»   » ಸದ್ದು-ಸುದ್ದಿ ಮಾಡದ ಪ್ರಿಯಾಮಣಿ ಚಿತ್ರ ಮುಂದಿನ ತಿಂಗಳು ರಿಲೀಸ್.!

ಸದ್ದು-ಸುದ್ದಿ ಮಾಡದ ಪ್ರಿಯಾಮಣಿ ಚಿತ್ರ ಮುಂದಿನ ತಿಂಗಳು ರಿಲೀಸ್.!

Posted by:
Subscribe to Filmibeat Kannada

'ಅಂಬರೀಶ', 'ಕಥೆ-ಚಿತ್ರಕಥೆ-ನಿರ್ದೇಶನ: ಪುಟ್ಟಣ್ಣ', 'ಕಲ್ಪನಾ-2' ಚಿತ್ರಗಳ ನಂತರ ನಟಿ ಪ್ರಿಯಾಮಣಿ ಕನ್ನಡದಲ್ಲಿ ಅಭಿನಯಿಸಿರುವ ಸಿನಿಮಾ 'ದನ ಕಾಯೋನು' ಅಂತ ನಿಮಗೆಲ್ಲಾ ಗೊತ್ತಿದೆ.

ಆದ್ರೆ..ಸದ್ದು-ಸುದ್ದಿ ಮಾಡದೆ, ನಟಿ ಪ್ರಿಯಾಮಣಿ ಮತ್ತೊಂದು ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ. ಮುಂದಿನ ತಿಂಗಳು (ಸೆಪ್ಟೆಂಬರ್) ಆ ಚಿತ್ರ ತೆರೆಗೆ ಬರಲಿದೆ. ಯಾವುದಪ್ಪಾ ನಮಗೆ ಗೊತ್ತಿಲ್ಲದೇ ಇರುವ ಸಿನಿಮಾ ಅಂತ ತಲೆ ಕೆರ್ಕೊಳ್ತಿದ್ದೀರಾ.? ಆ ಚಿತ್ರ ಬೇರೆ ಯಾವುದೂ ಅಲ್ಲ, ಪ್ರಕಾಶ್ ರಾಜ್ ನಟಿಸಿ, ನಿರ್ಮಿಸಿ, ನಿರ್ದೇಶಿಸಿರುವ ಚಿತ್ರ 'ಇದೊಳ್ಳೆ ರಾಮಾಯಣ'.

Prakash Raj directorial 'Idolle Ramayana' stars Priyamani in lead

ಹೌದು, 'ಇದೊಳ್ಳೆ ರಾಮಾಯಣ' ಚಿತ್ರದಲ್ಲಿ ನಟಿ ಪ್ರಿಯಾಮಣಿ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಇವತ್ತು ಸ್ವತಃ ಪ್ರಕಾಶ್ ರಾಜ್ ರಿವೀಲ್ ಮಾಡಿರುವ 'ಇದೊಳ್ಳೆ ರಾಮಾಯಣ' ಮೇಕಿಂಗ್ ವಿಡಿಯೋದಲ್ಲಿ ನಟಿ ಪ್ರಿಯಾಮಣಿ 'ಗರತಿ ಗಂಗಮ್ಮ'ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ರಂಗಭೂಮಿ ಬ್ಯಾಕ್ ಡ್ರಾಪ್ ನಲ್ಲಿ ಸಿದ್ಧವಾಗಿರುವ 'ಇದೊಳ್ಳೆ ರಾಮಾಯಣ' ಮಲೆಯಾಳಂ ಚಿತ್ರದ ರೀಮೇಕ್ ಅಂತ ಈ ಹಿಂದೆ ಸುದ್ದಿ ಆಗಿತ್ತು. ಆದ್ರೆ, ಅದನ್ನ ಪ್ರಕಾಶ್ ರಾಜ್ ಇನ್ನೂ ಕನ್ ಫರ್ಮ್ ಮಾಡಿಲ್ಲ. ['ಇದೊಳ್ಳೆ ರಾಮಾಯಣ' ಅಂತ ನೀವು ತಲೆ ಚಚ್ಚಿಕೊಳ್ಳುವ ಹಾಗಿಲ್ಲ.!]

ಕನ್ನಡದ 'ಇದೊಳ್ಳೆ ರಾಮಾಯಣ', ತೆಲುಗಿನಲ್ಲಿ 'ಮನವೂರಿ ರಾಮಾಯಣಂ' ಶೀರ್ಷಿಕೆ ಅಡಿ ಏಕಕಾಲಕ್ಕೆ ಸಿದ್ಧವಾಗಿದೆ. ಹೀಗಾಗಿ, ಕೊಂಚ ಗ್ಯಾಪ್ ಬಳಿಕ ಟಾಲಿವುಡ್ ಬೆಳ್ಳಿತೆರೆ ಮೇಲೂ ನಟಿ ಪ್ರಿಯಾಮಣಿ ಮಿಂಚುವ ಹಾಗಾಗಿದೆ. [ಪ್ರಕಾಶ್ ರೈ ಶಟರ್ ಎಳೆಯಲು ಪ್ರಿಯಾಮಣಿ ಬರ್ತಾರ?]

ಬಿಡುಗಡೆಗೆ ಸಿದ್ಧವಾಗಿರುವ 'ಇದೊಳ್ಳೆ ರಾಮಾಯಣ' ಚಿತ್ರ ಸದ್ಯದಲ್ಲೇ ಸೆನ್ಸಾರ್ ಆಗಲಿದೆ. ಎಲ್ಲವೂ ಪ್ರಕಾಶ್ ರಾಜ್ ಪ್ಲಾನ್ ಪ್ರಕಾರ ನಡೆದರೆ, ಸೆಪ್ಟೆಂಬರ್ ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಅಷ್ಟರೊಳಗೆ ಪ್ರಿಯಾಮಣಿ ರವರ 'ದನ ಕಾಯೋನು' ಬಿಡುಗಡೆ ಆಗುತ್ತೋ, ಇಲ್ವೋ...ಕಾದು ನೋಡ್ಬೇಕು.!

English summary
Kannada Actor Prakash Raj directorial Bi-lingual film 'Idolle Ramayana' features Kannada Actress Priyamani in lead.
Please Wait while comments are loading...

Kannada Photos

Go to : More Photos