»   » ಮದುವೆ ತಯಾರಿ: 'ಲೀಡರ್' ಚಿತ್ರಕ್ಕೆ ಕೈ ಎತ್ತಿದ ನಟಿ ದೀಪಿಕಾ ಕಾಮಯ್ಯ

ಮದುವೆ ತಯಾರಿ: 'ಲೀಡರ್' ಚಿತ್ರಕ್ಕೆ ಕೈ ಎತ್ತಿದ ನಟಿ ದೀಪಿಕಾ ಕಾಮಯ್ಯ

Posted by:
Subscribe to Filmibeat Kannada

'ಚಿಂಗಾರಿ' ಬೆಡಗಿ ದೀಪಿಕಾ ಕಾಮಯ್ಯ ರವರಿಗೆ ಕಂಕಣ ಭಾಗ್ಯ ಕೂಡಿ ಬಂದಿರುವ ಸುದ್ದಿ ಇದೇ 'ಫಿಲ್ಮಿಬೀಟ್ ಕನ್ನಡ' ಪುಟದಲ್ಲಿ ನಿನ್ನೆಯಷ್ಟೇ ವರದಿ ಮಾಡಿದ್ವಿ.

ಇದೇ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ದೀಪಿಕಾ ಕಾಮಯ್ಯ ವಿವಾಹ ಮಹೋತ್ಸವ ನಡೆಯಲಿದೆ. ಅಸ್ಟ್ರೇಲಿಯಾದಲ್ಲಿ ನೆಲೆಸಿರುವ ಬೆಂಗಳೂರಿನ ಹುಡುಗ ಸುಮಂತ್ ಗೋಪಿ ಎಂಬುವರನ್ನ ದೀಪಿಕಾ ಕಾಮಯ್ಯ ಕೈಹಿಡಿಯಲಿದ್ದಾರೆ. ['ಬಿಗ್ ಬಾಸ್' ಬೆಡಗಿ ದೀಪಿಕಾ ಕಾಮಯ್ಯ ಕೈಹಿಡಿಯಲಿರುವ ಕುವರ ಇವರೇ...]


ಈಗಾಗಲೇ ಮದುವೆ ತಯಾರಿಯಲ್ಲಿ ತೊಡಗಿರುವ ದೀಪಿಕಾ ಕಾಮಯ್ಯ 'ಲೀಡರ್' ಚಿತ್ರಕ್ಕೆ ಕೈಎತ್ತಿದ್ದಾರೆ ಎಂಬುದು ಸದ್ಯದ ಅಪ್ ಡೇಟ್. ಮುಂದೆ ಓದಿ....


'ಲೀಡರ್' ಚಿತ್ರದಿಂದ ಹೊರಬಂದ ದೀಪಿಕಾ ಕಾಮಯ್ಯ

'ಲೀಡರ್' ಚಿತ್ರದಿಂದ ಹೊರಬಂದ ದೀಪಿಕಾ ಕಾಮಯ್ಯ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ 'ಲೀಡರ್' ಚಿತ್ರದಿಂದ ನಟಿ ದೀಪಿಕಾ ಕಾಮಯ್ಯ ಹೊರಬಂದಿದ್ದಾರೆ. ಮದುವೆ ಸಂಭ್ರಮದಲ್ಲಿ ಇರುವ ದೀಪಿಕಾ ಕಾಮಯ್ಯ 'ಲೀಡರ್' ಚಿತ್ರಕ್ಕೆ ಕಾಲ್ ಶೀಟ್ ನೀಡಲು ನಿರಾಕರಿಸಿದ್ದಾರೆ. [ಶಿವಣ್ಣ 'ಲೀಡರ್' ಆದರು.! ಅವರಿಗೆ 'ನಾಯಕಿ' ಯಾರು.?]


'ಲೀಡರ್' ಚಿತ್ರದಲ್ಲಿ ದೀಪಿಕಾ ಕಾಮಯ್ಯ ಪಾತ್ರವೇನು?

'ಲೀಡರ್' ಚಿತ್ರದಲ್ಲಿ ದೀಪಿಕಾ ಕಾಮಯ್ಯ ಪಾತ್ರವೇನು?

'ಲೀಡರ್' ಚಿತ್ರದಲ್ಲಿ ಪತ್ರಕರ್ತೆ ಆಗಿ ದೀಪಿಕಾ ಕಾಮಯ್ಯ ಕಾಣಿಸಿಕೊಳ್ಳಬೇಕಿತ್ತು. ಆದ್ರೀಗ 'ಲೀಡರ್' ಚಿತ್ರದಿಂದ ದೀಪಿಕಾ ಹಿಂದೆ ಸರಿದಿದ್ದಾರೆ. [ಶಿವಣ್ಣ 'ಲೀಡರ್' ಅವತಾರ ತಾಳುವುದು ಯಾವಾಗ.?]


ದೀಪಿಕಾ ಜಾಗಕ್ಕೆ ಬೇರೆ ನಟಿಯ ಎಂಟ್ರಿ.!

ದೀಪಿಕಾ ಜಾಗಕ್ಕೆ ಬೇರೆ ನಟಿಯ ಎಂಟ್ರಿ.!

'ಲೀಡರ್' ಚಿತ್ರದಲ್ಲಿ ದೀಪಿಕಾ ಕಾಮಯ್ಯ ನಿರ್ವಹಿಸಬೇಕಾದ ಪಾತ್ರಕ್ಕೆ ಸದ್ಯ ಶರ್ಮಿಳಾ ಮಾಂಡ್ರೆ ಆಯ್ಕೆ ಆಗಿದ್ದಾರೆ.


ಶರ್ಮಿಳಾ ಮಾಂಡ್ರೆಗೆ ಈಗ ಅವಕಾಶಗಳು ಒಲಿಯುತ್ತಿವೆ

ಶರ್ಮಿಳಾ ಮಾಂಡ್ರೆಗೆ ಈಗ ಅವಕಾಶಗಳು ಒಲಿಯುತ್ತಿವೆ

ನಿರ್ದೇಶಕ ಕೆ.ಎಂ.ಚೈತನ್ಯ ನಿರ್ದೇಶನದ ಚಿತ್ರದಲ್ಲಿ ಶರ್ಮಿಳಾ ಮಂಡ್ರೆ ನಾಯಕಿ ಆಗಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಆ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿತ್ತು. ಈಗ 'ಲೀಡರ್' ಜೊತೆ ಆಗುವ ಅವಕಾಶ ಶರ್ಮಿಳಾ ಮಾಂಡ್ರೆಗೆ ಸಿಕ್ಕಿದೆ.


'ಲೀಡರ್' ಚಿತ್ರದಲ್ಲಿದೆ ದೊಡ್ಡ ತಾರಾಬಳಗ

'ಲೀಡರ್' ಚಿತ್ರದಲ್ಲಿದೆ ದೊಡ್ಡ ತಾರಾಬಳಗ

ಶಿವರಾಜ್ ಕುಮಾರ್, ಪ್ರಣೀತಾ, ವಿಜಯ್ ರಾಘವೇಂದ್ರ, ಗುರು ಜಗ್ಗೇಶ್, ಶ್ರೀನಗರ ಕಿಟ್ಟಿ ಪುತ್ರಿ ಪರಿಣಿತ, ಯೋಗಿ, ವಂಶಿ ಕೃಷ್ಣ ಸೇರಿದಂತೆ ದೊಡ್ಡ ತಾರಾಬಳಗ ಇದೆ. 'ರೋಸ್' ಖ್ಯಾತಿಯ ಸಹನಾ ಮೂರ್ತಿ 'ಲೀಡರ್' ಚಿತ್ರದ ಸಾರಥಿ.


English summary
Kannada Actress Deepika Kamaiah is getting hitched to Bengaluru based Sumanth Gopi in December 2016. Hence, Deepika Kamaiah has opted out of Kannada Movie 'Leader'. Now, for the same role Sharmiela Mandre has stepped in.
Please Wait while comments are loading...

Kannada Photos

Go to : More Photos