»   » ಬಿಟೌನ್ ಗೆ ಹಾರಲಿರುವ 'ಮುದ್ದು ಮನಸೇ' ಖ್ಯಾತಿಯ ಅರು ಗೌಡ

ಬಿಟೌನ್ ಗೆ ಹಾರಲಿರುವ 'ಮುದ್ದು ಮನಸೇ' ಖ್ಯಾತಿಯ ಅರು ಗೌಡ

Posted by:
Subscribe to Filmibeat Kannada

ಇತ್ತೀಚೆಗೆ ಕನ್ನಡದ ನಟ-ನಟಿಯರು ಹಿಂದಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಒಂಥರಾ ಟ್ರೆಂಡ್ ಆಗಿದೆ, ದೂದ್ ಪೇಡಾ ದಿಗಂತ್, ಕಿಚ್ಚ ಸುದೀಪ್, ನಿಧಿ ಸುಬ್ಬಯ್ಯ ನಂತರ ಇದೀಗ ಅದೇ ಸಾಲಿಗೆ ಹೊಸ ಸೇರ್ಪಡೆ 'ಮುದ್ದು ಮನಸೇ' ಚಿತ್ರದ ನಾಯಕ ಅರುಣ್ ಗೌಡ ಅಲಿಯಾಸ್ ಅರು ಗೌಡ.

ಹೌದು 'ಮುದ್ದು ಮನಸೇ' ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಕಾಲಿಟ್ಟ ಕನ್ನಡದ ಹುಡುಗ ಅರುಣ್ ಗೌಡ ಇದೀಗ ಬಾಲಿವುಡ್ ಕ್ಷೇತ್ರಕ್ಕೆ ಕಾಲಿಡಲು ತಯಾರಾಗಿದ್ದಾರೆ.[ಚಿತ್ರ ವಿಮರ್ಶೆ: ಮುದ್ದು ಮುದ್ದು ಮನಸುಗಳ 'ಮುದ್ದು ಮನಸೇ']

ನಟ ಅರುಣ್ ಗೌಡ ಅವರು ಬಾಲಿವುಡ್ ಕ್ಷೇತ್ರದಲ್ಲಿ ಮಿಂಚಲು ತಯಾರಾಗಿದ್ದಾರೆ ಎಂಬುದನ್ನು ಖುದ್ದು ಅರುಣ್ ಅವರೇ ತಮ್ಮ ಫೇಸ್ ಬುಕ್ಕಿನಲ್ಲಿ ಹಾಕಿಕೊಂಡಿದ್ದಾರೆ. 'ಇದು ನನ್ನ ಜೀವನದ ಒಂದು ಗುರಿ, ಒಂದೊಂದೇ ಮೆಟ್ಟಿಲು ಏರುತ್ತಿದ್ದೇನೆ. ದೇವರೇ ಧನ್ಯವಾದಗಳು' ಎಂದು ಫೇಸ್ ಬುಕ್ಕಿನಲ್ಲಿ ಬರೆದುಕೊಂಡಿದ್ದಾರೆ.

'ಇದು ನನ್ನ ಕನಸು ಮಾತ್ರ ಅಲ್ಲ ಬದ್ಲಾಗಿ ನನ್ನ ಸಿನಿ ಜೀವನದ ಗುರಿ ಕೂಡ ನಾನು ನನ್ನ ಮೊದಲ ಸಿನಿಮಾ ಹಿಂದಿ ಭಾಷೆಯಲ್ಲಿ ಬರಬೇಕು ಅಂತ ಅಂದುಕೊಂಡಿದ್ದೆ, ಇದೀಗ ಬಿಟೌನ್ ನಲ್ಲಿ ಕಾಣಿಸಿಕೊಳ್ಳಲು ನನ್ನನ್ನು ನಾನು ತಯಾರು ಮಾಡಿಕೊಳ್ಳಬೇಕು. ಇನ್ನು ಎಲ್ಲವೂ ಅಂದುಕೊಂಡಂತೆ ನಡೆದರೆ, ಹಿಂದಿಯಲ್ಲಿ ನನ್ನ ಹೊಸ ಪ್ರಾಜೆಕ್ಟ್ ಮಾರ್ಚ್ ಅಥವಾ ಎಪ್ರಿಲ್ ತಿಂಗಳಿನಲ್ಲಿ ನಡೆಯಲಿದೆ. ಎಂದು ನಟ ಅರು ಗೌಡ ಅವರು ಖ್ಯಾತ ದಿನಪತ್ರಿಕೆ ಒಂದರ ಸಂದರ್ಶನದಲ್ಲಿ ನುಡಿದಿದ್ದಾರೆ.['ಮುದ್ದು ಮನಸೇ' ಅರು ಗೌಡ ಮನದಾಳದ ಮಾತು]

ಈ ಮೊದಲು ನಟ ಅರುಣ್ ಗೌಡ ಅವರು ನಿರ್ದೇಶಕ ಅನಂತ್ ಶೈನ್ ಅವರ 'ಮುದ್ದು ಮನಸೇ' ಎಂಬ ರೊಮ್ಯಾಂಟಿಕ್ ಸಿನಿಮಾದಲ್ಲಿ ಇಬ್ಬರು ನಾಯಕಿಯರಾದ ನಿತ್ಯಾ ರಾಮ್ ಮತ್ತು ಐಶ್ವರ್ಯಾ ನಾಗ್ ಅವರ ಜೊತೆ ಮಿಂಚಿದ್ದರು.

ತದನಂತರ ನಟಿ ರಾಗಿಣಿ ಅವರ ಜೊತೆ 'ನಾಟಿಕೋಳಿ' ಚಿತ್ರದಲ್ಲಿ ಮಿಂಚಬೇಕಿತ್ತು, ಆದರೆ ಕೆಲವು ಕಾರಣಾಂತರಗಳಿಂದ ಆ ಸಿನಿಮಾ ಅರ್ಧಕ್ಕೆ ನಿಂತಿದೆ. ಇದೀಗ ನಟ ಅರುಣ್ ಅವರಿಗೆ ಬಿಟೌನ್ ಗೆ ಹಾರುವ ಅವಕಾಶ ದೊರೆತಿದ್ದು ಸದ್ಯದಲ್ಲಿಯೇ ಕನ್ನಡದ ಹುಡುಗ ಹಿಂದಿ ನಟನಾಗಿ ಹೊರಹೊಮ್ಮಲಿದ್ದಾರೆ.

English summary
With the trend of a few young Sandalwood actors hitting the Bollywood circuit, it is Aru Gowda's turn to try his luck in Bollywood. The actor who has just made a mark in Kannada had his first film Muddu Manase released in 2015.
Please Wait while comments are loading...

Kannada Photos

Go to : More Photos