ಮೋದಿ ಅವರು ಶಾಸ್ತ್ರಿ ಇದ್ದಂಗೆ; ನಟ ಅನಂತ್ ನಾಗ್

Written by: ಉದಯರವಿ

ಮೋದಿ ಅವರು ಶಾಸ್ತ್ರಿ ಇದ್ದಂಗೆ; ನಟ ಅನಂತ್ ನಾಗ್
ನರೇಂದ್ರ ಮೋದಿ ಬಗ್ಗೆ ಜ್ಞಾನಪೀಠ ಪುರಸ್ಕೃತ ಸಾಹಿತಿ ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಕೊಟ್ಟ ಹೇಳಿಕೆಗೆ ನಟ ಅನಂತ್ ನಾಗ್ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮನ್ನು ತಾವು Critical Insider ಎಂದು ಕರೆದುಕೊಳ್ಳುವ ಅನಂತಮೂರ್ತಿ ಅವರಿಗೆ ಇನ್ನೇನು ಉಳಿದಿದೆ ಹೇಳಲು. ಇದು ಅವರ ಮತ್ತೊಂದು ಹೈ ಲೆವೆಲ್ ಭಟ್ಟಂಗಿತನ ಎಂದಿದ್ದಾರೆ.

ನರೇಂದ್ರ ಮೋದಿ ಬಗ್ಗೆ ಅನಂತಮೂರ್ತಿ ಅವರು ಆ ರೀತಿ ಮಾತನಾಡಬಾರದಿತ್ತು. ಮೋದಿ ಅವರನ್ನು ಮೂರ್ತಿ ಅವರು ಸಕಾರಾತ್ಮಕ ದೃಷ್ಟಿಕೋನದಲ್ಲಿ ನೋಡಬೇಕು. ನನ್ನ ಪ್ರಕಾರ ಮೋದಿ ಅವರು ಲಾಲ್ ಬಹಾದುರ್ ಶಾಸ್ತ್ರಿ ಇದ್ದಂತೆ. ಅವರ 'ಜೈ ಜವಾನ್ ಜೈ ಕಿಸಾನ್' ಉದ್ಘೋಷಣೆಯಂತೆ ಮೋದಿ ಅವರು ನನಗೆ ಭಾಸವಾಗುತ್ತಾರೆ ಎಂದಿದ್ದಾರೆ ಅನಂತ್ ನಾಗ್.

ಅನಂತಮೂರ್ತಿ ಅವರ ಹಲವಾರು ಕಾದಂಬರಿಗಳು ಸಿನಿಮಾ ಆಗಿದೆ. ಅವುಗಳಲ್ಲಿ ಮುಖ್ಯವಾಗಿ ಸಂಸ್ಕಾರ, ಬರ, ಅವಸ್ಥೆ, ಮೌನಿ ಮುಂತಾದ ಚಿತ್ರಗಳನ್ನು ಹೆಸರಿಸಬಹುದು. ವಿಶೇಷ ಎಂದರೆ ಬರ, ಅವಸ್ಥೆ ಹಾಗೂ ಮೌನಿ ಚಿತ್ರಗಳಲ್ಲಿ ಅನಂತ್ ನಾಗ್ ಅಭಿನಯಿಸಿದ್ದಾರೆ.

ಬರಗೂರು ರಾಮಚಂದ್ರಪ್ಪ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮೋದಿ ಪ್ರಧಾನಿಯಾಗುವ ದೇಶದಲ್ಲಿ ನಾನಿರಲ್ಲ ಎನ್ನುವ ಹೇಳಿಕೆ ಕೊಟ್ಟು ಬಳಿಕ ಪಬ್ಲಿಕ್ ಟಿವಿ ಸಂದರ್ಶನದಲ್ಲಿ ತಮ್ಮ ಹೇಳಿಕೆಯನ್ನು ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ.

Read more about: ur ananthamurthy, narendra modi, bjp, anant nag, ಯುಆರ್ ಅನಂತಮೂರ್ತಿ, ನರೇಂದ್ರ ಮೋದಿ, ಬಿಜೆಪಿ, ಅನಂತ್ ನಾಗ್

English summary
Kannada actor Anant Nag reacts sharply about Jnanapth Award winner Dr UR Ananthamurthy statement on Narendra Modi. Narendra Modi is like Lal Bahaddur Shastri replays Anant Nag.

Kannada Photos

Go to : More Photos