twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಚಿತ್ರೋದ್ಯಮದಲ್ಲಿ ಇಂಥವರೂ ಇದ್ದಾರಾ, ಶಿವನೇ !

    |

    ನಿರ್ಮಾಪಕ, ನಿರ್ದೇಶಕ ಮತ್ತು ಕಲಾವಿದರ ನಡುವಿನ ಸಂಬಂಧ ಬರೀ ಚಿತ್ರಕ್ಕೆ ಸೀಮಿತವಲ್ಲ ಅದಕ್ಕಿಂತ ಮಿಗಿಲಾದದ್ದು ಎಂದು ವರನಟ ರಾಜ್ ಹೇಳುತ್ತಿದ್ದರು. ಅದರಂತೆ ತನ್ನ ಜೀವಿತಾವಧಿಯಲ್ಲಿ ನಡೆದುಕೊಂಡೂ ಬಂದರು.

    ಬರೀ ಕಮರ್ಷಿಯಲ್ ದೃಷ್ಟಿಯಲ್ಲೇ ಲೆಕ್ಕಹಾಕಿಕೊಂಡು ಚಿತ್ರ ನಿರ್ಮಿಸುವವರ ಸಂಖ್ಯೆ ಕನ್ನಡ ಚಿತ್ರೋದ್ಯಮದಲ್ಲಿ ಕಮ್ಮಿಯೇನೂ ಇಲ್ಲ. ಆದರೆ ಹಣ ಸಂಪಾದಿಸುವ ಹಾದಿಯಲ್ಲಿ ತುಸು ಮಾನವೀಯತೆಗೆ ಬೆಲೆ ಕೊಡದಿದ್ದರೆ ಹೇಗೆ?

    ತನ್ನ ಚಿತ್ರದಲ್ಲಿ ನಟಿಸುತ್ತಿರುವ ನಟಿಯ ಕನಿಷ್ಠ ಯೋಗಕ್ಷೇಮ ವಿಚಾರಿಸಿದ ನಿರ್ಮಾಪಕರ ಮತ್ತು ನಿರ್ದೇಶಕರ ಮಾನವೀಯತೆಗೆ ವಿರುದ್ದವಾದಂತಹ ಘಟನೆಯೊಂದು ಕೆಲವು ದಿನಗಳ ಹಿಂದೆ ವರದಿಯಾಗಿದೆ.

    ಡೆಹ್ರಾಡೂನ್ ಮೂಲದ ನೇಹಾ ಸಕ್ಸೇನಾ ತನಗಾದ ನೋವನ್ನು ವಿವರಿಸಿಕೊಂಡಿದ್ದಾರೆ. ಜಸ್ಟ್ ಲವ್ ಚಿತ್ರದ ಮೂಲಕ ನೇಹಾ ಸ್ಯಾಂಡಲ್ ವುಡ್ಡಿಗೆ ಪಾದಾರ್ಪಣೆ ಮಾಡಿದ್ದರು, ಜಯರಾಂ ಕಾರ್ತಿಕ್ (ಜೆಕೆ) ಆ ಚಿತ್ರದ ನಾಯಕರಾಗಿದ್ದರು.

    ಸದ್ಯ ನೇಹಾ, ಅರ್ಜುನ್ ಸರ್ಜಾ ಪ್ರಮುಖ ಭೂಮಿಕೆಯಲ್ಲಿರುವ ವಾರಿಯರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗಿಗಾಗಿ ತೆರಳುತ್ತಿದ್ದಾಗ ನಡೆದ ಘಟನೆ, ನಿರ್ಮಾಪಕ ಮತ್ತು ನಿರ್ದೇಶಕರು ಸ್ಪಂದಿಸಿದ ರೀತಿಯನ್ನು ನೇಹಾ ತನ್ನ ಫೇಸ್ ಬುಕ್ ನಲ್ಲಿ ವಿವರಿಸಿ ಕೊಂಡಿದ್ದು ದ್ದು ಹೀಗೆ..

    ಏಪ್ರಿಲ್ 27ರಂದು ವಾರಿಯರ್ ಚಿತ್ರದ ಶೂಟಿಂಗಿಗಾಗಿ ನಾನು ತೆರಳಬೇಕಾಗಿತ್ತು. ರಾತ್ರಿ ಹೊತ್ತು ಅದರಲ್ಲೂ ಪ್ರಮುಖವಾಗಿ ಟೆಂಪೋ ಟ್ರಾವೆಲರ್ ನಲ್ಲಿ ಪ್ರಯಾಣಿಸುವುದಿಲ್ಲ ಎಂದು ಹೇಳಿದೆ.

    ಚಿತ್ರದ ನಿರ್ಮಾಪಕ ಪ್ರಭಾಕರ್ ಅವರ ಒತ್ತಾಯದ ಮೇರೆಗೆ ಟಿಟಿಯಲ್ಲೇ ಪ್ರಯಾಣಿಸ ಬೇಕಾಯಿತು. ಟಿಟಿ ಚಾಲಕ ಡ್ರಿಂಕ್ಸ್ ಮಾಡಿರಲಿಲ್ಲ, ಆದರೆ mostly ಗಾಂಜಾ ಅಮಲಿನಲ್ಲಿದ್ದ. ಮುಂದೆ ಓದಿ..

    ಸಹಾಯಕನನ್ನು ಕರೆದುಕೊಂಡು ಹೋದೆ

    ಸಹಾಯಕನನ್ನು ಕರೆದುಕೊಂಡು ಹೋದೆ

    ನನಗೆ ಒಬ್ಬಳೇ ಹೋಗಲು ಭಯವಾಗಿ ನನ್ನ ಸಹಾಯಕನನ್ನು ಜೊತೆಗೆ ಕರೆದುಕೊಂಡು ಹೋದೆ. ಚಾಲಕ ಗಂಟೆಗೆ ಹತ್ತು ಸಲ ಅಲ್ಲಲ್ಲಿ ಟೀಗೆ, ಗುಟ್ಕಾ ತಿನ್ನಲು ನಿಲ್ಲಿಸುತ್ತಿದ್ದ. ನಿದ್ದೆಯ ಅಮಲಿನಲ್ಲೇ ಗಾಡಿ ಚಲಾಯಿಸುತ್ತಿದ್ದ. ಮಧ್ಯರಾತ್ರಿಯ ವೇಳೆಗೆ ನಮ್ಮ ಟಿಟಿಗೆ ತಿಪಟೂರು ಬಳಿ ಲಾರಿ ಡಿಕ್ಕಿ ಹೊಡೆಯಿತು. ನಾನೊಂದು ಕಡೆ, ನನ್ನ ಸಹಾಯಕ ಇನ್ನೊಂದು ಕಡೆ ಬಿದ್ದಿದ್ದೆವು. ಟಿಟಿ ಚಾಲಕ ಜಂಪ್ ಮಾಡಿ, ಓಡಿ ಹೋಗಿದ್ದ. ನನಗೆ ತುಂಬಾ ಬ್ಲೀಡಿಂಗ್ ಆಗುತ್ತಿತ್ತು.

    ನಿರ್ಮಾಪಕರಿಗೆ ಫೋನ್ ಮಾಡಿದೆ

    ನಿರ್ಮಾಪಕರಿಗೆ ಫೋನ್ ಮಾಡಿದೆ

    ವಾರಿಯರ್ ಚಿತ್ರದ ಪ್ರೊಡಕ್ಷನ್ ಮ್ಯಾನೇಜರ್ ಅವರಿಗೆ ಫೋನ್ ಮಾಡಿ ನಿರ್ಮಾಪಕರಿಗೆ ಮತ್ತು ನಿರ್ದೇಶಕರಿಗೆ ತಿಳಿಸಲು ಹೇಳಿದೆ. ಇದುವರೆಗೂ ನಿರ್ಮಾಪಕರಾಗಲಿ ಅಥವಾ ನಿರ್ದೇಶಕರಿಂದ ಒಂದು ಫೋನ್ ಅಥವಾ ಮೆಸೇಜ್ ಬಂದಿಲ್ಲ. ಆ ಸ್ಥಿತಿಯಲ್ಲಿದ್ದಾಗ ಮೂವರು ನನ್ನ ಸಹಾಯಕ್ಕೆಂದು ಬಂದು ಪರ್ಸ್ ಮತ್ತು ದುಡ್ದನ್ನು ದೋಚಲು ನೋಡಿದರು. ಆಗ ನಾನು ಜೋರಾಗಿ ಕಿರುಚಿಕೊಂಡೆ. ನೋವಿನಲ್ಲೇ ನಾನು ಮತ್ತು ನನ್ನ ಸಹಾಯಕ ಮೈನ್ ರೋಡಿಗೆ ಬಂದೆವು.

    ಬಸ್ಸಿನವರು ನಮ್ಮ ಸಹಾಯಕ್ಕೆ ಬಂದರು

    ಬಸ್ಸಿನವರು ನಮ್ಮ ಸಹಾಯಕ್ಕೆ ಬಂದರು

    ಮುಖ್ಯರಸ್ತೆಯಲ್ಲಿ ಹಾದು ಹೋಗುತ್ತಿದ್ದ ಟ್ರಾವೆಲ್ ಬಸ್ಸಿನ ಡ್ರೈವರ್ ನನ್ನ ಸಹಾಯಕನನ್ನು ಗುರುತಿಸಿದ, ಅವನು ನಮ್ಮಿಬ್ಬರನ್ನು ತುಮಕೂರು ಆಸ್ಪತ್ರೆಗೆ ದಾಖಲಿಸಿದ. ಅಲ್ಲಿ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದರು. ಮೈಗೆಲ್ಲಾ ತುಂಬಾ ಗಾಯವಾಗಿರುವುದರಿಂದ ಎಕ್ಸ್ ರೇ ಮಾಡಿಸಿದರು, ನಂತರ ಸರ್ಜರಿ ಮಾಡಬೇಕೆಂದರು.

    ಆಸ್ಪತ್ರೆಗೆ ದುಡ್ಡು ಕಟ್ಟಬೇಕಾಗಿತ್ತು

    ಆಸ್ಪತ್ರೆಗೆ ದುಡ್ಡು ಕಟ್ಟಬೇಕಾಗಿತ್ತು

    ನಾನು ಸರ್ಜರಿಗೆ ಸಮ್ಮತಿ ಸೂಚಿಸಿದರೂ ನಾಲ್ಕು ಗಂಟೆ ಕಾದರೂ ಸರ್ಜರಿ ಮಾಡಲಿಲ್ಲ. ಕಾರಣವೇನಂದರೆ ಆಸ್ಪತ್ರೆಗೆ ದುಡ್ಡು ಕಟ್ಟಬೇಕಾಗಿತ್ತು. ಕೊನೆಗೆ ನನ್ನ ಎಟಿಎಂ ಕಾರ್ಡ್ ಕೊಟ್ಟೆ, ಸರ್ಜರಿ ಆಯಿತು. ಇದುವರೆಗೂ ಚಿತ್ರದ ನಿರ್ಮಾಪಕರಾಗಲಿ ಅಥವಾ ನಿರ್ದೇಶಕರಾಗಲಿ ನನ್ನನ್ನು ವಿಚಾರಿಸಲು ಬಂದಿಲ್ಲ. ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಎಂದಿದ್ದಾರೆ, ಜೊತೆಗೆ ಬೆದರಿಕೆನೂ ಹಾಕಿದ್ದಾರೆ.

    ನನಗೆ ತಂದೆಯಿಲ್ಲ, ತಾಯಿಗೆ ವಯಸ್ಸಾಗಿದೆ

    ನನಗೆ ತಂದೆಯಿಲ್ಲ, ತಾಯಿಗೆ ವಯಸ್ಸಾಗಿದೆ

    ನನಗೆ ತಂದೆಯಿಲ್ಲ, ಸಹೋದರರು ಇಲ್ಲ, ತಾಯಿಗೆ ವಯಸ್ಸಾಗಿದೆ. ನನಗೇನಾದರೂ ಹೆಚ್ಚುಕಮ್ಮಿಯಾಗಿದ್ದರೆ ನನ್ನ ತಾಯಿಯನ್ನು ನೋಡಿಕೊಳ್ಳುವವರು ಯಾರು ಎಂದು ನೇಹಾ ತನ್ನ ಫೇಸ್ ಬುಕ್ ಸ್ಟೇಟಸ್ ನಲ್ಲಿ ನೋವು ವ್ಯಕ್ತ ಪಡಿಸಿಕೊಂಡಿದ್ದಾರೆ.

    ಹಣದ ಸಹಾಯ ಮಾಡಿದ ಚೇಂಬರ್

    ಹಣದ ಸಹಾಯ ಮಾಡಿದ ಚೇಂಬರ್

    ವಾರಿಯರ್ ಚಿತ್ರದ ನಾಯಕ ಅರ್ಜುನ್ ಸರ್ಜಾ ಸೇರಿದಂತೆ ಚಿತ್ರೋದ್ಯಮದ ಹಲವಾರು ಮಂದಿ ಬಂದು ನೇಹಾ ಯೋಗಕ್ಷೇಮ ವಿಚಾರಿಸಿದ್ದಾರೆ. ಕನ್ನಡ ಫಿಲಂ ಚೇಂಬರ್ ಅರವತ್ತು ಸಾವಿರ ರೂಪಾಯಿ ನೆರವು ನೀಡಿದೆ ಎನ್ನುವುದು ಅಪ್ಡೇಟೆಡ್ ಮಾಹಿತಿ. ಚೇಂಬರ್, ಚಿತ್ರದ ನಿರ್ಮಾಪಕ ಪ್ರಭಾಕರ್ ಅವರನ್ನು ಕರೆಸಿ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದೆ.

    English summary
    Actress Neha Saxena met with an accident on the way to shooting of Kannada movie Warrior. The Producer of the movie Prabhakar not responded and issue is in now Karnataka Film Chamber.
    Thursday, May 7, 2015, 11:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X