twitter
    For Quick Alerts
    ALLOW NOTIFICATIONS  
    For Daily Alerts

    ಸಾಯುವ ಮುನ್ನ ನೋಡಲೇಬೇಕಾದ 101 ಚಿತ್ರಗಳು

    By Rajendra
    |

    Kannada films
    ಸಾಯುವ ಮುನ್ನ ಕನ್ನಡದಲ್ಲಿ ನೋಡಬೇಕಾದಂತಹ ಚಿತ್ರಗಳು ಬಹಳಷ್ಟಿವೆ. ಆ ರೀತಿಯ ಸಿನಿಮಾಗಳನ್ನು ನೋಡದಿದ್ದರೆ ಜೀವನ ವ್ಯರ್ಥ ಅನ್ನಿಸುವುದುಂಟು. ಆದರೆ ಆ ಚಿತ್ರಗಳು ಯಾವುವು ಎಂಬುದದನ್ನು ಪಟ್ಟಿ ಮಾಡಿ ಪುಸ್ತಕ ರೂಪದಲ್ಲಿ ಹೊರತರುತ್ತಿದ್ದಾರೆ ರವೀಂದ್ರ ಎಂಬುವವರು.

    ಈ ಅಪರೂಪದ ಪುಸ್ತಕ ಹಾಗೂ ಡಿವಿಡಿ ಇದೇ ಶನಿವಾರ (ಮೇ 25, 2013) ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ ಭವನದ ನಯನ ಸಭಾಂಗಣದಲ್ಲಿ ಈ ಪುಸ್ತಕ ಲೋಕಾರ್ಪಣೆಯಾಗುತ್ತಿದೆ. ಸಾಯುವ ಮುನ್ನ ನೋಡಲೇಬೇಕಾದ 101 ಕನ್ನಡ ಚಿತ್ರಗಳು.

    ಜನಪ್ರಿಯ ಪತ್ರಕರ್ತ ಹಾಗೂ ಲೇಖಕ ಜೋಗಿ (ಎಚ್ ಗಿರೀಶ್ ರಾವ್) ಅವರು ಈ ಪುಸ್ತಕವನ್ನು ಬಿಡುಗಡೆ ಮಾಡುತ್ತಿದ್ದಾರೆ. ಖ್ಯಾತ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು, ಟಿಎಸ್ ನಾಗಾಭರಣ ಅವರ ಉಪಸ್ಥಿತಿಯಲ್ಲಿ ಪುಸ್ತಕ ಬಿಡುಗಡೆಯಾಗಲಿದೆ.

    ಡಿವಿಡಿಯನ್ನು ಯಶಸ್ವಿ ನಿರ್ದೇಶಕ ಮಠ ಖ್ಯಾತಿಯ ಗುರುಪ್ರಸಾದ್ ಅವರು ಬಿಡುಗಡೆ ಮಾಡುತ್ತಿದ್ದಾರೆ. 1934 ರಿಂದ 2009ರವರೆಗೆ ತೆರೆಕಂಡ ಚಿತ್ರಗಳು ಪುಸ್ತಕದಲ್ಲಿ ಸ್ಥಾನ ಪಡೆದಿವೆ. ಪಟ್ಟಿಯಲ್ಲಿ ಸ್ಥಾನಪಡೆದಿರುವ ಕೆಲವು ಚಿತ್ರಗಳ ಹೆಸರು ಈ ಕೆಳಕಂಡಂತಿದೆ.

    ಸತಿ ಸುಲೋಚನಾ, ನಾಂದಿ, ಸಿಪಾಯಿ ರಾಮು, ಭಕ್ತ ಕುಂಬಾರ, ಹಂಸಗೀತೆ, ಆಲೆಮನೆ, ಕಾಮನಬಿಲ್ಲು, ಫಣಿಯಮ್ಮ, ಏಳು ಸುತ್ತಿನ ಕೋಟೆ, ಮುತ್ತಿನಹಾರ, ನಾಯಿ ನೆರಳು, ಓಂ, ಜನುಮದ ಜೋಡಿ, ಮೈಸೂರು ಮಲ್ಲಿಗೆ ಇತ್ಯಾದಿ. ವಿಸ್ಮಯ ಪ್ರಕಾಶನ ಹೊರತಂದಿರುವ ಈ ಪುಸ್ತಕದ ಬೆಲೆ ರು.150. (ಒನ್ಇಂಡಿಯಾ ಕನ್ನಡ)

    English summary
    Must Watch 101 Kannada Movies Before You Die book and DVD written by Ravindra releasing on 25th May at Ravindra Kalakshetra. Veteran journalist in popular daily Udayavani Jogi (H Girish Rao) is releasing the books. DVD will be released by reputed director Guruprasad.
    Friday, May 24, 2013, 15:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X