twitter
    For Quick Alerts
    ALLOW NOTIFICATIONS  
    For Daily Alerts

    ಏ 25 ರಿಂದ 29 ರವರೆಗೆ ಪ್ರಶಸ್ತಿ ಪುರಸ್ಕೃತ ಮತ್ತು ಪನೋರಮ ಕನ್ನಡ ಚಿತ್ರೋತ್ಸವ

    By Suneel
    |

    ಕರ್ನಾಟಕ ಚಲನಚಿತ್ರ ಅಕಾಡೆಮಿಯು "ರಾಷ್ಟ್ರ-ರಾಜ್ಯ' ಪ್ರಶಸ್ತಿ ಪುರಸ್ಕೃತ ಹಾಗೂ ಪನೋರಮಾ ಚಿತ್ರೋತ್ಸವಕ್ಕೆ ಆಯ್ಕೆಯಾದ ಕನ್ನಡ ಚಿತ್ರಗಳ ಉತ್ಸವವನ್ನು ಏಪ್ರಿಲ್ 25 ರಿಂದ 29 ರವರೆಗೆ ಚಾಮುಂಡೇಶ್ವರಿ ಸ್ಟುಡಿಯೋಸ್, ಮಿಲ್ಲರ್ ರಸ್ತೆ, ಬೆಂಗಳೂರಿನಲ್ಲಿ ಆಯೋಜಿಸಿದೆ.

    ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಏಪ್ರಿಲ್ 25 ರಂದು ಸಂಜೆ 4 ಗಂಟೆಗೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಈ ಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಯಾಗಿ ಹಿರಿಯ ಕಲಾವಿದೆ ಡಾ.ಜಯಮಾಲಾ ಉಪಸ್ಥಿತರಿರಲಿದ್ದಾರೆ. ಪದ್ಮಶ್ರೀ ಪುರಸ್ಕೃತ ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಪ್ರಧಾನ ಭಾಷಣ ಮಾಡಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಎಸ್.ವಿ. ರಾಜೇಂದ್ರಸಿಂಗ್ ಬಾಬು ಅವರು ವಹಿಸುವರು.

    National, state awarded and Panorama Kannada Film Festival

    ಸಮಾರಂಭದ ವಿಶೇಷ ಆಹ್ವಾನಿತರಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, 2016 ನೇ ಸಾಲಿನ ಅತ್ಯುತ್ತಮ ನಟ ಪ್ರಶಸ್ತಿ ಪುರಸ್ಕೃತ ಶ್ರೀ ಅಚ್ಯುತ್‌ಕುಮಾರ್, 2016 ನೇ ಸಾಲಿನ ಅತ್ಯುತ್ತಮ ನಟಿ ಪ್ರಶಸ್ತಿ ಪುರಸ್ಕೃತ ಕುಮಾರಿ ಶೃತಿ ಹರಿಹರನ್ ಅವರು ಭಾಗವಹಿಸುವರು. ಉದ್ಘಾಟನಾ ಸಮಾರಂಭದ ನಂತರ "ರೈಲ್ವೇ ಚಿಲ್ಡ್ರನ್" ಚಿತ್ರ ಹಾಗೂ ಕಿರುಚಿತ್ರ "ಅನಲ" ಪ್ರದರ್ಶನಗೊಳ್ಳಲಿವೆ.

    ಪ್ರದರ್ಶನಗೊಳ್ಳುವ ಚಿತ್ರಗಳು
    -ಏಪ್ರಿಲ್ 26 ರಂದು ಬೆಳಿಗ್ಗೆ 10 ಗಂಟೆಗೆ "ರಿಸರ್ವೇಶನ್" ಮಧ್ಯಾಹ್ನ 2-30 ಗಂಟೆಗೆ "ಮದಿಪು", ಸಂಜೆ 5-00 ಗಂಟೆಗೆ "ಅಮರಾವತಿ" ಚಲನಚಿತ್ರ ಪ್ರದರ್ಶನ.

    -ಏಪ್ರಿಲ್ 27 ರಂದು ಬೆಳಿಗ್ಗೆ 10 ಗಂಟೆಗೆ "ಜೀರ್‌ಜಿಂಬೆ", ಮಧ್ಯಾಹ್ನ 2-30 ಗಂಟೆಗೆ "ರಾಮ ರಾಮಾ ರೇ", ಸಂಜೆ 5-00 ಗಂಟೆಗೆ "ಅಂತರ್ಜಲ" ಚಲನಚಿತ್ರ ಪ್ರದರ್ಶನ.

    - ಏಪ್ರಿಲ್ 28 ರಂದು ಬೆಳಿಗ್ಗೆ 10 ಗಂಟೆಗೆ "ಅಲ್ಲಮ", ಮಧ್ಯಾಹ್ನ 2-30 ಗಂಟೆಗೆ "ಹರಿಕಥಾ ಪ್ರಸಂಗ", ಸಂಜೆ 5-00 ಗಂಟೆಗೆ "ಮೂಡ್ಲ ಸೀಮೆಯಲಿ" ಚಲನಚಿತ್ರ ಪ್ರದರ್ಶನ.

    - ಏಪ್ರಿಲ್ 29 ರಂದು ಮಧ್ಯಾಹ್ನ 2-30 ಗಂಟೆಗೆ "ಯು ಟರ್ನ್", ಸಂಜೆ 5-00 ಗಂಟೆಗೆ "ಕಿರಿಕ್ ಪಾರ್ಟಿ" ಚಲನಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ಹೆಚ್.ಬಿ. ದಿನೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    English summary
    National, state awarded and Panorama Kannada Film Festival from 25 to 29 this april.
    Saturday, April 22, 2017, 20:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X