗಬಹುದು ಎಂಬ ಶಂಕೆ ಮೇಲೆ ರಾಮನಗರ ಪೊಲೀಸರು, ನಟ ದುನಿಯಾ ವಿಜಯ್ ರವರನ್ನ ಮನೆ ಕಡೆ ಸುರಕ್ಷಿತವಾಗಿ ಕರೆದುಕೊಂಡು ಹೋದರು ಅಷ್ಟೆ. ['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]


ದುನಿಯಾ ವಿಜಯ್ ವಿರುದ್ಧ ಎಫ್.ಐ.ಆರ್ ಯಾಕೆ.?

ದುನಿಯಾ ವಿಜಯ್ ವಿರುದ್ಧ ಎಫ್.ಐ.ಆರ್ ಯಾಕೆ.?

ನಿರ್ದೇಶಕ ನಾಗಶೇಖರ್ ರವರಿಗೆ 'ಮಾಸ್ತಿ ಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಐಡಿಯಾ ಕೊಟ್ಟವರೇ ನಟ ದುನಿಯಾ ವಿಜಯ್ ಎಂಬ ವಿಚಾರವನ್ನ ಪೊಲೀಸರಿಗೆ ನಿರ್ಮಾಪಕ ಸುಂದರ್.ಪಿ.ಗೌಡ ತಿಳಿಸಿದ್ದಾರೆ. ಹೀಗಾಗಿ, ನಟ ದುನಿಯಾ ವಿಜಯ್ ವಿರುದ್ಧ ಎಫ್.ಐ.ಆರ್ ದಾಖಲಾಗುವ ಸಾಧ್ಯತೆ ಇದೆ. [ಅನಿಲ್, ಉದಯ್ ಕೊನೆಯ ಮಾತಲ್ಲಿ ಸಾವಿನ ಮುನ್ಸೂಚನೆಯ ಸುಳಿವು.!]


ದುನಿಯಾ ವಿಜಯ್ ವಿರುದ್ಧ ನಿರ್ಮಾಪಕ ಕೊಟ್ಟ ಹೇಳಿಕೆ ಏನು.?

ದುನಿಯಾ ವಿಜಯ್ ವಿರುದ್ಧ ನಿರ್ಮಾಪಕ ಕೊಟ್ಟ ಹೇಳಿಕೆ ಏನು.?

ಇಡೀ ದುರ್ಘಟನೆಯ ರೂವಾರಿ ನಟ ದುನಿಯಾ ವಿಜಯ್... ಕ್ಲೈಮ್ಯಾಕ್ಸ್ ಸೀನ್ ಗೆ ಐಡಿಯಾ ಕೊಟ್ಟಿದ್ದೂ ಕೂಡ ದುನಿಯಾ ವಿಜಯ್... ಡ್ಯೂಪ್ ಬಳಸದೇ ಚಿತ್ರೀಕರಿಸುವಂತೆ ಹೇಳಿದ್ದೂ ಕೂಡ ದುನಿಯಾ ವಿಜಯ್... ಅಂತ ಪೊಲೀಸರ ಮುಂದೆ ನಿರ್ಮಾಪಕ ಸುಂದರ್ ಗೌಡ ಹೇಳಿಕೆ ನೀಡಿದ್ದಾರೆ ಅಂತ 'ಪಬ್ಲಿಕ್ ಟಿವಿ' ವರದಿ ಮಾಡಿದೆ.


ನಿರ್ಮಾಪಕರ ಹೇಳಿಕೆಯಲ್ಲಿ ಏನಿದೆ.?

ನಿರ್ಮಾಪಕರ ಹೇಳಿಕೆಯಲ್ಲಿ ಏನಿದೆ.?

''ಮಾಸ್ತಿ ಗುಡಿ' ಕ್ಲೈಮ್ಯಾಕ್ಸ್ ಸೀನ್ ಬಗ್ಗೆ ನಾಗಶೇಖರ್ ತಲೆಕೆಡಿಸಿಕೊಂಡಿದ್ದಾಗ, ಈ (ದುಸ್ಸಾಹಸದ) ಸೀನ್ ಐಡಿಯಾ ಕೊಟ್ಟವರೇ ದುನಿಯಾ ವಿಜಯ್. ಅದೂ ಅಲ್ಲದೇ, ಡ್ಯೂಪ್ ಬೇಡ..ನಮ್ಮ ಹುಡುಗರೇ ಮಾಡುತ್ತಾರೆ. ಅವರನ್ನು ಒಪ್ಪಿಸುವ ಜವಾಬ್ದಾರಿ ನನ್ನದು ಅಂತ ದುನಿಯಾ ವಿಜಯ್, ನಿರ್ದೇಶಕ ನಾಗಶೇಖರ್ ಹಾಗೂ ನನ್ನ ಮುಂದೆ ಹೇಳಿದ್ದರು'' ಅಂತ ಪೊಲೀಸರಿಗೆ ನಿರ್ಮಾಪಕ ಸುಂದರ್ ಗೌಡ ಹೇಳಿದ್ದಾರೆ.


ಓವರ್ ಕಾನ್ಫಿಡೆನ್ಸ್.!

ಓವರ್ ಕಾನ್ಫಿಡೆನ್ಸ್.!

''ನೀರಿನ ಬಗ್ಗೆ ಭಯಗೊಂಡಿದ್ದ ಉದಯ್, 'ನನಗೆ ಈಜು ಬರೋಲ್ಲ' ಅಂದರೂ 'ನಾನಿದ್ದೀನಿ, ನಾನು ಇರುವ ತನಕ ಏನೂ ಆಗಲ್ಲ' ಅಂತ ದುನಿಯಾ ವಿಜಯ್ ಹೇಳಿದ್ದರು'' ಎಂದೂ ಕೂಡ ಪೊಲೀಸರ ಮುಂದೆ ಸುಂದರ್ ಗೌಡ ಹೇಳಿದ್ದಾರಂತೆ.


ಹೇಳಿಕೆ ಆಧರಿಸಿ ಎಫ್.ಐ.ಆರ್.?

ಹೇಳಿಕೆ ಆಧರಿಸಿ ಎಫ್.ಐ.ಆರ್.?

ನಿರ್ಮಾಪಕ ಸುಂದರ್.ಪಿ.ಗೌಡ ನೀಡಿರುವ ಹೇಳಿಕೆ ಆಧರಿಸಿ ನಟ ದುನಿಯಾ ವಿಜಯ್ ವಿರುದ್ಧ ಎಫ್.ಐ.ಆರ್ ದಾಖಲಾಗಬಹುದು ಎನ್ನಲಾಗಿದೆ.


ಜಲಮಂಡಳಿ ಅಧಿಕಾರಿಗಳು ದೂರು ಕೊಟ್ಟಿದ್ದರು.!

ಜಲಮಂಡಳಿ ಅಧಿಕಾರಿಗಳು ದೂರು ಕೊಟ್ಟಿದ್ದರು.!

ಜಲಮಂಡಳಿ ಅಧಿಕಾರಿಗಳು ನೀಡಿರುವ ದೂರಿನ ಅನ್ವಯ, 'ಮಾಸ್ತಿ ಗುಡಿ' ಚಿತ್ರದ ನಿರ್ಮಾಪಕ ಸುಂದರ್ ಗೌಡ ಅವರು ಎ-1 ಆರೋಪಿಯಾಗಿದ್ದು, ನಿರ್ದೇಶಕ ನಾಗಶೇಖರ್ ಅವರು ಎ-2 ಆರೋಪಿ, ಸಹ ನಿರ್ದೇಶಕ ಎ-3 ಆರೋಪಿ, ಸಾಹಸ ನಿರ್ದೇಶಕ ರವಿವರ್ಮ ಅವರನ್ನು ಎ-4 ಆರೋಪಿ, ಸಾಹಸ ಸಹ ನಿರ್ದೇಶಕ ಎ-5 ಆರೋಪಿಯನ್ನಾಗಿಸಿ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ದುನಿಯಾ ವಿಜಯ್ ಹೆಸರು ಉಲ್ಲೇಖವಾಗಿಲ್ಲ.


ನಿರ್ಮಾಪಕ ಸುಂದರ್.ಪಿ.ಗೌಡ ಮಾತ್ರ ಅರೆಸ್ಟ್.!

ನಿರ್ಮಾಪಕ ಸುಂದರ್.ಪಿ.ಗೌಡ ಮಾತ್ರ ಅರೆಸ್ಟ್.!

ಈವರೆಗೂ 'ಮಾಸ್ತಿ ಗುಡಿ' ದುರಂತ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಮನಗರ ಪೊಲೀಸರು ನಿರ್ಮಾಪಕ ಸುಂದರ್.ಪಿ.ಗೌಡ ರವರನ್ನು ಮಾತ್ರ ಬಂಧಿಸಿದ್ದಾರೆ.


ಎಸ್ಕೇಪ್ ಆಗಿರುವ ನಾಗಶೇಖರ್ ಮತ್ತು ರವಿವರ್ಮ.!

ಎಸ್ಕೇಪ್ ಆಗಿರುವ ನಾಗಶೇಖರ್ ಮತ್ತು ರವಿವರ್ಮ.!

'ಮಾಸ್ತಿ ಗುಡಿ' ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ನಾಗಶೇಖರ್ ರವರನ್ನು ಕೂಡ ಬಂಧಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿತ್ತು. ಆದ್ರೆ ಅದು ನಿಜವಲ್ಲ.! ದುರ್ಘಟನೆ ನಡೆದ ದಿನ ನಾಪತ್ತೆ ಆಗಿದ್ದ ನಿರ್ದೇಶಕ ನಾಗಶೇಖರ್ ಮತ್ತು ಸ್ಟಂಟ್ ಡೈರೆಕ್ಟರ್ ರವಿವರ್ಮ ಇವರೆಗೂ ಪತ್ತೆ ಆಗಿಲ್ಲ. ಅವರ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ.


English summary
Kannada Actor Duniya Vijay is not under Police Custody. He has not been arrested by Ramanagara Police after 'Maasti Gudi' Tragedy. 2 Actors (Anil and Uday) had lost their lives attempting an action sequence on Monday afternoon. The FIR was filed after T G Halli reservoir dam's director filed a formal complaint with the local police.
Please Wait while comments are loading...

Kannada Photos

Go to : More Photos