twitter
    For Quick Alerts
    ALLOW NOTIFICATIONS  
    For Daily Alerts

    'ರವಿ ವರ್ಮ ಈಡಿಯೆಟ್, ಕಪಾಳಕ್ಕೆ ಹೊಡೆಯಬೇಕು.!'

    ''ರವಿ ವರ್ಮನ ಮೇಲೆ ಕಪಾಳಕ್ಕೆ ಹೊಡೆಯುವಷ್ಟು ಕೋಪ ಬಂದಿದೆ. ಇವರೆಲ್ಲಾ ಈಡಿಯೆಟ್ಸ್'' - ಹೀಗಂತ ಹೇಳಿದವರು ಮತ್ಯಾರೂ ಅಲ್ಲ, ಕನ್ನಡ ಚಿತ್ರರಂಗದ ನವರಸ ನಾಯಕ ಜಗ್ಗೇಶ್.

    By Bharathkumar
    |

    ''ರವಿ ವರ್ಮನ ಮೇಲೆ ಕಪಾಳಕ್ಕೆ ಹೊಡೆಯುವಷ್ಟು ಕೋಪ ಬಂದಿದೆ. ಇವರೆಲ್ಲಾ ಈಡಿಯೆಟ್ಸ್'' - ಹೀಗಂತ ಹೇಳಿದವರು ಮತ್ಯಾರೂ ಅಲ್ಲ, ಕನ್ನಡ ಚಿತ್ರರಂಗದ ನವರಸ ನಾಯಕ ಜಗ್ಗೇಶ್.

    ಕನ್ನಡ ಚಿತ್ರರಂಗದಲ್ಲಿ ಖಳನಟರಾಗಿ ಸಣ್ಣ-ಪುಟ್ಟ ಪಾತ್ರಗಳನ್ನ ನಿರ್ವಹಿಸುತ್ತಾ, ಈಗಷ್ಟೇ ಒಂದೊಂದೇ ಮೆಟ್ಟಿಲುಗಳನ್ನೇರುತ್ತಿದ್ದ ಅನಿಲ್ ಮತ್ತು ಉದಯ್, ಸಾಧನೆ ಮಾಡುವ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ. [ಅನಿಲ್, ಉದಯ್ ಕೊನೆಯ ಮಾತಲ್ಲಿ ಸಾವಿನ ಮುನ್ಸೂಚನೆಯ ಸುಳಿವು.!]

    'ಮಾಸ್ತಿ ಗುಡಿ' ಚಿತ್ರೀಕರಣದಲ್ಲಿ ಆದ ದುರ್ಘಟನೆಯಲ್ಲಿ ಸಾವನ್ನಪಿದ ಅನಿಲ್ ಹಾಗೂ ಉದಯ್ ಗೆ ಇಡೀ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. 'ಮಾಸ್ತಿ ಗುಡಿ' ಚಿತ್ರದ ನಿರ್ದೇಶಕ ನಾಗಶೇಖರ್ ಹಾಗೂ ಸಾಹಸ ನಿರ್ದೇಶಕ ರವಿ ವರ್ಮ ಬಗ್ಗೆ ಜಗ್ಗೇಶ್, ಶಿವರಾಜ್ ಕುಮಾರ್, ಗಣೇಶ್ ಸೇರಿದಂತೆ ಸ್ಯಾಂಡಲ್ ವುಡ್ ಸ್ಟಾರ್ಸ್ ಕಿಡಿಕಾರಿದ್ದಾರೆ.

    ಜಗ್ಗೇಶ್

    ಜಗ್ಗೇಶ್

    ''ನನಗೆ ರವಿವರ್ಮನ ಮೇಲೆ ಕಪಾಳಕ್ಕೆ ಹೊಡೆಯುವಷ್ಟು ಕೋಪ ಬಂದಿದೆ. ಇವರೆಲ್ಲ ಈಡಿಯೆಟ್ಸ್. ಇವರಿಗೆ ಒಂದು ಜೀವ, ಒಂದು ಪ್ರಾಣದ ಬೆಲೆ ಗೊತ್ತಿಲ್ಲ. ದೊಡ್ಡ ಸ್ಟಂಟ್ ನಿರ್ದೇಶಕರು ಅಂತಾರೆ ಮುಂಜಾಗೃತೆ ಏನು ತಗೆದುಕೊಳ್ಳಬೇಕು ಅಂತ ಗೊತ್ತಾಗಲ್ವಾ? ಬಡವರ ಮಕ್ಕಳು. ಅವರ ಬಾಡಿ ಬಿಲ್ಡಿಂಗ್ ಮಾಡುವುದನ್ನ ನಾನು ಕಣ್ಮುಂದೆ ನೋಡಿದ್ದೀನಿ. ಪರಿಹಾರ ಏನಾದರೂ ಮಾಡಬಹುದು. ಆದ್ರೆ, ಆ ಜೀವ ಮರಳಿ ತರವುದಕ್ಕೆ ಆಗುತ್ತಾ? ಇನ್ನೊಬ್ಬರ ಜೀವನದಲ್ಲಿ ಆಟವಾಡಬೇಡಿ. ನನಗೆ ತುಂಬಾ ನೋವಾಗುತ್ತೆ'' - ಜಗ್ಗೇಶ್, ನಟ ['ಮಾಸ್ತಿಗುಡಿ' ಸಾಹಸ ನಿರ್ದೇಶಕ ರವಿವರ್ಮಗೆ ಜಗ್ಗೇಶ್ ಛೀಮಾರಿ]

    ಶಿವರಾಜ್ ಕುಮಾರ್

    ಶಿವರಾಜ್ ಕುಮಾರ್

    ''ಇದನ್ನ ಮಾಡುವುದಕ್ಕೆ ಮುಂಚೆ ಯೋಚನೆ ಮಾಡಬೇಕಿತ್ತು. ಕಲಾವಿದರು ಮಾಡಲ್ಲ ಅಂದಮೇಲೆ ಅದನ್ನ ಮಾಡಿಸಬಾರದು. ಮಾಡುತ್ತೀವಿ ಅಂತ ಮುಂದಾದ ಮೇಲೆ ಭದ್ರತೆ ನೋಡಬೇಕು. ನನಗೆ ಮಾಡುವುದಕ್ಕೆ ಆಗಲ್ಲ ಅಂದಮೇಲೆ ನಾನು ಕೂಡ ಮಾಡಲ್ಲ. ಕುಟುಂಬದ ಬಗ್ಗೆ ಯೋಚನೆ ಮಾಡಬೇಕು. ನನ್ನ ಜೊತೆಗೆ ಸಿನಿಮಾ ಮಾಡಿದ್ದಾರೆ, ಮುಂದಿನ ಚಿತ್ರಗಳಲ್ಲಿ ಮಾಡುತ್ತಿದ್ದರು. ಅವರ ಕುಟುಂಬದ ನೋವಿನ ಮುಂದೆ ಬೇರೇನೂ ಇಲ್ಲ''.-ಶಿವರಾಜ್ ಕುಮಾರ್, ನಟ ['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]

    ಅಂಬರೀಶ್

    ಅಂಬರೀಶ್

    ''ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ಹೆಲಿಕಾಫ್ಟರ್ ನಿಂದ ಜಿಗಿಯುವ ಅವಶ್ಯಕತೆಯಿರಲಿಲ್ಲ. ಈಜು ಬರುವುದಿಲ್ಲ ಎಂದು ಹೇಳಿದ್ದರೂ ಸಾಹಸಕ್ಕೆ ಮುಂದಾಗಿದ್ದು ತಪ್ಪು. ಈಜು ಬಾರದ ನಟರಿಂದ ಆತುರದಿಂದ ಚಿತ್ರೀಕರಿಸಿದ್ದು ತಪ್ಪು, ಹೋದ ಪ್ರಾಣವನ್ನ ಮರಳಿ ತರುವುದಕ್ಕೆ ಆಗುವುದಿಲ್ಲ. ಇಂತಹ ದುರಂತಗಳನ್ನ ನಾವ್ಯಾರು ನಿರೀಕ್ಷೆ ಮಾಡಿರಲಿಲ್ಲ. ಚಿತ್ರರಂಗದ ಎಲ್ಲರನ್ನೂ ಕರೆದು ಚರ್ಚಿಸುತ್ತೇನೆ. ಘಟನೆ ನನಗೆ ತುಂಬಾ ನೋವು ತಂದಿದೆ. ಯುವ ನಟರ ದುರ್ಮರಣ ದುಃಖಕರ ಸಂಗಂತಿ. ಇನ್ನೂ ಮೃತದೇಹಗಳು ಪತ್ತೆಯಾಗದಿರುವುದು ದುರದೃಷ್ಠಕರ. ಇಷ್ಟೊಂದು ತಂತ್ರಜ್ಞಾನಗಳಿದ್ರೂ ಯಾಕೆ ಹೀಗಾಯ್ತು? ನಾನು-ವಿಷ್ಣು ಅಪಾಯಕಾರಿ ಸಾಹಸ ದೃಶ್ಯಗಳಲ್ಲಿ ಪಾಲ್ಗೊಂಡಿದ್ದೆವು. ನೀರು,ಗಾಳಿ, ಬೆಂಕಿಯ ಜೊತೆ ಹುಷಾರಾಗಿರಬೇಕು''-ಅಂಬರೀಶ್ [ದುರಂತ ಸಾವಿಗೀಡಾದ ಅನಿಲ್ ಯಾರು.? ನಿಜ ಬದುಕಿನ ಕಥೆ ಇಲ್ಲಿದೆ...]

    ಅಮೂಲ್ಯ

    ಅಮೂಲ್ಯ

    ''ತುಂಬಾ ಬೇಜಾರಾಗಿದೆ. ದುನಿಯಾ ವಿಜಯ್, ಅನಿಲ್, ಉದಯ್, ಎಲ್ಲರೂ ಯಾವಗಲೂ ಶೂಟಿಂಗ್ ನಲ್ಲಿ ಒಟ್ಟಿಗೆ ಇರ್ತಾ ಇದ್ರು. ಇಲ್ಲಿಯವರೆಗೂ ಮುಂಜಾಗೃತೆ ವಹಿಸಿದ್ದರು. ಆದ್ರೆ, ಈ ಸಲ ಏನಾಯ್ತು ಅಂತ ಗೊತ್ತಾಗ್ತಿಲ್ಲ. ಅವರ ಮೊಂಡು ಧೈರ್ಯದಿಂದ ಇದಾಗಿದೆ. ಈ ಪಾತ್ರಕ್ಕಾಗಿ ಅನ್ನ, ನೀರು ಬಿಟ್ಟ ಕೆಲಸ ಮಾಡಿದ್ದಾರೆ. ನನಗೆ ದೇವರ ಮೇಲೆ ಕೋಪ ಬರುತ್ತಿದೆ'' - ಅಮೂಲ್ಯ, ನಟಿ ['ಮಾಸ್ತಿ ಗುಡಿ' ದುರಂತ ಸಂಭವಿಸಲು ಪ್ರಮುಖ ಕಾರಣ ಇದೇ.!]

    ರಮೇಶ್ ಅರವಿಂದ್

    ರಮೇಶ್ ಅರವಿಂದ್

    ''ಬಹಳ ಶಾಕಿಂಗ್ ಆಗಿದೆ. ಗ್ರಾಫಿಕ್ಸ್ ನಲ್ಲಿ ಮಾಡಬಹುದಾಗಿತ್ತು. ಮನುಷ್ಯನ ಜೀವವನ್ನ ರಿಸ್ಕ್ ಮಾಡಬಾರದು. ನಿರ್ಮಾಪಕರು, ನಿರ್ದೇಶಕರು ಜವಾಬ್ದಾರಿಯಿಂದ ಸ್ಥಳದ ಬಗ್ಗೆ ಜಾಗೃತಿ ವಹಿಸಬೇಕಾಗಿತ್ತು. ಇವರು ಕ್ಷಮಿಸಲಾರದಂತಹ ತಪ್ಪು ಮಾಡಿದ್ದಾರೆ''.-ರಮೇಶ್ ಅರವಿಂದ್, ನಟ-ನಿರ್ದೇಶಕ ['ಮಾಸ್ತಿ ಗುಡಿ' ದುರಂತ: ನಿರ್ಮಾಪಕ ಸುಂದರ್ ಗೌಡ ಎ-1 ಆರೋಪಿ.!]

    ಗಣೇಶ್

    ಗಣೇಶ್

    '''ಮಾಸ್ತಿಗುಡಿ' ಚಿತ್ರದ ಬಗ್ಗೆ ತುಂಬಾ ಕಾಳಜಿ ಇತ್ತು. ಎರಡು ತಿಂಗಳ ಹಿಂದೆ ಅನಿಲ್ ನನ್ನ ಮನೆಗೆ ಬಂದಿದ್ದರು. ಸಿಕ್ಸ್ ಪ್ಯಾಕ್ ಬಗ್ಗೆ ಹೇಳಿದ್ದರು. ದೃಶ್ಯಗಳನ್ನ ನೋಡಿದ್ರೆ, ಮುಂಜಾಗೃತೆ ತಗೊಂಡಿದ್ದಾರೆ. ಬೋಟ್ ಕೈ ಕೊಟ್ಟಿದೆ ಅನ್ಸುತ್ತೆ. ಭಯ ಅಂತ ಅಂದಮೇಲೆ ಶೂಟಿಂಗ್ ನಿಲ್ಲಿಸಬೇಕಿತ್ತು''.-ಗಣೇಶ್, ನಟ ['ಮಸಣ' ಗುಡಿ ಸೇರುವ ಮುನ್ನ ಅನಿಲ್-ಉದಯ್ ಕೊನೆಯ ಸೆಲ್ಫಿ]

    ಸಾ.ರಾ ಗೋವಿಂದು

    ಸಾ.ರಾ ಗೋವಿಂದು

    ''ಮನಸ್ಸಿಗೆ ತುಂಬ ನೋವು ಆಗಿದೆ. ರವಿವರ್ಮ ಒಳ್ಳೆ ಫೈಟ್ ಮಾಸ್ಟರ್, ವಿಜಿಗೆ ಜಾಕೆಟ್ ಹಾಕಿದ್ದಾರೆ ಆದ್ರೆ, ಅವರಿಬ್ಬರಿಗೇಕೆ ಜಾಕೆಟ್ ಹಾಕಲಿಲ್ಲ. ಮುಂಜಾಗೃತೆ ಕ್ರಮ ಕೈಗೊಂಡಿಲ್ಲ ಇದರಿಂದ ಈ ತಪ್ಪಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಅವರಿಬ್ಬರು ಸ್ಟಂಟ್ ಮಾಸ್ಟರ್ ಗೆ ಹೇಳಬೇಕಿತ್ತು. ನಮ್ಮ ಕೈಯಲ್ಲಿ ಆಗಲ್ಲ. ನಾವು ಮಾಡಲ್ಲ ಅಂತ. ಚಿತ್ರರಂಗದ ಪರವಾಗಿ ನಾನು ಒಪ್ಪಿಕೊಳ್ಳುತ್ತಿದ್ದೇವೆ ನಾವು ಎಡವಿದ್ದೇವೆ''-ಸಾ.ರಾ ಗೋವಿಂದು, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ

    ತಾರಾ

    ತಾರಾ

    ''ಅನಿಲ್, ಉದಯ್ ಬದುಕಿ ಬರಬಹುದು ಎಂಬ ಆಶಾಭಾವನೆ ನನಗೆ, ಯಾಕೆ ಇವರು ಈ ತರಹ ಬೇಜವಾಬ್ದಾರಿ ಕೆಲಸ ಮಾಡಿದ್ದಾರೆ.? ಮುಂಜಾಗೃತೆ ಬಗ್ಗೆ ಎಚ್ಚರವಹಿಸಿಬೇಕು. ಈಗ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಎಲ್ಲ ಜೀವಕ್ಕೂ ಬೆಲೆಯಿದೆ. ಹೀರೋ ಜೀವ, ಟೆಕ್ನೀಶಿಯನ್ ಜೀವ ಅಂತ ವ್ಯತ್ಯಾಸವಿಲ್ಲ. ಎಲ್ಲವೂ ಒಂದೇ. ಇಬ್ಬರು ಜೀವಂತವಾಗಿ ಬರಲಿ ಅಷ್ಟೇ''- ತಾರಾ ಹಿರಿಯ ನಟಿ [ನಿಮಗೆಲ್ಲಾ ಗೊತ್ತಿಲ್ಲದ 'ಮಾಸ್ತಿ ಗುಡಿ' ವಿಲನ್ ಉದಯ್ ಅಸಲಿ ಕಹಾನಿ]

    ಉಪೇಂದ್ರ

    ಉಪೇಂದ್ರ

    ''ಎಲ್ಲಾ ಉದಯೋನ್ಮುಖ ಪ್ರತಿಭೆಗಳಿಗೆ ಸಾಧನೆಗಿಂತ ಜೀವನ ಮುಖ್ಯ ಎಂಬ ಪಾಠವನ್ನ ಅನಿಲ್ ಮತ್ತು ಉದಯ್ ಕಲಿಸಿಕೊಟ್ಟಿದ್ದಾರೆ''

    ಸುದೀಪ್

    ಸುದೀಪ್

    ''ಅನಿಲ್ ಮತ್ತು ಉದಯ್ ರವರ ದುರಂತ ಸಾವಿನ ಸುದ್ದಿ ಕೇಳಿ ಅಪ್ ಸೆಟ್ ಆಯ್ತು. 'ಹೆಬ್ಬುಲಿ' ಚಿತ್ರದಲ್ಲಿ ನನ್ನ ಜೊತೆ ಅನಿಲ್ ಕೆಲಸ ಮಾಡಿದ್ದರು. ಅವರು ತುಂಬಾ ಸೈಲೆಂಟ್ ಮತ್ತು ಶ್ರಮ ಜೀವಿ''

    ಯಶ್

    ಯಶ್

    ''ನನಗೆ ಅತ್ಯಂತ ಪ್ರೀತಿಪಾತ್ರರಾದ ಅನಿಲ್ ಮತ್ತು ಉದಯ್ ರವರ ದುರ್ಮರಣ ಹೃದಯವನ್ನು ವಿದ್ರಾವಕಗೊಳಿಸಿದೆ. ಏನನ್ನಾದರೂ ಸಾಧಿಸಬೇಕೆಂಬ ತುಡಿತದೊಂದಿಗೆ ಸದಾ ಶ್ರಮವಹಿಸಿ ದುಡಿದು ಹಂತ ಹಂತಕ್ಕೆ ಏರುತ್ತಿದ್ದ ಇವರ ಬೆಳವಣಿಗೆಯನ್ನು ಸಹಿಸದೆ ಹೋದ ದುರ್ವಿಧಿಗೆ ಧಿಕ್ಕಾರವಿರಲಿ. ಇವರ ನಿಧನದ ಶೋಕವನ್ನು ಭರಿಸುವ ಶಕ್ತಿಯನ್ನು ಭಗವಂತ ಕುಟುಂಬವರ್ಗದವರಿಗೆ ಹಾಗೂ ವಿಜಿಗೆ ನೀಡಲಿ. ಮನಸ್ಸು ಭಾರವಾಗಿದೆ, ಮಾತು ಬಾರದಾಗಿದೆ''

    ದರ್ಶನ್

    ದರ್ಶನ್

    ''ನಮ್ಮ ಮನೆಯಲ್ಲೇ ಸಾವು ಆದಂತಿದೆ. ತುಂಬಾ ಬೇಸರವಾಗಿದೆ. ರಾಘವ ಉದಯ್ ಮತ್ತು ಅನಿಲ್ ಆತ್ಮಕ್ಕೆ ಶಾಂತಿ ಸಿಗಲಿ''

    ಶ್ರೀಮುರಳಿ

    ಶ್ರೀಮುರಳಿ

    ''ದುರಾದೃಷ್ಟಕರ ಘಟನೆ. ಅನಿಲ್ ಮತ್ತು ಉದಯ್ ಆತ್ಮಕ್ಕೆ ಶಾಂತಿ ಸಿಗಲಿ''

    ಚಿರಂಜೀವಿ ಸರ್ಜಾ

    ಚಿರಂಜೀವಿ ಸರ್ಜಾ

    ''ಹಾರ್ಟ್ ಬ್ರೇಕಿಂಗ್ ನ್ಯೂಸ್. ತುಂಬಾ ಅಪ್ ಸೆಟ್ ಆಗಿದೆ. ಇಬ್ಬರೂ ಶ್ರಮ ಜೀವಿಗಳು. ಇಬ್ಬರ ಆತ್ಮಕ್ಕೆ ಶಾಂತಿ ಸಿಗಲಿ''

    ಪವನ್ ಒಡೆಯರ್

    ಪವನ್ ಒಡೆಯರ್

    ''ಉದಯ್ ಮತ್ತು ಅನಿಲ್ ಆತ್ಮಗಳಿಗೆ ಶಾಂತಿ ಸಿಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ''

    English summary
    'Maasti Gudi' Tragedy: Kannada Actor Ambareesh, Jaggesh, Shiva Rajkumar, Sudeep, Upendra and other celebs express Condolences.
    Tuesday, November 8, 2016, 20:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X