»   » 'ಬಾಹುಬಲಿ-2' ಚಿತ್ರೀಕರಣದಿಂದ ಪ್ರಭಾಸ್ ಔಟ್!

'ಬಾಹುಬಲಿ-2' ಚಿತ್ರೀಕರಣದಿಂದ ಪ್ರಭಾಸ್ ಔಟ್!

Written by:
Subscribe to Filmibeat Kannada

ಭಾರತದ ಸಿನಿಮಾ ಕ್ಷೇತ್ರದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಬಾಹುಬಲಿ ಚಿತ್ರದ ಎರಡನೇ ಭಾಗ 'ಬಾಹುಬಲಿ 2' ಚಿತ್ರೀಕರಣ ಈಗ ಪೂರ್ಣ ಗೊಂಡಿದೆ. ಈಗಂತ 'ಬಾಹುಬಲಿ' ಚಿತ್ರದ ನಾಯಕ ನಟ ಪ್ರಭಾಸ್ ತಮ್ಮ ಸಮಾಜಿಕ ತಾಣ ಪೇಜ್‌ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಎಸ್‌.ಎಸ್‌ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಬಳಗದಲ್ಲಿ ಪ್ರಭಾಸ್ ಶತತವಾಗಿ 5 ವರ್ಷ ಕೆಲಸ ನಿರ್ವಹಿಸಿದ್ದು, ಕಳೆದ 4 ವರ್ಷಗಳಿಂದ ಇತರೆ ಯಾವುದೇ ಚಿತ್ರದಲ್ಲಿ ಅಭಿನಯಿಸಿಲ್ಲ. ಇತ್ತೀಚೆಗಷ್ಟೆ ಪ್ರಭಾಸ್ ಬಾಹುಬಲಿ-2 ಚಿತ್ರೀಕರಣದ ಸೆಟ್‌ ನಿಂದ ಹೊರಬಂದಿದ್ದಾರೆ. ಅವರು ಹೊರಬಂದ ನಂತರ ತಮ್ಮ ಸಾಮಾಜಿಕ ಜಾಲತಾಣ ಪೇಜ್‌ ನಲ್ಲಿ ಚಿತ್ರದ ಬಗ್ಗೆ ಹೇಳಿದ್ದೇನು? ಎಂಬುದರ ಬಗ್ಗೆ ಕಪ್ಲೀಟ್ ಡೀಟೇಲ್ಸ್ ಇಲ್ಲಿದೆ ಓದಿರಿ..[ಅಮರೇಂದ್ರ 'ಬಾಹುಬಲಿ' ಪ್ರಭಾಸ್ ಗೆ ಮದ್ವೆ ಅಂತೆ..!]

ಚಿತ್ರೀಕರಣ ಮುಕ್ತಾಯ

ಚಿತ್ರೀಕರಣ ಮುಕ್ತಾಯ

ಬಾಹುಬಲಿ 2 ಚಿತ್ರೀಕರಣ ಮುಕ್ತಾಯವಾಗಿದೆ. ಬಾಹುಬಲಿ ಚಿತ್ರೀಕರಣ ಆರಂಭಿಸಿ 5 ವರ್ಷ ಪೂರ್ಣಗೊಳಿಸಿ ಇಂದು ಚಿತ್ರ ಶೂಟಿಂಗ್ ಕಂಪ್ಲೀಟ್ ಆಗಿದೆ.

ಇವರೆಲ್ಲಾ ನನಗೆ ಫ್ಯಾಮಿಲಿ ಸದಸ್ಯರು

ಇವರೆಲ್ಲಾ ನನಗೆ ಫ್ಯಾಮಿಲಿ ಸದಸ್ಯರು

'ಬಾಹುಬಲಿ 2 ಸಿನಿಮಾ ಚಿತ್ರೀಕರಣ ಮುಗಿಸಿದ ಸಂದರ್ಭದಲ್ಲಿ ಪ್ರಭಾಸ್ ಇದೊಂದು ಅದ್ಭುತ ಟೀಮ್. ಟೀಮ್‌ ನಲ್ಲಿರುವ ಎಲ್ಲರೂ ನನ್ನ ಫ್ಯಾಮಿಲಿ ಸದಸ್ಯರು', ಎಂದು ತಮ್ಮ ಫೀಲ್‌ ಹೇಳಿಕೊಂಡಿದ್ದಾರೆ.[ಬಾಹುಬಲಿ ವೀಕ್ಷಿಸಲು ನರೇಂದ್ರ ಮೋದಿಗೆ ಪ್ರಭಾಸ್ ಆಹ್ವಾನ]

ಅದ್ಭುತ ಪ್ರಾಜೆಕ್ಟ್ ಗೆ ಥ್ಯಾಂಕ್

ಅದ್ಭುತ ಪ್ರಾಜೆಕ್ಟ್ ಗೆ ಥ್ಯಾಂಕ್

ಪ್ರಭಾಸ್ 'ಬಾಹುಬಲಿ' ಮತ್ತು 'ಬಾಹುಬಲಿ-2' ಅದ್ಭುತ ಪ್ರಾಜೆಕ್ಟ್ ನಲ್ಲಿ ತಾವು ತೊಡಗಿಕೊಳ್ಳಲು ಅವಕಾಶ ಕೊಟ್ಟ ನಿರ್ದೇಶಕ ರಾಜಮೌಳಿ, ನಿರ್ಮಾಪಕರಾದ ಶೋಬು ಯಾರ್ಲಗಡ್ಡ ಮತ್ತು ಪ್ರಸಾದ್ ದೇವಿನೆನಿ ರವರಿಗೆ ಥ್ಯಾಂಕ್ಸ್ ಎಂದು ಹೇಳಿದ್ದಾರೆ. ತಮ್ಮ ಸಹ ನಟರು, ಫ್ಯಾನ್ಸ್ ಗಳಿಗೂ ಧನ್ಯವಾದಗಳನ್ನು ಹೇಳಿ ಜೈ ಮಾಹಿಶ್ಮತಿ ಎಂದು ತಮ್ಮ ಸಾಮಾಜಿಕ ತಾಣ ಪೇಜ್‌ ನಲ್ಲಿ ಬರೆದುಕೊಂಡಿದ್ದಾರೆ.

ಬಾಹುಬಲಿ-2 ಗಾಗಿ 613 ದಿನಗಳು ಕಾಲ್‌ಶೀಟ್

ಬಾಹುಬಲಿ-2 ಗಾಗಿ 613 ದಿನಗಳು ಕಾಲ್‌ಶೀಟ್

ಪ್ರಭಾಸ್ ಬಾಹುಬಲಿ ಎರಡನೇ ಭಾಗದ ಚಿತ್ರೀಕರಣಕ್ಕಾಗಿ ಇತರೆ ಯಾವುದೇ ಸಿನಿಮಾಗಳಲ್ಲಿ ತೊಡಗಿಕೊಳ್ಳದೇ 613 ದಿನಗಳ ಕಾಲ ಕಾಲ್‌ಶೀಟ್ ನೀಡಿದ್ದರು. ಈಗ ಶೂಟಿಂಗ್ ಪೂರ್ಣಗೊಂಡಿದ್ದು ಬಾವುಕತೆಯಿಂದ ತಮ್ಮ ಫೀಲ್ ಅನ್ನು ಸಾಮಾಜಿಕ ತಾಣಗಳ ಪೇಜ್‌ ನಲ್ಲಿ ಬರೆದುಕೊಂಡಿದ್ದಾರೆ.

ದಕ್ಷಿಣ ಭಾರತದ ಬಿಗ್ಗೆಸ್ಟ್ ಸಿನಿಮಾ

ದಕ್ಷಿಣ ಭಾರತದ ಬಿಗ್ಗೆಸ್ಟ್ ಸಿನಿಮಾ

ಈ ಹಿಂದಿನ ಬಾಹುಬಲಿ ಬಿಗಿನಿಂಗ್ ಸಿನಿಮಾ ಬಜೆಟ್ 120 ಕೋಟಿ. ಆದರೆ ಈಗಿನ ಬಾಹುಬಲಿ ಎರಡನೇ ಭಾಗದ ಸಿನಿಮಾ ಬಜೆಟ್ ಬರೋಬರಿ 2 ಶತಕೋಟಿ.

ಚಿತ್ರ ಟೀಸರ್ ಲಾಂಚ್ ಯಾವಾಗ?

ಚಿತ್ರ ಟೀಸರ್ ಲಾಂಚ್ ಯಾವಾಗ?

ಅಂದಹಾಗೆ ಎಸ್ ಎಸ್‌ ರಾಜಮೌಳಿ ರವರು ಬಾಹುಬಲಿ-2 ಚಿತ್ರದ ಟೀಸರ್ ಮತ್ತು ಟ್ರೈಲರ್ ಅನ್ನು ಲಾಂಚ್‌ ಮಾಡಲು ಶಾರುಖ್ ಖಾನ್‌ ಗಾಗಿ ಕಾಯುತ್ತಿದ್ದಾರಂತೆ. ಇದೇ ತಿಂಗಳ 25 ರಂದು ಶಾರುಖ್ ನಟನೆಯ 'ರಯೀಸ್' ಚಿತ್ರ ಜಗತ್ತಿನಾದ್ಯಂತ ಬಿಡುಗಡೆ ಆಗುತ್ತಿದ್ದು, ಅದರ ಜೊತೆಗೆ 'ಬಾಹುಬಲಿ-2' ಟೀಸರ್ ಮತ್ತು ಟ್ರೈಲರ್ ಅನ್ನು ಭರ್ಜರಿಯಾಗಿ ಬಿಡುಗಡೆ ಮಾಡಬೇಕು ಎಂದುಕೊಂಡಿದ್ದಾರಂತೆ. ರಯೀಸ್ ಚಿತ್ರ ನೋಡಲು ಥಿಯೇಟರ್ ಗೆ ಹೋದವರಿಗೆ ಬಾಹುಬಲಿ 2 ಟ್ರೈಲರ್ ನೋಡುವ ಅವಕಾಶ ಖಂಡಿತ ಸಿಗುತ್ತದೆ.

ಚಿತ್ರ ರಿಲೀಸ್ ಯಾವಾಗ?

ಚಿತ್ರ ರಿಲೀಸ್ ಯಾವಾಗ?

ಏಪ್ರಿಲ್ 28 ರಂದು 'ಬಾಹುಬಲಿ-2' ಚಿತ್ರ ಬಿಡುಗಡೆ ಆಗಲಿದೆ.

English summary
Baahubali: The Conclusion is an upcoming Indian epic historical fiction film directed by S. S. Rajamouli. It is the continuation of Baahubali. 'Baahubali: The Conclusion' hero Prabhas said 'Shoot is Over' in his social media page.
Please Wait while comments are loading...

Kannada Photos

Go to : More Photos