twitter
    For Quick Alerts
    ALLOW NOTIFICATIONS  
    For Daily Alerts

    ರಜತ ದಿನೋತ್ಸವ ಸಂಭ್ರಮದಲ್ಲಿ 'ನನ್ ಲೈಫ್ ಅಲ್ಲಿ'

    By Rajendra
    |

    ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಹೊಸಬರ ಚಿತ್ರ 'ನನ್ ಲೈಫ್ ಅಲ್ಲಿ' ಇಪ್ಪತ್ತೈದು ದಿನ ಪೂರೈಸಿದೆ. ಈ ಶುಭ ಸಂದರ್ಭವನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಚಿತ್ರತಂಡ ಭಾನುವಾರ (ಮಾ.17) ಪ್ರೀಮಿಯರ್ ಶೋ ಆಯೋಜಿಸಿತ್ತು. ಫೋರಂ ಮಾಲ್ ನ ಪಿವಿಆರ್ ನಲ್ಲಿ ಹಲವಾರು ತಾರೆಗಳು ಈ ಸಂಭ್ರಮಕ್ಕೆ ಸಾಕ್ಷಿಯಾದರು.

    ಮಧ್ಯಾಹ್ನ 1.30ಕ್ಕೆ ಆರಂಭವಾದ ಪ್ರೀಮಿಯರ್ ಶೋಗೆ ತಿಲಕ್ ಶೇಖರ್, ಶ್ವೇತಾ ಪಂಡಿತ್, ನೀನಾಸಂ ಸತೀಶ್, ಪವನ್ ಕುಮಾರ್ (ಲೂಸಿಯಾ ನಿರ್ದೇಶಕ) ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಚಿತ್ರವನ್ನು ನೋಡಿ ಮೇಕಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. [ನನ್ ಲೈಫ್ ಅಲ್ಲಿ ಚಿತ್ರವಿಮರ್ಶೆ]

    ಈ ಪ್ರೀಮಿಯ ಶೋಗೆ ಇಡೀ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು. ತಾಂತ್ರಿಕವಾಗಿ ಸೊಗಸಾಗಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ, ಮನೋಹರ್ ಜೋಶಿ ಅವರ ಛಾಯಾಗ್ರಹಣ ಹಾಗೂ ಲೋಕೇಶ್ ಅವರ ಸಹಾಯಕ ನಿರ್ದೇಶನ ಕಮ್ ಚಿತ್ರಕಥೆ ಚಿತ್ರಕ್ಕಿದೆ. ನಿವೇದಿತಾ, ವೆಂಕಟೇಶ್ ಬಾಬು, ಅನಿಲ್ ಯುವರಾಜ್ ಮತ್ತು ಜೈಪಾಲ್ ಚಿತ್ರದ ನಿರ್ಮಾಪಕರು. ಸ್ಲೈಡ್ ನಲ್ಲಿ ನೋಡಿ ಪ್ರೀಮಿಯರ್ ಶೋನಲ್ಲಿ ಕಂಡ ಮುಖಗಳು.

    ಇನ್ನಷ್ಟು ಭರವಸೆ ಮೂಡಿಸಿದ ಅನೀಶ್

    ಇನ್ನಷ್ಟು ಭರವಸೆ ಮೂಡಿಸಿದ ಅನೀಶ್

    ಈ ಹಿಂದೆ ಪೊಲೀಸ್ ಕ್ವಾರ್ಟಸ್ ಹಾಗೂ ನಮ್ ಏರಿಯಾಲ್ ಒಂದಿನಾ ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದ ಅನೀಶ್ ತೇಜಸ್ವರ್ ಅವರ ಮೂರನೇ ಚಿತ್ರವಿದು. ತಮ್ಮ ಮೂರನೇ ಇನ್ನಿಂಗ್ಸ್ ನಲ್ಲಿ ಅವರು ಇನ್ನಷ್ಟು ಭರವಸೆ ಮೂಡಿಸಿದ್ದಾರೆ. ಚಿತ್ರದ ನಾಯಕಿ ಕ್ಯೂಟ್ ಬೆಡಗಿ ಸಿಂಧು ಲೋಕನಾಥ್.

    ರಾಮ್ ದೀಪ್ ಕಥೆ, ಚಿತ್ರಕಥೆ ನಿರ್ದೇಶನ

    ರಾಮ್ ದೀಪ್ ಕಥೆ, ಚಿತ್ರಕಥೆ ನಿರ್ದೇಶನ

    ರಾಮ್ ದೀಪ್ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಮನೋಜ್ ಗಲಗಲಿ ಸಂಭಾಷಣೆ ಬರೆದಿದ್ದಾರೆ.

    ಚಿತ್ರದ ತಾಂತ್ರಿಕ ಬಳಗ ಹೀಗಿದೆ

    ಚಿತ್ರದ ತಾಂತ್ರಿಕ ಬಳಗ ಹೀಗಿದೆ

    ಮನೋಹರ್ ಜೋಶಿ ಛಾಯಾಗ್ರಹಣ, ಅಜನೀಶ್ ಲೊಕನಾಥ್ ಸಂಗೀತ ನಿರ್ದೇಶನ, ಸಂತೋಷ್ ರಾಧಾಕೃಷ್ಣ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ, ವಿದ್ಯಾಸಾಗರ್ ನೃತ್ಯ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ ಕಲಾ ನಿರ್ದೇಶನವಿದೆ.

    ಪಾತ್ರವರ್ಗದಲ್ಲಿ ಯಾರಿದ್ದಾರೆ?

    ಪಾತ್ರವರ್ಗದಲ್ಲಿ ಯಾರಿದ್ದಾರೆ?

    'ನನ್ ಲೈಫ್ ಅಲ್ಲಿ' ಚಿತ್ರದ ತಾರಾಬಳಗದಲ್ಲಿ ಅನೀಶ್, ಸಿಂಧೂ ಲೋಕನಾಥ್, ದಿಲೀಪ್ ರಾಜ್, ಮಿತ್ರ, ನಾಗತಿಹಳ್ಳಿ ಚಂದ್ರಶೇಖರ್ ಮುಂತಾದವರಿದ್ದಾರೆ.

    ಪಕ್ಕಾ ತಂತ್ರಜ್ಞರ ಸಿನಿಮಾ ಇದು

    ಪಕ್ಕಾ ತಂತ್ರಜ್ಞರ ಸಿನಿಮಾ ಇದು

    ಮೂಲತಃ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಚಿತ್ರದ ನಿರ್ದೇಶಕ ರಾಮ್ ದೀಪ್ ಅವರು ತಂತ್ರಜ್ಞರನ್ನು ಸಮರ್ಥವಾಗಿ ದುಡಿಸಿಕೊಂಡಿದ್ದಾರೆ. ತಮ್ಮ ಸೊಗಸಾದ ಪ್ರೇಮಕಥೆಗೆ ಅಷ್ಟೇ ಅಚ್ಚುಕಟ್ಟಾದ ನಿರೂಪಣೆ ಇದೆ. ಕಥೆ ಎಲ್ಲೂ ಬೋರು ಹೊಡೆಸುವುದಿಲ್ಲ. ಹಾಗಂತ ಸಿಕ್ಕಾಪಟ್ಟೆ ಹೀರೋಯಿಸಂ ತೋರಿಸುವ ಚಿತ್ರವೂ ಇದಲ್ಲ. ಎಲ್ಲವೂ ನೇರ, ದಿಟ್ಟ ಹಾಗೂ ನಿರಂತರ.

    ಚಿತ್ರದ ಟೂ ಲೈನ್ ಸ್ಟೋರಿ ಏನೆಂದರೆ

    ಚಿತ್ರದ ಟೂ ಲೈನ್ ಸ್ಟೋರಿ ಏನೆಂದರೆ

    ಇಷ್ಟಕ್ಕೂ ಚಿತ್ರದ ಟೂ ಲೈನ್ ಸ್ಟೋರಿ ಏನೆಂದರೆ... ಜಾಲಿ ಹುಡುಗ ದೀಪು (ಅನೀಶ್ ತೇಜಸ್ವರ್) ಲೈಫಲ್ಲಿ ಏನೆಲ್ಲಾ ಆಗುತ್ತದೆ, ಈ ದೇಶದ ಬಗ್ಗೆ ಅವನಿಗೆ ಯಾಕೆ ತಿರಸ್ಕಾರ ನೋಟ, ಅಸಹ್ಯ. ಇಲ್ಲಿನ ದುಃಸ್ಥಿತಿಗೆ ರೋಸಿ ಸಂಶೋಧನೆಗಾಗಿ ನಾರ್ವೆ ದೇಶಕ್ಕೆ ಹೋಗಬೇಕೆಂದುಕೊಳ್ಳುತ್ತಾನೆ.

    ಪ್ರತಿಭಾಪಲಾಯನದ ಬಗ್ಗೆ ಒಂದು ಒಳ್ಳೆಯ ಸಂದೇಶ

    ಪ್ರತಿಭಾಪಲಾಯನದ ಬಗ್ಗೆ ಒಂದು ಒಳ್ಳೆಯ ಸಂದೇಶ

    ಒಂದು ಸರಳ ಸುಂದರ ಲವ್ ಸ್ಟೋರಿ ಜೊತೆಗೆ ಪ್ರತಿಭಾಪಲಾಯನದ ಬಗ್ಗೆ ಒಂದು ಒಳ್ಳೆಯ ಸಂದೇಶವನ್ನು ಚಿತ್ರ ನೀಡುತ್ತದೆ. ಇಂದಿನ ಯುವಕರು ಹಣ, ಡಾಲರ್ ಮೋಹಕ್ಕೆ ಒಳಗಾಗಿ ತನ್ನ ದೇಶ, ಭಾಷೆ, ಪೋಷಕರನ್ನು ಮರೆಯುತ್ತಿರುವವರನ್ನು ನಿಲ್ಲಿಸಿ ಎಚ್ಚರಿಸುತ್ತದೆ.

    English summary
    Kannada movie 'Nan Life Alli' completes 25 days of successful run at the box office. The movie starred Anish Tejeshwar, Sindhu Loknath, Dilip Raj are in lead directed by Ramdeep. On th eve of 25 days the team arranged premier show in PVR, forum mall at Koramangala, Bangalore.
    Monday, March 17, 2014, 15:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X