»   » 'ಜಾಕಿ' ಭಾವನಾ ಟು 'ಟಗರು' ಪೋರಿ

'ಜಾಕಿ' ಭಾವನಾ ಟು 'ಟಗರು' ಪೋರಿ

Posted by:
Subscribe to Filmibeat Kannada

ತೆಲುಗು, ತಮಿಳು, ಮಲಯಾಳಂ ಸೇರಿದಂತೆ 75ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಭಾವನಾ, ಪುನೀತ್ ರಾಜ್ ಕುಮಾರ್ ಅವರ 'ಜಾಕಿ' ಚಿತ್ರದ ಮೂಲಕ ಕನ್ನಡ ಬೆಳ್ಳಿತೆರೆಗೆ ಎಂಟ್ರಿಕೊಟ್ಟರು. ಭಾವನಾ, ಪ್ರಸ್ತುತದಲ್ಲಿ ಶಿವರಾಜ್ ಕುಮಾರ್ 'ಟಗರು' ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ.

'ಟಗರು' ಚಿತ್ರದಲ್ಲಿ ಭಾವನಾ

'ಟಗರು' ಚಿತ್ರದಲ್ಲಿ ಭಾವನಾ

ದುನಿಯಾ ಸೂರಿ ನಿರ್ದೇಶನದ 'ಟಗರು' ಸಿನಿಮಾದ ಮೂಲಕ, ಇದೇ ಮೊಟ್ಟ ಮೊದಲ ಬಾರಿಗೆ 'ಜಾಕಿ' ಭಾವನಾ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆಯಾಗಿ ಅಭಿನಯಿಸುತ್ತಿದ್ದಾರೆ. 'ಟಗರು' ಚಿತ್ರದಲ್ಲಿ ಭಾವನಾ, ಮಾನ್ವಿತಾ ಹರೀಶ್ ಅವರ ಅಕ್ಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.[ಶಿವಣ್ಣನ 'ಟಗರಿ'ಗೆ ಬಂದ್ರು ಹೊಸ ಪೋರಿ!]

'ಮಾಡರ್ನ್ ಕೃಷ್ಣ'ನ ಜೊತೆ ಭಾವನಾ ಸ್ಟೆಪ್

'ಮಾಡರ್ನ್ ಕೃಷ್ಣ'ನ ಜೊತೆ ಭಾವನಾ ಸ್ಟೆಪ್

ಮಲ್ಲು ಕುಟ್ಟಿ ಭಾವನಾ ಇತ್ತೀಚೆಗೆ ಕಿಚ್ಚ ಸುದೀಪ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಮುಕುಂದ ಮುರಾರಿ' ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಗುಳಿ ಕೆನ್ನೆ ಬೆಡಗಿ ರಚಿತಾ ರಾಮ್ ಮತ್ತು ಭಾವನಾ ಸುದೀಪ್ ಜೊತೆಗೆ ಸ್ಟೆಪ್ ಹಾಕಿದ್ದರು.['ಮಾಡರ್ನ್ ಕೃಷ್ಣ' ಕಿಚ್ಚನ ಜೊತೆ ರಚಿತಾ-ಭಾವನಾರ ಒನಪು-ವಯ್ಯಾರ]

ರಿಯಲ್ ಸ್ಟಾರ್ 'ಟೋಪಿವಾಲಾ' ಚಿತ್ರದಲ್ಲಿ ಮಲ್ಲು ಬೆಡಗಿ

ರಿಯಲ್ ಸ್ಟಾರ್ 'ಟೋಪಿವಾಲಾ' ಚಿತ್ರದಲ್ಲಿ ಮಲ್ಲು ಬೆಡಗಿ

2013 ರಲ್ಲಿ ತೆರೆಕಂಡ 'ಟೋಪಿವಾಲಾ' ಚಿತ್ರದಲ್ಲಿ ಭಾವನಾ, ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ನಾಯಕಿ ಆಗಿ ನಟಿಸಿದ್ದರು.[ಉಪೇಂದ್ರ ಟೋಪಿವಾಲಾಗೆ ಮಲ್ಲು ಬೆಡಗಿ ಭಾವನಾ]

ಪುನೀತ್ ರೊಂದಿಗೆ ಭಾವನಾ ಸ್ಕ್ರೀನ್ ಶೇರ್

ಪುನೀತ್ ರೊಂದಿಗೆ ಭಾವನಾ ಸ್ಕ್ರೀನ್ ಶೇರ್

ಅಂದಹಾಗೆ ಭಾವನಾ 'ಜಾಕಿ' ಚಿತ್ರದ ಮೂಲಕ ಪುನೀತ್ ರಾಜ್ ಕುಮಾರ್ ಅವರೊಂದಿಗೆ ಕನ್ನಡದ ಬೆಳ್ಳಿತೆರೆಗೆ ಕಾಲಿಟ್ಟರು. ಕನ್ನಡದಲ್ಲಿ ಹಲವು ನಟರೊಂದಿಗೆ ಅಭಿನಯಿಸಿರುವ ಭಾವನಾ, ಪುನೀತ್ ಅವರ 'ಯಾರೆ ಕೂಗಾಡಲಿ' ಚಿತ್ರದಲ್ಲೂ ಸ್ಕೀನ್ ಶೇರ್ ಮಾಡುವುದರೊಂದಿಗೆ ಒಟ್ಟು 2 ಚಿತ್ರಗಳಲ್ಲಿ ಅವರೊಂದಿಗೆ ಅಭಿನಯಿಸಿದ್ದರು.[ಮತ್ತೆ, ಪವರ್ ಸ್ಟಾರ್ ಪುನೀತ್ ನಾಯಕಿ ಭಾವನಾ]

ಗಣೇಶ್ ಗೆ ಭಾವನಾ ಜೂಲಿಯೆಟ್

ಗಣೇಶ್ ಗೆ ಭಾವನಾ ಜೂಲಿಯೆಟ್

2012 ರಲ್ಲಿ ತೆರೆಕಂಡ 'ರೋಮಿಯೋ' ಚಿತ್ರದಲ್ಲಿ ಗಣೇಶ್ ಗೆ ಜೂಲಿಯಟ್ ಆಗಿ ಭಾವನಾ ನಟಿಸಿದ್ದರು. ಈ ಚಿತ್ರದಲ್ಲಿ ಅವರ ಅಭಿನಯದ ಮೂಲಕ ಕನ್ನಡ ಸಿನಿರಸಿಕರ ಕೆನ್ನೆ ಸವರಿದ್ದರು.[ಗುಲ್ಬರ್ಗದಲ್ಲಿ 'ರೋಮಿಯೋ'ಗೆ ಅದ್ದೂರಿ ಸ್ವಾಗತ]

'ವಿಷ್ಟುವರ್ಧನ'ನ ರಾಣಿಯಾಗಿ ಭಾವನಾ

'ವಿಷ್ಟುವರ್ಧನ'ನ ರಾಣಿಯಾಗಿ ಭಾವನಾ

ದ್ವಾರಕೀಸ್ ನಿರ್ಮಾಣದ 'ವಿಷ್ಟುವರ್ಧನ' ಚಿತ್ರದಲ್ಲಿಯೂ 'ಜಾಕಿ' ಭಾವನಾ, ಸುದೀಪ್ ಗೆ ಜೋಡಿ ಆಗಿದ್ದರು. ಈ ಚಿತ್ರವು ಬೆಳ್ಳಿತೆರೆಯಲ್ಲಿ ಸಖತ್ ಹಿಟ್ ಆಗಿತ್ತು.

75 ಕ್ಕೂ ಅಧಿಕ ಚಿತ್ರಗಳಲ್ಲಿ ಭಾವನಾ ಅಭಿನಯ

75 ಕ್ಕೂ ಅಧಿಕ ಚಿತ್ರಗಳಲ್ಲಿ ಭಾವನಾ ಅಭಿನಯ

ತಮಿಳು, ಕನ್ನಡ, ಮಲೆಯಾಳಂ ಸೇರಿದಂತೆ 75 ಅಧಿಕ ಚಿತ್ರಗಳಲ್ಲಿ ಭಾವನಾ ನಟಿಸಿದ್ದಾರೆ.

English summary
Malayalam Actress Bhavana Kannada Filmography
Please Wait while comments are loading...

Kannada Photos

Go to : More Photos