twitter
    For Quick Alerts
    ALLOW NOTIFICATIONS  
    For Daily Alerts

    ಸಂಗೀತ ದಿಗ್ಗಜರ ಕಾಳಗ: ಪ್ರತಿಷ್ಠೆಯೋ ಅಥವಾ ವ್ಯವಹಾರವೋ!

    By Bharath Kumar
    |

    ಸಂಗೀತ ಲೋಕದ ಮಹಾನ್ ದಿಗ್ಗಜರೆಂದೇ ಖ್ಯಾತಿ ಗಳಿಸಿಕೊಂಡಿರುವ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ಸಂಗೀತ ನಿರ್ದೇಶಕ ಇಳಯರಾಜ ನಡುವೆ ಮನಸ್ತಾಪ ಉಂಟಾಗಿದೆ. ಇದು ಪ್ರತಿಷ್ಠೆಗಾಗಿಯೋ ಅಥವಾ ವ್ಯವಹಾರಕ್ಕಾಗಿಯೋ ಗೊತ್ತಿಲ್ಲ. ಆದ್ರೆ, ಇವರಿಬ್ಬರ ಈ ಮುನಿಸು ಸಾಕಷ್ಟು ಕುತೂಹಲ ಹುಟ್ಟುಹಾಕಿದೆ.[ಸಾವಿರ ಚಿತ್ರಗಳ ಸರದಾರನಾದ ಇಳಯರಾಜ]

    ಹೌದು, ಇನ್ಮುಂದೆ ಎಸ್.ಪಿ.ಬಾಲಸುಬ್ರಮಣ್ಯಂ ಅವರು ಯಾವುದೇ ಕಾರ್ಯಕ್ರಮಗಳಲ್ಲಿ, ಇಳಯರಾಜ ಅವರು ಕಂಪೋಸ್ ಮಾಡಿರುವ ಹಾಡಗಳನ್ನ ಹಾಡಕೂಡದಂತೆ. ಒಂದು ಪಕ್ಷ ಹಾಡಿದರೇ ಅದಕ್ಕೆ ದಂಡ ವಿಧಿಸಲಾಗುತ್ತಂತೆ. ಹೀಗಾಂತ ಬೇರೆ ಯಾರು ಹೇಳಿಲ್ಲ. ಸ್ವತಃ ಇಳಯರಾಜ ಅವರೇ ಕಾನೂನಾತ್ಮಕವಾಗಿ ನೋಟೀಸ್ ನೀಡಿದ್ದಾರೆ. ಮುಂದೆ ಓದಿ....

    ಮೂರು ಜನರ ವಿರುದ್ಧ ನೋಟೀಸ್

    ಮೂರು ಜನರ ವಿರುದ್ಧ ನೋಟೀಸ್

    ಎಸ್.ಪಿ.ಬಾಲಸುಬ್ರಮಣ್ಯಂ, ಎಸ್.ಪಿ.ಬಿ ಅವರ ಮಗ ಚರಣ್ ಮತ್ತು ಗಾಯಕಿ ಚಿತ್ರ ಅವರಿಗೆ ತಮ್ಮ ಹಾಡುಗಳನ್ನ ಹಾಡದಂತೆ ಇಳಯರಾಜ ಅವರು ನೋಟೀಸ್ ನೀಡಿದ್ದಾರೆ.[ಎಸ್.ಪಿ.ಬಿ ಮಾಡಿರುವ ದಾಖಲೆಗಳು ಅಬ್ಬಬ್ಬಾ.! ಒಂದಾ..ಎರಡಾ.!!?]

    ಬೇಸರ ವ್ಯಕ್ತಪಡಿಸಿದ 'ಎಸ್.ಪಿ.ಬಿ'

    ಬೇಸರ ವ್ಯಕ್ತಪಡಿಸಿದ 'ಎಸ್.ಪಿ.ಬಿ'

    ಇಳಯರಾಜ ಅವರ ನೋಟೀಸ್ ನಿಂದ 'ಎಸ್.ಪಿ. ಬಾಲಸುಬ್ರಮಣ್ಯಂ ಬೇಸರಗೊಂಡಿದ್ದಾರೆ. ಕಾರಣವಿಲ್ಲದೆ ನೋಟೀಸ್ ನೀಡಿರುವುದಕ್ಕೆ ಆಶ್ಚರ್ಯ ಕೂಡ ಆಗಿದ್ದಾರೆ. ಈ ಕುರಿತು ತಮ್ಮ 'ಫೇಸ್ ಬುಕ್' ಪೇಜ್ ನಲ್ಲಿ ತಮ್ಮ ಅಭಿಮಾನಿಗಳ ಜೊತೆ ದೀರ್ಘವಾಗಿ ಪ್ರಸ್ತಾಪಿಸಿದ್ದಾರೆ.[ಸಂಗೀತ ಕ್ಷೇತ್ರದ ದಿಗ್ಗಜನಿಗೆ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ರಿಂದ ಪಾದಪೂಜೆ]

    ಇಬ್ಬರು ಉತ್ತಮ ಸ್ನೇಹಿತರು!

    ಇಬ್ಬರು ಉತ್ತಮ ಸ್ನೇಹಿತರು!

    ಅಂದ್ಹಾಗೆ, ಗಾಯಕ ಎಸ್.ಪಿ.ಬಿ ಮತ್ತು ಸಂಗೀತ ನಿರ್ದೇಶಕ ಇಳಯರಾಜ ಉತ್ತಮ ಸ್ನೇಹಿತರು. ಇಳಯರಾಜ ಕಂಪೋಸ್ ಮಾಡಿರುವ ಅದೇಷ್ಟೋ ಹಾಡುಗಳನ್ನ ಎಸ್.ಪಿ.ಬಿ ಹಾಡಿದ್ದಾರೆ. ಜೊತೆ ಜೊತೆಯಲ್ಲೇ ವೃತ್ತಿ ಬದುಕು ಸಾಗಿಸಿದ್ದಾರೆ.[ಇಳಯರಾಜ ಲಂಡನ್ ಸಂಗೀತ ಮಾಹಿತಿ ಲೀಕ್]

    ಕಾರಣವೇನು ಎಂಬುದು ನಿಗೂಢ?

    ಕಾರಣವೇನು ಎಂಬುದು ನಿಗೂಢ?

    ಧಿಡೀರ್ ಅಂತಾ ಇಳಯರಾಜ ಅವರು ಈ ರೀತಿಯಾದ ನಿರ್ಧಾರ ತೆಗೆದುಕೊಳ್ಳುವುದರ ಹಿಂದಿರುವ ಕಾರಣ ಏನೂ ಎಂಬುದು ಗೊತ್ತಿಲ್ಲ. ಆದ್ರೆ, ಈ ಬೆಳವಣಿಗೆಯನ್ನ ಗಮನಿಸಿದರೇ, ಇವರಿಬ್ಬರ ಮಧ್ಯೆ ಪ್ರತಿಷ್ಠೆಯೋ ಅಥವಾ ವ್ಯವಹಾರದ ವಿಷ್ಯದಲ್ಲೋ ಭಿನ್ನಾಭಿಪ್ರಾಯ ಉಂಟಾಗಿರಬಹುದು ಎಂಬುದನ್ನ ಮಾತ್ರ ಊಹಿಸಿಬಹುದು.

    'ಎಸ್.ಪಿ.ಬಿ@50' ಹೆಸರಿನಲ್ಲಿ ವರ್ಲ್ಡ್ ಟೂರ್!

    'ಎಸ್.ಪಿ.ಬಿ@50' ಹೆಸರಿನಲ್ಲಿ ವರ್ಲ್ಡ್ ಟೂರ್!

    ಸದ್ಯ, ಬಾಲಸುಬ್ರಮಣ್ಯಂ ಮತ್ತು ತಂಡ ''ಎಸ್.ಪಿ.ಬಿ-50'' ಎಂಬ ಹೆಸರಿನಲ್ಲಿ ವರ್ಲ್ಡ್ ಟೂರ್ ಆಯೋಜಿಸಿದೆ. ಇಲ್ಲಿಯವರೆಗೂ ರಷ್ಯಾ, ಲಂಕಾ, ಮಲೇಶಿಯಾ, ಸಿಂಗಾಪುರ್ ಮತ್ತು ದುಬೈ ಗಳಲ್ಲಿ ಸಂಗೀತ ಪ್ರದರ್ಶನ ನೀಡಿದೆ. ಈ ಎಲ್ಲ ಕಾರ್ಯಕ್ರಮಗಳಲ್ಲೂ ಇಳಯ ರಾಜ ಕಂಪೋಸ್ ಮಾಡಿರುವ ಹಾಡುಗಳನ್ನ ಹಾಡಿದ್ದರು.

    ಮುಂದೆ ಏನು?

    ಮುಂದೆ ಏನು?

    ಇಳಯರಾಜ ಅವರ ನೋಟೀಸ್ ಗೆ ಗೌರವ ನೀಡುವುದಾಗಿ ತಿಳಿಸಿರುವ ಎಸ್.ಪಿ.ಬಿ, ತಾವು ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ರದ್ದುಗೊಳಿಸುವುದಿಲ್ಲ, ನಮ್ಮ ಸಂಗೀತ ಪಯಣ ಮುಂದುವರಿಯುತ್ತದೆ. ಬೇರೆ ಸಂಗೀತ ನಿರ್ದೇಶಕರ ಗೀತೆಗಳನ್ನು ಹಾಡಿ, ಕಾರ್ಯಕ್ರಮ ಮುಂದುವರೆಸಲು ಎಸ್.ಪಿ.ಬಿ ನಿರ್ಧರಿಸಿದ್ದಾರಂತೆ.

    English summary
    Music composer Ilaiyaraja has sent a legal notice to his long term colleague S.P. Balasubrahmanyam, asking the singer to not perform any song composed by him without his permission.
    Monday, March 20, 2017, 10:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X