»   » ಚಿತ್ರಗಳು: ಮಗಳ ಮದುವೆಗೆ ಕನ್ನಡ ತಾರೆಯರಿಗೆ ಆಹ್ವಾನ ನೀಡಿದ ಜನಾರ್ದನ ರೆಡ್ಡಿ

ಚಿತ್ರಗಳು: ಮಗಳ ಮದುವೆಗೆ ಕನ್ನಡ ತಾರೆಯರಿಗೆ ಆಹ್ವಾನ ನೀಡಿದ ಜನಾರ್ದನ ರೆಡ್ಡಿ

ಕರ್ನಾಟಕದ ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರ ಮಗಳ ಅದ್ದೂರಿ ಮದುವೆಗೆ, ಸ್ಯಾಂಡಲ್ ವುಡ್ ಸ್ಟಾರ್ ಗಳಿಗೆ ಆಹ್ವಾನ ನೀಡಲಾಗಿದೆ.

Written by: Bharath kumar
Subscribe to Filmibeat Kannada

ಗಣಿಧಣಿ, ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಏಕೈಕ ಪುತ್ರಿ ಬ್ರಹ್ಮಿಣಿಯ ಮದುವೆಗೆ ಭರದ ಸಿದ್ಧತೆ ನಡೆಯುತ್ತಿದೆ. ಈ ಮದುವೆಗೆ ರೆಡ್ಡಿ ಕುಟುಂಬ ವಿಶಿಷ್ಟ ರೀತಿಯ ಆಹ್ವಾನ ಪತ್ರಿಕೆಯನ್ನ ಸಿದ್ದಪಡಿಸಿದ್ದು, ರಾಜ್ಯದ ಎಲ್ಲ ಗಣ್ಯ ವ್ಯಕ್ತಿಗಳಿಗೂ ಆಮಂತ್ರಣ ನೀಡಲಾಗುತ್ತಿದೆ.

ಹೈದರಾಬಾದ್‌ ಮೂಲದ ಉದ್ಯಮಿಯ ಪುತ್ರ ರಾಜೀವ್‌ ರೆಡ್ಡಿ ಅವರೊಂದಿಗೆ ಜನಾರ್ದನ ರೆಡ್ಡಿ ಅವರ ಮಗಳು ಸಪ್ತಪದಿ ತುಳಿಯಲಿದ್ದಾರೆ. ನವೆಂಬರ್‌ 16 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಅದ್ದೂರಿ ವಿವಾಹ ಮಹೋತ್ಸವ ನಡೆಯಲಿದೆ.[ಗಾಲಿ ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಣಿ ವಿವಾಹಕ್ಕೆ ಬನ್ನಿ, ಬನ್ನಿ! ]

ತಮ್ಮ ಮಗಳ ಮದುವೆಗೆ ಆಗಮಿಸಿ, ಶುಭ ಕೋರಬೇಕೆಂದು ಕನ್ನಡ ಚಿತ್ರರಂಗದ ನಟ-ನಟಿಯರ ಮನೆಗೆ ಖುದ್ದಾಗಿ ತೆರಳಿ ಜನಾರ್ದನ ರೆಡ್ಡಿ ಆಮಂತ್ರಣ ಪತ್ರಿಕೆ ನೀಡುತ್ತಿದ್ದಾರೆ. ಮುಂದೆ ಓದಿ....

ಡಾ.ಪಾರ್ವತಮ್ಮ ರಾಜ್ ಕುಮಾರ್ ಗೆ ಆಹ್ವಾನ

ಡಾ.ಪಾರ್ವತಮ್ಮ ರಾಜ್ ಕುಮಾರ್ ಗೆ ಆಹ್ವಾನ

ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕಿ, ಡಾ. ರಾಜ್ ಕುಮಾರ್ ಅವರ ಪತ್ನಿ ಡಾ.ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ರೆಡ್ಡಿ ಮಗಳ ಮದುವೆಗೆ ಆಹ್ವಾನ ನೀಡಲಾಗಿದೆ.

ಕ್ರೇಜಿಸ್ಟಾರ್ ಮನೆಯಲ್ಲಿ ರೆಡ್ಡಿ

ಕ್ರೇಜಿಸ್ಟಾರ್ ಮನೆಯಲ್ಲಿ ರೆಡ್ಡಿ

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮನೆಗೆ ಬೇಟಿ ನೀಡಿದ್ದ ಜನಾರ್ದನ ರೆಡ್ಡಿ, ತಮ್ಮ ಮಗಳ ವಿವಾಹ ಮಹೋತ್ಸವಕ್ಕೆ ಆಮಂತ್ರಣ ನೀಡಿದ್ದಾರೆ.

ಉಪ್ಪಿ ದಂಪತಿಗೆ ಆಮಂತ್ರಣ

ಉಪ್ಪಿ ದಂಪತಿಗೆ ಆಮಂತ್ರಣ

ರಿಯಲ್ ಸ್ಟಾರ್ ಉಪೇಂದ್ರ ಕುಟುಂಬಕ್ಕೂ ಜನಾರ್ದನ ರೆಡ್ಡಿ ಆಮಂತ್ರಣ ಪತ್ರಿಕೆ ನೀಡಿದ್ದಾರೆ.

ಹಂಸಲೇಖ ಕುಟುಂಬಕ್ಕೆ ಆಹ್ವಾನ

ಹಂಸಲೇಖ ಕುಟುಂಬಕ್ಕೆ ಆಹ್ವಾನ

ಕನ್ನಡ ಚಿತ್ರರಂಗದ 'ನಾದಬ್ರಹ್ಮ' ಹಂಸಲೇಖ ಅವರ ಕುಟುಂಬಕ್ಕೂ ರೆಡ್ಡಿ ಮಗಳ ಮದುವೆಗೆ ಆಮಂತ್ರಣ ನೀಡಲಾಗಿದೆ.

ಡಾ. ಭಾರತಿ ವಿಷ್ಣುವರ್ಧನ್-ಸಾಯಿಕುಮಾರ್ ಗೆ ಆಮಂತ್ರಣ

ಡಾ. ಭಾರತಿ ವಿಷ್ಣುವರ್ಧನ್-ಸಾಯಿಕುಮಾರ್ ಗೆ ಆಮಂತ್ರಣ

ಬಳ್ಳಾರಿ ಗಣಿಧಣಿ ರೆಡ್ಡಿ ಮಗಳ ಮದುವೆಗೆ ಡೈಲಾಗ್ ಕಿಂಗ್ ಸಾಯಿಕುಮಾರ್ ರವರಿಗೆ ಆಹ್ವಾನ ನೀಡಲಾಗಿದೆ. ಜೊತೆಗೆ ಡಾ.ಭಾರತಿ ವಿಷ್ಣುವರ್ಧನ್ ಅವರನ್ನೂ ಜನಾರ್ದನ ರೆಡ್ಡಿ ಆಹ್ವಾನಿಸಿದ್ದಾರೆ.

ಮುನಿರತ್ನ ಹಾಗೂ ಓಂ ಸಾಯಿ ಪ್ರಕಾಶ್

ಮುನಿರತ್ನ ಹಾಗೂ ಓಂ ಸಾಯಿ ಪ್ರಕಾಶ್

ಖ್ಯಾತ ನಿರ್ಮಾಪಕ ಹಾಗೂ ಶಾಸಕ ಮುನಿರತ್ನ ಹಾಗೂ ಖ್ಯಾತ ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರಿಗೂ ಆಮಂತ್ರಣ ನೀಡಿದ್ದಾರೆ ಜನಾರ್ದನ ರೆಡ್ಡಿ.

ಸ್ಟಾರ್ ಗಳ ಡ್ಯಾನ್ಸ್

ಸ್ಟಾರ್ ಗಳ ಡ್ಯಾನ್ಸ್

ಜನಾರ್ಧನ ರೆಡ್ಡಿ ಮಗಳ ಮದುವೆಗೆ ಕೇವಲ ಕನ್ನಡದ ಸ್ಟಾರ್ ಕಲಾವಿದರು ಮಾತ್ರವಲ್ಲದೇ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗದಿಂದ ಕೂಡ ಸ್ಟಾರ್ ಗಳು ಕೂಡ ಆಗಮಿಸಲಿದ್ದಾರೆ. ಇನ್ನು ಈ ವಿವಾಹ ಮಹೋತ್ಸವದಲ್ಲಿ ಸ್ಟಾರ್ ಗಳಿಂದ ವಿಶೇಷ ಕಾರ್ಯಕ್ರಮಗಳು ಇರಲಿವೆ ಎಂಬ ಮಾಹಿತಿ ಇದೆ. ಮದುವೆಯ ಆರತಕ್ಷತೆಗೆ ನಟ ಶಾರುಖ್ ಖಾನ್, ಪ್ರಭುದೇವ, ನಟಿ ತಮನ್ನಾ, ಹಾಗೂ ಕತ್ರೀನಾ ಕೈಫ್ ಅವರ ನೃತ್ಯ ಕಾರ್ಯಕ್ರಮದ ಇರಲಿದೆ ಎಂಬ ಸುದ್ದಿಗಳು ಕೇಳಿ ಬರುತ್ತಿವೆ.

English summary
Mining baron and former Karnataka Minister G. Janardhana Reddy has invited all sandalwood celebrities for his daughter Brahmani's marriage with Rajeev Reddy. Brahmani's wedding will take place on November 16th at Bangalore Palace.
Please Wait while comments are loading...

Kannada Photos

Go to : More Photos