»   » ಭೀಕರ ಅಪಘಾತಕ್ಕೀಡಾದ ನಟ ನಾಸರ್ ಮಗ

ಭೀಕರ ಅಪಘಾತಕ್ಕೀಡಾದ ನಟ ನಾಸರ್ ಮಗ

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಪ್ರತಿಭಾವಂತ ನಟ ನಾಸರ್ ಅವರ ಪುತ್ರ ಫೈಜಲ್ ಭೀಕರ ರಸ್ತೆ ಅಪಘಾತಕ್ಕೀಡಾಗಿದ್ದಾರೆ. ಗುರುವಾರ ಬೆಳಗ್ಗೆ ಮಹಾಬಲಿಪುರಂ ಬಳಿ ಮೂವರನ್ನು ಬಲಿ ತೆಗೆದುಕೊಂಡ ದುರಂತದಲ್ಲಿ ಫೈಜಲ್ ಅವರು ಬಚಾವಾದರೂ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಾ ಆಸ್ಪತ್ರೆ ಸೇರಿದ್ದಾರೆ.

ಫೈಜಲ್ ಅವರು ತಮ್ಮ ವೋಲ್ಸ್ ವಾಗನ್ ಪೊಲೊ ಕಾರಿನಲ್ಲಿ ಗೆಳೆಯರ ಜತೆ ಮಹಾಬಲಿಪುರಂ ಬಳಿಯ ಮನವೈ ಗ್ರಾಮದತ್ತ ಸಾಗುತ್ತಿದ್ದಾಗ ಅಪಘಾತಕ್ಕೀಡಾಗಿದ್ದಾರೆ. ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಅತಿಯಾದ ವೇಗದಿಂದ ಕಾರು ರಸ್ತೆ ವಿಭಜಕ್ಕೆ ಡಿಕ್ಕಿ ಹೊಡಿದಿರುವ ಹಾಗೆ ಕಾಣುತ್ತದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ನಾಸರ್ ಅವರ ಪುತ್ರ ಸೇರಿದಂತೆ ನಾಲ್ವರನ್ನು ಕೆಲಂಬಾಕ್ಕಂನಲ್ಲಿರುವ ಚೆಟ್ಟಿನಾಡ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ನಾಸರ್ ಪುತ್ರ ಫೈಜಲ್ ತೀವ್ರವಾದ ರಕ್ತಸ್ರಾವದಿಂದ ಬಳಲಿದ್ದು ತೀವ್ರ ನಿಗಾ ಘಟಕದಲ್ಲಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ನಾಸರ್ ಅವರ ಹಿರಿಯ ಪುತ್ರ ಫೈಜಲ್ ಅವರ ಆರೋಗ್ಯ ಸುಧಾರಣೆಗಾಗಿ ಸಂದೇಶಗಳು ಹರಿದು ಬರುತ್ತಿವೆ. ಅಪಘಾತದ ಚಿತ್ರಗಳು ಇಲ್ಲಿದೆ ನೋಡಿ...

ಪಂಚಭಾಷಾ ತಾರೆ ನಾಸರ್ ಕುಟುಂಬದಲ್ಲಿ ಶೋಕ
  

ಪಂಚಭಾಷಾ ತಾರೆ ನಾಸರ್ ಕುಟುಂಬದಲ್ಲಿ ಶೋಕ

ಪಂಚಭಾಷಾ ತಾರೆ ನಾಸರ್ ಅವರು ಕಮಲ್ ಹಾಸನ್ ಅಭಿನಯದ ವಿಶ್ವರೂಪಂ ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರದ ವಿಶೇಷ ಪ್ರದರ್ಶನದ ವೇಳೆ ನಾಸರ್ ಪುತ್ರ ಫೈಜಲ್ ಹಾಗೂ ಆತನ ತಾಯಿ ಕಮೀಲಾ

ಅತಿಯಾದ ವೇಗದ ಚಾಲನೆ ಕಾರಣವೇ?
  

ಅತಿಯಾದ ವೇಗದ ಚಾಲನೆ ಕಾರಣವೇ?

ಫೈಜಲ್ ಅವರು ತಮ್ಮ ವೋಲ್ಸ್ ವಾಗನ್ ಪೊಲೊ ಕಾರಿನಲ್ಲಿ ಗೆಳೆಯರ ಜತೆ ಮಹಾಬಲಿಪುರಂ ಬಳಿಯ ಮನವೈ ಗ್ರಾಮದತ್ತ ಸಾಗುತ್ತಿದ್ದಾಗ ಅಪಘಾತಕ್ಕೀಡಾಗಿದ್ದಾರೆ. ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಅತಿಯಾದ ವೇಗದಿಂದ ಕಾರು ರಸ್ತೆ ವಿಭಜಕ್ಕೆ ಡಿಕ್ಕಿ ಹೊಡಿದಿರುವ ಹಾಗೆ ಕಾಣುತ್ತದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ನಾಸರ್ ಅವರ ಹಿರಿಯ ಪುತ್ರ ಫೈಜಲ್
  

ನಾಸರ್ ಅವರ ಹಿರಿಯ ಪುತ್ರ ಫೈಜಲ್

ನಾಸರ್ ಅವರ ಹಿರಿಯ ಪುತ್ರ ಫೈಜಲ್ ಸ್ಥಿತಿ ಗಂಭೀರವಾಗಿದ್ದು, ಎಂಆರ್ ಎ ಸ್ಕ್ಯಾನ್ ಸೇರಿದ ಹತ್ತು ಹಲವು ಪರೀಕ್ಷೆಗಳನ್ನು ನಡೆಸಲಾಗಿದೆ. ತಲೆ ಭಾಗಕ್ಕೆ ಹೆಚ್ಚಿನ ಪೆಟ್ಟು ಬಿದ್ದಿದೆ ಎಂದು ತಿಳಿದು ಬಂದಿದೆ.

ಕಾರಿನ ನೋಂದಣಿ ಸಂಖ್ಯೆ
  

ಕಾರಿನ ನೋಂದಣಿ ಸಂಖ್ಯೆ

ಕಾರಿನ ನೋಂದಣಿ ಸಂಖ್ಯೆ ಮೂಲಕ ನಾಸರ್ ಪುತ್ರನ ಗುರುತು ಪತ್ತೆ ಸುಲಭವಾಗಿ ಸಿಕ್ಕಿದೆ. ಕಾರಿನಲ್ಲಿದ್ದ ಫೈಜಲ್ ಅವರ ಮೂರು ಗೆಳೆಯರು ಮೃತಪಟ್ಟಿದ್ದಾರೆ. ಅವರ ಬಗ್ಗೆ ವಿವರ ಇನ್ನೂ ತಿಳಿದು ಬಂದಿಲ್ಲ.

ನೆರವಿಗೆ ಧಾವಿಸಿದ ಸ್ಥಳೀಯ ಗ್ರಾಮಸ್ಥರು
  

ನೆರವಿಗೆ ಧಾವಿಸಿದ ಸ್ಥಳೀಯ ಗ್ರಾಮಸ್ಥರು

ಮುಂಜಾನೆ ಅಪಘಾತ ಸಂಭವಿಸಿದಾಗ ಮನವೈ ಗ್ರಾಮಸ್ಥರು ತಕ್ಷಣವೇ ನೆರವಿಗೆ ಧಾವಿಸಿದ್ದಾರೆ. ಆದರೆ, ಫೈಜಲ್ ಹೊರತುಪಡಿಸಿ ಉಳಿದವರು ಸ್ಥಳದಲ್ಲೇ ಮೃತಪಟ್ಟಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಪಂಚಭಾಷಾ ತಾರೆ ನಾಸರ್
  

ಪಂಚಭಾಷಾ ತಾರೆ ನಾಸರ್

ನಾಟಕರಂಗದ ಅದ್ಭುತ ಪ್ರತಿಭೆ ನಾಸರ್ ಅವರು ಕಮಲ್ ಹಾಸನ್, ರಮೇಶ್ ಅರವಿಂದ್, ರಜನಿಕಾಂತ್ ರಂತೆ ನಿರ್ದೇಶಕ ಕೆ. ಬಾಲಚಂದರ್ ಅವರ ಗರಡಿಯಿಂದ ಬೆಳೆದು ಬಂದ ಕಲಾವಿದ.ನಟ, ಗಾಯಕ, ನಿರ್ದೇಶಕ, ನಿರ್ಮಾಪಕರಾಗಿ ಚಿತ್ರರಂಗದಲ್ಲಿ ದುಡಿದಿದ್ದಾರೆ. ಕನ್ನಡದಲ್ಲಿ ರಾವಣ ರಾಜ್ಯದಲ್ಲಿ ನಟಿಸಿದ್ದ ನಾಸರ್ ಅವರು ನಂತರ ಧಮ್, ತಮಸ್ಸು, ಬ್ರಹ್ಮ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಫೈಜಲ್ ಅಲ್ಲದೆ ಇನ್ನಿಬ್ಬರು ಗಂಡು ಮಕ್ಕಳನ್ನು ನಾಸರ್ ಹೊಂದಿದ್ದಾರೆ.

English summary
Actor Nassar's son Faizal has met with an accident earlier today (May 22). The incident has reportedly claimed three lives on spot.Faizal is getting treatment at Chettinad Hospital in Kelambakkam.
Please Wait while comments are loading...

Kannada Photos

Go to : More Photos