»   » ನಟ ಪ್ರಕಾಶ್ ರಾಜ್ ಗೆ ಶಟರ್ ಪ್ರಾಬ್ಲಂ!

ನಟ ಪ್ರಕಾಶ್ ರಾಜ್ ಗೆ ಶಟರ್ ಪ್ರಾಬ್ಲಂ!

Posted by:
Subscribe to Filmibeat Kannada

ಬಹುಭಾಷಾ ನಟ ನಿರ್ದೇಶಕ ಪ್ರಕಾಶ್ ರಾಜ್ ಅವರು ಮಲಯಾಳಂನ 2012ರ ಹಿಟ್ 'ಶಟರ್' ಚಿತ್ರವನ್ನು ತುಳು ಹಾಗೂ ಕನ್ನಡಕ್ಕೆ ರಿಮೇಕ್ ಮಾಡಲಿದ್ದಾರೆ. ಪ್ರಕಾಶ್ ರಾಜ್ ಅವರು ಕನ್ನಡದವರೇ ಆದರೂ ಕೂಡ ಮಿಂಚಿದ್ದು, ಖ್ಯಾತಿ ಗಳಿಸಿದ್ದು, ಮಾತ್ರ ಪರಭಾಷೆಯಲ್ಲಿ.

ಎಲ್ಲಾ ಭಾಷೆಗಳಲ್ಲೂ ತಮ್ಮ ಹಿಡಿತವನ್ನು ಇಟ್ಟುಕೊಂಡಿರುವ ಬಹುಮುಖ ಪ್ರತಿಭೆ ನಟ-ನಿರ್ದೇಶಕ-ನಿರ್ಮಾಪಕ ಪ್ರಕಾಶ್ ರಾಜ್ ಅವರು ಹಿಂದಿ, ತಮಿಳು, ತೆಲುಗು, ಮಲಯಾಳಂ ಮುಂತಾದ ಭಾಷೆಯಲ್ಲಿ ನಟಿಸುವ ಮೂಲಕ ತಮ್ಮ ಅದ್ಭುತ ಪ್ರತಿಭೆಯನ್ನು ಪ್ರೇಕ್ಷಕರೆದುರು ತೆರೆದಿಟ್ಟಿದ್ದಾರೆ. ಅಲ್ಲದೇ ಇತ್ತೀಚೆಗಷ್ಟೇ ದರ್ಶನ್ ಅವರ ಜೊತೆ 'ಐರಾವತ' ಚಿತ್ರದಲ್ಲಿ ನೆಗೆಟಿವ್ ರೋಲ್ ನಲ್ಲಿ ಮಿಂಚಿದ್ದರು.[ಚಿತ್ರ ವಿಮರ್ಶೆ: ರುಚಿಕರ, ವೈವಿಧ್ಯ ಪ್ರಕಾಶ್ ರೈ ಒಗ್ಗರಣೆ]

ತಮ್ಮ ನಿರ್ದೇಶನದಲ್ಲಿ, ಕನ್ನಡ ಭಾಷೆಯಲ್ಲಿ 'ನಾನು ನನ್ನ ಕನಸು' ಹಾಗೂ 'ಒಗ್ಗರಣೆ' ಎಂಬ ಎರಡು ಉತ್ತಮ ಚಿತ್ರಗಳನ್ನು ಕನ್ನಡ ಪ್ರೇಕ್ಷಕರಿಗೆ ನೀಡಿದ ಹೆಗ್ಗಳಿಕೆ ಪ್ರಕಾಶ್ ರೈ ಅವರಿಗೆ ಸಲ್ಲುತ್ತದೆ.

ಇದೀಗ ಮಲಯಾಳಂ ನಿರ್ದೇಶಕ ಜೋಯ್ ಮ್ಯಾಥ್ಯು ಅವರ 2012ರ ಸೂಪರ್ ಹಿಟ್ ಮಲಯಾಳಂ ಚಿತ್ರ 'ಶಟರ್' ಅನ್ನು ಕನ್ನಡಕ್ಕೆ ರಿಮೇಕ್ ಮಾಡಲು ಪ್ರಕಾಶ್ ರೈ ನಿರ್ಧರಿಸಿದ್ದು, ಕನ್ನಡ ಪ್ರೇಕ್ಷಕ ವರ್ಗಕ್ಕೆ ಮತ್ತೊಂದು ಉತ್ತಮ ಚಿತ್ರ ನೋಡುವ ಭಾಗ್ಯ ಸಿಗಲಿದೆ.[ದರ್ಶನ್ 'Mr.ಐರಾವತ'ನಿಗೆ ವಿಮರ್ಶಕರಿಂದ ಸಿಕ್ಕ ಕಾಮೆಂಟ್ ಗಳಿವು.!]

ಮಲಯಾಳಂ 'ಶಟರ್' ಚಿತ್ರದ ಕನ್ನಡ ರಿಮೇಕ್ ಗೆ ನಟ ಪ್ರಕಾಶ್ ರಾಜ್ ಅವರೇ ಆಕ್ಷನ್-ಕಟ್ ಹೇಳುವ ಜೊತೆಗೆ ತಾವೇ ಬಂಡವಾಳ ಕೂಡ ಹೂಡಲಿದ್ದಾರೆ. ಈಗಾಗಲೇ ಚಿತ್ರದ ಸ್ಕ್ರಿಪ್ಟ್ ಹಾಗೂ ಸ್ಟೋರಿ ಲೈನ್ ಮುಂತಾದ ಕಾರ್ಯಗಳಲ್ಲಿ ಪ್ರಕಾಶ್ ರೈ ಅವರು ಬ್ಯುಸಿಯಾಗಿದ್ದು, ಸದ್ಯದಲ್ಲೇ 'ಶಟರ್' ಕನ್ನಡಕ್ಕೆ ರಿಮೇಕ್ ಆಗಲಿದೆ.

ಕನ್ನಡ ವರ್ಷನ್ ನಲ್ಲಿ ಮುಖ್ಯ ಪಾತ್ರಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರನ್ನು ಪ್ರಕಾಶ್ ರಾಜ್ ಅವರು ಸದ್ಯಕ್ಕೆ ಆಯ್ಕೆಗೊಳಿಸಿದ್ದಾರೆ. ಕನ್ನಡ ಹಾಗೂ ತುಳು ರಿಮೇಕ್ ರೈಟ್ಸ್ ಪಡೆದುಕೊಂಡ ಶಶಿಕಾಂತ್ ಅವರು ತುಳು ಶೂಟಿಂಗ್ ಈಗಾಗಲೇ ಪ್ರಾರಂಭ ಮಾಡಿದ್ದಾರೆ. ತುಳು ವರ್ಷನ್ ನಲ್ಲಿ ಅನಿತಾ ಭಟ್, ಜೈ ಜಗದೀಶ್, ಮಿತ್ರಾ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.[4 ದಿನಗಳಲ್ಲಿ 'Mr.ಐರಾವತ' ಮಾಡಿದ ಕಲೆಕ್ಷನ್...ಅಬ್ಬಬ್ಬಾ.!!]

ಈ ಮೊದಲು ಪ್ರಕಾಶ್ ರೈ ಅವರ ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿ ತೆರೆ ಕಂಡ 'ಒಗ್ಗರಣೆ', ಕನ್ನಡದಲ್ಲಿ ಸೂಪರ್ ಡೂಪರ್ ಹಿಟ್ ಆಗುವ ಮೂಲಕ 2014ರ ಅತ್ಯುತ್ತಮ ಕನ್ನಡ ಚಿತ್ರ ಎಂಬ ಕೀರ್ತಿಗೆ ಪಾತ್ರವಾಗಿತ್ತು.

English summary
Versatile actor-director Prakash Raj to remake 2012 Malayalam hit movie 'Shutter' in Kannada and Tulu.
Please Wait while comments are loading...

Kannada Photos

Go to : More Photos