»   » ಒಳ್ಳೆ ಹುಡುಗನ ಆರೋಗ್ಯ ವಿಚಾರಿಸಲು ಆಸ್ಪತ್ರೆ ತನಕ ಬಂದ ಸಂಜನಾ.!

ಒಳ್ಳೆ ಹುಡುಗನ ಆರೋಗ್ಯ ವಿಚಾರಿಸಲು ಆಸ್ಪತ್ರೆ ತನಕ ಬಂದ ಸಂಜನಾ.!

Posted by:
Subscribe to Filmibeat Kannada

'ಬಿಗ್ ಬಾಸ್' ಮನೆಯಲ್ಲಿ ''ಐ ಲವ್ ಯು... ಯು ಮಸ್ಟ್ ಲವ್ ಮಿ'' ಅಂತ ಪ್ರಥಮ್, ಸಂಜನಾ ಹಿಂದೆ ಬಿದ್ದು.. ನಂತರ ಅದು ದೊಡ್ಡ ವಿವಾದ ಆದ್ಮೇಲೆ ಪ್ರಥಮ್ ನಿಂದ ಸಂಜನಾ ಸ್ವಲ್ಪ ಗ್ಯಾಪ್ ಮೇನ್ಟೇನ್ ಮಾಡಿದ್ರು.

ಪ್ರಥಮ್ ಕಂಡ್ರೆ ಅಷ್ಟಕಷ್ಟೆ ಅಂತಿದ್ದ ಸಂಜನಾ ಇಂದು ಪ್ರಥಮ್ ಆರೋಗ್ಯ ವಿಚಾರಿಸಲು ಬೆಂಗಳೂರಿನ ನಾಗರಬಾವಿಯಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ಭೇಟಿ ನೀಡಿದ್ದರು.[ಬಿಗ್ ಬಾಸ್ ಮನೆಯಲ್ಲಿ ದಾಖಲೆ: ಪ್ರಥಮ್ ಫಸ್ಟ್, ಸಂಜನಾ ನೆಕ್ಸ್ಟ್]

ಇಂದು ಮುಂಜಾನೆ ನಿದ್ದೆ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಥಮ್, ಫೋರ್ಟಿಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಥಮ್ ರವರನ್ನ ನೋಡಲು ಸಂಜನಾ ತಮ್ಮ ತಾಯಿ ಜೊತೆ ಆಸ್ಪತ್ರೆಗೆ ಬಂದಿದ್ದರು.

ಶಾಕಿಂಗ್ ಸುದ್ದಿ ಎಂದ ಸಂಜನಾ.!

ಶಾಕಿಂಗ್ ಸುದ್ದಿ ಎಂದ ಸಂಜನಾ.!

ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಥಮ್ ರವರನ್ನ ನೋಡಿಕೊಂಡು ಬಂದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಂಜನಾ ''ವಿಷಯ ಕೇಳಿದ ತಕ್ಷಣ ನನಗೆ ತುಂಬಾ ಶಾಕ್ ಆಯ್ತು'' ಎಂದರು.

ವಿಷಯ ಗೊತ್ತಿರಲಿಲ್ಲ

ವಿಷಯ ಗೊತ್ತಿರಲಿಲ್ಲ

''ನ್ಯೂಸ್ ಚಾನೆಲ್ ನಿಂದ ಫೋನ್ ಬಂದಾಗಲೇ ನನಗೂ ವಿಷಯ ಗೊತ್ತಾಗಿದ್ದು. ಪ್ರಥಮ್ ಹೀಗೆ ಮಾಡಿಕೊಳ್ಳುತ್ತಾರೆ ಅಂದ್ರೆ ನಿಜವಾಗಲೂ ಶಾಕಿಂಗ್. ಯಾಕಂದ್ರೆ, ಬಿಗ್ ಬಾಸ್ ಮನೆಯಲ್ಲಿ ಅಷ್ಟೂ ಸ್ಪರ್ಧಿಗಳ ಬಾಯಿಯನ್ನ ಪ್ರಥಮ್ ಮುಚ್ಚಿಸುತ್ತಿದ್ದರು'' - ಸಂಜನಾ[ಪ್ರಥಮ್-ಸಂಜನಾ-ಭುವನ್ ತ್ರಿಕೋನ ಪ್ರೇಮಕಥೆಗೆ ಕ್ಲೈಮ್ಯಾಕ್ಸ್ ಕೊಡದ ಕಿಚ್ಚ!]

ಡಿಪ್ರೆಶನ್ ಇರಬಹುದು

ಡಿಪ್ರೆಶನ್ ಇರಬಹುದು

''ಈ ತರಹ ಪ್ರಥಮ್ ಮಾಡಿಕೊಳ್ಳುತ್ತಾರೆ. ಈ ತರಹ ನಿರ್ಧಾರ ತೆಗೆದುಕೊಳ್ಳುತ್ತಾರೆ ಅಂತ ಕೇಳಿಸಿಕೊಳ್ಳುವುದಕ್ಕೆ ಒಂಥರಾ ಶಾಕಿಂಗ್. ಡಿಪ್ರೆಶನ್ ಹಾಗೂ ಶಾಕ್ ನಿಂದ ಹೀಗೆ ಆಗಿರಬಹುದು'' - ಸಂಜನಾ

37 ಲಕ್ಷ ಸಿಕ್ಕಿದೆ

37 ಲಕ್ಷ ಸಿಕ್ಕಿದೆ

''ಯಾವುದೋ ನ್ಯೂಸ್ ಚಾನೆಲ್ ನಲ್ಲಿ ಅವರ ಬಗ್ಗೆ ನೆಗೆಟಿವ್ ಆಗಿ ಬಂತು. ನಮಗೆಲ್ಲ ಅಮೌಂಟ್ ಟ್ರ್ಯಾನ್ಸ್ ಫರ್ ಆಗಿತ್ತು. ಆದ್ರೆ, ಅವರ ಬಳಿ ಪ್ಯಾನ್ ಕಾರ್ಡ್ ಇರಲಿಲ್ಲ. ಇದೇ ಕಾರಣಕ್ಕೆ ಅಮೌಂಟ್ ಟ್ರ್ಯಾನ್ಸ್ ಫರ್ ಆಗುವುದು ಸ್ವಲ್ಪ ತಡವಾಯ್ತು. ಮೊನ್ನೆಯಷ್ಟೇ 37 ಲಕ್ಷ ಅವರಿಗೆ ಸಿಕ್ತು'' - ಸಂಜನಾ[ಸಂಜನಾಗೆ 'ಪ್ರೇಮಪತ್ರ' ಬರೆದ 'ಪ್ರಥಮ್': ಎದ್ದುಬಿದ್ದು ನಕ್ಕಿದ ಸುದೀಪ್]

ಇಂದು ಅಥವಾ ನಾಳೆ ಡಿಸ್ಚಾರ್ಜ್ ಆಗಬಹುದು

ಇಂದು ಅಥವಾ ನಾಳೆ ಡಿಸ್ಚಾರ್ಜ್ ಆಗಬಹುದು

''ಅವರಿಗೆ ಏನು ಬೇಜಾರಾಗಿದ್ಯೋ ಗೊತ್ತಿಲ್ಲ. ಇವತ್ತು ಅಥವಾ ನಾಳೆ ಡಿಸ್ಚಾರ್ಜ್ ಆಗಬಹುದು'' - ಸಂಜನಾ

English summary
Bigg Boss Kannada 4 Winner Pratham admitted to Fortis Hospital, Bengaluru after attempting to commit suicide. Bigg Boss Kannada 4 Contestant Sanjana visited Fortis Hospital, Bengaluru today (April 5th).
Please Wait while comments are loading...

Kannada Photos

Go to : More Photos