»   » 'ಜೆಸ್ಸಿ' ನಟ ಧನಂಜಯ್ ಗೆ ಸ್ಫೂರ್ತಿಯ ಸೆಲೆ ಯಾರು?

'ಜೆಸ್ಸಿ' ನಟ ಧನಂಜಯ್ ಗೆ ಸ್ಫೂರ್ತಿಯ ಸೆಲೆ ಯಾರು?

Posted by:
Subscribe to Filmibeat Kannada

ಚಂದನವನದ 'ಡೈರೆಕ್ಟರ್ ಸ್ಪೆಷಲ್' ಹುಡುಗ ಧನಂಜಯ್ ಅವರು ತುಂಬಾ ಸಿಂಪಲ್ ಹುಡುಗ. 'ರಾಟೆ', 'ಬಾಕ್ಸರ್' ಚಿತ್ರಗಳು ಅಷ್ಟಾಗಿ ಬ್ರೇಕ್ ನೀಡದಿದ್ದರೂ, ಆತ್ಮವಿಶ್ವಾಸದಿಂದ ಮುನ್ನುಗ್ಗುತ್ತಿರುವ ಧನಂಜಯ್ ಇದೀಗ ಪವನ್ ಒಡೆಯರ್ ಅವರ 'ಜೆಸ್ಸಿ' ಚಿತ್ರದ ಮೂಲಕ ಮತ್ತೆ ಅದೃಷ್ಟ ಪರೀಕ್ಷೆ ಮಾಡುತ್ತಿದ್ದಾರೆ.

ಅಂದಹಾಗೆ ಎಲ್ಲರ ಜೀವನದಲ್ಲಿ ಒಂದು ಸ್ಫೂರ್ತಿ ಅಂತ ಇದ್ದೇ ಇರುತ್ತೆ ಅಲ್ವಾ? ಪ್ರತಿಯೊಬ್ಬರೂ ಯಾವುದಾದರೂ ವ್ಯಕ್ತಿ ಅಥವಾ ಒಂದು ವಸ್ತುವಿನಿಂದ ಸ್ಫೂರ್ತಿ ಪಡೆದಿರುತ್ತಾರೆ.['ಅಲ್ಲಮ'ನಿಗಾಗಿ ಮದ್ದಳೆ ಕಲಿಯಲು ಧನಂಜಯ್ ಕಸರತ್ತು]ಹಾಗೆಯೇ ನಮ್ಮ ಕನ್ನಡದ ಹುಡುಗ ಧನಂಜಯ್ ಅವರಿಗೂ ಒಂದು ಸ್ಫೂರ್ತಿಯ ಸೆಲೆ ಇದೆಯಂತೆ. ಅಂದಹಾಗೆ 'ಡೈರೆಕ್ಟರ್ ಸ್ಪೆಷಲ್' ಹುಡುಗನಿಗೆ ಸ್ಫೂರ್ತಿ ಸೆಲೆ ಒಬ್ಬ ಸಾಮಾನ್ಯ ವ್ಯಕ್ತಿ ಮತ್ತು ನಮ್ಮ ಸುತ್ತಮುತ್ತಲಿರುವ ಸುಂದರ ಪರಿಸರ (ಪ್ರಕೃತಿ).


ಬೇರೆಯವರಂತೆ ದೊಡ್ಡ ದೊಡ್ಡ ವ್ಯಕ್ತಿಗಳನ್ನು ತಮ್ಮ ಜೀವನದ ಸ್ಫೂರ್ತಿಯಾಗಿಟ್ಟುಕೊಳ್ಳದೆ, ಒಬ್ಬ ಸಾಮಾನ್ಯ ವ್ಯಕ್ತಿಯ ಜೀವನವನ್ನೇ ಸ್ಫೂರ್ತಿಯನ್ನಾಗಿರಿಸಿಕೊಂಡಿರುವ 'ಬಾಕ್ಸರ್' ನಟ ಧನಂಜಯ್ ಇತರರಿಗಿಂತ ಕೊಂಚ ಭಿನ್ನ ಅನ್ನೋದನ್ನ ಬಿಂಬಿಸಿದ್ದಾರೆ.['ಜೆಸ್ಸಿ' ನಮ್ಮಲ್ಲಿ ಮಾತ್ರವಲ್ಲ, ತಮಿಳು-ತೆಲುಗಲ್ಲೂ ಕಮಾಲ್ ಮಾಡ್ತಾಳೆ]'ಒಬ್ಬ ಸಾಮಾನ್ಯ ಮನುಷ್ಯ ಹಾಗೂ ಪ್ರಕೃತಿ ನನ್ನಲ್ಲಿ ತುಂಬಿದಷ್ಟು ಆತ್ಮವಿಶ್ವಾಸ ಹಾಗೂ ಸ್ಫೂರ್ತಿಯನ್ನು ನನಗೆ ಬೇರೆ ಯಾರು ತುಂಬಿಲ್ಲ' ಎನ್ನುತ್ತಾರೆ ನಟ ಧನಂಜಯ್.


ಈಗಾಗಲೇ 'ಜೆಸ್ಸಿ' ರಿಲೀಸ್ ಗಾಗಿ ಕಾಯುತ್ತಿರುವ ಧನಂಜಯ್ 'ಅಲ್ಲಮ' ಹಾಗೂ 'ಬದ್ಮಾಶ್' ಚಿತ್ರದ ಶೂಟಿಂಗ್ ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

English summary
'My Inspiration comes from common man & nature' Says Kannada Actor Dhananjay
Please Wait while comments are loading...

Kannada Photos

Go to : More Photos