»   » ಬಿಗ್ ಬಾಸ್ ರಿಯಾಲಿಟಿ ಶೋಗೆ 'ನೋ' ಎಂದ ಕ್ವಾಟ್ಲೆ ಸತೀಶ

ಬಿಗ್ ಬಾಸ್ ರಿಯಾಲಿಟಿ ಶೋಗೆ 'ನೋ' ಎಂದ ಕ್ವಾಟ್ಲೆ ಸತೀಶ

Posted by:
Subscribe to Filmibeat Kannada

ಬಿಗ್ ಬಾಸ್ ಸೀಸನ್ 3ರಲ್ಲಿ ಯಾರ್ಯಾರಿರಲಿದ್ದಾರೆ? ಇದು ಸದ್ಯಕ್ಕೆ ಯಕ್ಷ ಪ್ರಶ್ನೆ. ಇದರಲ್ಲಿ ಭಾಗವಹಿಸಲು ಹಲವಾರು ಖಾಲಿ ಕುಳಿತವರ, ಸಿಕ್ಕಾಪಟ್ಟೆ ಬ್ಯುಸಿಯಾಗಿರುವವರ ಹೆಸರುಗಳು ಕೇಳಿಬಂದಿವೆ. ಅವರಲ್ಲಿ ರಕ್ಷಿತ್ ಶೆಟ್ಟಿ ಮತ್ತು ಜೆಕೆ 'ನೋ ಚಾನ್ಸ್' ಎಂದು ಹೇಳಿ ಸಸ್ಪೆನ್ಸಿಗೆ ಬ್ರೇಕ್ ಹಾಕಿದ್ದಾರೆ. ಈ ಇಬ್ಬರ ಜೊತೆ ಸೇರ್ಪಡೆಯಾಗಿರುವ ಮೂರನೇ ಹೆಸರೆಂದರೆ ಕ್ವಾಟ್ಲೆ ಸತೀಶ್ ಅವರದು.

ಜೊತೆಗೆ ಖಾಸಗಿ ಚಾನಲ್ ಕಲರ್ಸ್ ಕನ್ನಡದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿರುವ ಜನಮನ್ನಣೆ ಪಡೆದ ಬಿಗ್ ಬಾಸ್-3' ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಬಗ್ಗೆ ಭಾರಿ ಚರ್ಚೆಗಳು ನಡೆಯುತ್ತಿದೆ.['ಬಿಗ್ ಬಾಸ್-3'ಗೆ ಹೋಗೋದಿಲ್ವಂತೆ ಸುದೀಪ್ ಆಪ್ತ ಜೆ.ಕೆ]

ಇದೀಗ 'ಬಿಗ್ ಬಾಸ್-3' ರಿಯಾಲಿಟಿ ಶೋ ನಿಂದ ಬಂದಿರುವ ಇನ್ನೊಂದು ಲೇಟೆಸ್ಟ್ ಸುದ್ದಿಯ ಪ್ರಕಾರ ಸ್ಯಾಂಡಲ್ ವುಡ್ ನಟ 'ಲೂಸಿಯಾ' ನಾಯಕ ನಿನಾಸಂ ಸತೀಶ್ ಅವರು 'ಬಿಗ್ ಬಾಸ್-3' ಮನೆಗೆ ಎಂಟ್ರಿ ಕೊಡುತ್ತಾರ ಅನ್ನೋ ಪ್ರೇಕ್ಷಕರ ಪ್ರಶ್ನೆಗೆ ನಮ್ಮ ಕ್ವಾಟ್ಲೆ ಸತೀಶ್ ಅವರು ನೋ ಎಂದಿದ್ದಾರೆ.

ಬಿಗ್ ಬಾಸ್ 3ರ ರಿಯಾಲಿಟಿ ಶೋನ ಸ್ಪರ್ಧಿಗಳ ಪಟ್ಟಿಯನ್ನು ನಿಮ್ಮ 'ಫಿಲ್ಮಿಬೀಟ್ ಕನ್ನಡ' ಹೊರತಂದಿತ್ತು. ಆ ಪಟ್ಟಿಯಲ್ಲಿ ಸ್ಯಾಂಡಲ್ ವುಡ್ ನಟ ನಿನಾಸಂ ಸತೀಶ್ ಹೆಸರು ಕೂಡ ಇತ್ತು.[ಎಕ್ಸ್ ಕ್ಲೂಸಿವ್ : 'ಬಿಗ್ ಬಾಸ್-3'ನಲ್ಲಿ 'ಇವರೆಲ್ಲಾ' ಇರ್ತಾರೆ ಸ್ವಾಮಿ.!]

ಹೌದು ಸತೀಶ್ ನಿನಾಸಂ ಅವರು ಈ ಬಾರಿಯ 'ಬಿಗ್ ಬಾಸ್-3' ರಿಯಾಲಿಟಿ ಶೋ ನಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯಕ್ಕೆ ಬಿಡುಗಡೆಯಾಗಿರುವ ಸ್ಪರ್ಧಿಗಳ ಪಟ್ಟಿಯಲ್ಲಿ ನಿನಾಸಂ ಸತೀಶ್ ಅವರ ಹೆಸರಿದ್ದು, ಇದು ನಿಜವಲ್ಲ, ಬರೀ ರೂಮರ್ಸ್ ಅಷ್ಟೆ, ನಾನು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿಲ್ಲ ಎಂಬ ವಿಚಾರವನ್ನು ಸ್ವತಃ ಸತೀಶ್ ಅವರೇ ಬಹಿರಂಗಪಡಿಸಿದ್ದಾರೆ.

ನನಗೆ ನಟ ಕಿಚ್ಚ ಸುದೀಪ್ ಅವರ ಬಗ್ಗೆ ತುಂಬಾ ದೊಡ್ಡಮಟ್ಟದ ಗೌರವ ಇದೆ, ಆದರೆ ನಾನು ಈ ವರ್ಷದ 'ಬಿಗ್ ಬಾಸ್-3' ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ.[ಸೆನ್ಸೇಷನಲ್ ಸುದ್ದಿಯನ್ನು 'ಬಹಿರಂಗ' ಪಡಿಸಿದ ಕ್ವಾಟ್ಲೆ ಸತೀಶ]

ಈಗಾಗಲೇ ನಾನು ಕೆಲವಾರು ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿಯಾಗಿದ್ದೇನೆ ಮತ್ತು ಯಾವುದೇ ಶೋ ಗಳಲ್ಲಿ ಭಾಗವಹಿಸುವ ಬಗ್ಗೆ ನಾನಿನ್ನು ಯೋಚನೆ ಮಾಡಿಲ್ಲ ಆದ್ದರಿಂದ ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿಲ್ಲ, ಎಂದು ಕ್ವಾಟ್ಲೆ ಸತೀಶ್ ಅವರು ಸ್ಪಷ್ಟಪಡಿಸಿದ್ದಾರೆ.

ಸೂಪರ್ ಸ್ಟಾರ್ ಜೆ.ಕೆ ಹಾಗು ನಟ-ನಿರ್ದೇಶಕ ರಕ್ಷಿತ್ ಶೆಟ್ಟಿ ಅವರು ಬಿಗ್ ಬಾಸ್ ಮನೆ ಎಂಟ್ರಿಗೆ ನೋ ಎಂದ ಬೆನ್ನಲ್ಲೇ ಇದೀಗ ನಿನಾಸಂ ಸತೀಶ್ ಅವರ ಸರದಿ. ಇನ್ನು ಅದ್ಯಾರೆಲ್ಲಾ ಶೋ ನಲ್ಲಿ ಭಾಗವಹಿಸುತ್ತಾರೆ ಎಂದು ದ ಗ್ರೇಟ್ ಬಿಗ್ ಬಾಸ್ ಒಬ್ಬರಿಗೆ ಗೊತ್ತು ಸ್ವಾಮಿ.

English summary
Kannada actor Neenasam Sathish says the rumours that he is in 'Bigg Boss season 3' is not true. Sathish said "I have great respect for Sudeep. But I will never go inside the Bigg Boss house.
Please Wait while comments are loading...

Kannada Photos

Go to : More Photos