»   » ಕ್ರೇಜಿ ಕ್ವೀನ್ ರಕ್ಷಿತ-ಪ್ರೇಮ್ ದಾಂಪತ್ಯಕ್ಕೆ 10 ವರ್ಷದ ಸಂಭ್ರಮ

ಕ್ರೇಜಿ ಕ್ವೀನ್ ರಕ್ಷಿತ-ಪ್ರೇಮ್ ದಾಂಪತ್ಯಕ್ಕೆ 10 ವರ್ಷದ ಸಂಭ್ರಮ

Posted by:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ 'ಸುಂಟರಗಾಳಿ' ಎಬ್ಬಿಸಿದ ಬ್ಯೂಟಿಫುಲ್ ನಟಿ ರಕ್ಷಿತ ಪ್ರೇಮ್ಮತ್ತು 'ಜೋಗಿ' ಖ್ಯಾತಿಯ ಪ್ರೇಮ್ ದಾಂಪತ್ಯ ಜೀವನಕ್ಕೆ ಅದ್ಧೂರಿ 10 ವರ್ಷಗಳು ಪೂರೈಸಿದೆ. ಈ ವಿವಾಹ ವಾರ್ಷಿಕೋತ್ಸವವನ್ನು ನಟಿ ರಕ್ಷಿತ ಮತ್ತು ನಟ, ನಿರ್ದೇಶಕ 'ಜೋಗಿ' ಪ್ರೇಮ್ ಸೆಲೆಬ್ರಿಟಿಗಳ ನಡುವೆ ಸಂತೋಷದಿಂದ ನಿನ್ನೆ(ಮಾರ್ಚ್ 9) ಆಚರಿಸಿಕೊಂಡಿದ್ದಾರೆ.[ನಿಮಗೆ ಗೊತ್ತಿಲ್ಲದ 'ಸುಂಟರಗಾಳಿ' ರಕ್ಷಿತ ರಿಯಲ್ ಕಹಾನಿ]

ಪ್ರೇಮ್-ರಕ್ಷಿತ ವಿವಾಹ ವಾರ್ಷಿಕೋತ್ಸವಕ್ಕೆ ಯಾರೆಲ್ಲಾ ಬಂದಿದ್ರು ತಿಳಿದುಕೊಳ್ಳುವ ಕುತೂಹಲ ನಿಮಗಿದ್ಯಾ? ಹಾಗಿದ್ರೆ ಮುಂದೆ ಓದಿ...

ಪ್ರೇಮ್-ರಕ್ಷಿತ ವಿವಾಹ ವಾರ್ಷಿಕೋತ್ಸವದಲ್ಲಿ ಪೂರಿ ಜಗನ್ನಾಥ್

ಪ್ರೇಮ್-ರಕ್ಷಿತ ವಿವಾಹ ವಾರ್ಷಿಕೋತ್ಸವದಲ್ಲಿ ಪೂರಿ ಜಗನ್ನಾಥ್

14 ವರ್ಷಗಳ ಹಿಂದೆ ಕನ್ನಡ ಬೆಳ್ಳಿತೆರೆಗೆ ರಕ್ಷಿತ ಅವರನ್ನು 'ಅಪ್ಪು' ಚಿತ್ರದ ಮೂಲಕ ನಟಿಯಾಗಿ ಪರಿಚಯಿಸಿದ, ತೆಲುಗು ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಆಗಮಿಸಿ ಶುಭಾಶಯ ಕೋರಿದ್ದಾರೆ.

ಕೇಕ್ ಕತ್ತರಿಸಿ ವಿವಾಹ ವಾರ್ಷಿಕೋತ್ಸವ ಆಚರಿಸಿದ ದಂಪತಿಗಳು

ಕೇಕ್ ಕತ್ತರಿಸಿ ವಿವಾಹ ವಾರ್ಷಿಕೋತ್ಸವ ಆಚರಿಸಿದ ದಂಪತಿಗಳು

ಪ್ರೇಮ್-ರಕ್ಷಿತ ಅವರ 10ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಪೂರಿ ಜಗನ್ನಾಥ್, ಇಶಾನ್, ರಾಗಿಣಿ ಇತರರು ಸೇರಿ ದಂಪತಿಗಳಿಂದ ಕೇಕ್ ಕಟ್ ಮಾಡಿಸುವ ಮೂಲಕ ಸೆಲೆಬ್ರೇಟ್ ಮಾಡಿದರು.

ವಿವಾಹ ವಾರ್ಷಿಕೋತ್ಸವದ ಗ್ರೂಪ್ ಫೊಟೋ

ವಿವಾಹ ವಾರ್ಷಿಕೋತ್ಸವದ ಗ್ರೂಪ್ ಫೊಟೋ

ದಂಪತಿಗಳ ವಿವಾಹ ವಾರ್ಷಿಕೋತ್ಸವಕ್ಕೆ ಶುಭಕೋರಲು ಬಂದಿದ್ದವರು ಗ್ರೂಪ್ ಫೋಟೋದಲ್ಲಿ ಕಾಣಿಸಿದ್ದು ಹೀಗೆ. ಚಿತ್ರದಲ್ಲಿ ಪ್ರೇಮ್-ರಕ್ಷಿತ ಜೊತೆಗೆ ಸಂಜನಾ ಗರ್ಲಾನಿ, ರಾಗಿಣಿ ದ್ವಿವೇದಿ, ಪೂರಿ ಜಗನ್ನಾಥ್, ಇಶಾನ್, ಮನೋಹರ್ ಸಿ.ಆರ್ ಇತರರು ಇದ್ದಾರೆ.

ವೆಡ್ಡಿಂಗ್ ಆನಿವರ್ಸರಿ ಪಾರ್ಟಿಯಲ್ಲಿ ತುಪ್ಪದ ಬೆಡಗಿ

ವೆಡ್ಡಿಂಗ್ ಆನಿವರ್ಸರಿ ಪಾರ್ಟಿಯಲ್ಲಿ ತುಪ್ಪದ ಬೆಡಗಿ

ನಿನ್ನೆ(ಮಾರ್ಚ್ 9) ನಡೆದ ಪ್ರೇಮ್-ರಕ್ಷಿತ ವೆಡ್ಡಿಂಗ್ ಆನಿವರ್ಸರಿ ಪಾರ್ಟಿಯಲ್ಲಿ ಸ್ಯಾಂಡಲ್ ವುಡ್ ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿ ಸಹ ಹಾಜರಿದ್ದರು. 'ರೋಗ್' ಚಿತ್ರದ ನಾಯಕ ಇಶಾನ್ ಮತ್ತು ರಾಗಿಣಿ, ರಕ್ಷಿತ ಜೊತೆಗೆ ಕ್ಲಿಕ್ಕಿಸಿದ ಸೆಲ್ಫಿ ನೋಡಿ.

ಎಲ್ಲರಿಗೂ ಥ್ಯಾಂಕ್ಸ್ ಹೇಳಿದ ರಕ್ಷಿತ-ಪ್ರೇಮ್

ಎಲ್ಲರಿಗೂ ಥ್ಯಾಂಕ್ಸ್ ಹೇಳಿದ ರಕ್ಷಿತ-ಪ್ರೇಮ್

ನಟಿ ಹಾಗೂ ನಿರ್ಮಾಪಕಿ ರಕ್ಷಿತ ಪ್ರೇಮ್ ತಮ್ಮ ವೆಡ್ಡಿಂಗ್ ಆನಿವರ್ಸರಿಗೆ ಶುಭಕೋರಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. 10 ವರ್ಷ ದಾಂಪತ್ಯ ಜೀವನ ಪೂರೈಸಿರುವ ಪ್ರೇಮ್-ರಕ್ಷಿತ ಅವರಿಗೆ ಸೂರ್ಯ ಎಂಬ ಮಗನಿದ್ದಾನೆ.

English summary
Sandalwood Crazy Queen Rakshita and 'Jogi' Fame Prem has completed their 10 years of Married Life. They celebrated their 10th Wedding Anniversary yesterday(March 9th)
Please Wait while comments are loading...

Kannada Photos

Go to : More Photos