»   » ಪುನೀತ್ ಜೊತೆ ಎನ್ ಟಿ ಅರ್ ಕೂಡ ಡ್ಯಾನ್ಸ್ ಮಾಡ್ತಾರಂತೆ

ಪುನೀತ್ ಜೊತೆ ಎನ್ ಟಿ ಅರ್ ಕೂಡ ಡ್ಯಾನ್ಸ್ ಮಾಡ್ತಾರಂತೆ

Posted by:
Subscribe to Filmibeat Kannada

ಪರಭಾಷಾ ನಿರ್ಮಾಪಕರಾದ ಎನ್ ಕೆ ಲೋಹಿತ್ ಅವರು ತಮ್ಮ 'ಚಕ್ರವ್ಯೂಹ' ಸಿನಿಮಾದ ಮೂಲಕ ಎಲ್ಲಾ ಚಿತ್ರರಂಗದವರನ್ನು ಸ್ಯಾಂಡಲ್ ವುಡ್ ಕಡೆಗೆ ಸೆಳೆಯುತ್ತಿದ್ದಾರೆ. ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ನಟಿ ರಚಿತಾ ರಾಮ್ ಅವರು ಕಾಣಿಸಿಕೊಂಡಿರುವ 'ಚಕ್ರವ್ಯೂಹ'ದಿಂದ ಮತ್ತೊಂದು ಲೇಟೆಸ್ಟ್ ನ್ಯೂಸ್ ಹೊರಬಿದ್ದಿದೆ.

ಚಿತ್ರಕ್ಕೆ ಹಾಡಲು ತೆಲುಗು ನಟ-ನಟಿಯರು ಆಗಮಿಸಿದ್ದು ಆಯ್ತು ಇದೀಗ ಪುನೀತ್ ಅವರಿಗೆ ನೃತ್ಯ ನಿರ್ದೇಶನ ಮಾಡಲು ಕೊರಿಯೋಗ್ರಾಫರ್ ಶೋಭಿ ಪಲುರಾಜ್ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.[ಪವರ್ ಸ್ಟಾರ್ ಅಪ್ಪು ಹುಟ್ಟುಹಬ್ಬಕ್ಕೆ 'ಚಕ್ರವ್ಯೂಹ' ಉಡುಗೊರೆ]

ಬೆಂಗಳೂರಿನ 'ಹೆಸರಘಟ್ಟ ಮತ್ತು ಒರಾಯಾನ್ ಮಾಲ್ ಗಳಲ್ಲಿ 'ಗೆಳೆಯ ಗೆಳೆಯ' ಹಾಡಿನ ಚಿತ್ರೀಕರಣ ನಡೆಯಲಿದ್ದು, ಇದೇ ಸೋಮವಾರದಿಂದ ಶೂಟಿಂಗ್ ಆರಂಭವಾಗಲಿದೆ.[ಪುನೀತ್ ಜೊತೆ ಡ್ಯುಯೆಟ್ ಸಾಂಗ್ ಹಾಡ್ತಾರಂತೆ ಕಾಜಲ್]

ಟಾಲಿವುಡ್ ನ ಯಂಗ್ ಟೈಗರ್ ಜ್ಯೂನಿಯರ್ ಎನ್ ಟಿ ಆರ್ ಹಾಡಿರುವ 'ಗೆಳೆಯ ಗೆಳೆಯ' ಹಾಡಿಗೆ ಕೊರಿಯೋಗ್ರಫಿ ಮಾಡಲು ಮಾಸ್ಟರ್ ಶೋಭಿ ಪಲುರಾಜು ಆಗಮಿಸಿದ್ದು, ಈ ನೃತ್ಯದಲ್ಲಿ ಪುನೀತ್ ಅವರ ಜೊತೆ ಎನ್.ಟಿ ಆರ್ ಕೂಡ ನಟಿಸಲಿದ್ದಾರೆ.

ಪವರ್ ಸ್ಟಾರ್ ಪುನೀತ್ ಅವರು ಎಂಟ್ರಿ ಕೊಡುವ ಹಾಡು ಇದಾಗಿದ್ದು, ಇದು ಈ ವರ್ಷದ ಬ್ಲಾಕ್ ಬಸ್ಟರ್ ಹಿಟ್ ಸಾಂಗ್ ಆಗುತ್ತೆ ಎಂದು ನಿರ್ದೇಶಕ ಎಮ್ ಸರವಣನ್ ಅಭಿಪ್ರಾಯ ಪಟ್ಟಿದ್ದಾರೆ.

‍ಷಣ್ಮುಗಂ ಸುಂದರಂ ಅವರ ಸಿನಿಮಾಟೋಗ್ರಫಿ ಈ ಚಿತ್ರಕ್ಕಿದ್ದು, ಸಂಗೀತ ನಿರ್ದೇಶಕ ಎಸ್ ಎಸ್ ತಮನ್ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಜನವರಿ ತಿಂಗಳು ಕೊನೆಗೆ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಲಿದೆ.[ಪವರ್ ಸ್ಟಾರ್ ಚಿತ್ರಕ್ಕೆ ಧ್ವನಿ ನೀಡಿದ ಯಂಗ್ ಟೈಗರ್ NTR]

ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬವಾದ ಮಾರ್ಚ್ 17 ರಂದು 'ಚಕ್ರವ್ಯೂಹ' ಸಿನಿಮಾ ಬಿಡುಗಡೆ ಮಾಡುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ. ಜೊತೆಗೆ ಫೆಬ್ರವರಿ 12 ಕ್ಕೆ ಚಿತ್ರದ ಆಡಿಯೋ ಬಿಡುಗಡೆ ಮಾಡಲು ನಿರ್ಧರಿಸಿದ್ದು, ಸಮಾರಂಭಕ್ಕೆ ಜ್ಯೂನಿಯರ್ ಎನ್ ಟಿ ಆರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

English summary
The dance, which will have Puneeth grooving to the song Gelaya Gelaya sung by Tollywood star Juinor NTR, will be an introductory song. Shobi is currently in Bengaluru and according to sources, the song started shoot on Monday
Please Wait while comments are loading...

Kannada Photos

Go to : More Photos