»   » 'ರಿಂಗ್ ರೋಡ್ ಸುಮ' ಆದ ರಿಂಗ್ ರೋಡ್ ಶುಭ

'ರಿಂಗ್ ರೋಡ್ ಸುಮ' ಆದ ರಿಂಗ್ ರೋಡ್ ಶುಭ

Posted by:
Subscribe to Filmibeat Kannada

ಈ ನೈಜಕಥೆಯಾಧಾರಿತ ಚಿತ್ರಗಳ ಹಣೆಬರಹವೇ ಹೀಗೆ ಅನ್ನಿಸುತ್ತದೆ. ಒಂದಲ್ಲ ಒಂದು ವಿವಾದ, ಶೀರ್ಷಿಕೆ ಸಮಸ್ಯೆ ತಪ್ಪಿದ್ದಲ್ಲ. ತನ್ನ ಬಾಳಸಂಗಾತಿಯಾಗಬೇಕಿದ್ದ ಗಿರೀಶ್ ನನ್ನು ಪ್ರಿಯಕರನ ಜೊತೆ ಸೇರಿ ಮುಗಿಸಿದ ಸುಂದರ ಹಂತಕಿ ಶುಭಾ ಕುರಿತ ಕಥೆಯನ್ನು 'ರಿಂಗ್ ರೋಡ್ ಶುಭ' ಚಿತ್ರ ಒಳಗೊಂಡಿದೆ.

ಈ ಚಿತ್ರದ ವಿಶೇಷ ಎಂದರೆ ಮಹಿಳೆಯರೇ ಸೇರಿ ನಿರ್ಮಿಸಿರುವುದು. ಕನ್ನಡ ಚಿತ್ರರಂಗದ ಮಟ್ಟಿಗೆ ಒಂದು ಹೊಸ ದಾಖಲೆ ಎಂದರೂ ತಪ್ಪಾಗಲ್ಲ. ಚಿತ್ರದ ನಿರ್ದೇಶಕಿ, ನಿರ್ಮಾಪಕಿ, ತಂತ್ರಜ್ಞರೆಲ್ಲರೂ ಮಹಿಳೆಯರೇ ಆಗಿದ್ದಾರೆ. 'ಪ್ರೀತಿ ಕೊಂದ ಕೊಲೆಗಾತಿ' ಎಂಬುದು ಈ ಚಿತ್ರದ ಅಡಿಬರಹ. [ನಟ ದುನಿಯಾ ವಿಜಯ್ ಉಚಿತ ಕಾಲ್ ಶೀಟ್]


ಈ ಚಿತ್ರದ ಶೀರ್ಷಿಕೆಯನ್ನು ಬದಲಾಯಿಸುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚಿತ್ರತಂಡಕ್ಕೆ ಸೂಚಿಸಿತ್ತು. ಅವರ ಸೂಚನೆಯಂತೆ ಚಿತ್ರದ ಶೀರ್ಷಿಕೆ ಈಗ 'ರಿಂಗ್ ರೋಡ್ ಸುಮ' ಎಂದು ಬದಲಾಗಿದೆ. ಮುಂದೆ ಎದುರಾಗಬಹುದಾದಂತಹ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ವಾಣಿಜ್ಯ ಮಂಡಳಿ ಈ ಸೂಚನೆ ನೀಡಿತ್ತು.

ಇದಿಷ್ಟೇ ಅಲ್ಲದೆ ಪ್ರಾದೇಶಿಕ ಸೆನ್ಸಾರ್ ಮಂಡಳಿಯೂ ಶೀರ್ಷಿಕೆ ಬದಲಾಯಿಸಲು ಸೂಚಿಸಿತ್ತು. ಅದರಂತೆ ಈಗ ರಿಂಗ್ ರೋಡ್ ಸುಮ ಎಂದಾಗಿ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಪುಣೆಯ ಪ್ರತಿಷ್ಠಿತ ಫಿಲಂ ಇನ್ಸ್ ಟಿಟ್ಯೂಟ್ ನಲ್ಲಿ ತರಬೇತಿ ಪಡೆದಿರುವ ಪ್ರಿಯಾ ಬೆಳ್ಳಿಯಪ್ಪ ಆಕ್ಷನ್ ಕಟ್ ಹೇಳಿರುವ ಚಿತ್ರ ಇದಾಗಿದೆ.

ಈಗಾಗಲೆ ಚಿತ್ರದ ಡಬ್ಬಿಂಗ್ ನಡೆಯುತ್ತಿದ್ದು, ಈಗ ಟೈಟಲ್ ಬದಲಾಗಿರುವ ಕಾರಣ ಚಿತ್ರದಲ್ಲಿ ಎಲ್ಲೆಲ್ಲಿ ಶುಭ ಎಂದು ಬರುತ್ತದೋ ಅಲ್ಲೆಲ್ಲಾ ಸುಮ ಎಂದು ಬದಲಾಯಿಸಲಾಗುತ್ತಿದೆ. ಇನ್ನೊಂದು ವಾರದಲ್ಲಿ ಡಬ್ಬಿಂಗ್ ಮುಗಿಸಿಕೊಂಡು ಸೆನ್ಸಾರ್ ಮುಂದೆ ಬರಲಿದ್ದಾಳೆ 'ರಿಂಗ್ ರೋಡ್ ಸುಮ'. (ಏಜೆನ್ಸೀಸ್)

English summary
The much awaited Kannada movie 'Ring Road Shubha' being directed by debutant director Priya Belliappa, the title has been changed to 'Ring Road Suma' to avoid further complications as for KFCC and Regional Board of Films Certification directions.
Please Wait while comments are loading...

Kannada Photos

Go to : More Photos