»   » ರಾಹು ಕೇತು ಕಾಟ ತಪ್ಪಿಸಿಕೊಂಡ ಕಾಜಲ್

ರಾಹು ಕೇತು ಕಾಟ ತಪ್ಪಿಸಿಕೊಂಡ ಕಾಜಲ್

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲೂ ಕಾಣಿಸಿಕೊಂಡ ಕಾಜಲ್ ಅಗರವಾಲ್ ಅವರಿಗೆ ತುಂಬಾ ದಿನದಿಂದ ಕಾಡುತ್ತಿದ್ದ ರಾಹು -ಕೇತುಗಳಿಗೆ ದಿಗ್ಬಂಧನ ಹಾಕಲಾಗಿದೆಯಂತೆ. ರಾಹು ಕೇತುಗಳಿಗೆ ಶಾಂತಿ ಮಾಡಿರುವುದರಿಂದ ನಟಿ ಕಾಜಲ್ ಅವರ ವೃತ್ತಿ ಬದುಕಿನಲ್ಲಿ ಒಳ್ಳೆ ದಿನಗಳು ಬರಲಿವೆಯಂತೆ.

ರಾಮ್ ಚರಣ್ ತೇಜ ಜತೆ ಕೃಷ್ಣವಂಶಿ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿರುವ ಬೆಡಗಿ ಚಿತ್ರೀಕರಣದ ನಡುವೆ ಆಂಧ್ರಪದೇಶದ ಕಾಳಹಸ್ತಿಯಲ್ಲಿರುವ ಶ್ರೀಕಾಳಹಸ್ತೇಶ್ವರ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿಬಂದಿದ್ದಾರೆ. ಕಾಜಲ್ ಅಗರವಾಲ್ ಜತೆಗೆ ಅವರ ತಂದೆ, ತಾಯಿ ಹಾಗೂ ಕುಟುಂಬ ವರ್ಗ ಕೂಡಾ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಬೆಳಗ್ಗೆ 10 ಗಂಟೆಗೆ ಆಗಮಿಸಿದ ಕಾಜಲ್ ಅವರ ಕುಟುಂಬ ರಾಹು ಹಾಗೂ ಕೇತು ಗಳಿಗೆ ಪೂಜೆ ಸಲ್ಲಿಸಿದರು, ಎಳನೀರು ಅಭಿಷೇಕ ಮಾಡಿ, ಹೂ ಅರ್ಪಿಸಿ ಕೈ ಮುಗಿದುಕೊಂಡು ಕುಳಿತಿದ್ದರು. ನಂತರ ಅನಂತರಾಮ ಸ್ವಾಮಿ ದರ್ಶನ ಪಡೆದು ಪಂಡಿತರು, ವಿಪ್ರೋತ್ತಮರಿಂದ ಆಶೀರ್ವಾದ ಪಡೆದರು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.

ಎಂದಿನಂತೆ ಜನಪ್ರಿಯ ನಟಿ ದೇಗುಲದ ಬಳಿ ಕಾಲಿಡುತ್ತಿದ್ದಂತೆ ಸ್ಥಳೀಯ ಅಭಿಮಾನಿಗಳು ದೇಗುಲದತ್ತ ಮುನ್ನುಗ್ಗಿದ್ದಾರೆ. ಅನೇಕ ಭಕ್ತಾದಿಗಳು ದೇವರನ್ನು ಕ್ಷಣಕಾಲ ಮರೆತು ಅರಾಧ್ಯದೇವತೆಯತ್ತ ತಿರುಗಿದ್ದಾರೆ. ಕೆಲವರು ಕ್ಯೂ ಬಿಟ್ಟು ಕದಲದೆ ನಿಂತರೆ ಮತ್ತೆ ಕೆಲವರು ಕಾಜಲ್ ಹತ್ತಿರ ಹೋಗಿ ಆಟೋಗ್ರಾಫ್ ಪಡೆದು ಧನ್ಯತೆ ಅನುಭವಿಸಿದ್ದಾರೆ.

ಶ್ರೀಕಾಳಹಸ್ತಿ ದೇಗುಲದಲ್ಲಿ ನಟಿ ಕಾಜಲ್
  

ಶ್ರೀಕಾಳಹಸ್ತಿ ದೇಗುಲದಲ್ಲಿ ನಟಿ ಕಾಜಲ್

ಬೆಳಗ್ಗೆ 10 ಗಂಟೆಗೆ ಆಗಮಿಸಿದ ಕಾಜಲ್ ಅವರ ಕುಟುಂಬ ರಾಹು ಹಾಗೂ ಕೇತು ಗಳಿಗೆ ಪೂಜೆ ಸಲ್ಲಿಸಿದರು, ಎಳನೀರು ಅಭಿಷೇಕ ಮಾಡಿ, ಹೂ ಅರ್ಪಿಸಿ ಕೈ ಮುಗಿದುಕೊಂಡು ಕುಳಿತಿದ್ದರು.

ಪೋಷಕರ ಜತೆ ಶ್ರೀಕಾಳಹಸ್ತಿಯಲ್ಲಿ ಕಾಜಲ್
  

ಪೋಷಕರ ಜತೆ ಶ್ರೀಕಾಳಹಸ್ತಿಯಲ್ಲಿ ಕಾಜಲ್

ರಾಹು ಕೇತು ಪೂಜೆ ನಂತರ ಅನಂತರಾಮ ಸ್ವಾಮಿ ದರ್ಶನ ಪಡೆದು ಪಂಡಿತರು, ವಿಪ್ರೋತ್ತಮರಿಂದ ಆಶೀರ್ವಾದ ಪಡೆದರು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.

ಶ್ರೀಕಾಳಹಸ್ತಿಯಲ್ಲಿ ಕಾಜಲ್ ಗೆ ಅಭಿಮಾನಿಗಳ ಕಾಟ
  

ಶ್ರೀಕಾಳಹಸ್ತಿಯಲ್ಲಿ ಕಾಜಲ್ ಗೆ ಅಭಿಮಾನಿಗಳ ಕಾಟ

ಜನಪ್ರಿಯ ನಟಿ ದೇಗುಲದ ಬಳಿ ಕಾಲಿಡುತ್ತಿದ್ದಂತೆ ಸ್ಥಳೀಯ ಅಭಿಮಾನಿಗಳು ದೇಗುಲದತ್ತ ಮುನ್ನುಗ್ಗಿದ್ದಾರೆ. ಅನೇಕ ಭಕ್ತಾದಿಗಳು ದೇವರನ್ನು ಕ್ಷಣಕಾಲ ಮರೆತು ಅರಾಧ್ಯದೇವತೆಯತ್ತ ತಿರುಗಿದ್ದಾರೆ. ಕೆಲವರು ಕ್ಯೂ ಬಿಟ್ಟು ಕದಲದೆ ನಿಂತರೆ ಮತ್ತೆ ಕೆಲವರು ಕಾಜಲ್ ಹತ್ತಿರ ಹೋಗಿ ಆಟೋಗ್ರಾಫ್ ಪಡೆದು ಧನ್ಯತೆ ಅನುಭವಿಸಿದ್ದಾರೆ.

ಅಭಿಮಾನಿಗಳತ್ತ ಕೈ ಬೀಸಿದ ನಗೆ ಬೀರಿದ ಕಾಜಲ್
  

ಅಭಿಮಾನಿಗಳತ್ತ ಕೈ ಬೀಸಿದ ನಗೆ ಬೀರಿದ ಕಾಜಲ್

ಅಭಿಮಾನಿಗಳತ್ತ ಕೈ ಬೀಸಿದ ನಗೆ ಬೀರಿದ ಕಾಜಲ್ ತನ್ನ ಅಭಿಮಾನಿಗಳಿಗೆ ಆಟೋಗ್ರಾಫ್ ನೀಡದೆ ದೇಗುಲದ ಒಳ ಹೊಕ್ಕಿದ್ದಾರೆ. ದೇಗುಲದಲ್ಲಿ ಇದೆಲ್ಲ ಬಿಡ ಮತ್ತೆ ಸಿಗುತ್ತೇನೆ ಇರಿ ಎಂದು ಹೊರಟು ಬಿಟ್ಟಿದ್ದಾರೆ. ಆಟೋಗ್ರಾಫ್ ಸಿಕ್ಕ ಒಂದಿಬ್ಬರು ಸ್ವರ್ಗದಲ್ಲಿ ತೇಲಾಡಿದ ಅನುಭವ ಪಡೆದಿದ್ದಾರೆ.

ಗೆಲುವಿನ ಟ್ರ್ಯಾಕ್ ಗೆ ಮರಳುತ್ತಿರುವ ಕಾಜಲ್
  

ಗೆಲುವಿನ ಟ್ರ್ಯಾಕ್ ಗೆ ಮರಳುತ್ತಿರುವ ಕಾಜಲ್

ಎವಡು ಚಿತ್ರದ ಯಶಸ್ಸಿನ ನಂತರ ಮತ್ತೊಮ್ಮೆ ರಾಮ್ ಚರಣ್ ತೇಜ ಜತೆ ನಟಿಸುತ್ತಿರುವ ಕಾಜಲ್ ಅವರು ಮತ್ತೆ ಗೆಲುವಿನ ಟ್ರ್ಯಾಕ್ ಗೆ ಮರಳುತ್ತಿದ್ದಾರೆ.

ಕಾಜಲ್ ಅವರ ತಾಯಿ ಸುಮನ್ ಅಗರವಾಲ್ ಹಾಗೂ ತಂದೆ ವಿನಯ್ ಅಗರವಾಲ್ ಅವರು ಮಗಳ ಏಳಿಗೆಗಾಗಿ ಪ್ರಾರ್ಥಿಸಿದರು.

English summary
Actress Kajal Aggarwal, who is shooting with Ram Charan Teja for director Krishna Vamsi's untitled project, recently took some time from her busy schedule to visit Srikalahastishwara Temple in Kalahasti
Please Wait while comments are loading...

Kannada Photos

Go to : More Photos