»   » ಹಾರರ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಪೂನಂ ಪಾಂಡೆ.!

ಹಾರರ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಪೂನಂ ಪಾಂಡೆ.!

Written by: ಸೋನು ಗೌಡ
Subscribe to Filmibeat Kannada

ವಿವಾದಗಳನ್ನೇ ಮೈಮೇಲೆ ಹೊದ್ದುಕೊಂಡು ಮಲಗಿರುವ ಬಾಲಿವುಡ್ ನಟಿ ಪೂನಂ ಪಾಂಡೆ ಅವರು ಇದೀಗ ಹೊಸದಾಗಿ ಕನ್ನಡ ಚಿತ್ರರಂಗಕ್ಕೆ ಪೂರ್ಣ ಪ್ರಮಾಣದ ನಾಯಕಿಯಾಗಿ ಎಂಟ್ರಿಯಾಗಲು ಅಣಿಯಾಗುತ್ತಿದ್ದಾರೆ. ಇದಕ್ಕಿಂತ ಮೊದಲು 'ಲವ್ ಇಸ್ ಪಾಯಿಸನ್' ಚಿತ್ರದಲ್ಲಿನ ಐಟಂ ಸಾಂಗ್ ಒಂದಕ್ಕೆ ಸೊಂಟ ಬಳುಕಿಸಿದ್ದರು.

ತಮ್ಮ ಚೊಚ್ಚಲ ಚಿತ್ರ 'ನಶಾ'ದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡು ವಿವಾದ ಹುಟ್ಟುಹಾಕಿದ್ದ ಪೂನಂ ಪಾಂಡೆ ಅವರು ಕನ್ನಡದಲ್ಲಿ ಭಯಂಕರ ಹಾರರ್-ಥ್ರಿಲ್ಲರ್ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ನಾಯಕಿಯಾಗಿ ಎಂಟ್ರಿಯಾಗುತ್ತಿದ್ದಾರೆ.[ಪೂನಂ ಆಮೂಲಾಗ್ರ ಬೆತ್ತಲೆ ಫೋಟೋ ಲೀಕ್]

Poonam Pandey all set to do a Horror film in Kannada

'ನಾನು ಮುಂಬೈನಲ್ಲಿದ್ದ ಸಂದರ್ಭದಲ್ಲಿ ಇತ್ತೀಚೆಗೆ ನಿರ್ದೇಶಕರೊಬ್ಬರು ಕಥೆ ಹೇಳಲೆಂದು ನನಗೆ ಫೋನ್ ಕರೆ ಮಾಡಿದರು. ನಾನು ಕೂಡ ಒಪ್ಪಿ ಭೇಟಿ ಮಾಡಿ ಕಥೆ ಕೇಳಿದೆ. ಸ್ಕ್ರಿಪ್ಟ್ ನನಗೆ ಬಹಳ ಹಿಡಿಸಿದ ಕಾರಣ ಅವರಿಗೆ ಅಂದೇ ಒಪ್ಪಿಗೆ ಸೂಚಿಸಿದೆ' ಎಂದಿದ್ದಾರೆ ನಟಿ ಪೂನಂ ಪಾಂಡೆ.

'ಇದು ಪಕ್ಕಾ ಹಾರರ್ ಸಿನಿಮಾ. ವಿಶೇಷ ಏನಪ್ಪಾ ಅಂದರೆ ಇದೇ ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ನಟಿಸಲಿದ್ದೇನೆ. ಇನ್ನೇನು ಸದ್ಯದಲ್ಲೇ ಶೂಟಿಂಗ್ ಆರಂಭವಾಗುತ್ತಿದೆ' ಎಂದು ಪೂನಂ ಪಾಂಡೆ ಹೇಳಿಕೊಂಡಿದ್ದಾರೆ.[ಬೆತ್ತಲೆ ಸೇವೆಗೆ ಮತ್ತೆ ರೆಡಿಯಾದ ಪೂನಂ ಪಾಂಡೆ]

ಇನ್ನೂ ಹೆಸರಿಡದ ಈ ಚಿತ್ರದ ಚಿತ್ರೀಕರಣ ಈ ತಿಂಗಳಿನಲ್ಲಿ ಆರಂಭವಾಗಲಿದ್ದು, ಚಿತ್ರದಲ್ಲಿ ತಮ್ಮ ಭಯಂಕರ-ಭೀಭತ್ಸ-ಭೀಕರ ನಟನೆಯನ್ನು ಪ್ರದರ್ಶಿಸಲು ಸಿದ್ಧರಾಗಿದ್ದಾರಂತೆ ಮಾದಕ ನಟಿ ಪೂನಂ ಪಾಂಡೆ.

'ನನ್ನ ಚೊಚ್ಚಲ ಚಿತ್ರ ''ನಶಾ''ದಲ್ಲಿ ರೋಮ್ಯಾಂಟಿಕ್ ಪಾತ್ರ ನಿರ್ವಹಿಸಿದೆ. 'ಮಾಲಿನಿ & ಕೋ' ಚಿತ್ರದಲ್ಲಿ ನನ್ನ ಶಕ್ತಿ ಪ್ರದರ್ಶಿಸಿದೆ. ಇನ್ನು ನನ್ನ ಭಯಂಕರ ನಟನೆಯನ್ನು ಪ್ರದರ್ಶಿಸಲು ಇದು ಒಳ್ಳೆಯ ಅವಕಾಶ' ಎಂದು ಭಾರಿ ಉತ್ಸಾಹದಲ್ಲಿದ್ದಾರೆ ಬಿಚ್ಚಮ್ಮ ಪೂನಂ ಪಾಂಡೆ.[ತಡರಾತ್ರಿ ತುಂಡುಡುಗೆಯಲ್ಲಿದ್ದ ಪೂನಂ ಪಾಂಡೆ ಬಂಧನ]

ಈಗಾಗಲೇ ಭಯಂಕರವಾಗಿರುವ ಪೂನಂ ಪಾಂಡೆ ಅವರು ಇನ್ನು ಹಾರರ್ ಸಿನಿಮಾದಲ್ಲಿ ಭೀಭತ್ಸವಾಗಿ ಕಾಣಿಸಿಕೊಳ್ಳುತ್ತಾರೆ ಎಂದರೆ ಹೇಗಿರಬಹುದು ನೀವೇ ಊಹಿಸಿ.

-
-
-
-
-
-
-
-
-
-
-
ಹಾರರ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪೂನಂ ಪಾಂಡೆ.!

ಹಾರರ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪೂನಂ ಪಾಂಡೆ.!

English summary
Controversial actress Poonam Pandey, who went bold with her debut film “Nasha”, will be next seen in a horror film in Kannada.
Please Wait while comments are loading...

Kannada Photos

Go to : More Photos