»   » 'ಫೇಸ್ ಬುಕ್'ನಲ್ಲಿ ಅಪ್ಪು-ದಚ್ಚು ಅಭಿಮಾನಿಗಳ ಅಚ್ಚು-ರಚ್ಚು

'ಫೇಸ್ ಬುಕ್'ನಲ್ಲಿ ಅಪ್ಪು-ದಚ್ಚು ಅಭಿಮಾನಿಗಳ ಅಚ್ಚು-ರಚ್ಚು

Written by: ಹರಾ
Subscribe to Filmibeat Kannada

ರಿಯಲ್ ಲೈಫ್ ನಲ್ಲಿ ಎಲ್ಲಾ ಸ್ಟಾರ್ ಗಳು ಚೆನ್ನಾಗಿರುತ್ತಾರೆ. ಇಷ್ಟ ಇರಲಿ, ಬಿಡಲಿ ಸೆಲೆಬ್ರಿಟಿಗಳು ಮುಖಾಮುಖಿ ಆದಾಗ ಕನಿಷ್ಠ ಒಂದು ಸ್ಮೈಲ್ ಕೊಟ್ಟೇ ಕೊಡುತ್ತಾರೆ. ಆದ್ರೆ, ಅವರನ್ನ ಆರಾಧಿಸುವ ಅಭಿಮಾನಿಗಳಿಗೆ ತುಸು ಪೊಸೆಸ್ಸಿವ್ನೆಸ್ ಹೆಚ್ಚು.

ತಮ್ಮ ಫೇವರಿಟ್ ಸ್ಟಾರ್ 'ಯಾರಿಗೂ ಕಮ್ಮಿ ಇಲ್ಲ', ಅಂತ ಇತರರ ಬಳಿ ಸಮರ ನಡೆಸುವುದಕ್ಕೂ ನಮ್ಮ 'ಸ್ಟಾರ್' ಅಭಿಮಾನಿಗಳು ಹಿಂದೆ ಬೀಳುವುದಿಲ್ಲ. ಅಭಿಮಾನಿಗಳ ಇಂತಹ ಯುದ್ಧಕ್ಕೆ ಅಖಾಡ ಕಲ್ಪಿಸಿರುವುದು ಸಾಮಾಜಿಕ ಜಾಲತಾಣಗಳಾಗಿರುವಂತಹ 'ಫೇಸ್ ಬುಕ್' ಮತ್ತು 'ಟ್ವಿಟ್ಟರ್'.

P Company v/s D Company in Facebook

ಈಗಾಗ್ಲೇ ಅನೇಕ ಬಾರಿ 'ಫೇಸ್ ಬುಕ್'ನಲ್ಲಿ ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಮಾನಿಗಳು ವಾಕ್ಸಮರ ನಡೆಸಿದ್ದಾರೆ. ಅದು ಎಲ್ಲರಿಗೂ ಗೊತ್ತು.

ಇದೀಗ ಸಮರ ಬಿಟ್ಟು, ಅಭಿಮಾನಿ ಬಳಗ ರೇಸ್ ಗೆ ಇಳಿದಿವೆ ಅಷ್ಟೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಧಿಕೃತ ಅಭಿಮಾನಿ ಬಳಗ 'ಡಿ' ಕಂಪನಿ ಕೆಲ ವರ್ಷಗಳಿಂದ ಚಾಲ್ತಿಯಲ್ಲಿದೆ. 'ಫೇಸ್ ಬುಕ್' ಮತ್ತು 'ಟ್ವಿಟ್ಟರ್' ನಲ್ಲಿ ದರ್ಶನ್ ಚಿತ್ರಗಳ ಎಲ್ಲಾ ಅಪ್ ಡೇಟ್ ಗಳನ್ನ 'ಡಿ' ಕಂಪನಿ ಕೊಡುತ್ತಿದೆ. ['ಡಿ' ಕಂಪನಿ]

'ಫೇಸ್ ಬುಕ್' ನಲ್ಲಿ 'ಡಿ' ಕಂಪನಿಯನ್ನ ನಲವತ್ತು ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿ ಫಾಲೋ ಮಾಡ್ತಿದ್ದಾರೆ. ಇದೀಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗ 'ಪಿ' ಕಂಪನಿ ಅನ್ನುವ ಹೆಸರಲ್ಲಿ 'ಫೇಸ್ ಬುಕ್'ನಲ್ಲಿ ಖಾತೆ ತೆರೆದಿದೆ. [ಸಿಸಿಎಲ್ ನಲ್ಲಿ ಮುಂದುವರಿದ ಸ್ಯಾಂಡಲ್ ವುಡ್ ಗುಂಪುಗಾರಿಕೆ?]

ಕೆಲ ದಿನಗಳ ಹಿಂದೆಯಷ್ಟೆ ಚಾಲನೆ ಪಡೆದು ಕೊಂಡಿರುವ 'ಪಿ' ಕಂಪನಿಗೆ ದಿನದಿಂದ ದಿನಕ್ಕೆ ಲೈಕ್ಸ್ ಮತ್ತು ಫಾಲೋವರ್ಸ್ ಹೆಚ್ಚಾಗುತ್ತಿದ್ದಾರೆ. 'ಪಿ' ಕಂಪನಿ ಕೂಡ ಅಪ್ಪು ಚಿತ್ರಗಳಿಗೆ ಪ್ರಚಾರ ನೀಡುವ ಕೆಲಸ ಮಾಡುತ್ತಿದೆ. ಅಲ್ಲದೆ, ಪುನೀತ್ 'ಅಧಿಕೃತ' ಅಭಿಮಾನಿ ಸಂಘ ಅಂತಲೂ 'ಪಿ' (ಪವರ್) ಕಂಪನಿ ಹೇಳಿಕೊಂಡಿದೆ. ['ಪಿ' ಕಂಪನಿ]

ಎಲ್ಲಾ ಸ್ಟಾರ್ ಗಳಿಗೂ ಅವರದ್ದೇ ಅಭಿಮಾನಿ ಬಳಗ ಇರುವುದು ಸಹಜ. ಆದ್ರೆ 'ಕಂಪನಿ'ಗಳ ಹೆಸರಲ್ಲಿ ಅಭಿಮಾನಿಗಳು ರೇಸ್ ಗೆ ಇಳಿದಿರುವಂತಿದೆ. ಆರೋಗ್ಯಕರ ರೇಸ್ ಆಗಿದ್ದರೆ, ಎಲ್ಲಾ ಸ್ಟಾರ್ ಗಳು 'ಕ್ವಾಲಿಟಿ' ಸಿನಿಮಾಗಳನ್ನ ನೀಡುವುದರಲ್ಲಿ ಡೌಟ್ ಇಲ್ಲ.

English summary
Power Star Puneeth Rajkumar's Fans Association have created Official Fan Page of Puneeth Rajkumar as 'P' Company. Similarly, Darshan Fans have Official Fan Page called 'D' Company.
Please Wait while comments are loading...

Kannada Photos

Go to : More Photos