»   » ಹೆಚ್ಚುದಿನ ಬದುಕುಳಿಯದ ಇಬ್ಬರ ಜೊತೆ ಮಗುವಾದ ಪುನೀತ್

ಹೆಚ್ಚುದಿನ ಬದುಕುಳಿಯದ ಇಬ್ಬರ ಜೊತೆ ಮಗುವಾದ ಪುನೀತ್

Posted by:
Subscribe to Filmibeat Kannada

ವರನಟ ಡಾ.ರಾಜಕುಮಾರ್ ತಮ್ಮ ಅಭಿಮಾನಿಗಳ ಜೊತೆ ನಿಕಟ ಸಂಪರ್ಕವನ್ನು ಹೊಂದಿದ್ದವರು. ಸಮಯ ಸಿಕ್ಕಾಗಲೆಲ್ಲಾ ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದರು.

ಕನ್ನಡದ ಸೆಲೆಬ್ರಿಟಿಗಳು ತಮ್ಮ ಡೈಹರ್ಡ್ ಅಭಿಮಾನಿಗಳನ್ನು ಅವರ ಕೋರಿಕೆಯಂತೆ ಭೇಟಿಯಾಗಿದ್ದೂ ಉಂಟು, ಜೊತೆಗೆ ಅವರ ಕಷ್ಟಕ್ಕೆ ಸ್ಪಂಧಿಸಿದ ಉದಾಹರಣೆಗಳೂ ನಮ್ಮ ಮುಂದಿವೆ.

ಸಾಯುವ ಮುನ್ನ ಒಮ್ಮೆ ತಮ್ಮ ನೆಚ್ಚಿನ ನಟರನ್ನು ಕಣ್ತುಂಬಿಸಿಕೊಳ್ಳಬೇಕೆನ್ನುವ ಅಭಿಮಾನಿಗಳ ಆಸೆಯಂತೆ ಶಿವಣ್ಣ, ದರ್ಶನ್, ಉಪೇಂದ್ರ, ಸುದೀಪ್, ಪುನೀತ್ ಹೀಗೆ ಆಸ್ಪತ್ರೆ ಹೋಗಿ ಅಭಿಮಾನಿಗಳ ಆಸೆಯನ್ನು ಪೂರೈಸಿದ್ದೂ ಇದೆ.

ಇತ್ತೀಚೆಗೆ ರನ್ನ ಚಿತ್ರದ ಬಿಡುಗಡೆಯ ದಿನ ಕಟೌಟ್ ಮೆರವಣಿಗೆ ತರುತ್ತಿದ್ದ ವೇಳೆ ಅಭಿಮಾನಿಯೊಬ್ಬ ಸಾವನ್ನಪ್ಪಿದ್ದಾಗ, ಸುದೀಪ್ ಮೃತ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡಿ ಆ ಕುಟುಂಬಕ್ಕೆ ಸಾಂತ್ವನ ಹೇಳಿದ ಘಟನೆ ನಮ್ಮ ಮುಂದಿದೆ.

ಇಬ್ಬರು ಫೊಲೀಯೋ ಪೀಡಿತರ ಜೊತೆ ಮಗುವಾದ ಪುನೀತ್, ಮುಂದೆ ಓದಿ..

ತಂದೆ ನಡೆದ ದಾರಿಯಲ್ಲೇ ಮಗ

ತಂದೆ ರಾಜಣ್ಣ ದಾರಿಯಲ್ಲೇ ನಡೆಯಲು ಮುಂದಾಗಿರುವ ಕಿರಿಯ ಪುತ್ರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪೊಲೀಯೋ ಪೀಡಿತರಿಬ್ಬರ ಜೊತೆ ಅವರ ಆಸೆಯಂತೆ ಅವರಿಬ್ಬರ ಜೊತೆ ಸಮಯ ಕಳೆದು ಬಂದಿದ್ದಾರೆ.

ಖುಷಿಪಟ್ಟ ಅಕ್ಕ,ತಮ್ಮ

ಪೋಲೀಯೋ ಪೀಡಿತರಾದ ಅಕ್ಕ ಮತ್ತು ತಮ್ಮ ಇಬ್ಬರಿಗೂ ತಾವು ಹೆಚ್ಚುದಿನ ಬದುಕುವುದಿಲ್ಲ ಎನ್ನುವ ಅರಿವಿದೆ. ಆದರೂ ಒಮ್ಮೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೊತೆ ಕಾಲ ಕಳೆಯಬೇಕು ಎನ್ನುವ ಆಸೆಯನ್ನು ಹೊಂದಿದ್ದರು. (ಫೋಟೋ: ಈ ಸಂಜೆ)

ಮಕ್ಕಳ್ಳಿಬರನ್ನು ಭೇಟಿಯಾದ ಪುನೀತ್

ಈ ಸಂಜೆ ಪತ್ರಿಕೆಯಲ್ಲಿನ ವರದಿಯನ್ನು ಓದಿ ಅದಕ್ಕೆ ಸ್ಪಂಧಿಸಿದ ಪುನೀತ್, ಅರುಣ್ ಮತ್ತು ಸೌಮ್ಯ ಎನ್ನುವ ಪೋಲೀಯೋ ಪೀಡಿತರನ್ನು ಯಲಹಂಕದಲ್ಲಿ ಕಳೆದ ಶುಕ್ರವಾರ (ಜುಲೈ 3) ಭೇಟಿಯಾಗಿ ಧೈರ್ಯ ತುಂಬಿ ಬಂದಿದ್ದಾರೆ.

ಮಕ್ಕಳ ಅಪೇಕ್ಷೆ

ತಾವು ಇಷ್ಟಪಟ್ಟಿದ್ದ ಅಪ್ಪುವನ್ನು ಒಮ್ಮೆಯಾದರೂ ಖುದ್ದಾಗಿ ನೋಡಬೇಕು. ಅವರ ಜತೆ ಬೆರೆಯಬೇಕು, ಮಾತನಾಡಬೇಕೆಂಬ ಹಂಬಲ ಮಾತ್ರ ಇವರಿಬ್ಬರಲ್ಲಿತ್ತು. ಇವರ ಅಪೇಕ್ಷೆಯಂತೆ ಇವರನ್ನು ಭೇಟಿಯಾದ ಪುನೀತ್, ಅವರಿಗೆ ಸಿಹಿತಿನ್ನಿಸಿ ಅವರ ಜೊತೆ ಬೆರೆತು ಅವರ ಆಸೆಯನ್ನು ನೆರವೇರಿಸಿದ್ದಾರೆ.

ಅಪ್ಪಾಜಿಯ ಅಪೇಕ್ಷೆ

ಚಿಕ್ಕ ವಯಸ್ಸಿಂದಲೂ ನಟಿಸುತ್ತಿದ್ದ ನನಗೆ ಅಪ್ಪಾಜಿ ಜೊತೆ ಹೋಗುವ ಅವಕಾಶವಿತ್ತು. ಅಭಿಮಾನಿಗಳು ಅಪ್ಪಾಜಿಯನ್ನು ಕಂಡು ಆರಾಧಿಸುತ್ತಿದ್ದರು. ಇದನ್ನು ನೋಡಿ ನನಗೆ ಮನಸ್ಸು ಕರಗುತ್ತಿತ್ತು. ಅಪ್ಪಾಜಿ ಯಾವಾಗಲೂ ಅಭಿಮಾನಿ ದೇವರುಗಳು ಎಂದು ಹೇಳುತ್ತಿದ್ದರು ಎಂದು ಅಂದಿನ ದಿನವನ್ನು ಈ ಸಂದರ್ಭದಲ್ಲಿ ಅಪ್ಪು ನೆನಪಿಸಿಕೊಂಡಿದ್ದಾರೆ.

ನನಗೂ ಆಸೆಯಿದೆ

ನಮ್ಮನ್ನು ಆರಾಧಿಸುವ ಅಭಿಮಾನಿಗಳನ್ನು ಭೇಟಿಯಾಗಬೇಕೆಂದು ನಾನೂ ಬಯಸುತ್ತೇನೆ. ಕೆಲಸದ ಒತ್ತಡದಿಂದ ಬ್ಯೂಸಿಯಾಗಿರುತ್ತೇನೆ. ಇಂತಹ ಕ್ಷಣಗಳು ಬಂದಾಗ ನನಗೆ ರೋಮಾಂಚನದ ಅನುಭವವಾಗುತ್ತದೆ - ಪುನೀತ್ (ಮಾಹಿತಿ ಕೃಪೆ: ಈ ಸಂಜೆ)

English summary
Power Star Puneeth Rajkumar met polio effected family in Yelahanka, Bengaluru.
Please Wait while comments are loading...

Kannada Photos

Go to : More Photos