»   » ಪರಭಾಷಾ ನಿರ್ದೇಶಕರ ಪುನೀತ್ ಚಿತ್ರಗಳ ಕಥೆಯೇನು?

ಪರಭಾಷಾ ನಿರ್ದೇಶಕರ ಪುನೀತ್ ಚಿತ್ರಗಳ ಕಥೆಯೇನು?

Posted by:
Subscribe to Filmibeat Kannada

ಬಾಲನಟನಾಗಿ 1976ರಲ್ಲಿ ಬಣ್ಣದ ಲೋಕಕ್ಕೆ ಪ್ರವೇಶ ಮಾಡಿದ ಪುನೀತ್ ರಾಜಕುಮಾರ್ ಒಂದು ಲೆಕ್ಕದಲ್ಲಿ ನಿರ್ಮಾಪಕರ ನಟ. ಯಾಕೆಂದರೆ ಪುನೀತ್ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸೋತ ಉದಾಹರಣೆ (commercially) ಕಮ್ಮಿಯಾದರೂ, ಇತ್ತೀಚಿನ ಚಿತ್ರಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣುತ್ತಿಲ್ಲ ಎನ್ನುವುದು ಅಷ್ಟೇ ಸತ್ಯ.

ಕಾಲ್ ಶೀಟ್ ನೀಡುವ ಮುನ್ನ ಕಥೆಯ ವಿಚಾರದಲ್ಲಿ ಬಹಳ ಜಾಗರೂಕರಾಗಿರುವ ಪುನೀತ್ ಬಹಳಷ್ಟು ರಿಮೇಕ್ ಚಿತ್ರದಲ್ಲೂ ನಟಿಸಿದ್ದಾರೆ. ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಪುನೀತ್ ಚಿತ್ರವೆಂದರೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆ ಇರುವುದು ಸಹಜ. (ಸದ್ದಿಲ್ಲದೆ ನಡೀತಿದೆ ಪುನೀತ್ ಜೊತೆ ತ್ರಿಷಾ 'ದೂಕುಡು')

ಆದರೆ ಇತ್ತೀಚಿನ ಅವರ ಚಿತ್ರಗಳು ಅಭಿಮಾನಿಗಳ ನಿರೀಕ್ಷೆಯ ಮಟ್ಟವನ್ನು ಉಳಿಸಿ ಕೊಳ್ಳುವಲ್ಲಿ ಕೊಂಚ ಎಡವುತ್ತಿದೆ ಎನ್ನುವುದು ಅಭಿಮಾನಿಗಳಿಂದ ಕೇಳಿ ಬರುತ್ತಿರುವ ಮಾತು.

ಪುನೀತ್ ಇದುವರೆಗೆ ನಾಯಕ ನಟನಾಗಿ ನಟಿಸಿದ ಇಪ್ಪತ್ತು ಚಿತ್ರಗಳಲ್ಲಿ ಪರಭಾಷಾ ನಿರ್ದೇಶಕರಡಿಯಲ್ಲಿ ನಟಿಸಿದ ಚಿತ್ರಗಳು ಏಳು. ಆ ಏಳು ಚಿತ್ರಗಳ ಪೈಕಿ ಗೆದ್ದ ಚಿತ್ರಗಳು ಯಾವುವು? ಸೋತ ಚಿತ್ರಗಳಾವುವು? ಸ್ಲೈಡಿನಲ್ಲಿ

ಅಪ್ಪು

ಅಪ್ಪು

2002ರಲ್ಲಿ ಬಿಡುಗಡೆಯಾದ ಅಪ್ಪು ಚಿತ್ರದ ಮೂಲಕ ಪುನೀತ್ ರಾಜಕುಮಾರ್ ನಾಯಕ ನಟನಾಗಿ ಬೆಳ್ಳಿ ತೆರೆಗೆ ಪ್ರವೇಶಿಸಿದರು. ತೆಲುಗಿನ ಪೂರಿ ಜಗನ್ನಾಥ್ ನಿರ್ದೇಶನದ ಈ ಚಿತ್ರದಲ್ಲಿ ಪುನೀತ್ ಗೆ ನಾಯಕಿಯಾಗಿ ರಕ್ಷಿತಾ ಕಾಣಿಸಿ ಕೊಂಡಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿದ್ದಲ್ಲದೇ ತಮಿಳು ಮತ್ತು ಬೆಂಗಾಳಿ ಭಾಷೆಗೆ ರಿಮೇಕ್ ಆಗಿದ್ದವು.

ವೀರ ಕನ್ನಡಿಗ

ವೀರ ಕನ್ನಡಿಗ

2004ರಲ್ಲಿ ಬಿಡುಗಡೆಯಾದ ತೆಲುಗಿನ ಆಂಧ್ರವಾಲ ಚಿತ್ರದ ರಿಮೇಕ್. ತೆಲುಗಿನ ಮೆಹರ್ ರಮೇಶ್ ನಿರ್ದೇಶನದ ವೀರ ಕನ್ನಡಿಗ ಚಿತ್ರದಲ್ಲಿ ನಾಯಕಿಯಾಗಿ ನತಶಾ ಅಭಿನಯಿಸಿದ್ದರು. ಈ ಚಿತ್ರ ಎವರೇಜ್ ಹಿಟ್ ಆಗಿತ್ತು.

ನಮ್ಮ ಬಸವ

ನಮ್ಮ ಬಸವ

ವೀರ್ ಶಂಕರ್ ನಿರ್ದೇಶನದ ಈ ಚಿತ್ರ 2005ರಲ್ಲಿ ಬಿಡುಗಡೆಯಾಯಿತು. ಪುನೀತ್, ಗೌರಿ ಮುಂಜಾಲ್, ಅವಿನಾಶ್, ಸುಧಾರಾಣಿ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರ ಕೂಡಾ ಎವರೇಜ್ ಹಿಟ್ ಆಗಿತ್ತು.

ಅಜಯ್

ಅಜಯ್

ಮೆಹರ್ ನಿರ್ದೇಶನದ ಮತ್ತೊಂದು ಚಿತ್ರ. ತೆಲುಗಿನ ಒಕ್ಕಡು ಚಿತ್ರದ ರಿಮೇಕಾಗಿರುವ ಅಜಯ್ ಚಿತ್ರ 2006ರಲ್ಲಿ ಬಿಡುಗಡೆಯಾಗಿತ್ತು. ಪುನೀತ್, ಅನುರಾಧ ಮೆಹ್ತಾ, ಪ್ರಕಾಶ್ ರೈ ಪ್ರಮುಖ ತಾರಾಗಣದಲ್ಲಿರುವ ಈ ಚಿತ್ರವನ್ನು ಎವರೇಜ್ ಹಿಟ್ ಪಟ್ಟಿಯಲ್ಲಿ ಸೇರಿಸ ಬಹುದು.

ಪೃಥ್ವಿ

ಪೃಥ್ವಿ

ಜೇಕಬ್ ವರ್ಗೀಸ್ ನಿರ್ದೇಶನದ ಪೃಥ್ವಿ ಚಿತ್ರದಲ್ಲಿ ಪುನೀತ್ ಗೆ ನಾಯಕಿಯಾಗಿ ಪಾರ್ವತಿ ಮೆನನ್ ನಟಿಸಿದ್ದರು. 2010ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಹಿಟ್ ಪಟ್ಟಿಗೆ ಸೇರಿತ್ತು. (ಪೃಥ್ವಿ: ಬೆಳ್ಳಿಪರದೆಗೆ ಬಳ್ಳಾರಿ ಗಣಿ ರಾಜಕೀಯ)

ಯಾರೇ ಕೂಗಾಡಲಿ

ಯಾರೇ ಕೂಗಾಡಲಿ

ತಮಿಳಿನ ಸಮುದ್ರಖಣಿ ನಿರ್ದೇಶನದ ಈ ಚಿತ್ರ ತಮಿಳಿನ ಪೊರಾಲಿ ಚಿತ್ರದ ರಿಮೇಕ್. 2012ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಪುನೀತ್, ಭಾವನ, ಯೋಗೀಶ್, ಸಾಧುಕೋಕಿಲ ಇದ್ದರು. ಈ ಚಿತ್ರ ಎವರೇಜ್ ಹಿಟ್ ಆಗಿತ್ತು.
(ಯಾರೇ ಕೂಗಾಡಲಿ ವಿಮರ್ಶೆ)

ನಿನ್ನಿಂದಲೇ

ನಿನ್ನಿಂದಲೇ

ತೆಲುಗಿನ ಜಯಂತ್ ಪರಾಂಜೆ ನಿರ್ದೇಶನದ ಪುನೀತ್ ರಾಜಕುಮಾರ್ ಅವರ ಇತ್ತೀಚೆಗೆ ಬಿಡುಗಡೆಯಾದ ನಿನ್ನಿಂದಲೇ ಚಿತ್ರದಲ್ಲಿ ನಾಯಕಿಯಾಗಿ ಎರಿಕಾ ಫೆರ್ನಾಂಡಿಸ್ ನಟಿಸಿದ್ದಾರೆ. ಚಿತ್ರ ಮೊದಲ ಮೂರು ದಿನ ಉತ್ತಮ ಗಳಿಕೆ ಕಂಡಿದೆ.
(ನಿನ್ನಿಂದಲೇ ಚಿತ್ರ ವಿಮರ್ಶೆ)

English summary
Non Kannada directors for Puneeth Rajkumar movies and success rate. Puneeth has acted seven films so far under Non Kannada directors.
Please Wait while comments are loading...

Kannada Photos

Go to : More Photos