»   » ಅಕ್ಕಿನೇನಿ ನಾಗೇಶ್ವರ ರಾವ್ ಗೆ ಅಂತಿಮ ನಮನ

ಅಕ್ಕಿನೇನಿ ನಾಗೇಶ್ವರ ರಾವ್ ಗೆ ಅಂತಿಮ ನಮನ

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಚಿತ್ರರಂಗದ ಮೇರು ನಟ ಅಕ್ಕಿನೇನಿ ನಾಗೇಶ್ವರ ರಾವ್ ಅವರ ಅಗಲಿಕೆಯ ನೋವಿನಲ್ಲಿ ತೆಲುಗು ಚಿತ್ರರಂಗ ಮುಳುಗಿದೆ. ಗಣ್ಯಾತಿಗಣ್ಯರು ಬೆಳಗ್ಗಿನಿಂದಲೇ ಕೇರ್ ಆಸ್ಪತ್ರೆ ಹಾಗೂ ಅಕ್ಕಿನೇನಿ ನಿವಾಸದತ್ತ ತೆರಳಿ ಅಂತಿಮ ದರ್ಶನ ಪಡೆದಿದ್ದಾರೆ.

ಎಎನ್ ಆರ್ ಅಭಿಮಾನಿಗಳು ಕೇರ್ ಆಸ್ಪತ್ರೆಯಿಂದ ಅನ್ನಪೂರ್ಣ ಸ್ಟೂಡಿಯೋ ತನಕ ಮೆರವಣಿಗೆಯಲ್ಲಿ ಪಾಲ್ಗೊಂಡು ಅಗಲಿಕ ಮೇರು ನಟನಿಗೆ ತಮ್ಮ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಜ್ಯೂಬಿಲಿ ಹಿಲ್ಸ್ ನಲ್ಲಿರುವ ಅಕ್ಕಿನೇನಿ ನಿವಾಸದಲ್ಲಿ ನೀರವ ಮೌನ ಆವರಿಸಿದೆ. ಕ್ಯಾನ್ಸರ್ ರೋಗಕ್ಕೆ ತುತ್ತಾದರೂ ಜೀವನ ಉತ್ಸಾಹದಿಂದ ಎಲ್ಲರನ್ನು ನಲಿಯುವಂತೆ ಮಾಡುತ್ತಿದ್ದ ಅಕ್ಕಿನೇನಿ ನಾಗೇಶ್ವರ್ ರಾವ್ ಅವರು ದಕ್ಷಿಣ ಭಾರತೀಯ ಚಿತ್ರರಂಗದ ಸಾಂಸ್ಕೃತಿಕ ರಾಯಭಾರಿ ಎಂದೇ ಗುರುತಿಸಲಾಗುತ್ತದೆ.

ಕನ್ನಡ ಚಿತ್ರರಂಗದ ವರನಟ ಡಾ. ರಾಜ್ ಕುಮಾರ್ ಅವರಂತೆ ತೆಲುಗು ಚಿತ್ರರಂಗದಲ್ಲಿ ಜನ ಸಾಮಾನ್ಯರ ಮೆಚ್ಚುಗೆ ಗಳಿಸಿದ ಸರಳ ಜೀವಿಯಾಗಿ ಎಎನ್ ಆರ್ ಇಂದಿಗೂ ಎಂದಿಗೂ ಗುರುತಿಸಲ್ಪಡುತ್ತಾರೆ. ನಾಗೇಶ್ವರ್ ರಾವ್ ಅವರ ಅಂತಿಮ ಸಂಸ್ಕಾರ ಗುರುವಾರ ಹೈದರಾಬಾದಿನ ಎರಾಗಡ್ಡ ರುದ್ರಭೂಮಿಯಲ್ಲಿ ಜರುಗಲಿದೆ ಎಂದು ಪುತ್ರ ನಾಗಾರ್ಜುನ ಅವರು ಹೇಳಿದ್ದಾರೆ. ಎಎನ್ ಆರ್ ಅವರ ಅಂತಿಮ ದರ್ಶನ ಚಿತ್ರಗಳು ಇಲ್ಲಿವೆ ನೋಡಿ...[ಹೆಚ್ಚಿನ ಚಿತ್ರಗಳು ಗ್ಯಾಲರಿಯಲ್ಲಿ]

ಅಕ್ಕಿನೇನಿ ನಾಗೇಶ್ವರ ರಾವ್ ಗೆ ಅಂತಿಮ ನಮನ
  

ಅಕ್ಕಿನೇನಿ ನಾಗೇಶ್ವರ ರಾವ್ ಗೆ ಅಂತಿಮ ನಮನ

ಚಿತ್ರರಂಗದ ಮೇರು ನಟ ಅಕ್ಕಿನೇನಿ ನಾಗೇಶ್ವರ ರಾವ್ ಅವರ ಅಗಲಿಕೆಯ ನೋವಿನಲ್ಲಿ ತೆಲುಗು ಚಿತ್ರರಂಗ ಮುಳುಗಿದೆ

ನಾಗೇಶ್ವರ ರಾವ್ ಪಾರ್ಥೀವ ಶರೀರ ಜತೆ ನಾಗ್
  

ನಾಗೇಶ್ವರ ರಾವ್ ಪಾರ್ಥೀವ ಶರೀರ ಜತೆ ನಾಗ್

ನಾಗೇಶ್ವರ ರಾವ್ ಪಾರ್ಥೀವ ಶರೀರ ಜತೆ ಪುತ್ರ ನಾಗಾರ್ಜುನ, ಮಗಳು ನಾಗ ಸುಶೀಲ, ಮೊಮ್ಮಗ ಸುಮಂತ್

ಅಕ್ಕಿನೇನಿ ನಾಗಾರ್ಜುನ ಅಂತಿಮ ಪೂಜೆ
  

ಅಕ್ಕಿನೇನಿ ನಾಗಾರ್ಜುನ ಅಂತಿಮ ಪೂಜೆ

ಅಕ್ಕಿನೇನಿ ನಾಗಾರ್ಜುನ ಅವರು ತಮ್ಮ ತಂದೆಗೆ ಅಂತಿಮ ನಮನ ಸಲ್ಲಿಸಿ, ಧಾರ್ಮಿಕ ಪೂಜೆ ಸಲ್ಲಿಸಿದರು

ಅಕ್ಕಿನೇನಿ ನಾಗೇಶ್ವರ ರಾವ್ ಮೊಮ್ಮಕ್ಕಳು
  

ಅಕ್ಕಿನೇನಿ ನಾಗೇಶ್ವರ ರಾವ್ ಮೊಮ್ಮಕ್ಕಳು

ಅಕ್ಕಿನೇನಿ ನಾಗೇಶ್ವರ ರಾವ್ ಮೊಮ್ಮಕ್ಕಳಾದ ಸುಶಾಂತ್, ಅಖಿಲ್ ಅವರು ಶೋಕಾಚರಣೆಯಲ್ಲಿ ಮುಳುಗಿದ್ದಾರೆ.

ಶೋಕಾಚರಣೆಯಲ್ಲಿ ಸುಪ್ರಿಯ, ನಾಗಾರ್ಜುನ
  

ಶೋಕಾಚರಣೆಯಲ್ಲಿ ಸುಪ್ರಿಯ, ನಾಗಾರ್ಜುನ

ಅನ್ನಪೂರ್ಣ ಸ್ಟೂಡಿಯೋದಲ್ಲಿ ಅಕ್ಕಿನೇನಿ ನಾಗೇಶ್ವರ ರಾವ್ ಅವರ ಪಾರ್ಥೀವ ಶರೀರದ ಬಳಿ ಮೊಮ್ಮಗಳು ಸುಪ್ರಿಯಳಿಗೆ ಸಾಂತ್ವನ ಹೇಳುತ್ತಿರುವ ಮಗ ನಾಗಾರ್ಜುನ

ಅಕ್ಕಿನೇನಿ ನಾಗೇಶ್ವರ ರಾವ್ ಗಿತ್ತು ಕ್ಯಾನ್ಸರ್ ಮಾರಿ
  

ಅಕ್ಕಿನೇನಿ ನಾಗೇಶ್ವರ ರಾವ್ ಗಿತ್ತು ಕ್ಯಾನ್ಸರ್ ಮಾರಿ

ಮೇರು ನಟ ಅಕ್ಕಿನೇನಿ ನಾಗೇಶ್ವರ ರಾವ್ ಗಿತ್ತು ಕರುಳಿನ ಕ್ಯಾನ್ಸರ್ ಮಾರಿ ಇತ್ತು. 90ರ ಹರೆಯದಲ್ಲಿದ್ದ ಅಕ್ಕಿನೇನಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡುವುದು ಕಷ್ಟವಾಗಿತ್ತು.

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬುರಿಂದ ನಮನ
  

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬುರಿಂದ ನಮನ

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರು ಅಕ್ಕಿನೇನಿ ನಾಗೇಶ್ವರ ರಾವ್ ಅವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

English summary
Celebrities from various film industries paid tribute to Akkineni Nageswara Rao. Here are the pictures. Last rites of veteran actor Akkineni Nageshwar Rao will be performed on Thursday at Erragadda burial ground in Hyderabad.
Please Wait while comments are loading...

Kannada Photos

Go to : More Photos