»   » ತಮಿಳಿನ ಖ್ಯಾತ ನಟ ದಂಡಪಾಣಿ ನಿಧನ

ತಮಿಳಿನ ಖ್ಯಾತ ನಟ ದಂಡಪಾಣಿ ನಿಧನ

Posted by:
Subscribe to Filmibeat Kannada

ತಮಿಳು ಚಿತ್ರರಂಗದ ಖ್ಯಾತ ನಟ ಕಾದಲ್ ದಂಡಪಾಣಿ ಭಾನುವಾರ (ಜು.20) ಬೆಳಗ್ಗೆ ವಿಧಿವಶರಾಗಿದ್ದಾರೆ. ತಮಿಳುನಾಡಿನ ದಿಂಡಿಗಲ್ ಜಿಲ್ಲೆಯವರಾದ ಅವರು ವಿಜಯಾ ಆಸ್ಪತ್ರೆಯಲ್ಲಿ ಹೃದಯಾಘಾತದಿಂದಾಗಿ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.

71 ವರ್ಷದ ದಂಡಪಾಣಿಯವರು ಖಳನಾಯಕ ಪಾತ್ರಗಳಿಗೆ ಹೊಸ ಆಯಾಮವನ್ನು ಒದಗಿಸಿದ್ದರು. 2004ರಲ್ಲಿ ತೆರೆಕಂಡ "ಕಾದಲ್" ಚಿತ್ರದ ಮೂಲಕ ದಂಡಪಾಣಿ ಕಾಲಿವುಡ್ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದರು.

Kadhal Dhandapani

ದಂಡಪಾಣಿ ಅವರು ಶನಿವಾರ ಶರತ್ ಕುಮಾರ್ ಅಭಿನಯದ ಚಂಡಮಾರುತಮ್ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಶರತ್ ಕುಮಾರ್ ದಂಡಪಾಣಿ ಅವರ ನಿಧನಕ್ಕೆ ಸಂತಾಪ ಸೂಚಿಸಿ ಟ್ವಿಟ್ ಮಾಡಿದ್ದಾರೆ. ದಂಡಪಾಣಿ ಅವರ ಸ್ವಗ್ರಾಮ ದಿಂಡಿಗಲ್ ನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

ಇಂಗ್ಲೀಷ್ ಕಾರನ, ಚಿತ್ತಿರಂ ಪೇಸುದಡಿ, ವೇಲಾಯುಧಮ್, ಮುನಿ, ವರುತಪಡಾದ ವಾಲಿಬರ್ ಸಂಗಂ ಮುಂತಾದ ಚಿತ್ರಗಳಲ್ಲಿ ದಂಡಪಾಣಿ ಅವರು ನಟಿಸಿದ್ದರು. ತಮಿಳು ಮಾತ್ರವಲ್ಲದೇ ದಕ್ಷಿಣ ಭಾರತದ ಇತರ ಭಾಷೆಗಳಾದ ಕನ್ನಡ, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲೂ ಅವರು ನಟಿಸಿದ್ದರು. ಕನ್ನಡದಲ್ಲಿ ಸೂಪರ್ ಸ್ಟಾರ್ ಉಪೇಂದ್ರ ಅವರ ಸೂಪರ್ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ದಂಡಪಾಣಿ ಅವರು ನಟಿಸಿದ್ದರು.

Dhandapani
English summary
Popular Tamil actor Kadhal Dhandapani (71) passed away at a private hospital in Chennai on Sunday, July 20 morning due to cardiac arrest. The Tamil actor became popular after playing the antagonist role in the 2004 hit film Kadhal.
Please Wait while comments are loading...

Kannada Photos

Go to : More Photos