ನಟ ಧನುಷ್ ಚಿತ್ರಕ್ಕೆ ಆಯ್ಕೆಯಾದ ಕನ್ನಡದ ಬೆಡಗಿ

Written by: ಶಂಕರ್, ಚೆನ್ನೈ

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ ಧನುಷ್ ಅವರ ಮುಂದಿನ ಚಿತ್ರಕ್ಕೆ ಬೆಂಗಳೂರು ಬೆಡಗಿ ಆಯ್ಕೆಯಾಗಿದ್ದಾರೆ. ಈಕೆ ಬೇರಾರು ಅಲ್ಲ ಲೂಸ್ ಮಾದ ಯೋಗೇಶ್ ಜೊತೆ ನಂದ ಲವ್ಸ್ ನಂದಿತ ಚಿತ್ರದಲ್ಲಿ ಅಭಿನಯಿಸಿದ್ದ ತಾರೆ ಶ್ವೇತಾ ಅಲಿಯಾಸ್ ನಂದಿತಾ.

ಸ್ವಂತ ಬ್ಯಾನರ್‌ನಲ್ಲಿ ಧನುಷ್ ನಿರ್ಮಿಸುತ್ತಿರು ಎರಡನೇ ಚಿತ್ರ ಇದಾಗಿದೆ. ಈ ಚಿತ್ರದಲ್ಲಿ ನಂದಿತಾ ಅವರ ಪಾತ್ರ ಡಿಫರೆಂಟ್ ಆಗಿರುತ್ತದಂತೆ. ಚಿತ್ರದ ನಾಯಕ ನಟ ಅಥ್ಲೇಟ್. ಅವನಿಗೆ ಕೋಚ್ ಆಗಿ ನಂದಿತಾ ಚಿತ್ರದಲ್ಲಿ ಕಾಣಿಸಲಿದ್ದಾರೆ.

ಅಥ್ಲೆಟಿಕ್ಸ್ ಬಗ್ಗೆ ಸೀರಿಯಸ್ ಆಗಿ ತೆಗೆದುಕೊಳ್ಳುವ ಹುಡುಗಿಯಾಗಿ ನಂದಿತಾ ಪಾತ್ರವಿರುತ್ತದಂತೆ. ಆದಕಾರಣ ಇಲ್ಲಿಗೆ ಗ್ಲಾಮರ್‌ಗೆ ಅಷ್ಟಾಗಿ ಅವಕಾಶವಿರಲ್ಲ. ಚಿತ್ರದ ಹೆಸರು ಇಥಿರ್ ನೀಚಲ್ ಎಂದು.

ನಂದಿತಾ ತಮಿಳು ಚಿತ್ರಗಳಲ್ಲಿ ಅಭಿನಯಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಸೂರ್ಯ ಜೊತೆ 'ಅಟ್ಟಕತ್ತಿ' ಎಂಬ ಚಿತ್ರದಲ್ಲಿ ಅಭಿನಯಿಸಿದ್ದರು. ಆ ಚಿತ್ರದ ಬಳಿಕ ಆಕೆಗೆ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.

ಆದರೆ ಬಂದ ಎಲ್ಲಾ ಅವಕಾಶಗಳು ಪೂರ್ಣ ಪ್ರಮಾಣದ ಹೀರೋಯಿನ್ ಪಾತ್ರಗಳಲ್ಲ. ಏತನ್ಮಧ್ಯೆ ನಳಯುಂ ನಂದಿನಿಯುಂ ಎಂಬ ಚಿತ್ರದಲ್ಲಿ ನಂದಿಗೆ ಪೂರ್ಣ ಪ್ರಮಾಣದ ನಾಯಕಿ ಪಾತ್ರ ಸಿಕ್ಕಿದೆ. ವೆಂಕಟ ಪ್ರಭು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದು. ಒಟ್ಟಿನಲ್ಲಿ ಕನ್ನಡದ ಹುಡುಗಿಯೊಬ್ಬಳು ತಮಿಳಿನಲ್ಲಿ ಮಿಂಚುತ್ತಿದ್ದಾರೆ. (ಏಜೆನ್ಸೀಸ್)

Read more about: ಧನುಷ್, ಯೋಗೇಶ್, ಬೆಂಗಳೂರು, dhanush, yogesh, bangalore

English summary
Loose Mada Yogi-starrer Nanda Loves Nanditha fame actress Naditha has bagged a role in the Dhanush’s home production Ethir Neechal. She plays a small-town girl in this film.
Please Wait while comments are loading...

Kannada Photos

Go to : More Photos