twitter
    For Quick Alerts
    ALLOW NOTIFICATIONS  
    For Daily Alerts

    'ಮಾಸ್ತಿ ಗುಡಿ' ಸಿನಿಮಾ ತಂಡಕ್ಕೆ 'ಕೇಳಬಾರದ' 20 ಪ್ರಶ್ನೆಗಳು.!

    By Harshitha
    |

    'ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗತ್ತೆ' ಎನ್ನುವುದು 'ಮಾಸ್ತಿಗುಡಿ' ಚಲನಚಿತ್ರ ತಂಡಕ್ಕೆ ಹೇಳಿ ಮಾಡಿಸಿದ ಗಾದೆ. ಇದು ಕೇವಲ ದುರಂತದ ಮಾತಷ್ಟೇ ಅಲ್ಲ. ಇಡೀ ಚಿತ್ರರಂಗಕ್ಕೆ ಈ ಪ್ರಕರಣ ಎಚ್ಚರಿಕೆ ಗಂಟೆ ಬಾರಿಸುತ್ತಿದೆ. 'ಆಗಿದ್ದು ಆಗಿ ಹೋಯಿತು' ಎಂದು ಕಣ್ಣೀರು ಸುರಿಸಿ, ಕರ್ಚೀಫಿನಲ್ಲಿ ವರೆಸಿಕೊಳ್ಳುವ ದುರಂತ ಇದಲ್ಲ. ಈ ಮಧ್ಯೆ ನಮಗೆ ಹಲವಾರು ಅನುಮಾನಗಳು, ಪ್ರಶ್ನೆಗಳು, ಪ್ರಾಬ್ಲಮ್ಮುಗಳು ಎದುರಾಗುತ್ತವೆ. Questions are Twenty, Problems are Plenty ಎಂಬುದನ್ನು ಮರೆಯದಿರೋಣ. ಈ ಹಗರಣದ ಹಿನ್ನಲೆಯಲ್ಲಿ ನಮ್ಮ ವರದಿಗಾರ್ತಿ ಹರ್ಷಿತಾ ರಾಕೇಶ್ ಸುಮಾರು 20 ಅಂಶಗಳನ್ನು ಚಲನಚಿತ್ರರಂಗದ ಪಾದಾರವಿಂದಗಳಲ್ಲಿ ಅರ್ಪಿಸುತ್ತಿದ್ದಾರೆ. ಓದಿ - ಶಾಮ್, ಸಂಪಾದಕ.

    'Maasti Gudi' Tragedy: Questions are 20, problems are plenty

    1: ತಿಪ್ಪಗೊಂಡನಹಳ್ಳಿ ಜಲಾಶಯದ ನಿಷೇಧಿತ ಪ್ರದೇಶಗಳಲ್ಲಿ ಚಿತ್ರೀಕರಿಸಬಾರದು ಅಂತ ಜಲಮಂಡಳಿ ಷರತ್ತು ವಿಧಿಸಿದ್ದರೂ, ಉಲ್ಲಂಘಿಸಿದ್ದು ಯಾಕೆ?
    2: ನೀರಿನಲ್ಲಿ ಚಿತ್ರೀಕರಣ ಮಾಡಬಾರದು ಅಂತ ಹೇಳಿದ್ದರೂ, ಆ ಕೆಲಸ ಮಾಡಲು ಅಂಥ ಕಾರಣವೇನಿತ್ತು?
    3: ಭಾರತೀಯ ಚಿತ್ರರಂಗದ ಖ್ಯಾತ ಸಾಹಸ ನಿರ್ದೇಶಕ ಅಂತ್ಹೇಳಿಕೊಳ್ಳುವ ರವಿವರ್ಮ ರವರಿಗೆ 'ನೀರಿನ ಸ್ಟಂಟ್' ಮತ್ತು ಅದರಿಂದ ಆಗಬಹುದಾದ ಅಪಾಯದ ಅರಿವಿರಲಿಲ್ಲವೇ?
    4: ಈಜು ಬಾರದೇ ಇರುವವರನ್ನು 100ಕ್ಕೂ ಹೆಚ್ಚು ಅಡಿ ಎತ್ತರದಿಂದ ಧುಮುಕಿಸಿದ್ದು ಎಷ್ಟು ಸರಿ?
    5: ಮೊದಲು 30-40 ಅಡಿ ಅಂತ ಕಲಾವಿದರಿಗೆ ಹೇಳಿ, ಸ್ಪಾಟ್ ಗೆ ಬಂದ ಮೇಲೆ 100 ಅಡಿ ಎತ್ತರ ಎಂದು ಶಾಕ್ ಕೊಟ್ಟಿದ್ದು ಯಾಕೆ?
    6: ಡ್ಯೂಪ್ ಬಳಕೆ ಮಾಡಲಿಲ್ಲ. ಕಾರಣ ಏನು.?
    7: ಜ್ವರ ಅಂತ ಉದಯ್ ಹೇಳಿದ್ದರೂ, ಪರ್ಯಾಯ ವ್ಯವಸ್ಥೆ ಏಕೆ ಮಾಡಲಿಲ್ಲ?
    8: ಮೊದಲು 'ಡ್ಯೂಪ್' ಅಂತ ಹೇಳಿ, ನಂತರ 'ನೀವೇ ಮಾಡಬೇಕು' ಅಂತ ಅನಿಲ್ ಹಾಗೂ ಉದಯ್ ಗೆ ಬಲವಂತ ಮಾಡಿದ್ದರ ಹಿಂದಿನ ಉದ್ದೇಶ?
    9: ಹೆಲಿಕಾಫ್ಟರ್ ನಿಂದ ಜಿಗಿಯುವಂತೆ ಅನಿಲ್ ಹಾಗೂ ಉದಯ್ ಮೇಲೆ ಒತ್ತಡ ಹೇರಿದ್ದು ಯಾಕೆ?
    10: ಹೆಲಿಕಾಫ್ಟರ್ ನಿಂದ ಖಳನಟರು ಹಾರಬೇಕಾದಾಗ ರೋಪ್ (ಹಗ್ಗ) ಬಳಕೆ ಮಾಡಲಿಲ್ಲ. ಇದು ಸರಿಯೇ?
    11: ನೀರಿಗೆ ಹಾರಲಿದ್ದಾರೆ ಅಂತ ಗೊತ್ತಿದ್ದರೂ, ಲೈಫ್ ಜಾಕೆಟ್ ತೊಡಿಸಲಿಲ್ಲ. ನಿಮಗೆ ಜವಾಬ್ದಾರಿ ಇಲ್ಲವೇ.?
    12: ಖಳನಟರಿಗೆ ನೀವು ಯಾವುದೇ ರೀತಿಯ ಟ್ರೈನಿಂಗ್ ಕೊಟ್ಟಿರಲಿಲ್ಲವೇಕೆ.?
    13: ಹೆಲಿಕಾಪ್ಟರ್ ನಿಂದ ಹಾರುವ ಜಾಗದ ಕಡೆ ಮೋಟರ್ ಬೋಟ್ ಇರಿಸದೆ ದಡದಲ್ಲಿ ಇರಿಸುವ ಪ್ಲಾನ್ ಕೊಟ್ಟವರು ಯಾರು?
    14: ಸ್ಪೀಡ್ ಬೋಟ್ ಅವಶ್ಯಕವಾಗಿತ್ತು. ಆದರೂ ಅದನ್ನ ಇಟ್ಟುಕೊಂಡಿರಲಿಲ್ಲ. ಯಾಕೆ?
    15: ಇಂತಹ ದುಸ್ಸಾಹಸಕ್ಕೆ ಕೈಹಾಕುವ ಬದಲು ಗ್ರಾಫಿಕ್ಸ್ ಮೂಲಕ ಕೆಲಸ ಮುಗಿಸಬಹುದಿತ್ತಲ್ಲವೇ?
    16: ಚಿತ್ರೀಕರಣ ನಡೆಯುವಾಗ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಇರುವುದು ನಿಮ್ಮ ಮೂರ್ಖತನ ಎಂದು ಭಾವಿಸಬಹುದೇ?
    17: ದುನಿಯಾ ವಿಜಯ್ ರವರನ್ನ ರಕ್ಷಿಸಿದ ನೀವು, ಖಳನಟರ ಜೀವವನ್ನು ನಿರ್ಲಕ್ಷ್ಯ ಮಾಡಿದ್ದಕ್ಕೆ ಕಾರಣ?
    18: ಉದಯೋನ್ಮುಖ ನಟರ ಜೀವ ನಿಮಗೆ ತೃಣ ಸಮಾನವಾಯಿತೇ?
    19: ತಿಪ್ಪಗೊಂಡನಹಳ್ಳಿ ಕೆರೆಯ ಸ್ಥಿತಿ-ಗತಿ ಬಗ್ಗೆ ಅರಿವಿರಲಿಲ್ಲವೇ?
    20: ಅನಿಲ್ ಮತ್ತು ಉದಯ್ ಸಾವಿಗೆ ಹೊಣೆ ಯಾರು?

    'ಮಾಸ್ತಿ ಗುಡಿ' ದುರಂತಕ್ಕೆ ಸಂಬಂಧಿಸಿದ ಇತರೆ ಸುದ್ದಿಗಳು -

    ['ಮಾಸ್ತಿ ಗುಡಿ' ದುರಂತ ಸಂಭವಿಸಲು ಪ್ರಮುಖ ಕಾರಣ ಇದೇ.!]
    ['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]
    [ಅನಿಲ್, ಉದಯ್ ಕೊನೆಯ ಮಾತಲ್ಲಿ ಸಾವಿನ ಮುನ್ಸೂಚನೆಯ ಸುಳಿವು.!]
    ['ಮಾಸ್ತಿಗುಡಿ' ಸಾಹಸ ನಿರ್ದೇಶಕ ರವಿವರ್ಮಗೆ ಜಗ್ಗೇಶ್ ಛೀಮಾರಿ]
    [ದುರಂತ ಸಾವಿಗೀಡಾದ ಅನಿಲ್ ಯಾರು.? ನಿಜ ಬದುಕಿನ ಕಥೆ ಇಲ್ಲಿದೆ...]
    [ನಿಮಗೆಲ್ಲಾ ಗೊತ್ತಿಲ್ಲದ 'ಮಾಸ್ತಿ ಗುಡಿ' ವಿಲನ್ ಉದಯ್ ಅಸಲಿ ಕಹಾನಿ]
    ['ಮಸಣ' ಗುಡಿ ಸೇರುವ ಮುನ್ನ ಅನಿಲ್-ಉದಯ್ ಕೊನೆಯ ಸೆಲ್ಫಿ]
    ['ಮಾಸ್ತಿ ಗುಡಿ' ದುರಂತ: ನಿರ್ಮಾಪಕ ಸುಂದರ್ ಗೌಡ ಎ-1 ಆರೋಪಿ.!]

    English summary
    Death of 2 actors on the sets of 'Masti Gudi' came as a shocker to Kannada Film Industry. Questions related to this incident are 20. But Problems are plenty.
    Tuesday, November 8, 2016, 17:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X