»   » 'ಜಾಗ್ವಾರ್' ನಾಯಕನಿಗಾಗಿ ಬಂದ್ಲು ಬೆಳಗಾವಿ ಸುಂದರಿ!

'ಜಾಗ್ವಾರ್' ನಾಯಕನಿಗಾಗಿ ಬಂದ್ಲು ಬೆಳಗಾವಿ ಸುಂದರಿ!

Subscribe to Filmibeat Kannada

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅವರ 2ನೇ ಚಿತ್ರಕ್ಕಾಗಿ ನಾಯಕಿಯ ಹುಡುಕಾಟದಲ್ಲಿದ್ದ ಚಿತ್ರತಂಡಕ್ಕೆ ಈಗ 'ಬೆಳಗಾವಿ ಸುಂದರಿ'ಯೊಬ್ಬಳು ಸಿಕ್ಕಿದ್ದಾಳೆ.

ಇಷ್ಟು ದಿನ ಈ ಚಿತ್ರದಲ್ಲಿ ನಿಖಿಲ್ ಕುಮಾರ್ ಜೊತೆ ನಟಿ ಲತಾ ಹೆಗಡೆ ಎಂಬ ನವನಟಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ಆದ್ರೆ, ಅಂತಿಮವಾಗಿ ಈ ಅವಕಾಶ ಮತ್ತೊಬ್ಬರ ಪಾಲಾಗಿದೆ.[ನಿಖಿಲ್ ಕುಮಾರ್ ಎರಡನೇ ಚಿತ್ರಕ್ಕೆ ನಿರ್ದೇಶಕರು ಫಿಕ್ಸ್?]

ಅಷ್ಟಕ್ಕೂ, ಈ ನಿಖಿಲ್ ಜೊತೆ ನಟಿಸುತ್ತಿರುವ ಈ ಬೆಡಗಿ ಯಾರು? ಎಂಬುದನ್ನ ತಿಳಿದುಕೊಳ್ಳಲು ಮುಂದೆ ಓದಿ.......

ನಿಖಿಲ್ 2ನೇ ಚಿತ್ರಕ್ಕೆ ಹೀರೋಯಿನ್ ಫಿಕ್ಸ್

ಬಹದ್ದೂರ್ ಚೇತನ್ ನಿರ್ದೇಶನದಲ್ಲಿ ನಿಖಿಲ್ ಕುಮಾರ್ ಅವರ ಎರಡನೇ ಸಿನಿಮಾ ಮೂಡಿಬರ್ತಿದ್ದು, ಈ ಚಿತ್ರಕ್ಕೆ ರೂಪದರ್ಶಿ 'ರಿಯಾ ನಲವಾಡೆ' ನಾಯಕಿಯಾಗಿ ಆಯ್ಕೆಯಾಗಿದ್ದಾರೆ. [ನಿಖಿಲ್ ಕುಮಾರ್ ಜೊತೆ ಡ್ಯುಯೆಟ್ ಹಾಡುವ ಚಾನ್ಸ್ ಈಕೆಗೆ ಸಿಗ್ಬಹುದಾ.?]

ಈ ರಿಯಾ ನಲವಾಡೆ ಯಾರು?

ರಿಯಾ ನಲವಾಡೆ ಮೂಲತಃ ಬೆಳಗಾವಿಯ ಹುಡುಗಿ. ಪ್ರಸುತ್ತ ಬೆಂಗಳೂರಿನ ಡೆಲ್ಲಿ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಯಾಗಿದ್ದಾರೆ. 2017 ರ ಮಾರ್ಚ್ ನಲ್ಲಿ ನಡೆದ, 2016 'ಟಾಲೆಂಟ್ ಹಂಟ್ ನ್ಯಾಷನಲ್ ಫ್ರೆಷ್ ಫೇಸ್' ಸ್ಪರ್ಧೆಯ ಫಿನಾಲೆಯಲ್ಲಿ ಬೆಂಗಳೂರನ್ನು ಪ್ರತಿನಿಧಿಸಿ ವಿಜೇತರಾಗಿದ್ದರು.

ರಿಯಾ ಅದ್ಭುತ 'ಡ್ಯಾನ್ಸರ್'

ಮಾಡಲಿಂಗ್ ನಲ್ಲಿ ಒಳ್ಳೆ ಹೆಸರು ಮಾಡಿರುವ ಈಕೆಗೆ ಇದು ಮೊದಲ ಸಿನಿಮಾ. ಚಿತ್ರರಂಗದಲ್ಲಿ ಮಿಂಚುವ ಆಸೆ ಇರುವ ಈ ಬೆಡಗಿ ಸದ್ಯ ಭರತನಾಟ್ಯ ಮತ್ತು ಪಾಶ್ಚತ್ಯ ನೃತ್ಯವನ್ನ ಕಲಿತಿದ್ದಾರೆ.

'ಮೇ' ತಿಂಗಳಿನಿಂದ ಚಿತ್ರೀಕರಣ

ಸದ್ಯ, ಚಿತ್ರದ ನಾಯಕಿಯನ್ನ ಆಯ್ಕೆ ಮಾಡಿರುವ ಚಿತ್ರತಂಡ ಮೇ ತಿಂಗಳಿನಿಂದ ಚಿತ್ರೀಕರಣವನ್ನ ಶುರು ಮಾಡಲಿದೆ. ಈ ಚಿತ್ರವನ್ನ ಕುಮಾರಸ್ವಾಮಿ ನಿರ್ಮಾಣ ಮಾಡುತ್ತಿದ್ದು, ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಲಿದ್ದಾರೆ.

English summary
Model 'Ria Nalavade' Roped for Kannada Actor Nikhil kumar's Next Movie. The Movie Directed By Chethan Kumar. Shooting begins From May.
Please Wait while comments are loading...

Kannada Photos

Go to : More Photos