»   » 'ಬಾಹುಬಲಿ 2' ಕನ್ನಡದ ಡಬ್ಬಿಂಗ್ ಬೇಡಿಕೆಗೆ ಜನರ ಪ್ರತಿಕ್ರಿಯೆ..!

'ಬಾಹುಬಲಿ 2' ಕನ್ನಡದ ಡಬ್ಬಿಂಗ್ ಬೇಡಿಕೆಗೆ ಜನರ ಪ್ರತಿಕ್ರಿಯೆ..!

Posted by:
Subscribe to Filmibeat Kannada
ಕನ್ನಡ ಗ್ರಾಹಕರ ಕೂಟ ನೆನ್ನೆ(ಫೆ.16) 'ಬಾಹುಬಲಿ 2 ಕನ್ನಡ ಕ್ಕೆ ಡಬ್ ಆಗಿ ಬರಲಿ' ಎಂಬ ಟ್ವಿಟರ್ ಅಭಿಯಾನ ಕೈಗೊಂಡಿತ್ತು. ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ 2' ಚಿತ್ರ ಕನ್ನಡಕ್ಕೆ ಡಬ್ ಆಗಲು ದನಿಗೂಡಿಸಿ ಎಂದು ಕೇಳಿದ್ದ, 'ಕನ್ನಡ ಗ್ರಾಹಕರ ಕೂಟ' ದ ಸದಸ್ಯರಿಗೆ ಈಗ ಟ್ವಿಟರ್ ನಲ್ಲಿ ಉತ್ತರ ಸಿಕ್ಕಿದೆ.[ಇಂದು(ಫೆ.16) 'ಬಾಹುಬಲಿ 2 ಕನ್ನಡಕ್ಕೆ ಡಬ್ ಆಗಲಿ' ಟ್ವಿಟರ್ ಅಭಿಯಾನ]

'ಬಾಹುಬಲಿ 2' ಕರ್ನಾಟಕದಲ್ಲಿ ರಿಲೀಸ್ ಆದರೆ ತೆಲುಗು, ಹಿಂದಿ, ತಮಿಳು ಭಾಷೆಗಳಲ್ಲಿ ಚಿತ್ರ ನೋಡಲು ಆಯ್ಕೆ ಇರುತ್ತಿತ್ತು. ಆದರೆ ಕರ್ನಾಟಕದ ಜನತೆಗೆ ತಮ್ಮ ಭಾಷೆಯಲ್ಲಿ ಚಿತ್ರ ನೋಡುವ ಅವಕಾಶ ಸಿಗುತ್ತಿರಲಿಲ್ಲ. ಈ ದೃಷ್ಟಿಯಿಂದ ಕನ್ನಡಿಗರು 'ಬಾಹುಬಲಿ 2 ಕನ್ನಡ ಕ್ಕೆ ಡಬ್ ಆಗಿ ಬರಲಿ' ಟ್ವಿಟರ್ ಅಭಿಯಾನಕ್ಕೆ ಹೇಗೆ ಪ್ರತಿಕ್ರಿಯಿಸಿದ್ದಾರೆ ನೋಡಿ...

ಪರಭಾಷೆ ಸಿನಿಮಾಗಳು ಕನ್ನಡದಲ್ಲಿ ಬೇಕು

ಪರಭಾಷೆ ಸಿನಿಮಾಗಳು ಕನ್ನಡದಲ್ಲಿ ಬೇಕು

'ಇತರೆ ಭಾಷೆ ಸಿನಿಮಾಗಳು ಕನ್ನಡದಲ್ಲಿ ಬಂದಾಗ ಮಾತ್ರ ಕನ್ನಡಿಗರು ಚಿತ್ರಮಂದಿರಗಳಲ್ಲಿ ಹೆಚ್ಚಾಗಿ ಸಿನಿಮಾ ನೋಡುತ್ತಾರೆ. ಆದ್ದರಿಂದ ಕರ್ನಾಟಕ ಚಿತ್ರಮಂದಿರಗಳ ಹಣಕಾಸಿನ ವ್ಯವಸ್ಥೆಗೆ ಕನ್ನಡಿಗರು ಬೇಕು ಎಂದಾದಲ್ಲಿ, ಪರಭಾಷೆ ಸಿನಿಮಾಗಳು ಕನ್ನಡದಲ್ಲಿ ಬೇಕು'.- ಕಾರ್ತಿಕ್

ಕನ್ನಡ ಡಬ್ಬಿಂಗ್ ಗೆ ಕನ್ನಡ ಕಲಾವಿದರನ್ನು ಬಳಸಲಿ

ಕನ್ನಡ ಡಬ್ಬಿಂಗ್ ಗೆ ಕನ್ನಡ ಕಲಾವಿದರನ್ನು ಬಳಸಲಿ

'ಬಾಹುಬಲಿ 2 ಚಿತ್ರದ ಕನ್ನಡ ಡಬ್ಬಿಂಗ್ ಗೆ ಕನ್ನಡ ಕಲಾವಿದರನ್ನು ಬಳಸಿ. ಇದರಿಂದ ಚಿತ್ರದ ಉತ್ತಮ ಗುಣಮಟ್ಟ ಕಾಪಾಡಬಹುದು. ಡಬ್ಬಿಂಗ್ ಬಂದರು ಕಳಪೆ ಆಗದಂತೆ ನಿರ್ಬಂಧನೆ ವಿಧಿಸಬೇಕು', -ಹ್ಯಾಟ್ರಿಕ್ ಹೀರೋ ಬೆಂಗಳೂರು ಫ್ಯಾನ್ಸ್

ಪರಭಾಷಿಕರು ಕನ್ನಡ ಮಾತನಾಡಲಿ

ಪರಭಾಷಿಕರು ಕನ್ನಡ ಮಾತನಾಡಲಿ

' ಬಾಹುಬಲಿ 2 ಕನ್ನಡಕ್ಕೆ ಡಬ್ ಆಗುವುದಕ್ಕೆ ನಮ್ಮ ಸಪೋರ್ಟ್ ಸಹ ಇದೆ. ಪರಭಾಷಾ ಚಿತ್ರಗಳು ಡಬ್ ಆಗಿಯೇ ಬರಲಿ. ರಿಮೇಕ್ ನಿಲ್ಲಲಿ. ಪರಭಾಷಿಕರು ಕನ್ನಡ ಮಾತಾಡಲಿ', - ಮೈತ್ರಿ ಎಸ್ ಪ್ರಕಾಶ್

ಡಬ್ಬಿಂಗ್ ನಿಂದ ಯಾವುದೇ ನಷ್ಟವಿಲ್ಲ

ಡಬ್ಬಿಂಗ್ ನಿಂದ ಯಾವುದೇ ನಷ್ಟವಿಲ್ಲ

'ಎಲ್ಲದರಲ್ಲೂ ಲಾಭ ನಷ್ಟ ಇದ್ದೇ ಇರುತ್ತೆ. ಗ್ರಾಹಕರು ಯಾವುದು ಬೇಕೋ ಅದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಡಬ್ಬಿಂಗ್ ನಿಂದ ಯಾವುದೇ ಲಾಸ್ ಆಗುವುದಿಲ್ಲ. ಬಾಹುಬಲಿ ಅಂತಹ ಎಪಿಕ್ ಸಿನಿಮಾಗಳು ಮಾಸ್ ಆಡಿಯನ್ಸ್ ತಲುಪಬೇಕು. ನನ್ನ ಸಂಪೂರ್ಣ ಸಪೋರ್ಟ್ ಇದೆ', -ಕೆಂಡಸಂಪಿಗೆ

ಕಿಚ್ಚ ಸರ್ ರಾಜಮೌಳಿ ಜೊತೆ ಮಾತಾಡಿ

ಕಿಚ್ಚ ಸರ್ ರಾಜಮೌಳಿ ಜೊತೆ ಮಾತಾಡಿ

''ಬಾಹುಬಲಿ 2' ಚಿತ್ರದ ಕನ್ನಡ ಡಬ್ಬಿಂಗ್ ಗೆ ಹೆಚ್ಚು ಬೇಡಿಕೆ ಇದೆ. ಸುದೀಪ್ ಸರ್, ರಾಜಮೌಳಿ ಜೊತೆ ಮಾತಾಡಿ ಕನ್ನಡಿಗರ ಬೇಡಿಕೆಯನ್ನು ಅವರಲ್ಲಿ ಕನ್ವಿನ್ಸ್ ಮಾಡಿ',-ಭಿಮೇಶ ರಾವ್ ಎನ್ ಪಿ

ಡಬ್ಬಿಂಗ್ ಒರಿಜಿನಲ್ ಚಿತ್ರದ ರೀತಿ ಇರೊಲ್ಲ

ಡಬ್ಬಿಂಗ್ ಒರಿಜಿನಲ್ ಚಿತ್ರದ ರೀತಿ ಇರೊಲ್ಲ

' ಇತರೆ ಭಾಷೆ ಸಿನಿಮಾಗಳ ಡಬ್ಬಿಂಗ್ ಅವತರಣಿಕೆ ನೋಡುವುದು, ಒರಿಜಿನಲ್ ಸಿನಿಮಾ ರೀತಿ ಫೀಲ್ ಕೊಡುವುದಿಲ್ಲ. ಆದರೆ ಉತ್ತಮವಾಗಿ ಡಬ್ ಮಾಡಿದಲ್ಲಿ ಸುಲಭವಾಗಿ ಎಂಜಾಯ್ ಮಾಡಬಹುದು. 'ಬಾಹುಬಲಿ 2' ಕನ್ನಡ ಡಬ್ಬಿಂಗ್ ಗೆ ನಮ್ಮ ಬೆಂಬಲ ಇದೆ', - ಅನುಶ್ರೀ

ಕನ್ನಡ ಎಲ್ಲಿದೆ ನೋಡಿ

ಕನ್ನಡ ಎಲ್ಲಿದೆ ನೋಡಿ

'ಕಳೆದ ವರ್ಷ 'ಬಾಹುಬಲಿ' ಚಿತ್ರ ಕರ್ನಾಟಕದಲ್ಲಿ ರಿಲೀಸ್ ಆಗಿತ್ತು. ಆದರೆ ಕನ್ನಡಿಗರಿಗೆ ಸಿನಿಮಾ ನೋಡಲು ಅವರ ಭಾಷೆ ಆಯ್ಕೆಗೆ ಅವಕಾಶವೇ ಇರಲಿಲ್ಲ. ಈಗಲಾದರೂ ಇದು ನಿಲ್ಲಲ್ಲಿ. ನಮಗೆ 'ಬಾಹುಬಲಿ 2' ಕನ್ನಡದಲ್ಲಿ ಬೇಕು', - ಹರಿಪ್ರಸಾದ್ ಹೊಳ್ಳ

ರಿಮೇಕ್ ಬದಲು ಡಬ್ ಸಿನಿಮಾ ಬೇಕು

ರಿಮೇಕ್ ಬದಲು ಡಬ್ ಸಿನಿಮಾ ಬೇಕು

' ರಿಮೇಕ್ ಸಿನಿಮಾ ಗಳ ಬದಲಾಗಿ ನಾವು ಕನ್ನಡದಲ್ಲಿ ಸಿನಿಮಾಗಳನ್ನು ನೋಡಲು ಬಯಸುತ್ತೇವೆ. 'ಬಾಹುಬಲಿ 2' ಸಿನಿಮಾ ಕನ್ನಡಕ್ಕೆ ಡಬ್ ಆಗಲಿ', -ನಿಶ್ಚಲ್ ರಾವ್

ಪ್ಲೀಸ್ ಕನ್ನಡಕ್ಕೆ ಡಬ್ ಮಾಡಿ

ಪ್ಲೀಸ್ ಕನ್ನಡಕ್ಕೆ ಡಬ್ ಮಾಡಿ

'ಕರ್ನಾಟಕದಲ್ಲಿ 'ಬಾಹುಬಲಿ 2' ಚಿತ್ರವನ್ನು ಕನ್ನಡದಲ್ಲಿ ನೋಡಲು ಹಲವರು ಕಾಯುತ್ತಿದ್ದಾರೆ. ರಾಜಮೌಳಿ ಸರ್ ದಯವಿಟ್ಟು ಕನ್ನಡಕ್ಕೆ ಡಬ್ ಮಾಡಿ',- ನವನೀತ್ ಗೌಡ

ಒಳ್ಳೆಯ ನಿರ್ಧಾರ

ಒಳ್ಳೆಯ ನಿರ್ಧಾರ

' 'ಬಾಹುಬಲಿ 2' ಕನ್ನಡದಲ್ಲಿ ಡಬ್ಬಿಂಗ್ ಆಗಿ ಬರುವುದು ಉತ್ತಮ. ಇಂತಹ ಗ್ರೇಟ್ ಸಿನಿಮಾವನ್ನು ನಮ್ಮ ಭಾಷೆಯಲ್ಲಿ ನೋಡಲು ಕಾಯುತ್ತಿದ್ದೇವೆ', - ಸಿ ಎಸ್ ವೆಂಕಿ ರಜಾವತ್

English summary
Description: Kannada Grahara Koota had conducted 'Baahubali 2 dubbing in kannada' A twitter campaign Yesterday. Heres is Kannada People Feedback to twitter campaign.
Please Wait while comments are loading...

Kannada Photos

Go to : More Photos