ಸದ್ದಿಲ್ಲದಂತೆ ಸಿದ್ಧವಾಗುತ್ತಿದೆ ಉಮೇಶ್ ರೆಡ್ಡಿ ಸಿನಿಮಾ

Posted by:
Give your rating:

ಸತ್ಯ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಈಗಾಗಲೆ ಹಲವಾರು ಚಿತ್ರಗಳು ತೆರೆಗೆ ಬಂದಿವೆ. ಅಂತಹವುಗಳಲ್ಲಿ 'ಭೀಮಾ ತೀರದಲ್ಲಿ' (ಬದಲಾದ ಶೀರ್ಷಿಕೆ 'ಚಂದಪ್ಪ'), 'ದಂಡುಪಾಳ್ಯ', 'ಡೆಡ್ಲಿ ಸೋಮ'...ಮುಂತಾದ ಚಿತ್ರಗಳನ್ನು ಹೆಸರಿಸಬಹುದು.

ಈಗ ಅದೇ ರೀತಿಯ ನೈಜ ಘಟನೆಯೊಂದನ್ನು ಆಧರಿಸಿದ ಚಿತ್ರವೊಂದು ಸದ್ದಿಲ್ಲದಂತೆ ಸಿದ್ಧವಾಗುತ್ತಿದೆ. ಈ ಬಾರಿ ಚಿತ್ರಕ್ಕೆ ಕಥಾವಸ್ತು ಆಗಿರುವವನು ವಿಕೃತಕಾಮಿ, ಸೈಕೋಪಾತ್ ಉಮೇಶ್ ರೆಡ್ಡಿ. ಈ ಚಿತ್ರಕ್ಕೆ 'ಉಮೇಶ್' ಎಂಬ ಶೀರ್ಷಿಕೆಯನ್ನು ಇಡಲಾಗಿದೆ.

ಈಗಾಗಲೆ ಚಿತ್ರೀಕರಣ ಮುಗಿದಿದ್ದು ಎಡಿಟಿಂಗ್ ಕಾರ್ಯ ಭರದಿಂದ ಸಾಗಿದೆ. ಚಿತ್ರಕ್ಕೆ ಅಶೋಕ್ ಕುಮಾರ್ ಎಂಬುವವರು ಆಕ್ಷನ್ ಕಟ್ ಹೇಳಿದ್ದಾರೆ. 'ಉಮೇಶ್ ರೆಡ್ಡಿ' ಎಂಬ ಹೆಸರಿನಲ್ಲೇ ಚಿತ್ರವನ್ನು ತರಲು ಯೋಜಿಸಲಾಗಿತ್ತು. ಆದರೆ ಆ ಟೈಟಲ್‌ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಅನುಮತಿ ನೀಡದ ಕಾರಣ 'ಉಮೇಶ್' ಎಂಬ ಶೀರ್ಷಿಕೆ ಇಡಲಾಗಿದೆ ಎಂದಿದ್ದಾರೆ ನಿರ್ದೇಶಕ ಅಶೋಕ್.

ಉಮೇಶ್ ಪಾತ್ರವನ್ನು ಪೋಷಿಸುತ್ತಿರುವವರು ಹಿರಿಯ ನಿರ್ದೇಶಕ ಜೋಸೈಯ್ ಮನ್ ಅವರ ಮಗ ಜಿತೇಂದ್ರ. ಬಿಹೇವಿಯರಲ್ ಸೈನ್ಸ್‌ಗೆ ಸಂಬಂಧಿಸಿದ ಈ ಕತೆಯ ಪಾತ್ರಧಾರಿ ಮಾನಸಿಕ ಒತ್ತಡದ ಜೊತೆಗೆ ವಿಕೃತ ಮನಸ್ಸಿನವನಾಗಿರುತ್ತಾನೆ. ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡುವುದು, ಅವರ ಒಳಉಡುಪುಗಳನ್ನು ಬಳಸುವುದು ಇತ್ಯಾದಿ ಇತ್ಯಾದಿ ಕ್ಯಾರೆಕ್ಟರ್‌ಗಳೇ ಉಮೇಶ್ ರೆಡ್ಡಿಯ ವ್ಯಕ್ತಿತ್ವ.

ಈ ಚಿತ್ರವನ್ನು ಜುಲೈ ತಿಂಗಳಲ್ಲಿ ಬಿಡುಗಡೆ ಮಾಡುವ ಸಿದ್ಧತೆಗಳು ನಡೆಯುತ್ತಿವೆ. ಇಷ್ಟಕ್ಕೂ ಚಿತ್ರದ ಕತೆ ಏನೆಂದರೆ. ವಿದೇಶಿ ವಿಶ್ವವಿದ್ಯಾಲಯದಲ್ಲಿ ಬಿಹೇವಿಯರಲ್ ಸೈನ್ಸ್ ಓದುತ್ತಿರುವ ವಿದ್ಯಾರ್ಥಿನಿಯರು ಭಾರತಕ್ಕೆ ಬರುತ್ತಾರೆ.

ಅರೆಸ್ಟ್ ಆಗಿರುವ ಸೈಕೋಪಾತ್ 'ಉಮೇಶ್'ನನ್ನು ಸಂದರ್ಶನ ಮಾಡಲು ಹೋಗುತ್ತಾರೆ. ಉಮೇಶ್‌ಗೆ ಅವರಿಬ್ಬರ ಮೇಲೆ ಕಣ್ಣುಬೀಳುತ್ತದೆ. ಜೈಲಿನಿಂದ ಎಸ್ಕೇಪ್ ಆಗುವ ಆತ ಮತ್ತೆ ತನ್ನ ಹಳೆಯ ಚಾಳಿಯನ್ನು ಮುಂದುವರಿಸುತ್ತಾನೆ. ಮುಂದೇನಾಗುತ್ತದೆ ಎಂಬುದೇ ಚಿತ್ರದ ಕತೆ.

ಉಮೇಶ್ ರೆಡ್ಡಿ ಕತೆಯನ್ನು ಯಥಾವತ್ತಾಗಿ ತರದೆ ಅಲ್ಲಲ್ಲಿ ಸಿನಿಮೀಯ ಬದಲಾವಣೆಗಳು ಇರುತ್ತವೆ. ನೈಜವಾಗಿ ಉಮೇಶ್ ರೆಡ್ಡಿ ಪೊಲೀಸ್ ಆಗಿ ಕೆಲಸ ಮಾಡುತ್ತಿದ್ದ. ಆದರೆ ಇಲ್ಲಿನ 'ಉಮೇಶ್'ನನ್ನು ಒಬ್ಬ ಚಲನಚಿತ್ರ ನಿರ್ದೇಶಕನಾಗಿ ತೋರಿಸಲಾಗಿದೆಯಂತೆ. ಚಿತ್ರದಲ್ಲಿ ಬಹುತೇಕ ಹೊಸಬರೇ ಇದ್ದಾರೆ. (ಏಜೆನ್ಸೀಸ್)

Read more about: ಉಮೇಶ್ ರೆಡ್ಡಿ, ಬೆಂಗಳೂರು, ಕ್ರೈಂ, umesh reddy, bangalore

English summary
A Kannada movie titled as Umesh. The story is based on serial rapist BA Umesh Reddy, who has been sentenced to death. The movie is being directing by Ashok Kumar. Jitendra plays lead role in this film.
Please Wait while comments are loading...

Kannada Photos

Go to : More Photos
 
X

X
Skip Ad
Please wait for seconds

Bringing you the best live coverage @ Auto Expo 2016! Click here to get the latest updates from the show floor. And Don't forget to Bookmark the page — #2016AutoExpoLive