»   » ಚಲನಚಿತ್ರೋತ್ಸವ ಕುರಿತಾಗಿ ಸಿ.ಎಂ ನೀಡಿದ ಮುಖ್ಯಾಂಶಗಳು

ಚಲನಚಿತ್ರೋತ್ಸವ ಕುರಿತಾಗಿ ಸಿ.ಎಂ ನೀಡಿದ ಮುಖ್ಯಾಂಶಗಳು

Posted by:
Subscribe to Filmibeat Kannada

8ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸಂಘಟನಾ ಸಮಿತಿ ಸಭೆ ಕುರಿತಂತೆ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ನಡೆಸಿದ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು:

ಜನವರಿ 28, 2016, ಸಂಜೆ 5.30ಕ್ಕೆ ವಿಧಾನಸೌಧದ ಪೂರ್ವ ದ್ವಾರದ ಗ್ರೌಂಡ್ ಸ್ಟೆಪ್ಸ್ ಮುಂಭಾಗದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಭಾರತೀಯ ಚಿತ್ರರಂಗದ ಹಿರಿಯ ಕಲಾವಿದೆ, ಜಯಾ ಬಚ್ಚನ್ ಅವರು ಕಾರ್ಯಕ್ರಮ ಉದ್ಘಾಟಿಸುವರು. [ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2016ರ ವಿಶೇಷತೆಗಳು]

ಮಾನ್ಯ ಮುಖ್ಯಮಂತ್ರಿಗಳು ಅಧ್ಯಕ್ಷತೆ ವಹಿಸಲಿದ್ದು ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕ, ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಚಿತ್ರೋತ್ಸವ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಚಿತ್ರ ಸಾಹಿತಿಗಳು ಹಾಗೂ ನಿರ್ದೇಶಕ ಗುಲ್ಜಾರ್, ಭಾರತೀಯ ಸಂಜಾತ, ಹಾಲಿವುಡ್ ಚಿತ್ರ ನಿರ್ಮಾಪಕ ಅಶೋಕ್ ಅಮೃತ್‌ರಾಜ್ ಹಾಗೂ ಬೆಂಗಾಲಿ ಹಾಗೂ ಹಿಂದಿ ಚಿತ್ರನಟಿ ಮತ್ತು ನಿರ್ದೇಶಕಿ ಶ್ರೀಮತಿ ಅಪರ್ಣಾ ಸೇನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.[ತಿಥಿ ಸಿನಿಮಾ ಪ್ರದರ್ಶನ ಮೂಲಕ ಚಲನಚಿತ್ರೋತ್ಸವಕ್ಕೆ ಚಾಲನೆ]

ದೇಶ ವಿದೇಶಗಳ ಹಾಗೂ ಕನ್ನಡ ಚಿತ್ರೋದ್ಯಮದ ಗಣ್ಯರೂ ಸೇರಿದಂತೆ ಸುಮಾರು 2000 ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ. ಅಂತರರಾಷ್ಟ್ರೀಯ ಖ್ಯಾತಿಯ ಕಲಾವಿದೆ ಶೋಭನಾ ಹಾಗೂ ನಿರುಪಮಾ ರಾಜೇಂದ್ರ ಅವರಿಂದ ಉದ್ಘಾಟನೆಗೆ ಮುನ್ನ 30 ನಿಮಿಷಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ನೋಂದಣಿ ಮಾಹಿತಿ: ಚಿತ್ರಾಸಕ್ತರಿಗಾಗಿ ನೋಂದಣಿ ಕೇಂದ್ರಗಳು:[2016ರ ಸಿನಿಮೋತ್ಸವದಲ್ಲಿ ಕನ್ನಡ ಮತ್ತು ತುಳು ಚಿತ್ರಗಳ ಅಬ್ಬರ]

  • ಕರ್ನಾಟಕ ಚಲನಚಿತ್ರ ಅಕಾಡೆಮಿ, ಬಾದಾಮಿ ಹೌಸ್, ಕಾರ್ಪೋರೇಷನ್ ಎದುರು, ಎನ್.ಆರ್.ಚೌಕ.
  • ಸುಚಿತ್ರ ಫಿಲಂ ಸೊಸೈಟಿ, ಬನಶಂಕರಿ ೨ ನೇ ಹಂತ, ಬೆಂಗಳೂರು.
  • ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಬೆಂಗಳೂರು.
  • ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಭಗವಾನ್ ಮಹಾವೀರ್ ರಸ್ತೆ, ಬೆಂಗಳೂರು
  • ಮೈಸೂರಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಧನ್ವಂತರಿ ರಸ್ತೆ

ನೋಂದಣಿ ಶುಲ್ಕ:

ಕಳೆದ ವರ್ಷದಂತೆಯೇ ನೋಂದಣಿ ಶುಲ್ಕ ನಿಗದಿಪಡಿಸಲಾಗಿದೆ.

  • ಸಾರ್ವಜನಿಕರಿಗೆ ೬೦೦/- ರೂ.ಗಳು
  • ಚಿತ್ರ ಸಂಸ್ಥೆಗಳು, ಚಿತ್ರ ಕ್ಲಬ್‌ಗಳ ಸದಸ್ಯರು, ಚಿತ್ರೋದ್ಯಮದವರು, ಹಿರಿಯ ನಾಗರಿಕರು ಮತ್ತು ೧೮ ವರ್ಷಕ್ಕೆ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ೩೦೦/- ರೂ.ಗಳು

ನೋಂದಣಿ ಮಾಡಿಸಿಕೊಂಡವರು ಬೆಂಗಳೂರು ಮತ್ತು ಮೈಸೂರಿನಲ್ಲಿ ಪಾಸ್‌ ಗಳನ್ನು ಬಳಸಬಹುದು.

English summary
The Bangalore International Film Festival, which is in its 8th year, is getting grander with time. The organizers held a press meet recently, where dignitaries like CM Siddaramaiah, Rajendra Singh Babu, Jaymala, minister Roshan Baig spoke to the media about the event.
Please Wait while comments are loading...

Kannada Photos

Go to : More Photos