»   » 'ಹೆಬ್ಬುಲಿ' ಎದುರು ರಿಲೀಸ್ ಆಗ್ತಿರುವ ಆ ಚಿತ್ರ ಯಾವುದು?

'ಹೆಬ್ಬುಲಿ' ಎದುರು ರಿಲೀಸ್ ಆಗ್ತಿರುವ ಆ ಚಿತ್ರ ಯಾವುದು?

Posted by:
Subscribe to Filmibeat Kannada

ಮಳೆ ಹುಡುಗಿ ಪೂಜಾ ಗಾಂಧಿ ಅಭಿನಯದ 'ಜಿಲೇಬಿ' ತಯಾರಾಗಿದೆ. ಎಲ್ಲ ಅಂದುಕೊಂಡಂತೆ ಆದರೇ, ಇದೇ ತಿಂಗಳಲ್ಲಿ ರುಚಿರುಚಿಯಾದ 'ಜಿಲೇಬಿ'ಯನ್ನ ಚಿತ್ರಮಂದಿರಗಳಲ್ಲಿ ನೀವು ಸವಿಯಬಹುದು.

ಈಗಾಗಲೇ ಟ್ರೈಲರ್ ಮೂಲಕ ಸಖತ್ ಹಾಟ್ ಎನಿಸಿರುವ 'ಜಿಲೇಬಿ' ಸ್ವೀಟ್ ಆಗಿದೆ ಎಂಬುದು ಗಾಂಧಿನಗರದ ಲೆಕ್ಕಾಚಾರ. ಅಂದ್ಹಾಗೆ, 'ಜಿಲೇಬಿ' ಚಿತ್ರದಲ್ಲಿ ಪೂಜಾ ಗಾಂಧಿ ಕಾಲ್ ಗರ್ಲ್ ಪಾತ್ರವನ್ನ ಮಾಡಿದ್ದು, ಪಕ್ಕಾ ಮನರಂಜನೆಯಿಂದ ಕೂಡಿದೆಯಂತೆ.['ಬಿಗ್ ಬಾಸ್' ಮನೆಯೊಳಗೆ ಪೂಜಾ ಗಾಂಧಿ 'ಜಿಲೇಬಿ']


pooja-gandhi-starrer-jilebi-is-releasing-on-february-23rd

ಮೂಲಗಳ ಪ್ರಕಾರ ಪೂಜಾಗಾಂಧಿ ನಟನೆಯ 'ಜಿಲೇಬಿ' ಇದೇ ತಿಂಗಳು 23ರಂದು ಬಿಡುಗಡೆ ಆಗಲಿದೆ. ಇಲ್ಲಿ ಗಮನಿಸಿಬೇಕಾದ ವಿಚಾರವೇನಪ್ಪಾ ಅಂದ್ರೆ, ಸುದೀಪ್ ಅಭಿನಯದ 'ಹೆಬ್ಬುಲಿ' ಕೂಡ ಅದೇ ದಿನ ತೆರೆಕಾಣುತ್ತಿದೆ. ಆದ್ರೆ, 'ಹೆಬ್ಬುಲಿ' ಬಗ್ಗೆ ಚಿಂತೆ ಮಾಡದ 'ಜಿಲೇಬಿ' ಅಂದೇ ಥಿಯೇಟರ್ ಗೆ ಬರುವ ತಯಾರಿಯಲ್ಲಿದೆಯಂತೆ.


Pooja Gandhi Starrer 'Jilebi' is releasing on February 23rd

ಪೂಜಾ ಗಾಂಧಿ ಜೊತೆಯಲ್ಲಿ ಯಶಸ್ ಸೂರ್ಯ, ವಿಜಯ ಚೆಂಡೂರ್, ನಾಗೇಂದ್ರ, ರಾಕ್ ಲೈನ್ ಸುಧಾಕರ್, ದತ್ತಣ್ಣ, ಶೋಭ್ ರಾಜ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಲಕ್ಕಿ ಶಂಕರ್ ನಿರ್ದೇಶನ ಮಾಡಿದ್ದು, ಈ ಹಿಂದೆ 'ಸಿಗರೇಟ್', 'ದೇವ್ರಾಣೆ' ಚಿತ್ರಗಳನ್ನ ನಿರ್ಮಾಣ ಮಾಡಿದ್ದ ಶಿವಶಂಕರ್ ಅವರು 'ಜಿಲೇಬಿ'ಯನ್ನ ನಿರ್ಮಾಣ ಮಾಡಿದ್ದಾರೆ.

English summary
Kannada Actress Pooja Gandhi Starrer 'Jilebi' is Releasing Along with Sudeep's Hebbuli On February 23rd. The Movie Directed by Lucky Shankar.
Please Wait while comments are loading...

Kannada Photos

Go to : More Photos