»   » ಪೈರಸಿ ಪೆಡಂಭೂತ: ಪಿತ್ತ ನೆತ್ತಿಗೇರಿ 'ಕಿರಿಕ್' ಮಾಡಿದ ರಿಶಬ್ ಶೆಟ್ಟಿ

ಪೈರಸಿ ಪೆಡಂಭೂತ: ಪಿತ್ತ ನೆತ್ತಿಗೇರಿ 'ಕಿರಿಕ್' ಮಾಡಿದ ರಿಶಬ್ ಶೆಟ್ಟಿ

Posted by:
Subscribe to Filmibeat Kannada

ವರ್ಷಾನುಗಟ್ಟಲೆ ಕಷ್ಟ ಪಟ್ಟು ಮಾಡಿದ ಚಿತ್ರ, ಥಿಯೇಟರ್ ನಲ್ಲಿ ಹೌಸ್ ಫುಲ್ ಓಡದೆ... ಬೀದಿ ಬೀದಿಯಲ್ಲಿ ಕೇವಲ ನಲವತ್ತು ರೂಪಾಯಿಗೆ ಪೈರೇಟೆಡ್ ಸಿ.ಡಿ ಬಿಸಿ ಬಿಸಿ ಬೆಣ್ಣೆ ದೋಸೆಯಂತೆ ಸೇಲ್ ಆಗ್ತಿದ್ರೆ, ಆ ಚಿತ್ರತಂಡಕ್ಕೆ ಹೇಗಾಗಬೇಡ.?

ಕೋಟ್ಯಾಂತರ ರೂಪಾಯಿ ಬಂಡವಾಳ ಹೂಡಿದ ನಿರ್ಮಾಪಕ, ತಲೆ ಉಪಯೋಗಿಸಿ ಚಿತ್ರ ತೆಗೆದ ನಿರ್ದೇಶಕರಿಗೆ ಪಿತ್ತ ನೆತ್ತಿಗೇರದೆ ಇರುತ್ತಾ.?['ಕಿರಿಕ್ ಪಾರ್ಟಿ'ಗೆ ಸಾಮಾಜಿಕ ಜಾಲತಾಣಗಳಿಂದಲೇ ಕಿರಿಕ್]

'ಕಿರಿಕ್ ಪಾರ್ಟಿ' ಚಿತ್ರದ ನಿರ್ದೇಶಕ ರಿಶಬ್ ಶೆಟ್ಟಿ ರವರಿಗೆ ಆಗಿದ್ದು ಇದೇ.! ಎಲ್ಲೆಡೆ 'ಕಿರಿಕ್ ಪಾರ್ಟಿ' ಹವಾ ಜೋರಾಗಿರುವಾಗಲೇ, ಚಿತ್ರತಂಡಕ್ಕೆ ಪೈರಸಿ ಪೆಡಂಭೂತ ಕಾಡತೊಡಗಿದೆ. ಬೀದಿಬದಿಯಲ್ಲಿ 'ಕಿರಿಕ್ ಪಾರ್ಟಿ' ಚಿತ್ರದ ಪೈರೇಟೆಡ್ ಸಿ.ಡಿ ಮಾರಾಟ ಮಾಡುತ್ತಿದ್ದವರಿಗೆ ರಿಶಬ್ ಶೆಟ್ಟಿ ಬಿಸಿ ಮುಟ್ಟಿಸಿದ್ದಾರೆ. ಆ ವಿಡಿಯೋ ನಾವು ತೋರಿಸ್ತೀವಿ ನೋಡಿ....

ರಸ್ತೆ ಬದಿಯಲ್ಲಿ ಪೈರೇಟೆಡ್ ಸಿ.ಡಿ ಮಾರಾಟ

ರಸ್ತೆ ಬದಿಯಲ್ಲಿ ಪೈರೇಟೆಡ್ ಸಿ.ಡಿ ಮಾರಾಟ

ಕನ್ನಡ ಚಿತ್ರರಂಗದ ಕೇಂದ್ರಬಿಂದು ಆಗಿರುವ ಗಾಂಧಿನಗರ ಸೇರಿದಂತೆ ಬೆಂಗಳೂರಿನ ಮೂಲೆ ಮೂಲೆಯ ರಸ್ತೆ ಬದಿಯಲ್ಲಿ ಪೈರೇಟೆಡ್ ಸಿ.ಡಿಗಳನ್ನ ಮಾರುವುದೇ ದೊಡ್ಡ ಬಿಸಿನೆಸ್ ಆಗಿರುವುದು ನಿಮ್ಮೆಲ್ಲರ ಗಮನಕ್ಕೆ ಬಂದಿರಬಹುದು.

ಯಾವ ಚಿತ್ರ ಬೇಕು ಕೇಳಿ....

ಯಾವ ಚಿತ್ರ ಬೇಕು ಕೇಳಿ....

ತೆಲುಗಿನ 'ಖೈದಿ ನಂ.150', 'ಗೌತಮಿಪುತ್ರ ಶಾತಕರ್ಣಿ' ಹಾಗೂ ತಮಿಳಿನ 'ಭೈರವ' ಸೇರಿದಂತೆ ಇತ್ತೀಚೆಗೆ ಬಿಡುಗಡೆ ಆದ ಯಾವ ಚಿತ್ರ ಬೇಕು ಕೇಳಿ... ಎಲ್ಲವೂ ಕೇವಲ ನಲವತ್ತು ರೂಪಾಯಿಗೆ ಸಿಗುತ್ತದೆ. ಅಷ್ಟರಮಟ್ಟಿಗೆ ಪೈರಸಿ ದಂಧೆ ಬೆಳೆದು ನಿಂತಿದೆ.

ಕನ್ನಡ ಚಿತ್ರಗಳಿಗೂ ಪೈರಸಿ ಕಾಟ

ಕನ್ನಡ ಚಿತ್ರಗಳಿಗೂ ಪೈರಸಿ ಕಾಟ

ಬರೀ ತೆಲುಗು, ತಮಿಳು ಹಾಗೂ ಹಿಂದಿ ಚಿತ್ರಗಳು ಮಾತ್ರ ಅಲ್ಲ. ಕನ್ನಡ ಚಿತ್ರಗಳಿಗೂ ಪೈರಸಿ ಪೆಡಂಭೂತ ಕಾಡುತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆ ಆದ 'ಕಿರಿಕ್ ಪಾರ್ಟಿ', 'ರಾಮಾ ರಾಮಾ ರೇ', 'ಕೋಟಿಗೊಬ್ಬ-2', 'ಪುಷ್ಟಕ ವಿಮಾನ' ಸೇರಿದಂತೆ ಹಲವು ಚಿತ್ರಗಳ ಪೈರೇಟೆಡ್ ಸಿ.ಡಿಗಳು ಮಾರಾಟ ಆಗುತ್ತಿದೆ.['ಕಿರಿಕ್ ಪಾರ್ಟಿ' ವಿಮರ್ಶೆ: ಮತ್ತೆ ನೆನಪಾಗುತ್ತಿದೆ ಕಾಲೇಜಿನ 'ಜಾಲಿಲೈಫ್'!]

ರಿಶಬ್ ಶೆಟ್ಟಿ ಗಮನಕ್ಕೆ ಬಂದಿದೆ ಈ ವಿಷ್ಯ

ರಿಶಬ್ ಶೆಟ್ಟಿ ಗಮನಕ್ಕೆ ಬಂದಿದೆ ಈ ವಿಷ್ಯ

ಬೆಂಗಳೂರಿನ ರಾಜರಾಜೇಶ್ವರಿ ನಗರದ ರಸ್ತೆ ಬದಿಯಲ್ಲಿ ಪೈರೇಟೆಡ್ ಸಿ.ಡಿ ಮಾರಾಟ ಮಾಡುತ್ತಿರುವ ವಿಷ್ಯ 'ಕಿರಿಕ್ ಪಾರ್ಟಿ' ಚಿತ್ರದ ನಿರ್ದೇಶಕ ರಿಶಬ್ ಶೆಟ್ಟಿ ಕಿವಿಗೆ ಬಿದ್ದಿದೆ. ತಕ್ಷಣ ತಂಡದೊಂದಿಗೆ ಹೊರಟ ರಿಶಬ್ ಶೆಟ್ಟಿ ನಕಲಿ ಸಿ.ಡಿ ಮಾರಾಟ ಮಾಡುತ್ತಿದ್ದವರಿಗೆ ಬಿಸಿ ಮುಟ್ಟಿಸಿದ್ದಾರೆ.

ಯಾವ್ಯಾವ ಸಿನಿಮಾಗಳಿತ್ತು ಗೊತ್ತಾ.?

ಯಾವ್ಯಾವ ಸಿನಿಮಾಗಳಿತ್ತು ಗೊತ್ತಾ.?

ರಾಜರಾಜೇಶ್ವರಿ ನಗರದ ಬೀದಿ ಬದಿಯಲ್ಲಿ ಕನ್ನಡದ 'ಕಿರಿಕ್ ಪಾರ್ಟಿ', 'ತರ್ಲೆ ವಿಲೇಜ್', 'ಕೋಟಿಗೊಬ್ಬ-2', 'ರಾಮಾ ರಾಮಾ ರೇ' ಸೇರಿದಂತೆ ಹಲವು ಚಿತ್ರಗಳ ನಕಲಿ ಸಿ.ಡಿಗಳು ಕೇವಲ 40 ರೂಪಾಯಿಗೆ ಸೇಲ್ ಮಾಡಲಾಗುತ್ತಿತ್ತು. ಈ ವೇಳೆ ಎಂಟ್ರಿ ಕೊಟ್ಟ ರಿಶಬ್ ಶೆಟ್ಟಿ, ಚೇರ್-ಟೇಬಲ್ ಒದ್ದು 'ಕಿರಿಕ್' ಮಾಡಿದ್ದಾರೆ.

ಬಿಸಿ ಮುಟ್ಟಿಸಿದ ರಿಶಬ್

ಬಿಸಿ ಮುಟ್ಟಿಸಿದ ರಿಶಬ್

ನಕಲಿ ಸಿ.ಡಿ ಗಳನ್ನ ತುಂಬಿಕೊಂಡು, ಮಾರಾಟ ಮಾಡುತ್ತಿದ್ದವರನ್ನ ಪೊಲೀಸ್ ಸ್ಟೇಷನ್ ಗೆ ರಿಶಬ್ ಶೆಟ್ಟಿ ಕರ್ಕೊಂಡು ಹೋಗಿದ್ದಾರೆ. ಅದರ ವಿಡಿಯೋ ಇಲ್ಲಿದೆ. ಲಿಂಕ್ ಕ್ಲಿಕ್ ಮಾಡಿ ನೋಡಿ....

English summary
Piracy Problem for Kannada Movie 'Kirik Party'
Please Wait while comments are loading...

Kannada Photos

Go to : More Photos