»   » ಮುಖ ಮೂತಿಗೆ ಕತ್ತರಿ ಹಾಕ್ಕೊಂಡ ಸುಂದರೀಸ್

ಮುಖ ಮೂತಿಗೆ ಕತ್ತರಿ ಹಾಕ್ಕೊಂಡ ಸುಂದರೀಸ್

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಸಲೀಸಾಗಿ ಮುಖ ಮೂತಿ ಕುಯ್ಯಿಸಿಕೊಂಡ ಸುಂದರಿಯರು ಎಂದು ಕರೆದರೆ ಅಭಿಮಾನಿಗಳು ಸಿಟ್ಟಾಗಬಹುದೇನೋ, ಆದರೇನು ಮಾಡುವುದು ನಮ್ಮ ಚಿತ್ರರಂಗದ ಬೆಡಗಿಯರು ತಮ್ಮ ಅಂಗೋಪಾಂಗಗಳಿಗೆ ಬಣ್ಣವನ್ನಷ್ಟೇ ಮೆತ್ತಿಕೊಳ್ಳುವುದಿಲ್ಲ ಸಿಲಿಕಾನ್ ಜೆಲ್ ಕೂಡಾ ಬಳಸಿ ದೇಹಕ್ಕೆ ಮೆರಗು ನೀಡಲು ಯತ್ನಿಸುತ್ತಾರೆ.

ಏನ್ ಮಾಡೋದು ಹೇಳಿ ಬಣ್ಣದ ಲೋಕದಲ್ಲಿ ಚೆಂದವಾಗಿ ಕಾಣದಿದ್ದರೆ ಉಳಿಗಾಲವಿಲ್ಲ, ಅಭಿನಯವೇ ಸಾಲದು ಇಲ್ಲಿ ಅಂದ ಚೆಂದವೂ ಇರಲೇಬೇಕು. ಹಾಲಿವುಡ್, ಬಾಲಿವುಡ್ ಅಷ್ಟೇ ಅಲ್ಲದೆ ನಮ್ಮ ಸೌಥ್ ಸುಂದರಿಯರು ಕೂಡಾ ದುಬಾರಿ ಪ್ಲಾಸ್ಟಿಕ್ ಸರ್ಜರಿಗೆ ಒಳಪಟ್ಟಿದ್ದಾರೆ. ಅದು ಕದ್ದು ಮುಚ್ಚಿ ಅಮೆರಿಕಕ್ಕೆ ಹೋಗಿ ಬಂದಿದ್ದಾರೆ.

ಆ ಕಾಲ ಬೆಡಗಿ ಶ್ರೀದೇವಿಯಿಂದ ಹಿಡಿದು ಈಗಿನ ಸಮಂತಾ ತನಕ ಎಲ್ಲರೂ ಕತ್ತರಿ ಪ್ರಯೋಗಕ್ಕೆ ತಮ್ಮ ಅಂಗಗಳನ್ನು ಒಡ್ಡಿದವರೇ.ಕಾಸ್ಮೆಟಿಕ್ ಸರ್ಜರಿ ಎಂಬ ಹೆಸರಿನಲ್ಲಿ ತಮ್ಮ ದೇಹದ ಕಾಂತಿ, ವರ್ಚಸ್ಸು ಅಧಿಕಗೊಳಿಸಿಕೊಂಡು ಅಭಿಮಾನಿಗಳ ಮುಂದೆ ಸುಂದರ ಮೊಗ ಹೊತ್ತು ಓಡಾಡಿದವರೇ..

ದಕ್ಷಿಣ ಭಾರತದ ಸುಂದರಿಯರ ಪೈಕಿ ನೋಸ್, ಬೊಟೊಕ್ಸ್, ಲಿಪ್ಪೊಸಕ್ಸಸ್..ಇತ್ಯಾದಿ ಇತ್ಯಾದಿ ಮಾಡಿಸಿಕೊಂಡಿರುವವರ ಪಟ್ಟಿ ಮುಂದಿನ ಗ್ಯಾಲರಿಯಲ್ಲಿದೆ ತಪ್ಪದೇ ನೋಡಿ...

ಮೂಗಿಗೆ ಕುಯ್ಯಿಸಿಕೊಂಡ ಸಮಂತಾ ಪ್ರಭು
  

ಮೂಗಿಗೆ ಕುಯ್ಯಿಸಿಕೊಂಡ ಸಮಂತಾ ಪ್ರಭು

ಸ್ನಿಗ್ಧ ನಗುವಿನ ಸಿಂಪಲ್ ಸುಂದರಿ ಸಮಂತಾ ರುತ್ ಪ್ರಭು 2012 ರಲ್ಲಿ ಮೂಗಿಗೆ ಸರ್ಜರಿ ಮಾಡಿಸಿಕೊಂಡಿದ್ದಳು. ಆದರೆ, ಯೆಟೋ ವೆಲ್ಲಿ ಪೊವಿಂಪಿ ಮನಸು ಚಿತ್ರದಲ್ಲಿ ಆಕೆಯನ್ನು ಕಂಡ ಅಭಿಮಾನಿಗಳು ಥಮ್ಸ್ ಡೌನ್ ಎಂದು ಬಿಟ್ಟರು.

ಕಮಲ್ ಪುತ್ರಿ ಶ್ರುತಿ ಹಾಸನ್ ಮೂಗಿಗೆ ಕತ್ತರಿ
  

ಕಮಲ್ ಪುತ್ರಿ ಶ್ರುತಿ ಹಾಸನ್ ಮೂಗಿಗೆ ಕತ್ತರಿ

ಕಮಲ್ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ತಮ್ಮ ಬಾಲಿವುಡ್ ಚಿತ್ರದ ನಂತರ ಮೂಗಿಗೆ ಸರ್ಜರಿ ಮಾಡಿಕೊಂಡಿದ್ದಾಗಿ ಬಹಿರಂಗವಾಗಿ ಹೇಳಿಕೊಂಡಿದ್ದರು. ಆದರೆ, ಇದು ವೈದ್ಯರ ಸಲಹೆ ಮೇರೆಗೆ ಮಾಡಿಕೊಂಡ ಅಡ್ಜೆಸ್ಟ್ ಮೆಂಟ್, ಸೌಂದರ್ಯ ಹೆಚ್ಚಿಸಲು ಮಾಡಿಕೊಂಡ ಸರ್ಜರಿ ಅಲ್ಲ ಎಂದು ಸ್ಪಷ್ಟಪಡಿಸಿದ್ದರು.

ಅನುಷ್ಕಾ ಶೆಟ್ಟಿ Liposuction ಸರ್ಜರಿ
  

ಅನುಷ್ಕಾ ಶೆಟ್ಟಿ Liposuction ಸರ್ಜರಿ

ಮಂಗಳೂರು ಮೂಲದ ಬೆಡಗಿ ಅನುಷ್ಕಾ ಶೆಟ್ಟಿ ಅವರು ಲಿಪೋಸಕ್ಷನ್ ಸರ್ಜರಿ ಮೂಲಕ ನಡುಭಾಗದ ಕೊಬ್ಬನ್ನು ಕರಗಿಸಿದರು ಎನ್ನಲಾಗಿದೆ.

 

 

ಮಲ್ಲು ಬೆಡಗಿ ಆಸಿನ್ ತುಟಿಗೆ ಸರ್ಜರಿ
  

ಮಲ್ಲು ಬೆಡಗಿ ಆಸಿನ್ ತುಟಿಗೆ ಸರ್ಜರಿ

ಕೇರಳ ಮೂಲದ ಬೆಡಗಿ ಆಸಿನ್ ಅವರು ತಮ್ಮ ತುಟಿ ಸಣ್ಣ ಸರ್ಜರಿ ಮಾಡಿಕೊಂಡಿದ್ದರು.

ನಯನ್ ತಾರಾ ಅವರ Liposuction ಕಾಸ್ಮೆಟಿಕ್ ಸರ್ಜರಿ
  

ನಯನ್ ತಾರಾ ಅವರ Liposuction ಕಾಸ್ಮೆಟಿಕ್ ಸರ್ಜರಿ

ಬಹುಭಾಷಾ ನಟಿ ನಯನತಾರಾ ಅವರು Liposuction ಕಾಸ್ಮೆಟಿಕ್ ಸರ್ಜರಿಗೆ ಒಳಗಾಗಿದ್ದರು.

 

 

ಬಹುಭಾಷಾ ನಟಿ ತ್ರೀಷಾ ಮೂಗಿಗೂ ಸರ್ಜರಿ
  

ಬಹುಭಾಷಾ ನಟಿ ತ್ರೀಷಾ ಮೂಗಿಗೂ ಸರ್ಜರಿ

ಬಹುಭಾಷಾ ನಟಿ ತ್ರೀಷಾ ಮೂಗಿಗೂ ಸರ್ಜರಿ ಮಾಡಲಾಗಿದ್ದು, ಪುಟ್ಟ ಮೂಗಿನ ತುದ್ದಿ ತಿದ್ದಲಾಗಿದೆ.

ಶ್ರೀದೇವಿ ಅವರ ನಾಸಿಕಕ್ಕೆ ಕತ್ತರಿ
  

ಶ್ರೀದೇವಿ ಅವರ ನಾಸಿಕಕ್ಕೆ ಕತ್ತರಿ

ಶ್ರೀದೇವಿ ಅವರ ನಾಸಿಕಕ್ಕೆ ಕತ್ತರಿ ಬಿದ್ದು ಮೂಗಿನ ಹೊಳ್ಳೆಗಳನ್ನು ತಿದ್ದಿದ್ದು ಭಾರಿ ಸುದ್ದಿಯಾಗಿತ್ತು. ಸುದ್ದಿಯನ್ನು ಶ್ರೀದೇವಿ ಅಲ್ಲಗೆಳೆಯಲು ಸಾಧ್ಯವೆ ಇಲ್ಲದಂತೆ ಬದಲಾವಣೆ ಕಾಣಿಸತೊಡಗಿತು. ನಿಧಾನವಾಗಿ ಶ್ರೀದೇವಿ ಅವರ ಹೊಸ ಮೂಗಿನ ವಿನ್ಯಾಸವನ್ನು ಫ್ಯಾನ್ಸ್ ಕೂಡಾ ಒಪ್ಪಿಕೊಂಡರು.

ಷಹಜಾನ್ ಪದಂಸಿ ಕಾಸ್ಮೆಟಿಕ್ ಸರ್ಜರಿ
  

ಷಹಜಾನ್ ಪದಂಸಿ ಕಾಸ್ಮೆಟಿಕ್ ಸರ್ಜರಿ

ನಟಿ ಷಹಜಾನ್ ಪದಂಸಿ ದವಡೆ, ಗಲ್ಲದ ಮೂಳೆ ಸರಿ ಪಡಿಸಿಕೊಂಡು ಸುಂದರ ನಗೆಯನ್ನು ಕಾಯ್ದುಕೊಂಡಿದ್ದಾಳೆ ಎನ್ನಲಾಗಿದೆ. ಆದರೆ, ಅದೆಲ್ಲಾ ಸುಳ್ಳು ನನ್ನ ಫಿಟ್ನೆಸ್ ಮಂತ್ರ, ಸಮತೋಲನ ಆಹಾರದ ಫಲ ನನ್ನ ನಗು ಎಂದಿದ್ದಾಳೆ

 

 

ಕಾರ್ತಿಕಾ ನಾಯರ್ ನಾಸಿಕ ಶಸ್ತ್ರಚಿಕಿತ್ಸೆ
  

ಕಾರ್ತಿಕಾ ನಾಯರ್ ನಾಸಿಕ ಶಸ್ತ್ರಚಿಕಿತ್ಸೆ

ಆ ಕಾಲದ ಸುಂದರ ನಟಿ ರಾಧಾ ಅವರ ನೀಳ ಕಾಯದ ಮಗಳು ಕಾರ್ತಿಕಾ ನಾಯರ್ ಈಗಿನ್ನೂ ಚಿತ್ರರಂಗದಲ್ಲಿ ಅಂಬೆಗಾಲಿಡುತ್ತಿದ್ದರೂ ಆಗಲೇ ಮೂಗಿಗೆ ಕತ್ತರಿ ಹಾಕಿಸಿದ್ದಾಳಂತೆ. ಕನ್ನಡ ಚಿತ್ರ ಬೃಂದಾವನದ ಕಾಣುವ ಕಾರ್ತಿಕಾ ಮೂಗಿಗೂ ಮೊದಲ ಚಿತ್ರ ಜೋಶ್ ನಲ್ಲಿನ ಮೂಗಿಗೂ ವ್ಯತ್ಯಾಸ ಇದೆಯಂತೆ. ಆದ್ರೆ, ನನ್ನ ಮೂಗು ಚೆನ್ನಾಗಿದೆ ನಾನು ಸರ್ಜರಿ ಮಾಡಿಸಿಕೊಂಡಿಲ್ಲ ಎಂದು ಕಾರ್ತಿಕಾ ಮೂಗು ಮುರಿದಿದ್ದಾಳೆ !

ಮೂಗಿಗೆ ಕತ್ತರಿ ಹಾಕಿಕೊಂಡ ಶಿಲ್ಪಾ ಶೆಟ್ಟಿ
  

ಮೂಗಿಗೆ ಕತ್ತರಿ ಹಾಕಿಕೊಂಡ ಶಿಲ್ಪಾ ಶೆಟ್ಟಿ

ಮಂಗಳೂರು ಮೂಲದ ಬೆಡಗಿ ಶಿಲ್ಪಾ ಶೆಟ್ಟಿ ಸಪೂರ ದೇಹ ಬಳಕುವ ಸೊಂಟ ಎಲ್ಲಕ್ಕೂ ಕಾಸ್ಮೆಟಿಕ್ ಸ್ಪರ್ಶ ಸಿಕ್ಕಿದೆ. ಮುಖ್ಯವಾಗಿ ಶಿಲ್ಪಾ ಮೂಗಿಗೆ ಸಣ್ಣ ಸರ್ಜರಿ ಆದ ಮೇಲೆ ಶಿಲ್ಪಾಗೆ ಚಿತ್ರಗಳಲ್ಲಿ ಬೇಡಿಕೆ ಹೆಚ್ಚಾಯಿತಂತೆ.

English summary
Actors going under the knife is a popular trend not only in Hollywood and Bollywood, but also in South Indian film industries. Right from 80's dream girl Sridevi to our modern congenial Samantha, several actresses have undergone cosmetic surgeries to enhance their beauty and charm.
Please Wait while comments are loading...

Kannada Photos

Go to : More Photos