»   » ಪ್ರಿಯಾಮಣಿ ಗ್ರೀನ್ ಸಿಗ್ನಲ್ ಕೊಟ್ಟಿರುವ ಮುಂದಿನ ಸಿನಿಮಾ ಯಾವುದು.?

ಪ್ರಿಯಾಮಣಿ ಗ್ರೀನ್ ಸಿಗ್ನಲ್ ಕೊಟ್ಟಿರುವ ಮುಂದಿನ ಸಿನಿಮಾ ಯಾವುದು.?

Posted by:
Subscribe to Filmibeat Kannada

'ಕಥೆ-ಚಿತ್ರಕಥೆ-ನಿರ್ದೇಶನ.. ಪುಟ್ಟಣ್ಣ', 'ಕಲ್ಪನಾ-2', 'ದನ ಕಾಯೋನು', 'ಇದೊಳ್ಳೆ ರಾಮಾಯಣ'... ಹೀಗೆ ಕಳೆದ ವರ್ಷ ನಟಿ ಪ್ರಿಯಾಮಣಿ ಅಭಿನಯದ ಕನ್ನಡ ಚಿತ್ರಗಳು ಸಾಲು ಸಾಲಾಗಿ ಬಿಡುಗಡೆ ಆಗಿದ್ದವು.

ಈ ವರ್ಷ ಸ್ಯಾಂಡಲ್ ವುಡ್ ನಲ್ಲಿ 'ಚೌಕ' ಚಿತ್ರದ ಮೂಲಕ ನಟಿ ಪ್ರಿಯಾಮಣಿ ಅಕೌಂಟ್ ಓಪನ್ ಮಾಡಿದ್ದಾರೆ. ಈ ನಡುವೆ ಒಂದು ಹೊಸ ಕನ್ನಡ ಸಿನಿಮಾಗೆ ನಟಿ ಪ್ರಿಯಾಮಣಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಯಾವುದು ಆ ಸಿನಿಮಾ.?

ಯಾವುದು ಆ ಸಿನಿಮಾ.?

ನಟಿ ಪ್ರಿಯಾಮಣಿ ಅಭಿನಯಿಸಲು ಒಪ್ಪಿಕೊಂಡಿರುವ ಕನ್ನಡ ಚಿತ್ರದ ಹೆಸರು 'ಧ್ವಜ'. ಶೀರ್ಷಿಕೆ ಕೇಳಿದ ಕೂಡಲೆ ಇದು ದೇಶಭಕ್ತಿ ಸಿನಿಮಾ ಅಂತ ನೀವು ಅಂದುಕೊಳ್ಳಬಹುದು. ಆದ್ರೆ, ಇದು ಪೊಲಿಟಿಕಲ್ ಥ್ರಿಲ್ಲರ್ ಚಿತ್ರ.[ಸದ್ದು-ಸುದ್ದಿ ಮಾಡದ ಪ್ರಿಯಾಮಣಿ ಚಿತ್ರ ಮುಂದಿನ ತಿಂಗಳು ರಿಲೀಸ್.!]

ಹೊಸಬರ ಹೊಸ ಪ್ರಯತ್ನ

ಹೊಸಬರ ಹೊಸ ಪ್ರಯತ್ನ

'ಧ್ವಜ' ಚಿತ್ರದಲ್ಲಿ ನಟಿ ಪ್ರಿಯಾಮಣಿ ರವರಿಗೆ ಜೋಡಿಯಾಗಿರುವುದು ರವಿ ಗೌಡ ಎಂಬ ಹೊಸ ಪ್ರತಿಭೆ.[ದಸರಾ ಹಬ್ಬಕ್ಕೆ ನಟಿ ಪ್ರಿಯಾಮಣಿಗೆ ಅಗ್ನಿಪರೀಕ್ಷೆ !]

'ಯುಗಾದಿ' ಹಬ್ಬದ ದಿನ ಮುಹೂರ್ತ

'ಯುಗಾದಿ' ಹಬ್ಬದ ದಿನ ಮುಹೂರ್ತ

ಯುಗಾದಿ ಹಬ್ಬದ ದಿನ ಮೈಸೂರಿನಲ್ಲಿ 'ಧ್ವಜ' ಚಿತ್ರದ ಮುಹೂರ್ತ ನಡೆಯಲಿದೆ. ಏಪ್ರಿಲ್ ನಿಂದ ಶೂಟಿಂಗ್ ಶುರು ಆಗಲಿದೆ. ಗಿರೀಶ್ ಎಂಬುವರು ನಿರ್ದೇಶನ ಮಾಡುತ್ತಿರುವ ಚೊಚ್ಚಲ ಚಿತ್ರ ಇದು.

ಪಾಂಡವಪುರದಲ್ಲಿಯೇ ಚಿತ್ರೀಕರಣ

ಪಾಂಡವಪುರದಲ್ಲಿಯೇ ಚಿತ್ರೀಕರಣ

ಮೂಲಗಳ ಪ್ರಕಾರ, ಪಾಂಡವಪುರದಲ್ಲಿಯೇ 'ದ್ವಜ' ಚಿತ್ರದ ಬಹುತೇಕ ಚಿತ್ರೀಕರಣ ನಡೆಯಲಿದೆ.

English summary
Priyamani to star in Kannada Movie 'Dhvaja'
Please Wait while comments are loading...

Kannada Photos

Go to : More Photos