»   » ಕುಡ್ಲದ ಬಾಲೆ ಎರಿಕಾ ಚಂದನದ ಗೊಂಬೆ

ಕುಡ್ಲದ ಬಾಲೆ ಎರಿಕಾ ಚಂದನದ ಗೊಂಬೆ

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಚಂದನವನಕ್ಕೆ ಹೊಸ ಗೊಂಬೆ ಪ್ರವೇಶವಾಗಿದೆ. ನಿನ್ನಿಂದಲೇ ಚಿತ್ರದ ಮೂಲಕ ಗಮನ ಸೆಳೆಯುತ್ತಿರುವ ಎರಿಕಾ ಹುಟ್ಟಿದ್ದು ಬೆಳೆದಿದ್ದು ಮುಂಬೈನಲ್ಲೇ ಆದರೂ ಈಕೆ ನಮ್ಮ ಕುಡ್ಲದ ಬಾಲೆ. ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ನಾನು ಮಂಗಳೂರು ಮೂಲದ ಹುಡುಗಿ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾಳೆ.

ಸುಮಾರು ಒಂದು ವರ್ಷದ ಗ್ಯಾಪ್ ನಂತರ ಪುನೀತ್ ಚಿತ್ರ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳ ಕಾತುರ ಹೆಚ್ಚಿಸಿದೆ. ಪುನೀತ್ ಹಾಗೂ ಎರಿಕಾ ಅಭಿನಯದ ನಿನ್ನಿಂದಲೇ ಚಿತ್ರಕ್ಕೆ ಎಲ್ಲಡೆ ಭರ್ಜರಿ ಓಪನಿಂಗ್ ಸಿಕ್ಕಿದೆ. [ನಿನ್ನಿಂದಲೇ ಟ್ವೀಟ್ ವಿಮರ್ಶೆ]

ಮುಂಬೈ ಮೂಲದ ಅಪ್ಪ ರಾಲ್ಫ್ ಫರ್ನಾಂಡೀಸ್, ಮಂಗಳೂರು ಮೂಲದ ಲವೀನಾ ದಂಪತಿ ಪುತ್ರಿ ಎರಿಕಾ. ಮುಂಬೈನ ಹೋಲಿ ಕ್ರಾಸ್ ಹೈಸ್ಕೂಳ್, ಸಿಐಇಎಸ್ ಕಾಲೇಜಿನಲ್ಲಿ ಓದಿ ನಂತರ ಸೈಂಟ್ ಆಂಡ್ರೂಸ್ ಕಾಲೇಜಿನಲ್ಲಿ ಬಿಎ ಪದವಿ ಪಡೆದಳು. ಕಾಲೇಜು ದಿನಗಳಲ್ಲೇ ಮಾಡೆಲಿಂಗ್ ಕ್ಷೇತ್ರದತ್ತ ಆಕರ್ಷಣೆ ಬೆಳೆಸಿಕೊಂಡ ಎರಿಕಾಗೆ ಸೂಪರ್ ಮಾಡೆಲ್ ಆಗುವ ಕನಸಿತ್ತು. ರೂಪದರ್ಶಿ ಆಗ ಬಯಸಿದ ಎರಿಕಾ ಸಿನಿಮಾ ರಂಗಕ್ಕೆ ಪರಿಚಯವಾಗಿದ್ದು ಹೇಗೆ? ಕಾಲಿವುಡ್ ನಿಂದ ಚಂದನವನಕ್ಕೆ ಕಾಲಿಟ್ಟು ಅರಳುತ್ತಿರುವುದು ಏಕೆ? ಎಂಬುದರ ಬಗ್ಗೆ ಮುಂದೆ ಓದಿ...

ಕುಡ್ಲದ ಬಾಲೆ,  ಚಂದನದ ಗೊಂಬೆ ಎರಿಕಾಗೆ ಏನು ಇಷ್ಟ
  

ಕುಡ್ಲದ ಬಾಲೆ, ಚಂದನದ ಗೊಂಬೆ ಎರಿಕಾಗೆ ಏನು ಇಷ್ಟ

ಹಾಡುಗಾರಿಕೆ, ಡ್ಯಾನ್ಸಿಂಗ್, ಅದರಲ್ಲೂ ಸಾಲ್ಸಾ, ಜೈವ್ ನೃತ್ಯ ಇಷ್ಟ. ಅಡುಗೆ ಮಾಡೋಕೆ ಇಷ್ಟ. ಸಮಯ ಸಿಕ್ಕಾಗ ಪೆನ್ಸಿಲ್ ಸ್ಕೆಚ್, ಡ್ರಾಯಿಂಗ್, ಪೈಯ್ಟಿಂಗ್ ಮಾಡೋ ಆಸೆ. ಎಲ್ಲದರ ಜತೆಗೆ ಹೊಟ್ಟೆ ತುಂಬಾ ಊಟ ಹೊಡೆಯುವುದು ಎರಿಕಾಗೆ ಇಷ್ಟ.

ಎರಿಕಾಗೆ ಇಷ್ಟವಾದ ಧ್ಯೇಯ ವಾಕ್ಯ
  

ಎರಿಕಾಗೆ ಇಷ್ಟವಾದ ಧ್ಯೇಯ ವಾಕ್ಯ

Adventure is the essence and spice of life ಎಂಬುದು ಎರಿಕಾ ಬದುಕಿನಲ್ಲಿ ಅಳವಡಿಸಿಕೊಂಡಿರುವ ಧ್ಯೇಯ ವಾಕ್ಯವಂತೆ. ಯಾರೊಬ್ಬರನ್ನು ನಿಕೃಷ್ಟವಾಗಿ ಕಾಣಬಾರದು ಎನ್ನುವ ಎರಿಕಾ ಸ್ನೇಹಜೀವಿ.

ಮಾಡೆಲಿಂಗ್ ಬಗ್ಗೆ ಎರಿಕಾ ಫರ್ನಾಂಡೀಸ್
  

ಮಾಡೆಲಿಂಗ್ ಬಗ್ಗೆ ಎರಿಕಾ ಫರ್ನಾಂಡೀಸ್

ಚಿಕ್ಕಂದಿನಿಂದ ನಾನು ಕಂಡ ಕನಸು ಮಾಡೆಲ್ ಆಗಬೇಕು ಎಂಬುದಾಗಿತ್ತು. ಅದರಂತೆ 17ನೇ ವರ್ಷಕ್ಕೆ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟೆ. ಇಲ್ಲಿ ತನಕ ನನಗೆ ಸಿಕ್ಕಿರುವ ಗೌರವ, ಮನ್ನಣೆಗೆ ಮಾಡೆಲಿಂಗ್ ಕ್ಷೇತ್ರವೇ ಕಾರಣ ಎನ್ನುತ್ತಾರೆ ಎರಿಕಾ.

ಫೆಮಿನಾ ಮಿಸ್ ಇಂಡಿಯಾ ಫೈನಲಿಸ್ಟ್
  

ಫೆಮಿನಾ ಮಿಸ್ ಇಂಡಿಯಾ ಫೈನಲಿಸ್ಟ್

* 2010ರಲ್ಲಿ ಬಾಂಬೆ ಟೈಮ್ಸ್ ಫ್ರೆಶ್ ಫೇಸ್
* 2011ರಲ್ಲಿ ಪ್ಯಾಂಟಲೂನ್ಸ್ ಫೆಮಿನಾ ಮಿಸ್ ಫ್ರೆಶ್ ಫೇಸ್
* 2011ರಲ್ಲಿ ಪ್ಯಾಂಟಲೂನ್ಸ್ ಫೆಮಿನಾ ಮಿಸ್ ಮಹಾರಾಷ್ಟ್ರ
* 2011ರಲ್ಲಿ ಪ್ಯಾಂಟಲೂನ್ಸ್ ಫೆಮಿನಾ ಮಿಸ್ ಇಂಡಿಯಾ(ಟಾಪ್ ಟೆನ್ ಫೈನಲಿಸ್ಟ್)

* ಆನ್ ಲೈನ್ ಫ್ಯಾಷನ್ ಪೋರ್ಟಲ್ ಎಕ್ಸ್ ಪ್ಲೋಸಿವ್ ಫ್ಯಾಷನ್ ಮುಖಪುಟದಲ್ಲಿ ಎರಿಕಾ ಕಾಣಿಸಿಕೊಂಡಿದ್ದಾರೆ.
* ಟೈಮ್ಸ್ 2012ರ ಮೋಸ್ಟ್ ಡಿಸೈರಬಲ್ ವುಮೆನ್ ಪಟ್ಟಿಯಲ್ಲೂ ಎರಿಕಾ ಸ್ಥಾನ ಪಡೆದಿದ್ದಾರೆ.

 

ಸಿನಿಮಾರಂಗದ ಇಲ್ಲಿ ತನಕದ ಜರ್ನಿ
  

ಸಿನಿಮಾರಂಗದ ಇಲ್ಲಿ ತನಕದ ಜರ್ನಿ

ಎರಿಕಾ ಮೊಟ್ಟ ಮೊದಲಿಗೆ ಎಸ್ ಜೆ ಸೂರ್ಯ ಅವರ 'ಇಸೈ' ಎಂಬ ತಮಿಳು ಚಿತ್ರಕ್ಕೆ ಆಡಿಷನ್ ಗೆ ಹೋಗಿದ್ದಳು. ಆದರೆ, ಆಫರ್ ಸಿಕ್ಕಿದ್ದು 'ವಿರತ್ತು'/'ದೇಗಾ' ಎಂಬ ದ್ವಿಭಾಷಾ ಚಿತ್ರಕ್ಕೆ, ನಂತರ ನಿರ್ದೇಶಕ ಶಶಿ ಅವರು 'ಐಂತು ಐಂತು ಐಂತು' ಚಿತ್ರದಲ್ಲಿ ಮುಖ್ಯಭೂಮಿಕೆಯಲಿ ಎರಿಕಾ ಕಾಣುವಂತೆ ಮಾಡಿದರು.

ಆಮೇಲೆ 'ವಿಳಿಥಿರು' ತಮಿಳು ಚಿತ್ರದಲ್ಲಿ ಕಾಣಿಸಿಕೊಂಡ ಎರಿಕಾ ಈ ನಡುವೆ 'ಬಬ್ಲೂ ಹ್ಯಾಪಿ ಹೈ' ಎಂಬ ಹಿಂದಿ ಚಿತ್ರದಲ್ಲೂ ಕೆಲಸ ಮಾಡಿದಳು. ಆದರೆ, 'ನಿನ್ನಿಂದಲೇ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಪವರ್ ಸ್ಟಾರ್ ಪುನೀತ್ ಗೆ ಜೋಡಿಯಾದ ಎರಿಕಾ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜತೆ 'ಐರಾವತ' ಏರಲು ಸಿದ್ಧಳಾಗುತ್ತಿದ್ದಾಳೆ.

ಎರಿಕಾ ಸಂಪರ್ಕ ಹೇಗೆ?
  

ಎರಿಕಾ ಸಂಪರ್ಕ ಹೇಗೆ?

ಎರಿಕಾ ಅವರ ಫೇಸ್ ಬುಕ್ : https://www.facebook.com/ericafernz
ಎರಿಕಾ ಅವರ ಟ್ವಿಟ್ಟರ್ ಖಾತೆ : https://twitter.com/IamEJF
ಎರಿಕಾ ಚಾನೆಲ್ : http://www.youtube.com/ericafernandes07

English summary
Erica Fernandes is an Indian film actress who has appeared in Hindi, Kannada, Tamil and Telugu language films. Prior to her film career, she took part in the beauty pageant Miss India 2012, finishing in the top ten. A manglorian girl by roots, Erica Fernandes was born and brought up in Mumbai
Please Wait while comments are loading...

Kannada Photos

Go to : More Photos