»   » ರಜನಿ 'ಲಿಂಗಾ' ಚಿತ್ರೀಕರಣಕ್ಕೆ ಶಿವಮೊಗ್ಗದಲ್ಲಿ ವಿರೋಧ

ರಜನಿ 'ಲಿಂಗಾ' ಚಿತ್ರೀಕರಣಕ್ಕೆ ಶಿವಮೊಗ್ಗದಲ್ಲಿ ವಿರೋಧ

Posted by:
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಅವರ 'ಲಿಂಗಾ' ಚಿತ್ರೀಕರಣ ರಾಜ್ಯದಲ್ಲಿ ಭರದಿಂದ ಸಾಗುತ್ತಿದೆ. ಇತ್ತೀಚೆಗೆ ಕೊಲ್ಲೂರಿನಲ್ಲೂ ಲಿಂಗಂ ಚಿತ್ರೀಕರಣ ನಡೆಯಿತು. ಕನ್ನಡದ ಧೀರ ನಿರ್ಮಾಪಕ ಎಂದೇ ಕರೆಸಿಕೊಂಡಿರುವ ರಾಕ್ ಲೈನ್ ವೆಂಕಟೇಶ್ ನಿರ್ಮಿಸುತ್ತಿರುವ ಅದ್ದೂರಿ ಚಿತ್ರ ಇದಾಗಿದೆ.

ಶಿವಮೊಗ್ಗ ಜಿಲ್ಲೆಯ ಲಿಂಗಮಕ್ಕಿ ಜಲವಿದ್ಯುತ್ ಉತ್ಪದನಾ ಕೇಂದ್ರವಾದ ಲಿಂಗನಮಕ್ಕಿ ಜಲಾಶಯದ ಬಳಿ ಲಿಂಗಾ ಚಿತ್ರೀಕರಣಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಈ ಸಂಬಂಧ ಶಿವಮೊಗ್ಗ ನಗರ ಪರಿಸರ ಪ್ರೇಮಿಗಳ ಒಕ್ಕೂಟ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಲಿಂಗನಮಕ್ಕಿ ಜಲಾಶಯದ ಬಳಿ ಲಿಂಗಾ ಚಿತ್ರೀಕರಣಕ್ಕೆ ಅವಕಾಶ ನೀಡಬಾರದು ಎಂದು ಖ್ಯಾತ ಸಾಹಿತಿ ನಾ.ಡಿಸೋಜಾ ಅವರೂ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದು ಅತಿ ಸೂಕ್ಷ್ಮ ಪರಿಸರವಾಗಿದ್ದು ಇದು ನಿರ್ಬಂಧಿತ ಪ್ರದೇಶವಾಗಿದೆ.

ಪ್ರವಾಸಿಗರು, ಸ್ಥಳೀಯರಿಗೆ ಪ್ರವೇಶ ನಿಷಿದ್ಧ

ಪ್ರವಾಸಿಗರು, ಸ್ಥಳೀಯರಿಗೆ ಪ್ರವೇಶ ನಿಷಿದ್ಧ

ಇಲ್ಲಿ ಪ್ರವಾಸಿಗರು ಹಾಗೂ ಸ್ಥಳೀಯರು ಪ್ರವೇಶಿಸುವಂತಿಲ್ಲ. ಇಲ್ಲಿ ಛಾಯಾಚಿತ್ರ, ವಿಡಿಯೋ ಚಿತ್ರೀಕರಣವನ್ನೂ ನಿಷೇಧಿಸಲಾಗಿದೆ. ಪರಿಸ್ಥಿತಿ ಹೀಗಿರಬೇಕಾದರೆ ರಜನಿಕಾಂತ್ ಲಿಂಗಾ ಚಿತ್ರೀಕರಣಕ್ಕೆ ಅನುಮತಿ ನೀಡಿರುವುದು ಸರಿಯಲ್ಲ ಎಂದಿದ್ದಾರೆ ಡಿಸೋಜಾ.

ಚಿತ್ರೀಕರಣಕ್ಕೆ ಅವಕಾಶ ನೀಡಬಾರದು ಎಂಬ ಒತ್ತಾಯ

ಚಿತ್ರೀಕರಣಕ್ಕೆ ಅವಕಾಶ ನೀಡಬಾರದು ಎಂಬ ಒತ್ತಾಯ

ರಾಜ್ಯ ಸರ್ಕಾರ ಪುನರ್ ಪರಿಶೀಲಿಸಿ ಚಿತ್ರೀಕರಣಕ್ಕೆ ಅವಕಾಶ ನೀಡಬಾರದು ಎಂದು ಅವರು ಒತ್ತಾಯಿಸಿದ್ದಾರೆ. ಕೆ.ಎಸ್.ರವಿಕುಮಾರ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದ್ದು ಅನುಷ್ಕಾ ಶೆಟ್ಟಿ ಹಾಗೂ ಸೋನಾಕ್ಷಿ ಸಿನ್ಹಾ ಚಿತ್ರದ ನಾಯಕಿಯರು.

ತೀರ್ಥಹಳ್ಳಿ, ಜೋಗ ಜಲಪಾತ ಬಳಿಯೂ ಶೂಟಿಂಗ್

ತೀರ್ಥಹಳ್ಳಿ, ಜೋಗ ಜಲಪಾತ ಬಳಿಯೂ ಶೂಟಿಂಗ್

ಎ.ಆರ್.ರೆಹಮಾನ್ ಅವರ ಸಂಗೀತ ಚಿತ್ರಕ್ಕಿದೆ. ಲಿಂಗಾ ಚಿತ್ರವನ್ನು ರಾಜ್ಯದಲ್ಲಿ ತೀರ್ಥಹಳ್ಳಿ, ಜೋಗ ಜಲಪಾತ ಬಳಿಯೂ ಚಿತ್ರೀಕರಿಸಿರುವುದು ವಿಶೇಷ.

ರಜನಿಕಾಂತ್ ಹುಟ್ಟುಹಬ್ಬಕ್ಕೆ ಚಿತ್ರ ಬಿಡುಗಡೆ

ರಜನಿಕಾಂತ್ ಹುಟ್ಟುಹಬ್ಬಕ್ಕೆ ಚಿತ್ರ ಬಿಡುಗಡೆ

ದೀಪಾವಳಿ ಹಬ್ಬಕ್ಕೆ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಚಿತ್ರವನ್ನು ಡಿಸೆಂಬರ್ 12, 2014ಕ್ಕೆ ರಜನಿಕಾಂತ್ ಹುಟ್ಟುಹಬ್ಬಕ್ಕೆ ಬಿಡುಗಡೆ ಮಾಡಲು ರಾಕ್ ಲೈನ್ ವೆಂಕಟೇಶ್ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಇಷ್ಟಕ್ಕೂ ರಜನಿಕಾಂತ್ ಪಾತ್ರವೇನು?

ಇಷ್ಟಕ್ಕೂ ರಜನಿಕಾಂತ್ ಪಾತ್ರವೇನು?

ಮೂಲಗಳ ಪ್ರಕಾರ ರಜನಿಕಾಂತ್ ಅವರು ಚಿತ್ರದಲ್ಲಿ ಜಿಲ್ಲಾಧಿಕಾರಿ ಪಾತ್ರ ಪೋಷಿಸುತಿದ್ದಾರೆ ಎನ್ನಲಾಗಿದೆ.

English summary
Shimoga environmentalists and novelist, writer Na D'Souza objects over Rajinikanth's Lingaa movie shooting at Linganamakki Dam premises. Because the area is ecologically sensitive zone restricting for photography and videography.
Please Wait while comments are loading...

Kannada Photos

Go to : More Photos