»   » ನೀವು ಸುದೀಪ್ ಅಭಿಮಾನಿ: ಸುದೀಪ್ 'ಇವರಿಗೆ' ಅಭಿಮಾನಿ.! ಯಾರವರು.?

ನೀವು ಸುದೀಪ್ ಅಭಿಮಾನಿ: ಸುದೀಪ್ 'ಇವರಿಗೆ' ಅಭಿಮಾನಿ.! ಯಾರವರು.?

Posted by:
Subscribe to Filmibeat Kannada

ತಮ್ಮ ಹುಟ್ಟುಹಬ್ಬವನ್ನ ಅಷ್ಟು ಗ್ರ್ಯಾಂಡ್ ಆಗಿ ಆಚರಿಸಿಕೊಳ್ಳುತ್ತಾರೋ, ಇಲ್ವೋ... ಆದ್ರೆ ತಮ್ಮ ನೆಚ್ಚಿನ ನಟನ ಜನ್ಮದಿನವನ್ನ 'ಹಬ್ಬ'ದಂತೆ ಅದ್ಧೂರಿ ಆಗಿ ಸೆಲೆಬ್ರೇಟ್ ಮಾಡುವವರು ಅಭಿಮಾನಿಗಳು.!

ಕೈಯಲ್ಲಿ ಕಾಸು ಇರುತ್ತೋ, ಇಲ್ವೋ... ಊಟ ಬಿಟ್ಟು, ಹಣ ಕೂಡಿಟ್ಟು ತಮ್ಮ 'ಬಾಸ್' ಚಿತ್ರವನ್ನ ತಪ್ಪದೇ ಫಸ್ಟ್ ಡೇ ಫಸ್ಟ್ ಶೋ ನೋಡುವವರು ಅಭಿಮಾನಿಗಳು.!

ದೇವರಿಗೆ ಪೂಜೆ ಮಾಡುತ್ತಾರೋ, ಇಲ್ವೋ... ಬೆಳಗ್ಗೆ ಎದ್ದ ಕೂಡಲೆ 'ಆರಾಧ್ಯ ದೈವ'ನ ಸ್ಮರಣೆ ಮಾಡುವವರು ಅಭಿಮಾನಿಗಳು.!

ಇಂತಹ ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟೋಕೆ ಸಾಧ್ಯವೇ.? ಖಂಡಿತ ಇಲ್ಲ.! ಅದಕ್ಕೆ ಕಿಚ್ಚ ಸುದೀಪ್ ಒಂದು ಮಾತು ಹೇಳಿದ್ದಾರೆ. ಅದು ಏನಂದರೆ...

'ನಾನು ಅಭಿಮಾನಿಗಳ ಅಭಿಮಾನಿ' ಎಂದ ಕಿಚ್ಚ ಸುದೀಪ್

'ನಾನು ಅಭಿಮಾನಿಗಳ ಅಭಿಮಾನಿ' ಎಂದ ಕಿಚ್ಚ ಸುದೀಪ್

ಅಭಿಮಾನಿಗಳ ಪ್ರೀತಿಗೆ ಎಷ್ಟೇ ಕೃತಜ್ಞತೆ ಸಲ್ಲಿಸಿದರೂ ಕಮ್ಮಿಯೇ... ಅಭಿಮಾನಿಗಳ ಅಭಿಮಾನದ ಪರಾಕಾಷ್ಟೆ ಕಂಡು ಬೆರಗಾಗಿರುವ ಕಿಚ್ಚ ಸುದೀಪ್ 'ನಾನು ಅಭಿಮಾನಿಗಳ ಅಭಿಮಾನಿ' ಎಂದಿದ್ದಾರೆ.[ಸುದೀಪ್ ರನ್ನು ಭೇಟಿಯಾದ ಜಪಾನ್ ಅಭಿಮಾನಿ]

'ಅಭಿಮಾನಿಗಳ ಅಭಿಮಾನಿ' ಆಗಿರುವ ಸುದೀಪ್

'ಅಭಿಮಾನಿಗಳ ಅಭಿಮಾನಿ' ಆಗಿರುವ ಸುದೀಪ್

ನೀವೆಲ್ಲರೂ ಕಿಚ್ಚ ಸುದೀಪ್ ರವರಿಗೆ ಅಭಿಮಾನಿ ಆಗಿದ್ರೆ, ನಿಮಗೆಲ್ಲಾ ಸುದೀಪ್ ರವರು ಅಭಿಮಾನಿ ಆಗಿದ್ದಾರೆ.[ಗೇರ್ ಗೇರ್ ಮಂಗಣ್ಣ ಈಗ ಸುದೀಪ್ ಅಭಿಮಾನಿ]

ಸುದೀಪ್ ದೊಡ್ಡತನ

ಸುದೀಪ್ ದೊಡ್ಡತನ

ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯ ಇಲ್ಲ. ಆದ್ರೆ, ಅಭಿಮಾನಿಗಳ ಪ್ರೀತಿಗೆ ತಲೆ ಬಾಗಿರುವ ಸುದೀಪ್ ರವರ ದೊಡ್ಡತನವನ್ನ ಮೆಚ್ಚಲೇಬೇಕು.[ಕಿಚ್ಚ ಸುದೀಪ್ ಅಭಿಮಾನಿಗಳ ವೆಬ್ ಸೈಟ್ ಆರಂಭ]

ಸುದೀಪ್ ರವರ ಪೋಸ್ಟರ್ ನೋಡಿ...

ಸುದೀಪ್ ರವರ ಪೋಸ್ಟರ್ ನೋಡಿ...

ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿ ಇರುವ ಸಂತೋಷ್ ಚಿತ್ರಮಂದಿರದಲ್ಲಿ ಹಾಕಿರುವ ಪೋಸ್ಟರ್ ನ ಒಮ್ಮೆ ನೋಡಿ... ಅದರಲ್ಲಿ 'ನಾನು ಅಭಿಮಾನಿಗಳ ಅಭಿಮಾನಿ' ಎಂದು ಸುದೀಪ್ ಹೇಳಿರುವ ಬಗ್ಗೆ ಉಲ್ಲೇಖ ಇದೆ.

'ಅಭಿಮಾನಿಗಳೇ ದೇವರುಗಳು' ಎನ್ನುತ್ತಿದ್ದ ಡಾ.ರಾಜ್

'ಅಭಿಮಾನಿಗಳೇ ದೇವರುಗಳು' ಎನ್ನುತ್ತಿದ್ದ ಡಾ.ರಾಜ್

ಅಭಿಮಾನಿಗಳನ್ನೇ ದೇವರು ಎಂದು ನಂಬಿದ್ದ ಡಾ.ರಾಜ್ ಕುಮಾರ್ ರವರು ತಮ್ಮೆಲ್ಲ ಅಭಿಮಾನಿಗಳನ್ನ 'ಅಭಿಮಾನಿ ದೇವರುಗಳೇ...' ಎಂದು ಸಂಭೋದಿಸುತ್ತಿದ್ದರು.

ಅಭಿಮಾನಿಗಳಿಗಾಗಿ ಹಾಡು ಹಾಡಿದ ಡಾ.ವಿಷ್ಣು

ಅಭಿಮಾನಿಗಳಿಗಾಗಿ ಹಾಡು ಹಾಡಿದ ಡಾ.ವಿಷ್ಣು

ಅಭಿಮಾನಿಗಳ ಮೇಲೆ ಪ್ರೀತಿಗೆ ಮನಸೋತು ಡಾ.ವಿಷ್ಣುವರ್ಧನ್, ''ಅಭಿಮಾನಿಗಳೇ ನನ್ನ ಪ್ರಾಣ...'' ಅಂತ ಹಾಡು ಹಾಡಿದ್ದು ಹೇಗೆ ತಾನೆ ಮರೆಯಲು ಸಾಧ್ಯ.?

'ಅಭಿಮಾನಿಗಳೇ ನಮ್ಮನೆ ದೇವ್ರು' ಎಂದಿದ್ದ ಅಪ್ಪು

'ಅಭಿಮಾನಿಗಳೇ ನಮ್ಮನೆ ದೇವ್ರು' ಎಂದಿದ್ದ ಅಪ್ಪು

ಇನ್ನೂ ಅಣ್ಣಾವ್ರ ಮುದ್ದಿನ ಮಗ ಪುನೀತ್ ರಾಜ್ ಕುಮಾರ್ ಕೂಡ 'ಅಭಿಮಾನಿಗಳೇ ನಮ್ಮನೆ ದೇವ್ರು...' ಅಂತ ಹೇಳಿದ್ದು ಇನ್ನೂ ಎಲ್ಲರ ಕಣ್ಮುಂದೆ ಇದೆ.

ಈಗ 'ಅಭಿಮಾನಿಗಳ ಅಭಿಮಾನಿ' ಆಗಿರುವ ಕಿಚ್ಚ ಸುದೀಪ್

ಈಗ 'ಅಭಿಮಾನಿಗಳ ಅಭಿಮಾನಿ' ಆಗಿರುವ ಕಿಚ್ಚ ಸುದೀಪ್

'ಕಿಚ್ಚ', 'ಅನ್ನದಾತರ ಅನ್ನದಾತ', 'ಅಭಿನಯ ಚಕ್ರವರ್ತಿ', 'ಕೆಚ್ಚೆದೆಯ ಕಿಚ್ಚ', 'ಕಲಾಭೂಷಣ' ಅಂತೆಲ್ಲ ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಂಡ ಸುದೀಪ್ ಈಗ 'ಅಭಿಮಾನಿಗಳ ಅಭಿಮಾನಿ' ಆಗಿದ್ದಾರೆ.

English summary
'Nanu Abhimanigala Abhimani' says Kiccha Sudeep.
Please Wait while comments are loading...

Kannada Photos

Go to : More Photos