»   » ನಟಿ ಮೇಘನಾ-ಹರೀಶ್ ಮಧ್ಯೆ ಜಗಳ: 'ಫೋನ್ ಸಂಭಾಷಣೆ' ಬಿಚ್ಚಿಟ್ಟ ರಹಸ್ಯವೇನು?

ನಟಿ ಮೇಘನಾ-ಹರೀಶ್ ಮಧ್ಯೆ ಜಗಳ: 'ಫೋನ್ ಸಂಭಾಷಣೆ' ಬಿಚ್ಚಿಟ್ಟ ರಹಸ್ಯವೇನು?

ಮೇಘನಾ ಹಾಗೂ ಹರೀಶ್ ಮಧ್ಯೆ ಮನಸ್ಥಾಪವಿತ್ತು. ಹರೀಶ್ ಸಾವುಗೀಡಾಗುವ ಮುಂಚೆ ಮೇಘನಾ ಅವರಿಂದ ಸಂಪೂರ್ಣವಾಗಿ ದೂರವಾಗಿದ್ದರು. ಇವರಿಬ್ಬರ ಮಧ್ಯೆ ದೊಡ್ಡ ಜಗಳವಾಗಿತ್ತು ಎಂಬುದನ್ನ ಫೋನ್ ಸಂಭಾಷಣೆಯ ಆಡಿಯೋ ಕ್ಲಿಪ್ ಬಹಿರಂಗ ಪಡಿಸಿದೆ.

Written by:
Subscribe to Filmibeat Kannada

ಕಿರುತೆರೆ ನಟಿ ಮೇಘನಾ ಹಾಗೂ ಮೃತ ಹರೀಶ್ ಇಬ್ಬರು ಪ್ರೀತಿಸುತ್ತಿದ್ದರು. ಕಳೆದ 8 ತಿಂಗಳಿಂದ 'ಲಿವಿಂಗ್ ರಿಲೇಶಷನ್ ಷಿಪ್'ನಲ್ಲಿದ್ದರು ಅಂತ ನಾವೇ ಫಿಲ್ಮಿ ಬೀಟ್ ನಲ್ಲಿ ಹೇಳಿದ್ವಿ. ಇನ್ನೂ ನಟ ಹರೀಶ್ ಹಾಗೂ ನನ್ನ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ, ನಾವಿಬ್ಬರು ಸಂತೋಷದಿಂದ ಇದ್ದೇವೆ ಎಂಬುದನ್ನ ನಟಿ ಮೇಘನಾ ಪೊಲೀಸರ ಬಳಿ ಸ್ವಷ್ಟಪಡಿಸಿದ್ದರು.

ಆದ್ರೆ, ಮೇಘನಾ ಅವರ ಈ ಹೇಳಿಕೆ ಶುದ್ದ ಸುಳ್ಳು ಎಂಬುದಕ್ಕೆ ಒಂದು ಸಾಕ್ಷಿ ಸಿಕ್ಕಿದೆ. ಮೇಘನಾ ಹಾಗೂ ಹರೀಶ್ ಮಧ್ಯೆ ಮನಸ್ತಾಪವಿತ್ತು. ಹರೀಶ್ ಸಾವಿಗೀಡಾಗುವ ಮುಂಚೆ ಮೇಘನಾ ಅವರಿಂದ ಸಂಪೂರ್ಣವಾಗಿ ದೂರವಾಗಿದ್ದರು. ಇವರಿಬ್ಬರ ಮಧ್ಯೆ ದೊಡ್ಡ ಜಗಳವಾಗಿತ್ತು ಎಂಬುದನ್ನ ಫೋನ್ ಸಂಭಾಷಣೆಯ ಆಡಿಯೋ ಕ್ಲಿಪ್ ಬಹಿರಂಗ ಪಡಿಸಿದೆ.[ಕಿರುತೆರೆ ನಟಿ ಮೇಘನಾ ಆರೋಪದ 'ಕಂಪ್ಲೀಟ್' ಕಥೆ]

ಹೌದು, ಪಬ್ಲಿಕ್ ಟಿವಿಗೆ ಸಿಕ್ಕಿರುವ ಆಡಿಯೋ ಕ್ಲಿಪ್ ನಲ್ಲಿ ಹರೀಶ್ ಹಾಗೂ ಮೇಘನಾ ಮಧ್ಯೆ ಭಿನ್ನಾಭಿಪ್ರಾಯವಿತ್ತು ಎಂಬುದು ಪ್ರೂವ್ ಆಗಿದೆ. ಈ ಆಡಿಯೋ ಕ್ಲಿಪ್ ನಲ್ಲಿ ಪರಸ್ಪರ ಇಬ್ಬರು ಜಗಳವಾಡಿರುವ ಸಂಭಾಷಣೆ ಹಲವು ಅನುಮಾನಗಳನ್ನ ಹುಟ್ಟುಹಾಕುತ್ತಿದೆ. ಅದು ಎಷ್ಟರ ಮಟ್ಟಿಗೆ ಅಂದ್ರೆ, ಮೇಘನಾ, ಹರೀಶ್ ಅವರನ್ನ ನೋಡುವುದಕ್ಕೂ ಕೂಡ ಇಷ್ಟ ಪಡುತ್ತಿರಲಿಲ್ಲ ಎಂಬುದು ಈ ಸಂಭಾಷಣೆಯಿಂದ ಸಾಬೀತಾಗಿದೆ.

ಇನ್ನೂ ಈ ಫೋನ್ ಸಂಬಾಷಣೆ ಕೇಳಿದ್ರೆ, ಹರೀಶ್ ಸಹೋದರ ನವೀನ್ ಮೇಲೆ ಮೇಘನಾ ಮಾಡಿರುವ ಆರೋಪದ ಮೇಲೂ ಅನುಮಾನ ಕಾಡುತ್ತಿದೆ. ಹರೀಶ್ ಹಾಗೂ ಮೇಘನಾ ಮಧ್ಯೆ ನಡೆದ ಫೋನ್ ಕಾಲ್ ಸಂಭಾಷಣೆಯ ವಿವರ ಇಲ್ಲಿದೆ ನೋಡಿ....

ಮೇಘನಾಗೆ ಕಾಲ್ ಮಾಡಿದ್ದ ಹರೀಶ್

ಮೇಘನಾಗೆ ಕಾಲ್ ಮಾಡಿದ್ದ ಹರೀಶ್

ಹರೀಶ್: ಹಲೋ ಏನ್ ಮಾಡ್ತಿದ್ದೇ?
ಮೇಘನಾ: ನಾನು ಏನೋ ಮಾಡ್ತಿದ್ದೆ, ನೀನು ಯಾಕೆ ಫೋನ್ ಮಾಡ್ದೆ ಹೇಳು.?
ಹರೀಶ್: ಎಲ್ಲಿದ್ದೇ ?
ಮೇಘನಾ: ನಾನು ಎಲ್ಲಾದ್ರು ಇರ್ತಿನಿ, ಮೊದಲು ಏನಕ್ಕೆ ಫೋನ್ ಮಾಡ್ದೆ ಅದ್ನಾ ಹೇಳು.?
ಹರೀಶ್: ನನಗೆ ಹುಷಾರಿಲ್ಲ ಮಲ್ಕೊಂಡಿದ್ದೇ ನಾನು.
ಮೇಘನಾ: ಓ..ಹೌದಾ. ನಾನು ತಮಾಷೆ ಮಾಡ್ತಿದ್ದೀಯಾ ಅನ್ಕೊಂಡೆ.

ಬಹಿರಂಗವಾಯ್ತು ದೂರವಿರುವುದು

ಬಹಿರಂಗವಾಯ್ತು ದೂರವಿರುವುದು

ಹರೀಶ್: ಎಲ್ಲಿದ್ದೀಯಾ.?
ಮೇಘನಾ: ಯಾಕೆ?
ಹರೀಶ್: ಓಯ್, ಡೊಂಟ್ ವರಿ...ಮತ್ತೆ ನಾನು ಬಂದು ನಿನ್ನ ಜೊತೆನೇ ಇರ್ತೀನಿ ಅಂತ ಅಂದುಕೊಳ್ಳೋಕೆ ಹೋಗ್ಬೇಡ.
ಮೇಘನಾ: ಮತ್ತೆ ಯಾಕೆ ಫೋನ್ ಮಾಡ್ದೆ?

ಬೇರೆ ಯಾರ್ ಹತ್ರ ಮಾತಾಡ್ತಿದ್ದಿಯಾ.?

ಬೇರೆ ಯಾರ್ ಹತ್ರ ಮಾತಾಡ್ತಿದ್ದಿಯಾ.?

ಹರೀಶ್: ರಾತ್ರಿ 11 ಗಂಟೆಯಾದ್ರೂ ಆನ್ ಲೈನ್ ನಲ್ಲೇ ಇರ್ತಿಯಾ ಅಲ್ವಾ! ಒಂದೊಂದು ಗಂಟೆ ಮಾತಾಡ್ತೀಯಾ? ಯಾರ್ ಹತ್ರ ಮಾತಾಡುತ್ತಿಯಾ?
ಮೇಘನಾ: ನಾನು ಏನಾದರೂ ಮಾಡ್ಕೊಳ್ತಿನಿ, ನೀನ್ ಯಾರು ಅದ್ನಾ ಕೇಳೋದಕ್ಕೆ? ನಾನು ಯಾರ್ ಹತ್ರನಾದರೂ ಮಾತಾಡ್ಕೊಳ್ತಿನಿ. ಅದು ನನ್ನ ಇಷ್ಟ. ನೀನ್ಯಾಕೆ ಕೇಳ್ತಿಯಾ?
ಹರೀಶ್: ಅಯ್ಯೋ. ಅಟ್ ಲೀಸ್ಟ್ ನಾನು ಪೂರ್ತಿ ದೂರು ಆಗೊವರೆಗೂ ಸ್ವಲ್ಪ ಸಮಾಧಾನವಾಗಿರಮ್ಮ.
ಮೇಘನಾ: ನಾನು ನಿನ್ನ ಯಾವತ್ತು ಹತ್ರಾ ಇಟ್ಟಕೊಂಡಿದ್ದೀನಿ, ದೂರ ಮಾಡೋಕೆ. ನೀನು ನಾಟಕ ಮಾಡ್ಕೊಂಡು. ನನ್ನ ಹತ್ರ ಮಾತಾಡೋಕೆ ಮತ್ತೆ ಫೋನ್ ಎಲ್ಲ ಮಾಡೋಕೆ ಹೋಗ್ಬೇಡ.

ಯಾರ್ ಜೊತೆ ಕಮಿಟ್ ಆಗಿದ್ದೀಯಾ.?

ಯಾರ್ ಜೊತೆ ಕಮಿಟ್ ಆಗಿದ್ದೀಯಾ.?

ಹರೀಶ್: ಹಾಗಾದ್ರೆ, ನೀನು ಯಾರು ಜೊತೆನೋ ಕಮಿಟ್ ಆಗಿದ್ದೀಯಾ ಅಂತ ಆಯ್ತು?
ಮೇಘನಾ: ನಾನು ಯಾರ್ ಜೊತೆನಾದ್ರು ಇರ್ತಿನಿ, ಯಾರ್ ಜೊತೆನಾದ್ರೂ ಲೈಫ್ ಲೀಡ್ ಮಾಡಿಕೊಳ್ಳುತ್ತೀನಿ. ಅದ್ನಾ ಕೇಳೋಕೆ ನೀನು ಯಾರು? ಹೋಗಿ ನಿಮ್ಮ ಮನೆಯರಿಗೆ ಹೇಳ್ಕೋ ಯಾರ ಜೊತೇಲಿ ಅಫೇರ್ ಇಟ್ಕೊಂಡಿದ್ದೀಯಾ ಅಂತ. ನನಗೆ ಹೇಳೋಕೆ ಬರಬೇಡ.

ನನ್ನ ಯಾಕೆ ದೂರ ಮಾಡಿದ್ದೀಯಾ.?

ನನ್ನ ಯಾಕೆ ದೂರ ಮಾಡಿದ್ದೀಯಾ.?

ಹರೀಶ್: ನನ್ನ ಯಾಕೆ ಅವೈಡ್ ಮಾಡಿದ್ದೀಯಾ.?
ಮೇಘನಾ: ಅದು ನಿನಗೆ ನೀನೇ ಕೇಳ್ಕೋ ಯಾಕೆ ಅಂತ: ದುಡ್ಡು ಇಲ್ಲ ಅಂದ್ರೂ ಇಷ್ಟು ಚೆನ್ನಾಗಿ ನೋಡಿಕೊಳ್ಳೋ ಹುಡುಗಿನಾ ಪ್ರಪಂಚದಲ್ಲಿ ಎಲ್ಲಾದ್ರು ತೋರಿಸು ನೋಡೋಣ. ನಿನಗೆ ಎಲ್ಲ ಮಾಡಿನೂ ನಿನ್ನ ಹತ್ರ ಬೈಯಿಸಿಕೊಂಡು, ನಿನ್ನ ಹತ್ರ ಅನ್ನಿಸಿಕೊಂಡು ಇರ್ಬೇಕಾ ನಾನು?

ಹಣದ ಅವಶ್ಯಕತೆಯಿದೆ

ಹಣದ ಅವಶ್ಯಕತೆಯಿದೆ

ಹರೀಶ್: ಅದು ಬೇಡ ಅಂತಾನೇ ತಾನೆ ನಾನು ಇಲ್ಲಿಗೆ ಬಂದಿದ್ದು, ಓಕೆ ನನಗೆ ದುಡ್ಡಿನ ಸಮಸ್ಯೆಯಿದೆ. ನಾನು ಅಲ್ಲಿಗೆ ಬರಬೇಕು. ಎರಡು ದಿನ ಅಲ್ಲೇ ಇರ್ತಿನಿ. ನನ್ನ ಕಾರು ಮಾರೋಣ ಅಂತ ಇದ್ದೀನಿ. ಯಾವಾಗ ಬರಲಿ.?
ಮೇಘನಾ: ನಾನು ಊರಿಗೆ ಹೋದ್ಮೇಲೆ ಯಾವಾಗ ಬೇಕಾದ್ರೂ ಬಂದು, ಏನ್ ಬೇಕಾದ್ರೂ ಮಾಡ್ಕೋ?'' ಅಂತ ಇಬ್ಬರ ಮಧ್ಯೆ ದೊಡ್ಡದಾಗಿ ಜಗಳ ನಡೆದಿದೆ.

English summary
The Phone Conversation Audio Clip Reveals, The Relationship Between Kannada TV serial Actress Meghan and her dead boy friend Actor Harish's. here the detail Phone Conversation in words.
Please Wait while comments are loading...

Kannada Photos

Go to : More Photos