»   » ಸ್ಯಾಂಡಲ್ ವುಡ್ ನಲ್ಲಿ ಸಂಕ್ರಾಂತಿ ಬಂತು ರತೋ ರತೋ

ಸ್ಯಾಂಡಲ್ ವುಡ್ ನಲ್ಲಿ ಸಂಕ್ರಾಂತಿ ಬಂತು ರತೋ ರತೋ

Posted by:
Subscribe to Filmibeat Kannada

ಇಡೀ ಕನ್ನಡ ಚಿತ್ರರಂಗವೇ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಮೈಮರೆತಿದೆ. ಎಲ್ಲರ ಮನೆಯಲ್ಲೂ ಎಳ್ಳುಬೆಲ್ಲ ಸಡಗರ ಜೋರಾಗಿದೆ. ಎಳ್ಳುಬೆಲ್ಲ ತಿಂದು ಒಳ್ಳೆ ಮಾತಾಡು ಎಂಬಂತೆ ಒನ್ ಇಂಡಿಯಾ ಕನ್ನಡಕ್ಕೆ ಸಿಕ್ಕ ಕೆಲವು ತಾರೆಗಳು ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ನಮ್ಮ ಓದುಗರೊಂದಿಗೆ ಹಂಚಿಕೊಂಡಿದ್ದಾರೆ.

ಬುಧವಾರ (ಜ.15) ಮಕರ ಸಂಕ್ರಾಂತಿಯ ಕಾರಣ ಶೂಟಿಂಗ್ ಗೆ ರಜೆ ಹಾಕಿ ಹಬ್ಬದ ಸಂಭ್ರಮದಲ್ಲಿ ಬಹುತೇಕ ತಾರೆಗಳು ಕಳೆಯುತ್ತಿದ್ದಾರೆ. ಈ ಸಂಬಂಧ ತಾರೆಗಳನ್ನು ಮಾತಿಗೆಳೆದಾಗ ಅವರು ನಮ್ಮ ಓದುಗ ದೊರೆಗಳಿಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ರವಾನಿಸಿದರು.

ಸಂಕ್ರಾಂತಿ ಮೂಲಕ ಸಾಲುಸಾಲು ಹಬ್ಬಗಳ ಸಂಭ್ರಮ ಶುರುವಾಗುತ್ತದೆ. ಈ ಬಾರಿ ಸ್ಯಾಂಡಲ್ ವುಡ್ ಮನರಂಜನೆಯ ಸಿಹಿಯನ್ನು ಪ್ರೇಕ್ಷಕರಿಗೆ ಉಣಬಡಿಸಲು ಸಿದ್ಧವಾಗಿದೆ. ಸಂಕ್ರಾಂತಿ ಕೊಡುಗೆ ಎಂಬಂತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ನಿನ್ನಿಂದಲೇ' ಚಿತ್ರ ಪ್ರೇಕ್ಷಕರ ಮುಂದೆ ಬರುತ್ತಿದೆ. ಬನ್ನಿ ನೋಡೋಣ ತಾರೆಗಳ ಸಂಕ್ರಾಂತಿ ಸಂಭ್ರಮದ ಝಲಕ್.

ಪವರ್ ಫುಲ್ ಸಂಕ್ರಾಂತಿ ಬೈ ಪುನೀತ್
  

ಪವರ್ ಫುಲ್ ಸಂಕ್ರಾಂತಿ ಬೈ ಪುನೀತ್

ಅಭಿಮಾನಿಗಳನ್ನು ರಂಜಿಸುವುದೇ ನಿಜವಾದ ಹಬ್ಬ. ಈ ಬಾರಿ ವರ್ಷದ ಮೊದಲ ಹಬ್ಬದ ದಿನ ನಿನ್ನಿಂದಲೇ ಚಿತ್ರ ಬಿಡುಗಡೆಯಾಗುತ್ತಿದೆ. ಇದು ಹಬ್ಬದ ಸಂಭ್ರಮವನ್ನು ಇಮ್ಮಡಿಸಿದೆ. 'ನಿನ್ನಿಂದಲೇ' ಚಿತ್ರದ ಮನರಂಜನೆ ಜೊತೆಗೆ ಸಂಕ್ರಾಂತಿ ಸಂಭ್ರಮ ನಿಮ್ಮದಾಗಲಿ ಎಂದಿದ್ದಾರೆ ಪುನೀತ್.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂಭ್ರಮ
  

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂಭ್ರಮ

ದರ್ಶನ್ ಅವರು ಎಂದಿನಂತೆ ಈ ಬಾರಿಯ ಸಂಕ್ರಾಂತಿ ಹಬ್ಬವನ್ನು ಎಂಜಾಯ್ ಮಾಡುತ್ತಿದ್ದಾರೆ. ಎಲ್ಲರ ಕುಟುಂಬದಲ್ಲೂ ಸಂಕ್ರಾಂತಿ ಹಬ್ಬ ಏಳಿಗೆ ತೆಲುವು ತರಲಿ. ನಿಮ್ಮ ದಾಸ ದರ್ಶನ್ ಕಡೆಯಿಂದ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು ಎಂದಿದ್ದಾರೆ.

ದೇವರ ಕೃಪೆ ನಿಮಗಿರಲಿ: ಕಿಚ್ಚ ಸುದೀಪ್
  

ದೇವರ ಕೃಪೆ ನಿಮಗಿರಲಿ: ಕಿಚ್ಚ ಸುದೀಪ್

ಎಲ್ಲ ಮಿತ್ರರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಈ ವರ್ಷ ನಿಮಗೆ ಒಳ್ಳೆಯ ಆರೋಗ್ಯ ಸದಾ ನಗುವು ನಿಮ್ಮ ಜೀವನದಲ್ಲಿ ತುಂಬಿರಲಿ. ದೇವರ ಕೃಪೆ ಇರಲಿ ಎಂದು ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳಿಗೆ ಸಂಕ್ರಾಂತಿ ಶುಭಾಶಯಗಳನ್ನು ತಿಳಿಸಿದ್ದಾರೆ. ಸದ್ಯಕ್ಕೆ ಅವರು ಮಾಣಿಕ್ಯ ಚಿತ್ರ ಹಾಗೂ ಸಿಸಿಎಲ್ ಪ್ರಾಕ್ಟೀಸ್ ನಲ್ಲಿ ಬಿಜಿಯಾಗಿದ್ದಾರೆ.

ಸ್ಯಾಂಡಲ್ ವುಡ್ 'ಬ್ರಹ್ಮ' ನ ಸಂಕ್ರಾಂತಿ ಸ್ಪೆಷಲ್
  

ಸ್ಯಾಂಡಲ್ ವುಡ್ 'ಬ್ರಹ್ಮ' ನ ಸಂಕ್ರಾಂತಿ ಸ್ಪೆಷಲ್

ಈ ಬಾರಿ ರಿಯಲ್ ಸ್ಟಾರ್ ಉಪೇಂದ್ರ ಸಖತ್ ಬಿಜಿ. ಅವರ ಬ್ರಹ್ಮ ಚಿತ್ರದ ಸಿದ್ಧತೆಗಳು ಭರ್ಜರಿಯಾಗಿ ನಡೆಯುತ್ತಿವೆ. ತಮ್ಮ ಅಭಿಮಾನಿಗಳಿಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದು ಬ್ರಹ್ಮ ಚಿತ್ರದ ಆಡಿಯೋ ಸಾಂಗನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿ ಸಂಕ್ರಾಂತಿಗೆ ಶುಭಕೋರಿದ್ದಾರೆ.

ಎಳ್ಳುಬೆಲ್ಲ ತಿಂದು ಸಿಹಿ ಮಾತಾಡಿ: ರಾಧಿಕಾ
  

ಎಳ್ಳುಬೆಲ್ಲ ತಿಂದು ಸಿಹಿ ಮಾತಾಡಿ: ರಾಧಿಕಾ

ಕಳೆದ ವರ್ಷ ರಾಧಿಕಾ ಪಂಡಿತ್ ಅವರಿಗೆ ಸಂಕ್ರಾಂತಿ ಹಬ್ಬ ಆಚರಿಸಲು ಸಾಧ್ಯವಾಗಲಿಲ್ಲವಂತೆ. ಕಾರಣ 'ದಿಲ್ ವಾಲ' ಶೂಟಿಂಗ್. ಆದರೆ ಈ ಬಾರಿ ಮಾತ್ರ ಮನೆಯವರೊಂದಿಗೆ ಸಂಕ್ರಾಂತಿ ಹಬ್ಬ ಆಚರಿಸುತ್ತಿದ್ದಾರೆ. ನಮ್ಮ ಏರಿಯಾದಲ್ಲಿ ಪುಟ್ಟ ಮಕ್ಕಳು ಎಳ್ಳು ಕಬ್ಬು ತೆಗೆದುಕೊಂಡು ಬರುತ್ತಾರೆ. ಆ ಸಂಭ್ರಮ ಈ ಬಾರಿ ಸಿಕ್ಕಿದ್ದಕ್ಕೆ ಖುಷಿಯಾಗಿದೆ. ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಎಳ್ಳುಬೆಲ್ಲ ತಿಂದು ಸಿಹಿ ಮಾತಾಡಿ ಎಂದು ಹಾರೈಸಿದ್ದಾರೆ.

ಪ್ರಣೀತಾ ಮಕರ ಸಂಕ್ರಾಂತಿ ಶುಭಾಶಯಗಳು
  

ಪ್ರಣೀತಾ ಮಕರ ಸಂಕ್ರಾಂತಿ ಶುಭಾಶಯಗಳು

ಸದ್ಯಕ್ಕೆ ಪ್ರಣೀತಾ ಅಭಿನಯದ ಅಂಗಾರಕ ಚಿತ್ರ ಬಿಡುಗಡೆಯಾಗಿದೆ. ಈ ಚಿತ್ರದ ಬಗ್ಗೆ ಅಂತಹ ರೆಸ್ಪಾನ್ಸ್ ಇಲ್ಲದಿದ್ದರೂ ಹಬ್ಬದ ಸಂಭ್ರಮ ಮಾತ್ರ ಜೋರಾಗಿದೆ. ರಿಯಲ್ ಸ್ಟಾರ್ ಉಪೇಂದ್ರ ಜೊತೆಗಿನ 'ಬ್ರಹ್ಮ' ಚಿತ್ರದ ಮೇಲೆ ಬಹಳಷ್ಟು ನಿರೀಕ್ಷೆಗಳಿವೆ. ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ಹೇಳಿದ್ದಾರೆ.

ಪ್ರಕಾಶ್ ರೈ ಸಂಕ್ರಾಂತಿ ಒಗ್ಗರಣೆ
  

ಪ್ರಕಾಶ್ ರೈ ಸಂಕ್ರಾಂತಿ ಒಗ್ಗರಣೆ

ಬಹುಭಾಷಾ ನಟ ಪ್ರಕಾಶ್ ರೈ ಅವರಿಗೆ ಈ ಬಾರಿಯ ಸಂಕ್ರಾಂತಿಯ ಜೊತೆ 'ಒಗ್ಗರಣೆ' ರುಚಿಯೂ ಬೆರೆತಿದೆ. ಅವರ ಒಗ್ಗರಣೆ ಚಿತ್ರ ಕನ್ನಡ, ತೆಲುಗು ಹಾಗೂ ತಮಿಳು ಮೂರು ಭಾಷೆಗಳಲ್ಲಿ ಬರುತ್ತಿದೆ. ಇದೇ ಸಂದರ್ಭದಲ್ಲಿ ಅವರು ಮೈಸೂರಿನಲ್ಲಿದ್ದು ಸಂಕ್ರಾಂತಿ ಕಾಣಿಕೆಯಾಗಿ 'ಒಗ್ಗರಣೆ' ಚಿತ್ರದ ಮೇಕಿಂಗ್ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಎಲ್ಲರಿಗೂ ಸಂಕ್ರಾಂತಿ ಹಾಗೂ ಪೊಂಗಲ್ ಶುಭಾಶಯಗಳನ್ನೂ ತಿಳಿಸಿದ್ದಾರೆ.

ಮಕರ ಸಂಕ್ರಾಂತಿಗೆ ಚಿರು ಸಂದೇಶ
  

ಮಕರ ಸಂಕ್ರಾಂತಿಗೆ ಚಿರು ಸಂದೇಶ

ನಟ ಚಿರಂಜೀವಿ ಸರ್ಜಾ ಅವರು ತಮ್ಮ ಅಭಿಮಾನಿಗಳಿಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಎಲ್ಲಾ ಪ್ರೀತಿ ಪಾತ್ರರಿಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಈ ವರ್ಷ ಅತಿಹೆಚ್ಚಿನ ಸಂತೋಷ ಸಂಭ್ರಮ ನಿಮ್ಮದಾಗಲಿ ಎಂದಿದ್ದಾರೆ. ಚಿರು ಸದ್ಯಕ್ಕೆ 'ಅಯ್ಯ 2' ಚಿತ್ರದಲ್ಲಿ ಬಿಜಿ.

ಸ್ಟೈಲಿಶ್ ಸ್ಟಾರ್ ಪ್ರೇಮ್ ಮನೆಯಲ್ಲಿ ಹುಗ್ಗಿ ಸಂಭ್ರಮ
  

ಸ್ಟೈಲಿಶ್ ಸ್ಟಾರ್ ಪ್ರೇಮ್ ಮನೆಯಲ್ಲಿ ಹುಗ್ಗಿ ಸಂಭ್ರಮ

ಪ್ರತಿ ಬಾರಿ ಶೂಟಿಂಗ್ ನಲ್ಲಿ ಬಿಜಿಯಾಗಿರುತ್ತಿದ್ದೆ. ಈ ಬಾರಿ ಸಂಕ್ರಾಂತಿ ಹಬ್ಬವನ್ನು ಮನೆಯಲ್ಲೇ ಆಚರಿಸುತ್ತಿದ್ದೇನೆ. ಎರಡು ದಿನಗಳಿಂದ ಹಬ್ಬದ ತಯಾರಿ ನಡೆಯುತ್ತಿದೆ. ಹೆಂಡತಿ ಮಗುವಿನೊಂದಿಗೆ ಹಬ್ಬ ಆಚರಿಸುತ್ತಿರುವುದು ಖುಷಿ ತಂದಿದೆ. ಮಸ್ತ್ ಮೊಹಬ್ಬತ್, ಫೇರ್ ಅಂಡ್ ಲವ್ಲಿ ಹಾಗೂ ಮಳೆ ಚಿತ್ರಗಳಲ್ಲಿ ಪ್ರೇಮ್ ಬಿಜಿಯಾಗಿದ್ದಾರೆ.

ಪರುಲ್ ಯಾದವ್ ಪ್ಯಾರ್ ಗೆ ಸಂಕ್ರಾಂತಿ
  

ಪರುಲ್ ಯಾದವ್ ಪ್ಯಾರ್ ಗೆ ಸಂಕ್ರಾಂತಿ

ಸದ್ಯಕ್ಕೆ 'ಶಿವಾಜಿನಗರ'ದಲ್ಲಿ ಬಿಜಿಯಾಗಿರುವ ತಾರೆ ಪರುಲ್ ಯಾದವ್. ಈ ಬಾರಿ ಸಂಕ್ರಾಂತಿ ಹಬ್ಬವನ್ನು ಟಿವಿ ವಾಹಿನಿಗಳಲ್ಲೇ ಆಚರಿಸಿಕೊಂಡು ಸಂಭ್ರಮಿಸಿದ್ದಾರೆ. ಸುವರ್ಣ ವಾಹಿನಿಯಲ್ಲಿ 'ಪ್ಯಾರ್ ಗೆ ಸಂಕ್ರಾಂತಿ' ಆಚರಿಸಿಕೊಂಡು ಖುಷಿಪಟ್ಟಿದ್ದಾರೆ. ಕಸ್ತೂರಿ ವಾಹಿನಿಯಲ್ಲೂ ಸಂಕ್ರಾಂತಿ ಸೆಲೆಬ್ರೇಟ್ ಮಾಡಿ ಅಲ್ಲಿಂದಲೇ ಶುಭಾಶಯಗಳನ್ನು ತಿಳಿಸಿದ್ದಾರೆ.

ಅಕುಲ್ ಬಾಲಾಜಿ ತಕಧಿಮಿತ
  

ಅಕುಲ್ ಬಾಲಾಜಿ ತಕಧಿಮಿತ

ನಟ, ನಿರೂಪಕ ಅಕುಲ್ ಬಾಲಾಜಿ ಅವರು ಸದ್ಯಕ್ಕೆ ಈಟಿವಿ ಕನ್ನಡದ ತಕಧಿಮಿತ ಡಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋ ನಿರೂಪಕರು. ಅವರು ಬಹುತೇಕ ರಿಯಾಲಿಟಿ ಶೋಗಳಲ್ಲೇ ಬಿಜಿಯಾಗಿರುವ ಕಾರಣ ಈ ಹಬ್ಬದ ಸಂಭ್ರಮವೂ ಜೊತೆಯಾಗಿದೆ. ಚೆನ್ನಾಗಿ ತಿನ್ನಿ, ಪ್ರಾರ್ಥಿಸಿ ಹ್ಯಾಪಿಯಾಗಿರಿ ಎನ್ನುತ್ತಾರೆ ಅಕುಲ್ ಬಾಲಾಜಿ.

ತೇಜಸ್ವಿನಿ ಪ್ರಕಾಶ್ ಸವಿಸವಿ ನೆನಪು
  

ತೇಜಸ್ವಿನಿ ಪ್ರಕಾಶ್ ಸವಿಸವಿ ನೆನಪು

ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. ದೇವರು ಎಲ್ಲರ ಬಾಳಿನಲ್ಲೂ ಶಾಂತಿ ಸಂತೋಷ ತರಲಿ ಎಂದು ಹಾರೈಸಿದ್ದಾರೆ. ತೇಜಸ್ವಿನಿ ಅಭಿನಯದ ಈ ಪ್ರೀತಿ, ಅಶೋಕವನ ಹಾಗೂ ತೆಲುಗಿನ ಜೈ ಶ್ರೀರಾಮ್ ಚಿತ್ರಗಳು ಬಿಡುಗಡೆಯಾಗಬೇಕಿವೆ.

ನಲ್ಲ ಬೆಡಗಿ ಸಂಗೀತಾ ಸಂಕ್ರಾಂತಿ ಬೆಲ್ಲ
  

ನಲ್ಲ ಬೆಡಗಿ ಸಂಗೀತಾ ಸಂಕ್ರಾಂತಿ ಬೆಲ್ಲ

ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ನಲ್ಲ ಚಿತ್ರದಲ್ಲಿ ಅಭಿನಯಿಸಿದ್ದ ಸಂಗೀತಾ ಈಗ ಮದುವೆಯಾಗಿ ಗಂಡ ಮಗಳ ಜೊತೆ ಹಾಯಾಗಿದ್ದಾರೆ. ಈ ಬಾರಿಯ ಸಂಕ್ರಾಂತಿ ಹಬ್ಬ ಎಲ್ಲರ ಬಾಳಿನಲ್ಲೂ ಋಣಾತ್ಮಕತೆ ಕಳೆದು ಧನಾತ್ಮಕ ಅಂಶಗಳು ಹೆಚ್ಚಾಗಿ ಪ್ರವಹಿಸಲಿ ಎಂದಿದ್ದಾರೆ.

English summary
The festivities of New Year continue as the country celebrates Makar Sankranti (January 15). Kannada celebrities like Darshan, Sudeep, Puneeth Rajkumar, Prem Kumar, Radhika Pandit conveyed their best wishes to their fans.
Please Wait while comments are loading...

Kannada Photos

Go to : More Photos